Gold Price: ಬಂಗಾರ ಪ್ರಿಯ ಮಹಿಳೆಯರಿಗೆ ಸಿಹಿಸುದ್ದಿ, ಚಿನ್ನದ ಬೆಲೆ ಭರ್ಜರಿ ಇಳಿಕೆ!
ಭಾರತೀಯರಿಗೆ ಚಿನ್ನ ಮತ್ತು ಬೆಳ್ಳಿ ಕೂಡ, ಮೂಲಭೂತ ವಸ್ತುಗಳ ರೀತಿ ಆಗಿ ಹೋಗಿದೆ. ಚಿನ್ನದ ಬೆಲೆಯಲ್ಲಿ ಇಂದು ಭರ್ಜರಿ ಕುಸಿತ ಕಂಡುಬಂದಿದ್ದು, ನಿನ್ನೆಯಷ್ಟೇ ಬಂಗಾರ ಬೆಲೆ ಹೆಚ್ಚಾಗಿದೆ ಅಂತಾ ಚಿಂತೆ ಮಾಡುತ್ತಿದ್ದ ಜನರಿಗೆ ಇದೀಗ ಖುಷಿ ಕೊಟ್ಟಿದೆ. ಹಾಗಾದ್ರೆ ಇದೀಗ ಚಿನ್ನದ ಬೆಲೆಯಲ್ಲಿ ಕುಸಿತ ಕಂಡು ಬಂದಿದ್ದು ಏಕೆ? ಚಿನ್ನದ ಬೆಲೆ ಕುಸಿತ ಕಂಡ ನಂತರ ಈಗ ಎಷ್ಟಿದೆ? ಬೆಂಗಳೂರು & ಕರ್ನಾಟಕದಲ್ಲಿ ಇದೀಗ ಚಿನ್ನ & ಬೆಳ್ಳಿ ಬೆಲೆ ಎಷ್ಟಿದೆ? ಈ ಕುರಿತು ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.
ಚಿನ್ನದ ಬೆಲೆಯಲ್ಲಿ ಕಳೆದ ಕೆಲ ದಿನಗಳಿಂದ ಕುಸಿತ ಕಂಡು ಬಂದಿತ್ತು. ಆದರೆ, ನಿನ್ನೆ ದಿಢೀರ್ ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆ ಕಂಡುಬಂದಿತ್ತು. 5000 ವರ್ಷಗಳಿಂದ ಕೂಡ ಮನುಷ್ಯರು ಚಿನ್ನ ಬಳಕೆ ಮಾಡಿಕೊಂಡು ಬರುತ್ತಿದ್ದಾರೆ. ಹೀಗಿದ್ದಾಗ ಚಿನ್ನದ ಮೇಲೆ ಭಾರತೀಯರಿಗೆ ಕೂಡ ಸಾಕಷ್ಟು ಒಲವು ಇದೆ. ಈ ಹಿನ್ನೆಲೆ ಚಿನ್ನಕ್ಕೆ ಭಾರಿ ಡಿಮ್ಯಾಂಡ್ ಬಂದಿದ್ದು, ಬಂಗಾರವನ್ನು ಖರೀದಿ ಮಾಡಲು ಜನರು ಕೂಡ ಮುಗಿಬಿದ್ದು ಮುಂದೆ ಬರುತ್ತಿದ್ದಾರೆ. ಹೀಗಾಗಿ ಚಿನ್ನ & ಬೆಳ್ಳಿ ಭಾರಿ ಏರಿಕೆ ಕಾಣುತ್ತಿದೆ. ಆದರೆ ಇಂದು ಮಾತ್ರ ಚಿನ್ನ ಭರ್ಜರಿ ಕುಸಿತ ಕಂಡಿದೆ. ಹಾಗಾದ್ರೆ ಈಗ ಎಷ್ಟಿದೆ ಚಿನ್ನದ ಬೆಲೆ? ಬನ್ನಿ ಮುಂದೆ ತಿಳಿಯೋಣ.

ಚಿನ್ನ 3,300 ರೂಪಾಯಿ ಕುಸಿತ!
ಕರ್ನಾಟಕ ಹಾಗೂ ಬೆಂಗಳೂರಲ್ಲಿ ನಿನ್ನೆ ಚಿನ್ನ ಬೆಲೆ ಏರಿಕೆ ಕಂಡಿತ್ತು. 24 ಕ್ಯಾರೆಟ್ ಶುದ್ಧ ಚಿನ್ನ ಬೆಲೆ ಹಾಗೂ 22 ಕ್ಯಾರೆಟ್ ಆಭರಣ ಚಿನ್ನದ ಬೆಲೆ ಕೂಡ ಏರಿಕೆ ಕಂಡಿತ್ತು. ಪ್ರತಿ 100 ಗ್ರಾಂಗೆ 5,500 ರೂಪಾಯಿ ಏರಿಕೆ ಕಂಡಿದ್ದ 24 ಕ್ಯಾರೆಟ್ ಚಿನ್ನದ ಬೆಲೆ, ಪ್ರತಿ 100 ಗ್ರಾಂಗೆ 7,32,000 ರೂಪಾಯಿ ಆಗಿತ್ತು. ಶುದ್ಧ ಚಿನ್ನ ಬೆಲೆ 10 ಗ್ರಾಂ 73,200 ರೂಪಾಯಿಗೆ ಏರಿತ್ತು. 22 ಕ್ಯಾರೆಟ್ ಆಭರಣ ಚಿನ್ನದ ಬೆಲೆಯಲ್ಲೂ ಏರಿಕೆ ಕಂಡುಬಂದಿತ್ತು. ಆದರೆ ಇಂದು ದಿಢೀರ್ ಚಿನ್ನದ ಬೆಲೆ ಭರ್ಜರಿ ಕುಸಿತ ಕಂಡಿದೆ. 24 ಕ್ಯಾರೆಟ್ ಚಿನ್ನದ ಬೆಲೆ 3,300 ರೂಪಾಯಿ & 22 ಕ್ಯಾರೆಟ್ ಚಿನ್ನದ ಬೆಲೆ 3000 ರೂಪಾಯಿ ಕುಸಿದಿದೆ. ಹಾಗಾದ್ರೆ ಇದೀಗ ಎಷ್ಟಿದೆ ಚಿನ್ನದ ಬೆಲೆ? ಮುಂದೆ ಓದಿ.
66,800 ರೂಪಾಯಿಗೆ 10 ಗ್ರಾಂ
ಕರ್ನಾಟಕ & ಬೆಂಗಳೂರಿನಲ್ಲಿ ಇಂದು ಚಿನ್ನದ ಬೆಲೆ ಇಳಿಕೆ ಕಂಡಿದ್ದು, 24 ಕ್ಯಾರೆಟ್ ಶುದ್ಧ ಚಿನ್ನ ಬೆಲೆ ಇಳಿಕೆ ಬಳಿಕ ಭಾರಿ ಕುಸಿತ ಕಂಡಿದೆ. 100 ಗ್ರಾಂಗೆ 3,300 ರೂಪಾಯಿ ಇಳಿಕೆಯನ್ನ ಕಂಡಿದೆ 24 ಕ್ಯಾರೆಟ್ ಶುದ್ಧ ಚಿನ್ನ ಬೆಲೆ. ಹೀಗೆ ಶುದ್ಧ ಬಂಗಾರದ ಬೆಲೆಯು ಪ್ರತಿ 100 ಗ್ರಾಂಗೆ 7,28,700 ರೂಪಾಯಿ ಆಗಿದೆ. ಶುದ್ಧ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ 72,870 ರೂಪಾಯಿಗೆ ಇಳಿಕೆ ಆಗಿದ್ದು, 22 ಕ್ಯಾರೆಟ್ ಚಿನ್ನದ ಬೆಲೆ ಕೂಡ ಭರ್ಜರಿ ಇಳಿಕೆ ಕಂಡಿದೆ. ಇದೀಗ ಪ್ರತಿ 100 ಗ್ರಾಂಗೆ 3000 ರೂಪಾಯಿ ಕುಸಿತ ಕಂಡಿರುವ 22 ಕ್ಯಾರೆಟ್ ಚಿನ್ನದ ಬೆಲೆ 6,68,000 ರೂಪಾಯಿ ಆಗಿದ್ದು ಪ್ರತಿ 10 ಗ್ರಾಂಗೆ 66,800 ರೂಪಾಯಿಗೆ ಇಳಿಕೆ ಕಂಡಿದೆ.












Click it and Unblock the Notifications