Gold Price: ಸಿಹಿ ಸುದ್ದಿ, ಇಂದು ಚಿನ್ನ-ಬೆಳ್ಳಿ ದರದಲ್ಲಿ ಇಳಿಕೆ, ನಗರವಾರು ದರಪಟ್ಟಿ ಇಲ್ಲಿದೆ

ಬೆಂಗಳೂರು, ಆಗಸ್ಟ್ 30: ಚಿನ್ನಾಭರಣ ಬೆಲೆಯಲ್ಲಿ ಎಷ್ಟೇ ವ್ಯತ್ಯಾಸಗಳು ಕಂಡು ಬಂದರೂ ಸಹಿತ ಬೇಡಿಕೆ ಮಾತ್ರ ಕಡಿಮೆ ಆಗುತ್ತಿಲ್ಲ. ಇದೀಗ ಚಿನ್ನ ಹಾಗೂ ಬೆಳ್ಳಿಯ ಬೆಲೆಯಲ್ಲಿ ಕೊಂಚ ಇಳಿಕೆ ಆಗಿದೆ. ವಿಪರ್ಯಾಸವೆಂದರೆ ಪ್ರಸ್ತಕ ವರ್ಷ 2024ರ ಅಂತ್ಯದ ಹೊತ್ತಿಗೆ ಚಿನ್ನದ ಬೆಲೆ 70,000 ದಾಟಲಿದೆ ಎನ್ನಲಾಗಿತ್ತು. ಆದರೆ ವರ್ಷಾರ್ಧಕ್ಕೂ ಮೊದಲೇ ಚಿನ್ನದ ಬೆಲೆ ನಿರೀಕ್ಷೆಗೂ ಮೀರಿ ಹೆಚ್ಚಾಗಿದೆ.

ಶುಕ್ರವಾರ ಚಿನ್ನ ಹಾಗೂ ಬೆಳ್ಳಿಯ ದರ 10 ರೂಪಾಯಿ ಇಳಿಕೆ ಕಂಡಿದೆ. ಅಂದರೆ ಗ್ರಾಂಗೆ ಹತ್ತು ರೂ.ನಷ್ಟು ಕಡಿಮೆ ಆಗಿದೆ. ಬಹುದಿನಗಳ ಬಳಿಕ ಬಂಗಾರ ಹಾಗೂ ಬೆಳ್ಳಿ ಬೆಲೆಯು ಸಮ ಪ್ರಮಾಣದಲ್ಲಿ ಇಳಿಕೆ ಆಗಿರುವುದು ವಿಶೇಷ. ಹೆಚ್ಚು ಬಂಗಾರ ಖರೀದಿಸುವವರಿಗೆ ಈ ಇಳಿಕೆಯ ದರ ಕೊಂಚ ನೆರವಾಗಲಿದೆ.

Gold and Silver Price Slightly Redused on August 30th Check Citywise Rate List here

ಮುಂಬೈನಂತಹ ಮಹಾನಗರದಲ್ಲಿ ಬೆಳ್ಳಿ ಬೆಲೆ ಕೇವಲ ಹತ್ತು ಪೈಸೆಯಷ್ಟು ಇಳಿಕೆ ಕಂಡಿದೆ. ಬೆಂಗಳೂರಿನಲ್ಲಿ ಬೆಳ್ಳಿ ಬೆಲೆ ಗ್ರಾಂಗೆ 87ರೂಪಾಯಿ ದಾಟಿದ್ದು, ಇದು ಮುಂಬೈನ ಬೆಲೆಗಿಂತ ಕಡಿಮೆಯಾಗಿದೆ. ಕೇರಳ ರಾಜ್ಯ ಹಾಗೂ ಚೆನ್ನನಲ್ಲಿ ಪ್ರತಿ ಗ್ರಾಂ ಬೆಳ್ಳಿ ದರ 93.50 ಇದ್ದದ್ದು 93 ರೂಪಾಯಿಗೆ ಇಳಿಕೆ ಆಗಿದೆ. ಅಂದರೆ ಇಲ್ಲಿ 50 ಪೈಸೆ ಕಡಿಮೆ ಆಗಿದೆ.

ದೇಶದಲ್ಲಿ 10 ಗ್ರಾಂ ಚಿನ್ನದ ಬೆಲೆ (22 ಕ್ಯಾರೆಟ್) 67,050 ರೂಪಾಯಿ ಇದ್ದರೆ, 10 ಗ್ರಾಂ ಚಿನ್ನದ ದರವು (24 ಕ್ಯಾರೆಟ್) 73150 ರೂಪಾಯಿ ಇದೆ. 100 ಗ್ರಾಂ ಬೆಳ್ಳಿಯ ಬೆಲೆ 8,840 ರೂಪಾಯಿ ಇದೆ.

ಬೆಂಗಳೂರಿನಲ್ಲಿ ಆಗಸ್ಟ್ 30ರಂದು ಶುಕ್ರವಾರ 10 ಗ್ರಾಂ 22 ಕ್ಯಾರಟ್​ನ 10 ಗ್ರಾಂ ಚಿನ್ನದ ದರ, 67,050 ರೂಪಾಯಿ ಇದ್ದು, 24 ಕ್ಯಾರಟ್​ನ 10 ಗ್ರಾಂ ಬಂಗಾರಕ್ಕೆ 73,150 ರೂಪಾಯಿ ಇದೆ. ಇನ್ನೂ ಹತ್ತು ಗ್ರಾಂ ಬೆಳ್ಳಿಗೆ 875 ರೂಪಾಯಿ ಇದೆ.

Gold and Silver Price Slightly Redused on August 30th Check Citywise Rate List here

ಹಾಗಾದರೆ ದೇಶದ ವಿವಿಧ ಮಹಾನಗರಗಳಲ್ಲಿ ಚಿನ್ನ, ಬೆಳ್ಳಿ ದರ ಎಷ್ಟಿದೆ? ಇಲ್ಲಿದೆ ದರಪಟ್ಟಿ, ಮಾಹಿತಿ.

ನಗರವಾರು 22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ ಪಟ್ಟಿ

ಬೆಂಗಳೂರು: ಚಿನ್ನದ ದರ 67,050 ರೂಪಾಯಿ

ದೆಹಲಿ: ಚಿನ್ನದ ದರ 67,200 ರೂಪಾಯಿ

ಮುಂಬೈ: ಬಂಗಾರದ ಬೆಲೆ 67,050 ರೂಪಾಯಿ

ಚೆನ್ನೈ: ಚಿನ್ನದ ದರ 67,050 ರೂಪಾಯಿ

ಭುವನೇಶ್ವರ್: ಚಿನ್ನದ ದರ 67,050 ರೂಪಾಯಿ

ಜೈಪುರ್: ಚಿನ್ನದ ದರ 67,200 ರೂಪಾಯಿ

ಲಕ್ನೋ: ಬಂಗಾರದ ಬೆಲೆ 67,200 ರೂಪಾಯಿ

ಕೋಲ್ಕತಾ: ಚಿನ್ನದ ದರ 67,050 ರೂಪಾಯಿ

ಕೇರಳ: ಬಂಗಾರದ ಬೆಲೆ 67,050 ರೂಪಾಯಿ

ಅಹ್ಮದಾಬಾದ್: ಚಿನ್ನದ ದರ 67,100 ರೂಪಾಯಿ

ವಿದೇಶಗಳಲ್ಲಿ 22 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ ಎಷ್ಟಿದೆ ದರ?

ದುಬೈ: ಚಿನ್ನದ ಬೆಲೆ 64,470 ರೂಪಾಯಿ

ಸಿಂಗಾಪುರ: ಚಿನ್ನದ ದರ 66,060 ರೂಪಾಯಿ

ಮಲೇಷ್ಯಾ: ಚಿನ್ನದ ಬೆಲೆ 67,230 ರೂಪಾಯಿ

ಓಮನ್: ಚಿನ್ನದ ಬೆಲೆ 65,450 ರೂಪಾಯಿ

ಕುವೇತ್: ಚಿನ್ನದ ದರ 62,840 ರೂಪಾಯಿ

ಅಮೆರಿಕ: ಚಿನ್ನದ ಬೆಲೆ 64,180 ರೂಪಾಯಿ

ಸೌದಿ ಅರೇಬಿಯಾ: ಚಿನ್ನದ ದರ 64,620 ರೂಪಾಯಿ

100 ಗ್ರಾಂ ಬೆಳ್ಳಿ ದರ: ನಗರವಾರು ಪಟ್ಟಿ ವಿವರ

ಬೆಂಗಳೂರು: ಬೆಳ್ಳಿ ದರ 8,750 ರೂಪಾಯಿ

ಮುಂಬೈ: ಬೆಳ್ಳಿ ಬೆಲೆ 8,840 ರೂಪಾಯಿ

ದೆಹಲಿ: ಬೆಳ್ಳಿ ದರ 8,840 ರೂಪಾಯಿ

ಕೋಲ್ಕತಾ: ಬೆಳ್ಳಿ ದರ 8,840 ರೂಪಾಯಿ

ಕೇರಳ: ಬೆಳ್ಳಿ ಬೆಲೆ 9,300 ರೂಪಾಯಿ

ಜೈಪುರ: ಬೆಳ್ಳಿ ದರ 8,840 ರೂಪಾಯಿ

ಚೆನ್ನೈ: ಬೆಳ್ಳಿ ದರ 9,300 ರೂಪಾಯಿ

ಅಹ್ಮದಾಬಾದ್: ಬೆಳ್ಳಿ ದರ 8,840 ರೂಪಾಯಿ

ವಿಶೇಷ ಸೂಚನೆ: ದೇಶದ ಆಯಾ ನಗರಗಳಲ್ಲಿ ಚಿನ್ನ, ಬೆಳ್ಳಿ ಆಭರಣಗಳ ಮೇಲೆ ವೇಸ್ಟೇಜ್, ಜಿಎಸ್‌ಟಿ, ಮೇಕಿಂಗ್ ಶುಲ್ಕವು ಭಿನ್ನವಾಗಿರುತ್ತದೆ. ಹೀಗಾಗಿ ಬೆಲೆಯಲ್ಲಿ ತಕ್ಕ ಮಟ್ಟಿನ ವ್ಯತ್ಯಾಸ ಆಗುವುದನ್ನು ಗ್ರಾಹಕರು ಗಮನಿಸಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+