Gold Price on August 5: ನೀವೂ ಬ್ಯಾಂಗಲ್ ಬಂಗಾರಿ ಆಗುವ ಸಮಯ ಬಂದೇ ಬಿಡ್ತು: ಚಿನ್ನ ಕೊಳ್ಳಲು ಇದೇ ಉತ್ತಮ ಸಮಯ
Gold Price on August 5: ಬಂಗಾರ ದರದಲ್ಲಿ ಹಾವು ಏಣಿ ಆಟದಂತೆ ಏರಿಳಿತ ಆಗುತ್ತಲಿರುತ್ತದೆ. ಅದರಲ್ಲೂ ಶ್ರಾವಣ ಮಾಸದಲ್ಲಿ ಆರಂಭದಿಂದಲೂ ಬೆಲೆ ಇಳಿಕೆ ಆಗುತ್ತಲೇ ಬಂದಿದೆ. ಹಾಗಾದ್ರೆ ಇಂದು (ಆಗಸ್ಟ್ 5) ಕರ್ನಾಟಕ ರಾಜಧಾನಿ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಬಂಗಾರ, ಬೆಳ್ಳಿ ದರ ಎಷ್ಟಿದೆ ಎನ್ನುವ ಸಂಪೂರ್ಣ ಅಂಕಿಅಂಶಗಳ ಸಹಿತ ವಿವರವನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ನಗರವಾರು ಬಂಗಾರ ದರಗಳ ವಿವರ: ನಿನ್ನೆ (ಆಗಸ್ಟ್ 4) ಬೆಂಗಳೂರು ಸೇರಿದಂತೆ ದೇಶದ ಬಹುತೇಕ ಕಡೆಗಳಲ್ಲಿ 10 ಗ್ರಾಂ (22 ಕ್ಯಾರೆಟ್) ಬಂಗಾರ ದರ 92,950 ರೂಪಾಯಿ ಇದ್ದರೆ, ಇಂದು (ಆಗಸ್ಟ್ 5) 93,700 ರೂಪಾಯಿ ಆಗಿದೆ. 10 ಗ್ರಾ (24 ಕ್ಯಾರೆಟ್) ನಿನ್ನೆ ದರ 1,01,400 ರೂಪಾಯಿ ಇತ್ತು. ಇನ್ನು ಇಂದು 1,02,220 ರೂಪಾಯಿಗೆ ಇಳಿಕೆ ಆಗಿದೆ. ಹಾಗಾದರೆ, ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಬಂಗಾರ, ಬೆಳ್ಳಿ ದರ ಪಟ್ಟಿ ಇಲ್ಲಿದೆ ಪರಿಶೀಲಿಸಿ.

8 ಗ್ರಾಂ ಬಂಗಾರ ದರ
* 22 ಕ್ಯಾರೆಟ್ ಚಿನ್ನದ ಬೆಲೆ - 74,960 ರೂಪಾಯಿ
* 24 ಕ್ಯಾರೆಟ್ ಚಿನ್ನದ ಬೆಲೆ (ಅಪರಂಜಿ) - 81,776 ರೂಪಾಯಿ
10 ಗ್ರಾಂ ಬಂಗಾರ ದರ
22 ಕ್ಯಾರೆಟ್ ಚಿನ್ನದ ದರ - 93,700 ರೂಪಾಯಿ
24 ಕ್ಯಾರೆಟ್ ಬಂಗಾರ ದರ (ಅಪರಂಜಿ) - 1,02,220 ರೂಪಾಯಿ
ವಿವಿಧ ನಗರಗಳಲ್ಲಿ ಬಂಗಾರ ದರ 22 ಕ್ಯಾರೇಟ್ (10 ಗ್ರಾಂ)
* ಬೆಂಗಳೂರು - 93,700 ರೂಪಾಯಿ
* ಚೆನ್ನೈ - 93,700 ರೂಪಾಯಿ
* ಮುಂಬೈ - 93,700 ರೂಪಾಯಿ
* ಕೋಲ್ಕತ್ತಾ - 93,700 ರೂಪಾಯಿ
* ನವದೆಹಲಿ - 93,850 ರೂಪಾಯಿ
* ಹೈದರಾಬಾದ್ - 93,700 ರೂಪಾಯಿ
ವಿವಿಧ ನಗರಗಳಲ್ಲಿ ಬಂಗಾರ ದರ 24 ಕ್ಯಾರೇಟ್ (10 ಗ್ರಾಂ)
* ಬೆಂಗಳೂರು - 1,02,220 ರೂಪಾಯಿ
* ಚೆನ್ನೈ - 1,02,220 ರೂಪಾಯಿ
* ಮುಂಬೈ - 1,02,220 ರೂಪಾಯಿ
* ಕೋಲ್ಕತ್ತಾ - 1,02,220 ರೂಪಾಯಿ
* ನವದೆಹಲಿ - 1,02,370 ರೂಪಾಯಿ
* ಹೈದರಾಬಾದ್ - 1,02,200 ರೂಪಾಯಿ
ದೇಶದ ಪ್ರಮುಖ ನಗರಗಳಲ್ಲಿ ಬೆಳ್ಳಿ ದರ (ಕೆಜಿ ಲೆಕ್ಕದಲ್ಲಿ)
* ಬೆಂಗಳೂರು - 1,15,000 ರೂಪಾಯಿ (2,000 ಏರಿಕೆ)
* ಚೆನ್ನೈ - 1,25,000 ರೂಪಾಯಿ (2,000 ಏರಿಕೆ)
* ಮುಂಬೈ - 1,15,000 ರೂಪಾಯಿ (2,000 ಏರಿಕೆ)
* ಕೋಲ್ಕತ್ತಾ - 1,15,000 ರೂಪಾಯಿ (2,000 ಏರಿಕೆ)
* ನವದೆಹಲಿ - 1,15,000ರೂಪಾಯಿ (2,000 ಏರಿಕೆ)
* ಹೈದರಾಬಾದ್ - 1,25,000ರೂಪಾಯಿ (2,000 ಏರಿಕೆ)
ಬಂಗಾರ, ಬೆಳ್ಳಿ ದರ: ಹಬ್ಬಗಳು ಹತ್ತಿರ ಬರುತ್ತಿದ್ದಂತೆ ಬಂಗಾರ, ಬೆಳ್ಳಿ, ಕೊಳ್ಳುವವರ ಸಂಖ್ಯೆ ತುಸು ಹೆಚ್ಚಾಗಿರುತ್ತದೆ. ಸಾಮಾನ್ಯ ದಿನಗಳಲ್ಲೂ ಸಹ ಬಂಗಾರ ಕೊಳ್ಳುವವರ ಸಂಖ್ಯೆಯೇನು ಕಡಿಮೆ ಇರುವುದಿಲ್ಲ. ದರ ಕಡಿಮೆಯಿರಲಿ, ಬಿಡಲಿ ಆಭರಣಗಳನ್ನು ಕಷ್ಟದ ಕಾಲಕ್ಕೆ ಆಗುತ್ತವೆ ಎಂದು ಕೊಂಡುಕೊಳ್ಳುತ್ತಲೇ ಇರುತ್ತಾರೆ. ಹಬ್ಬ, ಹರಿ ದಿನಗಳಲ್ಲಂತೂ ತುಸು ಹೆಚ್ಚಿನ ಪ್ರಮಾಣದಲ್ಲಿ ಬಂಗಾರ ಕೊಳ್ಳುತ್ತಾರೆ. ಇನ್ನೂ ಶ್ರಾವಣ ಮಾಸ ಆರಂಭದಿಂದಿಲೂ ದರ ಕಡಿಮೆಯಾಗುತ್ತಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಕಡಿಮೆಯಾಗಲೂಬಹುದು, ಹೆಚ್ಚಾಗಲೂಬಹುದು. ಆದ್ದರಿಂದ ಈಗಲೇ ಆಭರಣ ಕೊಳ್ಳಲು ಉತ್ತಮ ಸಮಯವಾಗಿದೆ.












Click it and Unblock the Notifications