Gold Price: ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಭಾರಿ ಕುಸಿತ ಗ್ಯಾರಂಟಿ?
ಚಿನ್ನ & ಬೆಳ್ಳಿ ಖರೀದಿ ಮಾಡಲು ಕಾದು ಕುಳಿತಿರುವ ಜನರಿಗೆ ಭರ್ಜರಿ ಸುದ್ದಿ ಸಿಗುವ ಎಲ್ಲ ಸಾಧ್ಯತೆ ದಟ್ಟವಾಗಿದೆ. ಅದರಲ್ಲೂ ಮದುವೆ & ಶುಭ ಕಾರ್ಯಗಳು ಆರಂಭ ಆಗಿರುವ ಈ ಶ್ರಾವಣದ ಶುಭ ಸಮಯದಲ್ಲಿ ಚಿನ್ನ & ಬೆಳ್ಳಿ ಬೆಲೆಯಲ್ಲಿ ಭರ್ಜರಿ ಇಳಿಕೆ ಕಂಡುಬರುತ್ತಿದೆ. ಅದರಲ್ಲೂ ಕಳೆದ ವಾರವೂ ಭಾರಿ ಪ್ರಮಾಣದಲ್ಲಿ ಬಂಗಾರ & ಬೆಳ್ಳಿ ಬೆಲೆ ಕುಸಿತ ಕಂಡಿದ್ದು, ಈ ವಾರ ಕೂಡ ಇದೇ ರೀತಿ ಚಿನ್ನ & ಬೆಳ್ಳಿ ರೇಟ್ ಕುಸಿತ ಕಾಣುತ್ತಾ? ಹಾಗಾದ್ರೆ ಈಗ ಚಿನ್ನ & ಬೆಳ್ಳಿ ಬೆಲೆ ಎಷ್ಟಿದೆ? ಬನ್ನಿ ತಿಳಿಯೋಣ.
ಚಿನ್ನ.. ಚಿನ್ನ.. ಚಿನ್ನ.. ಹೀಗೆ ಬಂಗಾರ ಅಂದ್ರೆ ಭಾರತೀಯರಿಗೆ ಸಿಕ್ಕಾಪಟ್ಟೆ ಪ್ರೀತಿ ಇದೆ. ಚಿನ್ನದ ಬೆಲೆಯಲ್ಲಿ ಕಳೆದ ಕೆಲ ತಿಂಗಳಿಂದ ಭಾರಿ ಏರಿಳಿತ ಆಗುತ್ತಿದೆ. ಚಿನ್ನ ಖರೀದಿಗಾಗಿ ಜನರು ಕೂಡ ಕಾದು ಕುಳಿತಿದ್ದ ಸಮಯದಲ್ಲೇ ಚಿನ್ನ ಬೆಲೆ ಏರಿಕೆ ಕಾಣುತ್ತಿತ್ತು. ಮದುವೆ ಸೀಸನ್ ಶುರು ಬೆನ್ನಲ್ಲೇ ಚಿನ್ನದ ಬೆಲೆಯಲ್ಲಿ ಮತ್ತೆ ಚೇತರಿಕೆ ಕಂಡುಬಂದಿತ್ತು. ಚಿನ್ನದ ಬೆಲೆ ಏರಿಕೆ ಆಗುತ್ತಿದೆ ಎಂಬ ಚಿಂತೆಯಲ್ಲಿ ಜನ ಮುಳುಗಿರುವ ಸಮಯದಲ್ಲೇ ಚಿನ್ನದ ಬೆಲೆ ಮುಂದಿನ ವಾರ ಭಾರಿ ಪ್ರಮಾಣದಲ್ಲಿ ಕುಸಿತ ಕಾಣುವ ಸೂಚನೆಯೂ ಇದೆ ಎನ್ನಲಾಗುತ್ತಿದೆ. ಈಗಾಗಲೇ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ ಸುಮಾರು 64 ಸಾವಿರ ರೂಪಾಯಿಗೆ ಇಳಿಕೆಯನ್ನ ಕೂಡ ಕಂಡಿದೆ. ಹಾಗಾದ್ರೆ ಚಿನ್ನದ ಬೆಲೆ ಮತ್ತೆ ಎಷ್ಟು ಇಳಿಕೆ ಕಾಣಬಹುದು? ಈಗ ಎಷ್ಟಿದೆ ಬಂಗಾರ & ಬೆಳ್ಳಿ ಬೆಲೆ?

ಬಂಗಾರದ ಬೆಲೆ ಎಷ್ಟಿದೆ ತಿಳಿಯಿರಿ
ಕರ್ನಾಟಕ ಹಾಗೂ ಬೆಂಗಳೂರಲ್ಲಿ ನಿನ್ನೆ ಚಿನ್ನದ ಬೆಲೆ ಏರಿಕೆ ಕಂಡಿತ್ತು. 24 ಕ್ಯಾರೆಟ್‌ನ ಶುದ್ಧ ಚಿನ್ನದ ಬೆಲೆ ಏರಿಕೆ ಬಳಿಕ ಮೇಲಕ್ಕೆ ಏರಿದೆ. ಪ್ರತಿ 100 ಗ್ರಾಂಗೆ 2200 ರೂಪಾಯಿ ಏರಿಕೆ ಕಂಡಿದೆ 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ. ಹೀಗೆ ಶುದ್ಧ ಚಿನ್ನ ಪ್ರತಿ 100 ಗ್ರಾಂಗೆ 7,03,100 ರೂಪಾಯಿ ಆಗಿದೆ. ಜೊತೆಗೆ ಶುದ್ಧ ಚಿನ್ನ ಬೆಲೆ ಪ್ರತಿ 10 ಗ್ರಾಂ 70,310 ರೂಪಾಯಿಗೆ ಏರಿಕೆ ಆಗಿತ್ತು. ಇದರ ಜೊತೆಗೆ 22 ಕ್ಯಾರೆಟ್ ಆಭರಣ ಚಿನ್ನದ ಬೆಲೆಯಲ್ಲಿ ಕೂಡ ಏರಿಕೆ ಕಂಡುಬಂದಿತ್ತು. ಆದರೆ ಈಗ ಮುಂದಿನ ವಾರ ಪೂರ್ತಿ ಚಿನ್ನದ ಬೆಲೆ ಕುಸಿಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಹೀಗೆಯೇ ಕುಸಿತ ಕಂಡರೆ ಚಿನ್ನದ ಬೆಲೆ 60,000 ರೂಪಾಯಿಗಿಂತ ಕಡಿಮೆ ಬೆಲೆಗೆ ಸಿಗಬಹುದು ಎಂಬ ಚರ್ಚೆ ಶುರುವಾಗಿದೆ.
ಬೆಳ್ಳಿಯ ಬೆಲೆ ಕೆಜಿಗೆ ಎಷ್ಟಿದೆ?
22 ಕ್ಯಾರೆಟ್ ಚಿನ್ನದ ಬೆಲೆ ನಿನ್ನೆ ಏರಿಕೆ ಬಳಿಕ ಕೈಗೆ ಸಿಗದಾಗಿದೆ. 100 ಗ್ರಾಂಗೆ 2000 ರೂಪಾಯಿ ಏರಿಕೆ ಕಂಡಿತ್ತು 22 ಕ್ಯಾರೆಟ್ ಚಿನ್ನ. ಹೀಗೆ ಆಭರಣ ಚಿನ್ನದ ಬೆಲೆ ಪ್ರತಿ 100 ಗ್ರಾಂಗೆ 6,44,500 ರೂಪಾಯಿ ಆಗಿತ್ತು. ಜೊತೆಗೆ 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ 64,450 ರೂಪಾಯಿ ತಲುಪಿತ್ತು. ಆದರೆ ಮತ್ತೊಂದ್ಕಡೆ ಬೆಳ್ಳಿ ಬೆಲೆಯಲ್ಲಿ ಮಾತ್ರ ಇಳಿಕೆ ಕಂಡುಬಂದಿದ್ದು. ಈಗ ಬೆಳ್ಳಿ ಬೆಲೆ ಪ್ರತಿ ಕೆಜಿಗೆ 80,650 ರೂಪಾಯಿ ಇದೆ. ಆದರೆ ಮುಂದಿನ ವಾರ ಚಿನ್ನ & ಬೆಳ್ಳಿ ಬೆಲೆಯು ಇನ್ನಷ್ಟು ಇಳಿಕೆ ಆಗುವ ನಿರೀಕ್ಷೆಯಲ್ಲಿ ಜನ ಇದ್ದಾರೆ.












Click it and Unblock the Notifications