Gold: ಬಂಗಾರ, ಬೆಳ್ಳಿ ದರದಲ್ಲಿ ದಾಖಲೆ ಏರಿಕೆ: 2026ರಲ್ಲೇ ಬೆಳ್ಳಿ ಬೆಲೆ ಶೇ.55 ಗರಿಷ್ಠ ಹೆಚ್ಚಳ, ಬಂಪರ್
ನವದೆಹಲಿ: ಭೌಗೋಳಿಕ ಹಾಗೂ ರಾಜಕೀಯ ಅನಿಶ್ಚಿತತೆ, ವಿದೇಶಿ ಸುಂಕ ನೀತಿಗಳು ಹಾಗೂ ಕೈಗಾರಿಕೆ ಬಳಕೆ ಇನ್ನಿತರ ಕಾರಣಗಳಿಂದಾಗಿ ಚಿನ್ನದ ಹಾಗೂ ಬೆಳ್ಳಿ ಲೋಹಗಳ ಬೆಲೆ ಗಗನಕ್ಕೇರಿದೆ. ಕಳೆದ ಕೆಲವು ವಾರಗಳಲ್ಲಿ ಹಾಗೂ 2026 ಇವತ್ತಿನವರೆಗೆ ಬೆಳ್ಳಿ ದರವು ಸಾರ್ವಕಾಲಿಕ ದಾಖಲೆ ಗರಿಷ್ಠ ಮಟ್ಟ ತಲುಪಿದೆ. ಇದು ಗ್ರಾಹಕರ ಜೇಬಿಗೆ ಕತ್ತರಿ ಹಾಕಿದರೆ, ಹೂಡಿಕೆದಾರರಿಗೆ ಒಂದಷ್ಟು ಬಂಪರ್ ಲಾಭ ತಂಡುಕೊಡುವ ಜೊತೆಗೆ ಮುಂದೇನು ಎಂಬ ಗೊಂದಲಕ್ಕೂ ನೂಕಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆ ಗಗನಕ್ಕೇರುತ್ತಿದೆ. ಪ್ರತಿ ಔನ್ಸ್ (ಒಂದು ಔನ್ಸ್ ಎಂದರೆ 28.34 ಗ್ರಾಂ) ಚಿನ್ನದ ಬೆಲೆ ಶೇಕಡಾ 1.1 ಹೆಚ್ಚಳವಾಗಿ ದರ 5,068 ಡಾಲರ್ ತಲುಪಿದೆ. ಬೆಳ್ಳಿಯ ಬೆಲೆ ಬರೋಬ್ಬರಿ ಶೇಕಡಾ 6.3ರಷ್ಟು ಏರಿಕೆಯಾಗಿ ಬೆಲೆಯು ಒಂದು ಔನ್ಸ್‌ಗೆ 110.39 ಡಾಲರ್‌ಗೆ ಏರಿಕೆ ಆಗಿದೆ. ಇದರಲ್ಲಿ ಗಮನಿಸಬೇಕಾದ ಅಂಶವೆಂದರೆ ಬೆಳ್ಳಿಯ ಬೆಲೆಯು ಈ ವರ್ಷ ಈಗಾಗಲೇ ಶೇಕಡಾ 55 ರಷ್ಟು ಭಾರೀ ಏರಿಕೆ ಕಂಡಿದೆ. ಬೆಳ್ಳಿ ದರ ಹೆಚ್ಚಳದಿಂದ ಹೂಡಿಕೆದಾರರನ್ನು ತನ್ನತ್ತ ಸಳೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಯುಎಸ್ ಡಾಲರ್ ನಾಲ್ಕು ತಿಂಗಳಲ್ಲಿ ಕನಿಷ್ಠ ಮಟ್ಟಕ್ಕೆ ಕುಸಿತ ಅನುಭವಿಸಿದೆ. ಡಾಲರ್ ಮುಂದೆ ರೂಪಾಯಿಯ ಮೌಲ್ಯ ಇಳಿಕೆ ಆಗಿದೆ. ವಿದೇಶಿ ಖರೀದಿದಾರರಿಗೆ ಚಿನ್ನ ಕಡಿಮೆ ದುಬಾರಿಯಾಗಿದೆ. ಮುಂಬರುವ ಯುಎಸ್ ಸರ್ಕಾರದ ಸ್ಥಗಿತ ಮತ್ತು ಡೊನಾಲ್ಡ್ ಟ್ರಂಪ್ ಅವರ ಅನಿಯಮಿತ ಸುಂಕ ನೀತಿಗಳಿಂದ ಡಾಲರ್ ಮೇಲೆ ಒತ್ತಡ ಉಂಟಾಗಿದೆ. ಜೊತೆಗೆ ಯುಎಸ್ ಅಧ್ಯಕ್ಷ ಕೈಗೊಂಡ ಇತರ ದೇಶಗಳ ಮೇಲಿನ ಸುಂಕ ನೀತಿಗಳು, ಯುದ್ಧಗಳು ಹಾಗೂ ಇತರ ಎಚ್ಚರಿಕೆಗಳು ಕೆಲವು ಜಾಗತಿಕ ಬದಲಾವಣೆಗೆ ಕಾರಣವಾಯಿತು.
MCX ನಲ್ಲಿ ಚಿನ್ನ, ಬೆಳ್ಳಿ ಬೆಲೆಗಳು
ಸರಕು ಉತ್ಪನ್ನಗಳ ಪ್ರಮುಖ ಭಾರತದ ವ್ಯಾಪಾರ ವೇದಿಕೆ ಆಗಿರುವ ಮಲ್ಟಿ ಕಮಾಡಿಟಿ ಎಕ್ಸ್‌ಚೇಂಜ್ (MCX) ಅಂತಾರಾಷ್ಟ್ರೀಯ ಬಿಲಿಯನ್ ಬೆಲೆಗಳಲ್ಲಿ ಏರಿಕೆ ಆಗಿದೆ. ಇದಾದ ನಂತರ ಎಂಸಿಎಕ್ಸ್ ಚಿನ್ನ ಮತ್ತು ಬೆಳ್ಳಿ ದರಗಳು ಮಂಗಳವಾರ ಮತ್ತೆ ಜಿಗಿತ ಕಂಡವು. ಎಂಸಿಎಕ್ಸ್ ಚಿನ್ನದ ದರ ಮಂಗಳವಾರ 10 ಗ್ರಾಂಗೆ 1,58,674 ರೂಪಾಯಿ ಅಂದರೆ ಶೇಕಡಾ 1.68ರಷ್ಟ ಏರಿಕೆ ಕಂಡಿತು. ಇದರ ಹಿಂದಿನ ಅಂತ್ಯದ ಅವಧಿಯಲ್ಲಿದ್ದ 1,56,037 ರೂಪಾಯಿಗೆ ಹೋಲಿಕೆ ಮಾಡಿದರೆ ಅದರ ಗರಿಷ್ಠ ದರವು 1,59,820 ರೂಪಾಯಿಗೆ ತಲುಪಿದೆ ಎಂದು ವರದಿ ಆಗಿದೆ.
ಎಂಸಿಎಕ್ಸ್ ಬೆಳ್ಳಿ ಬೆಲೆ ಕೆಜಿಗೆ 3,39,824 ರೂಪಾಯಿಗೆ ತಲುಪಿದೆ. ಅಂದರೆ 1.53 ರಷ್ಟು ದಿಢೀರ್ ಹೆಚ್ಚಳ ಕಂಡಿದೆ. ಇದರ ಹಿಂದಿನ ಬೆಲೆಯು 3,34,699 ರೂ.ಗೆ ಹೋಲಿಕೆ ಮಾಡಿದರೆ ಎಂಸಿಎಕ್ಸ್ ಕ್ಲೋಸಿಂಗ್ ವೇಳೆ ಬೆಳ್ಳಿ ದರ 3,64,820 ಕ್ಕೆ ತಲುಪಿತು.
2026ರಲ್ಲಿ ಚಿನ್ನದ ಬೆಲೆ 17% ಏರಿಕೆ
2026ರ ಹೊಸ ವರ್ಷದಲ್ಲಿ ಮಂಗಳವಾರವರೆಗೆ ಚಿನ್ನದ ಬೆಲೆಗಳು ಕಡಿಮೆ ಅವಧಿಯಲ್ಲಿ ಒಟ್ಟು ಶೇಕಡಾ 17 ರಷ್ಟು ಹೆಚ್ಚಾಗಿದೆ. ಇದಕ್ಕೆ ಹೂಡಿಕೆದಾರರು ಸಾರ್ವಭೌಮ ಬಾಂಡ್‌ಗಳು ಮತ್ತು ಕರೆನ್ಸಿಗಳಿಂದ ಹಿಂದೆ ಸರಿದಿವೆ. ಇದೇ ವೇಳೆ ಯುಎಸ್ ಡಾಲರ್ ಕುಸಿತ ಕಂಡು ದುರ್ಬಲ ಸ್ಥಿತಿ ಎದುರು ನೋಡುತ್ತಿದೆ. ಭೌಗೋಳಿಕ ರಾಜಕೀಯ ಅಪಾಯಗಳು ಅಪಮೌಲ್ಯಮಾಪನ ವ್ಯಾಪಾರಕ್ಕೆ ದಾರಿ ಮಾಡಿಕೊಬಹುದೆಂದು ಊಹಿಸಲಾಗಿದೆ.












Click it and Unblock the Notifications