Gold Price: ಬಂಗಾರದ ಬೆಲೆ 5,400 ರೂಪಾಯಿ ಏರಿಕೆ & ಬೆಳ್ಳಿ ಬೆಲೆ ಕೂಡ ಭಾರಿ ಹೆಚ್ಚಳ!

ಚಿನ್ನದ ಬೆಲೆ ಮತ್ತೆ ಭರ್ಜರಿ ಏರಿಕೆ ಕಾಣುತ್ತಿದೆ, ಕಳೆದ ತಿಂಗಳ ಅಂತ್ಯದಲ್ಲಿ ಅಂದ್ರೆ ಜುಲೈ ತಿಂಗಳ ಕೊನೆಯ ವಾರದಲ್ಲಿ ಚಿನ್ನದ ಬೆಲೆ ಭಾರಿ ಇಳಿಕೆ ಕಂಡಿತ್ತು. ಹೀಗಾಗಿ ಶ್ರಾವಣದಲ್ಲಿ ಚಿನ್ನದ ಬೆಲೆ ಮತ್ತಷ್ಟು ಇಳಿಕೆ ಆಗಬಹುದು, ಮದುವೆ & ನಿಶ್ಚಿತಾರ್ಥ ಮಾಡಲು ಸುಲಭ ಆಗುತ್ತದೆ ಎಂದು ಕಾಯುತ್ತಿದ್ದರು ಕನ್ನಡಿಗರು. ಆದರೆ ಹೀಗೆ ಚಿನ್ನದ ಬೆಲೆ ಇಳಿಯಬಹುದು ಎಂದು ಕಾಯುತ್ತಿದ್ದ ಕನ್ನಡಿಗರಿಗೆ ಬೇಸರದ ಸುದ್ದಿ ಸಿಕ್ಕಿದ್ದು, ಚಿನ್ನದ ಬೆಲೆ ಭರ್ಜರಿ ಏರಿಕೆ ಕಂಡಿದೆ.

ಬಂಗಾರ & ಬೆಳ್ಳಿ ಬೆಲೆಯಲ್ಲಿ ಏರಿಳಿತ ಮಾಮೂಲು, ಆದರೆ ಕಳೆದ 5 ತಿಂಗಳಿಂದ ಚಿನ್ನ & ಬೆಳ್ಳಿ ಭಾರಿ ಏರಿಕೆ ಮತ್ತು ಇಳಿಕೆ ಕಾಣುತ್ತಿದೆ. ಅದರಲ್ಲೂ ಚಿನ್ನದ ಬೆಲೆ ಇನ್ನೇನು 70 ಸಾವಿರ ರೂಪಾಯಿ ಪ್ರತಿ 10 ಗ್ರಾಂಗೆ ತಲುಪಲಿದೆ ಎಂಬ ಪರಿಸ್ಥಿತಿ ನಿರ್ಮಾಣ ಆಗಿತ್ತು. 22 ಕ್ಯಾರೆಟ್‌ನ ಆಭರಣ ಚಿನ್ನ ಹೀಗೆ 70 ಸಾವಿರ ರೂಪಾಯಿ ಗಡಿ ತಲುಪಿತ್ತು. ಹೀಗಿದ್ದಾಗ ದಿಢೀರ್ ಬೆಲೆ ಕಡಿಮೆ ಆಗಲು ಆರಂಭಿಸಿತ್ತು. ಆದರೆ ಮತ್ತೆ ಈಗ ಬಂಗಾರದ ಬೆಲೆ ಏರಿಕೆ ಕಾಣುತ್ತಿದೆ. ನಿನ್ನೆ ಪ್ರತಿ 10 ಗ್ರಾಂಗೆ 64,000 ರೂಪಾಯಿ ಇದ್ದ ಆಭರಣ ಚಿನ್ನದ ಬೆಲೆಯು ಇಂದು ಭರ್ಜರಿ ಏರಿಕೆ ಕಂಡಿದೆ. ಹಾಗಾದ್ರೆ ಇದೀಗ ಎಷ್ಟಿದೆ ಚಿನ್ನ & ಬೆಳ್ಳಿ ಬೆಲೆ? ಮುಂದೆ ಓದಿ.

Gold And Silver Price On 1st Of August 2024

ಚಿನ್ನ & ಬೆಳ್ಳಿ ಬೆಲೆ ಎಷ್ಟಿದೆ ತಿಳಿಯಿರಿ

ಕರ್ನಾಟಕ & ಬೆಂಗಳೂರಲ್ಲಿ ಇಂದು ಚಿನ್ನದ ಬೆಲೆ ಏರಿಕೆ ಕಂಡಿದೆ. 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ ಏರಿಕೆ ಬಳಿಕ ಮತ್ತಷ್ಟು ಮೇಲೆ ಏರಿದೆ. ಪ್ರತಿ 100 ಗ್ರಾಂಗೆ 5,400 ರೂಪಾಯಿ ಏರಿಕೆಯನ್ನು ಕಂಡಿದೆ 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ. ಹೀಗೆ ಶುದ್ಧ ಚಿನ್ನ ಬೆಲೆ ಪ್ರತಿ 100 ಗ್ರಾಂಗೆ 7,03,600 ರೂಪಾಯಿ ಆಗಿದೆ. ಇದರ ಜೊತೆಗೆ ಶುದ್ಧ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ 70,360 ರೂಪಾಯಿಗೆ ಏರಿಕೆ ಆಗಿದೆ. ಆಭರಣ ಚಿನ್ನ ಅಂದರೆ 22 ಕ್ಯಾರೆಟ್ ಚಿನ್ನದ ಬೆಲೆ ಈಗ ಎಷ್ಟಿದೆ? ಬೆಳ್ಳಿಯ ಬೆಲೆ ಎಷ್ಟಕ್ಕೆ ಏರಿಕೆ ಆಗಿದೆ?

ಮತ್ತಷ್ಟು ಏರಿಕೆ ಆಗುತ್ತಿದೆ ಚಿನ್ನ!

22 ಕ್ಯಾರೆಟ್ ಆಭರಣ ಚಿನ್ನದ ಬೆಲೆ ಏರಿಕೆ ಕಂಡು ಪ್ರತಿ 100 ಗ್ರಾಂ ಆಭರಣ ಚಿನ್ನದ ಬೆಲೆ 5,000 ರೂಪಾಯಿ ಹೆಚ್ಚಾಗಿದೆ. ಪ್ರತಿ 10 ಗ್ರಾಂ ಆಭರಣ ಚಿನ್ನದ ಬೆಲೆ ಈಗ 500 ರೂಪಾಯಿ ಏರಿಕೆ ಆಗಿ ಪ್ರತಿ 10 ಗ್ರಾಂಗೆ 64,500 ರೂಪಾಯಿ ಮಾರಾಟ ಆಗ್ತಿದೆ. ಮತ್ತೊಂದ್ಕಡೆ ಬೆಳ್ಳಿ ಬೆಲೆಯಲ್ಲಿ 1500 ರೂಪಾಯಿ ಏರಿಕೆ ಕಂಡಿದ್ದು ಈಗ 85,500 ರೂಪಾಯಿಗೆ ಮಾರಾಟ ಆಗುತ್ತಿದೆ ಬೆಳ್ಳಿ. ಮುಂದಿನ ದಿನಗಳಲ್ಲಿ ಚಿನ್ನದ ಬೆಲೆ ಮತ್ತಷ್ಟು ಏರಿಕೆ ಕಾಣುವ ನಿರೀಕ್ಷೆ ಇದೆ, ಬೆಳ್ಳಿ ಬೆಲೆ ಕೂಡ ಮತ್ತೊಮ್ಮೆ 1 ಲಕ್ಷ ರೂಪಾಯಿ ತಲುಪುವ ನಿರೀಕ್ಷೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+