Gold Price: ಚಿನ್ನದ ಬೆಲೆ 85000 ರೂ.ಗೆ ಏರಿಕೆ ಸಾಧ್ಯತೆ: ಇಂದಿನ ಚಿನ್ನ-ಬೆಳ್ಳಿ ದರವೆಷ್ಟು?
ಬೆಂಗಳೂರು, ಡಿಸೆಂಬರ್ 15: ವಾರಗಳಿಂದ ಏರಿಕೆ ಮತ್ತು ಇಳಿಕೆಯಲ್ಲಿದ್ದ ಚಿನ್ನದ ಬೆಲೆಯಲ್ಲಿ ಸ್ಥಿರತೆ ಕಂಡು ಬಂದಿದೆ. ಇಂದಿನ ಚಿನ್ನದ ದರವು ನೆನ್ನೆಯ ದರದಲ್ಲಿ ಮುಂದುವರಿಯುತ್ತಿದೆ. ಬೆಳ್ಳಿಯ ಬೆಲೆಯಲ್ಲೂ ಸಹ ಯಾವುದೇ ಬದಲಾವಣೆ ಆಗಿಲ್ಲ. ಯಾವಾಗ ಬೇಡಿಕೆ ಹೊಂದಿರುವ ಚಿನ್ನ-ಬೆಳ್ಳಿಯು ಅತೀವವಾಗಿ ಏರಿಕೆ ಕಾಣುತ್ತದೆ. ಬಳಿಕ ಕೊಂಚ ಕೊಂಚವೇ ಇಳಿಕೆ ಆಗುತ್ತದೆ. ಇದೀಗ ಮುಂದಿನ ದಿನಗಳಲ್ಲಿ ಭಾರೀ ಪ್ರಮಾಣದಲ್ಲಿ ಏರಿಕೆ ಆಗುವ ಮುನ್ಸೂಚನೆಯೊಂದು ಸಿಕ್ಕಿದೆ.
ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲಿ ಚಿನ್ನದ ದರ ಡಿಸೆಂಬರ್ 15ರಂದು ಯಥಾ ಸ್ಥಿತಿಯಲ್ಲಿದೆ. ಭಾರತೀಯರಿಗೆ ಚಿನ್ನದ ಮೇಲೆ ಇನ್ನಿಲ್ಲದ ಮೋಹ ಎಂದರೆ ತಪ್ಪಾಗಲಾರದು. ಮದುವೆ, ಶುಭ ಸಮಾರಂಭ, ಹಬ್ಬ ಹರಿದಿನ, ಗಿಫ್ಟ್ ಕೊಡಲು ಹೀಗೆ ಅನೇಕ ಕಾರಣಗಳಿಂದ ಚಿನ್ನ ಖರೀದಿ ನಡೆಯುತ್ತಲೇ ಇರುತ್ತದೆ.

ಈ ಕಾರಣದಿಂದ ಚಿನ್ನದ ಬೇಡಿಕೆ ಕಡಿಮೆ ಆಗುವುದೇ ಇಲ್ಲ. ಚಿನ್ನದ ಮೇಲಿನ ಹೂಡಿಕೆ ಹೆಚ್ಚವಾಗುತ್ತಿದೆ. ಕೇಂದ್ರೀಯ ಬ್ಯಾಂಕ್‌ಗಳಿಗಿಂತಲೂ ಅಧಿಕ ಪ್ರಮಾಣದಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಅಧಿಕ ಪ್ರಮಾಣದಲ್ಲಿ ಚಿನ್ನ ಖರೀದಿಸಿದೆ. ಲೋಕಸಭಾ ಚುನಾವಣೆ ಫಲಿತಾಂಶ ಬಳಿಕ ಚಿನ್ನದಲ್ಲಿ ಹೆಚ್ಚಿನ ಏರಿಕೆ, ಆಗಾಗ ಕೊಂಚ ಇಳಿಕೆ ಕಂಡು ಬರುತ್ತಿದೆ.
ಶೀಘ್ರವೇ 85000 ರೂಪಾಯಿವರೆಗೆ ಏರಿಕೆ ನಿರೀಕ್ಷೆ
ಇಂದು ಮಾರುಕಟ್ಟೆಯಲ್ಲಿ 10 ಗ್ರಾಂ 22 ಕ್ಯಾರಟ್ ಚಿನ್ನದ ದರ 71000 ರೂಪಾಯಿ ಇದೆ. 24 ಕ್ಯಾರಟ್ ಚಿನ್ನ 10 ಗ್ರಾಂನ ಬೆಲೆಯು 77890 ರೂಪಾಯಿ ಇದೆ. ಮುಂದಿನ ದಿನಗಳಲ್ಲಿ ಚಿನ್ನದ ಬೆಲೆಯಲ್ಲಿ ಮತ್ತಷ್ಟು ಏರಿಕೆ ಆಗುವ ಸಾಧ್ಯತೆ ಇದೆ. ಕೆಲವೇ ತಿಂಗಳಲ್ಲಿ ಈ ಚಿನ್ನದ ಬೆಲೆ 85000 ರೂಪಾಯಿವರೆಗೆ ಏರಿಕೆ ಆಗುವ ಸಾಧ್ಯತೆ ಇದೆ ಎಂದು ಆರ್ಥಿಕ ತಜ್ಞರು ತಿಳಿಸಿದ್ದಾರೆ.
ದೇಶದಲ್ಲಿ ಬೇಡಿಕೆ ಹೀಗೆ ಹೆಚ್ಚಾಗುತ್ತಾ ಹೋದಲ್ಲಿ ಚಿನ್ನದ ದರ ಇನ್ನಷ್ಟು ಏರಿಕೆ ಆಗುವ ದಿನಗಳು ದೂರವಿಲ್ಲ. ಕೇವಲ ಒಂದೇ ವರ್ಷದಲ್ಲಿ ಚಿನ್ನದ ಬೆಲೆಯಲ್ಲಿ ಬರೋಬ್ಬರಿ ಶೇಕಡಾ 35ರಷ್ಟು ಏರಿಕೆ ಆದರೆ, ಬೆಳ್ಳಿ ದರಲ್ಲಿ ಶೇಕಡಾ 36ರಷ್ಟು ಏರಿಕೆ ಆಗಿದೆ. ನವೆಂಬರ್ 23ರಂದು ಒಂದೇ ದಿನ 10 ಗ್ರಾಂ ಚಿನ್ನಕ್ಕೆ ಭರ್ಜರಿ 1100 ರೂಪಾಯಿ ಏರಿಕೆ ಆಗಿ ಆಮೇಲೆ, ಕೊಂಚ ಪ್ರಮಾಣದಲ್ಲಿ ಇಳಿಕೆ ಕಂಡಿತ್ತು.
ಇದೆಲ್ಲ ಗಮನಿಸಿಯೇ ಭಾರತೀಯ ರಿಸರ್ವ ಬ್ಯಾಂಕ್ ಮೀಸಲು ಉದ್ದೇಶದಿಂದ ಕಳೆದ ಅಕ್ಟೋಬರ್ ಒಂದೇ ತಿಂಗಳಲ್ಲಿಯೇ ಬರೋಬ್ಬರಿ 27 ಟನ್ ಚಿನ್ನ ಖರೀದಿ ಮಾಡಿದೆ. ಇದೇ ವರ್ಷ ಜನವರಿಯಿಂದ ಅಕ್ಟೋಬರ್ ರವರೆಗೆ ಬ್ಯಾಂಕ್ 77 ಟನ್ ಚಿನ್ನ ಖರೀದಿದಂತಾಗಿದೆ ಎಂದು ವರದಿ ಆಗಿದೆ.
ಇಂದಿನ ಚಿನ್ನದ ಬೆಲೆ
* 22 ಕ್ಯಾರಟ್ 10 ಗ್ರಾಂ ಚಿನ್ನದ ದರ: 71000 ರೂಪಾಯಿ
* 24 ಕ್ಯಾರಟ್ ಚಿನ್ನ 10 ಗ್ರಾಂ ಬೆಲೆ: 77890 ರೂಪಾಯಿ
* ಬೆಳ್ಳಿ ದರ 100 ಗ್ರಾಂಗೆ 9250 ರೂಪಾಯಿ.
* ಬೆಳ್ಳಿ ಒಂದು ಕೆ.ಜಿ.ಗೆ 92500 ರೂಪಾಯಿ ಇದೆ
(ಚಿನ್ನಾಭರಣ ಬೆಲೆಯಲ್ಲಿ ಪ್ರದೇಶದಿಂದ ಪ್ರದೇಶಕ್ಕೆ ವೇಸ್ಟೇಜ್ ಚಾರ್ಜ್ ಇತರ ಶುಲ್ಕ ಸೇರಿ ಕೊಂಚ ವ್ಯತ್ಯಾಸ ಕಾಣಬಹುದು)












Click it and Unblock the Notifications