Gold Price on August 7: ಶ್ರಾವಣ ಮಾಸದಲ್ಲಿ ಬಂಗಾರ ಬೆಲೆ ಎಷ್ಟಿದೆ? ಇಲ್ಲಿದೆ ಆಗಸ್ಟ್ 7ರ ದರಪಟ್ಟಿ
Gold Price on August 07: ಬಂಗಾರ ದರದಲ್ಲಿ ಹಾವು ಏಣಿ ಆಟದಂತೆ ಏರಿಳಿತ ಆಗುತ್ತಲಿರುತ್ತದೆ. ಅದರಲ್ಲೂ ಶ್ರಾವಣ ಮಾಸದ ಆರಂಭದಲ್ಲಿ ಬೆಲೆ ಭರ್ಜರಿ ಇಳಿಕೆಯತ್ತ ಸಾಗಿತ್ತು. ಹಾಗಾದ್ರೆ ಇಂದು (ಆಗಸ್ಟ್ 7) ಕರ್ನಾಟಕ ರಾಜಧಾನಿ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಬಂಗಾರ, ಬೆಳ್ಳಿ ದರ ಎಷ್ಟಿದೆ ಎನ್ನುವ ಸಂಪೂರ್ಣ ಅಂಕಿಅಂಶಗಳ ಸಹಿತ ವಿವರವನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಬಂಗಾರ ದರಗಳ ವಿವರ: ನಿನ್ನೆ (ಆಗಸ್ಟ್ 6) ಬೆಂಗಳೂರು ಸೇರಿದಂತೆ ದೇಶದ ಬಹುತೇಕ ಕಡೆಗಳಲ್ಲಿ 10 ಗ್ರಾಂ (22 ಕ್ಯಾರೆಟ್) ಬಂಗಾರ ದರ 93,800 ರೂಪಾಯಿ ಇದ್ದರೆ, ಇಂದು (ಆಗಸ್ಟ್ 7) 94,000 ರೂಪಾಯಿ ಆಗಿದೆ. 10 ಗ್ರಾ (24 ಕ್ಯಾರೆಟ್) ನಿನ್ನೆ ದರ 1,02,330 ರೂಪಾಯಿ ಇತ್ತು. ಇನ್ನು ಇಂದು 1,02,550 ರೂಪಾಯಿ ಇದೆ. ಹಾಗಾದರೆ, ಕರ್ನಾಟಕ ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಬಂಗಾರ, ಬೆಳ್ಳಿ ದರ ಪಟ್ಟಿ ಇಲ್ಲಿದೆ ಪರಿಶೀಲಿಸಿ.

8 ಗ್ರಾಂ ಬಂಗಾರ ದರ
* 22 ಕ್ಯಾರೆಟ್ ಚಿನ್ನದ ಬೆಲೆ - 75,200 ರೂಪಾಯಿ
* 24 ಕ್ಯಾರೆಟ್ ಚಿನ್ನದ ಬೆಲೆ (ಅಪರಂಜಿ) - 82,040 ರೂಪಾಯಿ
10 ಗ್ರಾಂ ಬಂಗಾರ ದರ
22 ಕ್ಯಾರೆಟ್ ಚಿನ್ನದ ದರ - 94,000 ರೂಪಾಯಿ
24 ಕ್ಯಾರೆಟ್ ಬಂಗಾರ ದರ (ಅಪರಂಜಿ) - 1,02,550 ರೂಪಾಯಿ
ವಿವಿಧ ನಗರಗಳಲ್ಲಿ ಬಂಗಾರ ದರ 22 ಕ್ಯಾರೇಟ್ (10 ಗ್ರಾಂ)
* ಬೆಂಗಳೂರು - 94,000 ರೂಪಾಯಿ
* ಚೆನ್ನೈ -94,000 ರೂಪಾಯಿ
* ಮುಂಬೈ - 94,000 ರೂಪಾಯಿ
* ಕೋಲ್ಕತ್ತಾ - 94,000 ರೂಪಾಯಿ
* ನವದೆಹಲಿ - 94,150 ರೂಪಾಯಿ
* ಹೈದರಾಬಾದ್ - 94,000 ರೂಪಾಯಿ
ವಿವಿಧ ನಗರಗಳಲ್ಲಿ ಬಂಗಾರ ದರ 24 ಕ್ಯಾರೇಟ್ (10 ಗ್ರಾಂ)
* ಬೆಂಗಳೂರು - 1,02,550 ರೂಪಾಯಿ
* ಚೆನ್ನೈ - 1,02,550 ರೂಪಾಯಿ
* ಮುಂಬೈ - 1,02,550 ರೂಪಾಯಿ
* ಕೋಲ್ಕತ್ತಾ - 1,02,550 ರೂಪಾಯಿ
* ನವದೆಹಲಿ - 1,02,700 ರೂಪಾಯಿ
* ಹೈದರಾಬಾದ್ - 1,02,550 ರೂಪಾಯಿ
ದೇಶದ ಪ್ರಮುಖ ನಗರಗಳಲ್ಲಿ ಬೆಳ್ಳಿ ದರ (ಕೆಜಿ ಲೆಕ್ಕದಲ್ಲಿ)
* ಬೆಂಗಳೂರು - 1,17,000 ರೂಪಾಯಿ (1,000 ಏರಿಕೆ)
* ಚೆನ್ನೈ - 1,27,000 ರೂಪಾಯಿ (1,000 ಏರಿಕೆ)
* ಮುಂಬೈ - 1,17,000 ರೂಪಾಯಿ (1,000 ಏರಿಕೆ)
* ಕೋಲ್ಕತ್ತಾ - 1,17,000 ರೂಪಾಯಿ (1,000 ಏರಿಕೆ)
* ನವದೆಹಲಿ - 1,17,000 ರೂಪಾಯಿ (1,000 ಏರಿಕರ)
* ಹೈದರಾಬಾದ್ - 1,27,000 ರೂಪಾಯಿ (1,000 ಏರಿಕೆ)
ಬಂಗಾರ, ಬೆಳ್ಳಿ ದರಪಟ್ಟಿ: ಹಬ್ಬಗಳು ಹತ್ತಿರ ಬರುತ್ತಿದ್ದಂತೆ ಬಂಗಾರ, ಬೆಳ್ಳಿ, ಕೊಳ್ಳುವವರ ಸಂಖ್ಯೆ ತುಸು ಹೆಚ್ಚಾಗಿರುತ್ತದೆ. ಸಾಮಾನ್ಯ ದಿನಗಳಲ್ಲೂ ಸಹ ಬಂಗಾರ ಕೊಳ್ಳುವವರ ಸಂಖ್ಯೆಯೇನು ಕಡಿಮೆ ಇರುವುದಿಲ್ಲ. ದರ ಕಡಿಮೆಯಿರಲಿ, ಬಿಡಲಿ ಆಭರಣಗಳನ್ನು ಕಷ್ಟದ ಕಾಲಕ್ಕೆ ಆಗುತ್ತವೆಂದು ಕೊಂಡುಕೊಳ್ಳುತ್ತಲಿರುತ್ತಾರೆ. ಹಬ್ಬ, ಹರಿ ದಿನಗಳಲ್ಲಂತೂ ತುಸು ಹೆಚ್ಚಿನ ಪ್ರಮಾಣದಲ್ಲಿ ಬಂಗಾರ ಕೊಳ್ಳುತ್ತಾರೆ. ಅದರಲ್ಲೂ ಇದೀಗ ಶ್ರಾವಣ ಮಾಸ ಆರಂಭದಲ್ಲಿ ದರ ಕಡಿಮೆಯಾಗುತ್ತಲಿತ್ತು. ಆದರೆ, ಇದೀಗ ಆಡದ್ದೇ ಆಟವೆಂಬಂತೆ ಏರುತ್ತಲಿದ್ದು, ಮುಂದಿನ ದಿನಗಳಲ್ಲಿ ಇದೇ ಮುಂದುವರೆದರೂ ಆಶ್ಚರ್ಯವಿಲ್ಲ. ಆದ್ದರಿಂದ ಈಗಲೇ ಕೊಂಡುಕೊಳ್ಳುವುದು ಉತ್ತಮ.












Click it and Unblock the Notifications