Gold Price: ಆಭರಣ ಪ್ರಿಯರಿಗೆ ದಿಢೀರ್ ಚಿನ್ನದ ಬೆಲೆ ಏರಿಕೆ ಶಾಕ್!

ಚಿನ್ನದ ಬೆಲೆಯಲ್ಲಿ ಏರಿಕೆ ಮತ್ತೆ ಶುರುವಾಗಿದೆ, ಯಾಕಂದ್ರೆ ಸತತವಾಗಿ ಏರಿಕೆ ಕಂಡಿದ್ದ ಚಿನ್ನ ಕಳೆದ 3 ತಿಂಗಳಿಂದ ಬಹುತೇಕ ನಿರಂತರ ಕುಸಿತ ಕಾಣುತ್ತಿತ್ತು. ಹೀಗಿದ್ದಾಗ ಚಿನ್ನಾಭರಣದ ಖರೀದಿಗೆ ಕಾಯುತ್ತಿದ್ದ ಆಭರಣ ಪ್ರಿಯರಿಗೆ ದಿಢೀರ್ ಖುಷಿ ಖುಷಿ ಆಗಿತ್ತು. ಆದರೆ ಇದೀಗ, ಚಿನ್ನದ ಬೆಲೆಯಲ್ಲಿ ಮತ್ತೆ ಏರಿಕೆ ಕಂಡುಬಂದಿದೆ. ಹೀಗಾಗಿ ಆಭರಣ ಪ್ರಿಯರಿಗೆ ಆಘಾತ ಕೂಡ ಎದುರಾಗಿದ್ದು, ಮತ್ತೊಂದು ಕಡೆ ಚಿನ್ನದ ಮೇಲೆ ಹೂಡಿಕೆ ಮಾಡಿದ್ದವರಿಗೆ ಖುಷಿ ನೀಡಿದೆ. ಹಾಗಾದ್ರೆ ಈಗ ಎಷ್ಟಿದೆ ಚಿನ್ನ & ಬೆಳ್ಳಿಯ ಬೆಲೆ? ಬನ್ನಿ ಮಾಹಿತಿ ತಿಳಿಯೋಣ.

ಜಾಗತಿಕ ಮಟ್ಟದಲ್ಲಿ ಚಿನ್ನ ಬಳಕೆ ವಿಚಾರದಲ್ಲಿ ಭಾರತ ಮುಂದಿದೆ. ಸಾವಿರಾರು ವರ್ಷದಿಂದ ಕೂಡ ಭಾರತದಲ್ಲಿ ಹೀಗೆ ಚಿನ್ನ ಬಳಕೆ ಮಾಡಲಾಗುತ್ತಿದೆ. ಅದರಲ್ಲೂ, ಚಿನ್ನವನ್ನ ವ್ಯಾಪಾರದ ಉದ್ದೇಶಕ್ಕಾಗಿ ಭಾರತದಲ್ಲಿ ಹಿಂದಿನಿಂದ ಕೂಡ ಬಳಕೆ ಮಾಡಿಕೊಂಡು ಬರಲಾಗುತ್ತಿತ್ತು. ಆಗಿನ ಕರೆನ್ಸಿ ಅಂದ್ರೆ ನಾಣ್ಯ ಮುದ್ರಣಕ್ಕೆ ಕೂಡ ಚಿನ್ನ ಬಳಕೆ ಮಾಡಲಾಗುತ್ತಿತ್ತು. ಹೀಗೆ ನಮ್ಮ ನೆಲದ ಜೊತೆಗೆ ಚಿನ್ನ ಕೂಡ ಬೆರೆತು ಹೋಗಿದೆ. ಹೀಗಿದ್ದಾಗ ಚಿನ್ನ ಬೆಲೆ, ದಿನದಿಂದ ದಿನಕ್ಕೆ ಭಾರಿ ಏರಿಕೆ ಕಂಡು ಗಮನ ಸೆಳೆಯುತ್ತಿದೆ. ಈಗ ಕೂಡ ಚಿನ್ನವು ಏರಿಕೆ ಕಂಡಿದೆ, ಹಾಗಾದರೆ ಇಂದು ಎಷ್ಟಿದೆ ಚಿನ್ನದ ಬೆಲೆ? & ಬೆಳ್ಳಿ ಬೆಲೆ? ಮುಂದೆ ಓದಿ.

Gold And Silver Price On 07 September Of 2024

ಬಂಗಾರದ ಬೆಲೆ ಭರ್ಜರಿ ಏರಿಕೆ!

ಕರ್ನಾಟಕ, ಬೆಂಗಳೂರಲ್ಲಿ ಚಿನ್ನದ ಬೆಲೆ ಏರಿಕೆ ಕಂಡು 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ, ಏರಿಕೆ ಬಳಿಕ ಮತ್ತಷ್ಟು ಕೈ ಸುಡುತ್ತಿದೆ. 100 ಗ್ರಾಂಗೆ 5,500 ರೂಪಾಯಿ ಏರಿಕೆ ಕಂಡಿದೆ, 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ. ಹೀಗಾಗಿ ಶುದ್ಧ ಚಿನ್ನ ಬೆಲೆ ಪ್ರತಿ 100 ಗ್ರಾಂ 7,33,100 ರೂಪಾಯಿ ಆಗಿದೆ. ಇದರ ಜೊತೆ ಶುದ್ಧ ಚಿನ್ನ ಪ್ರತಿ 10 ಗ್ರಾಂಗೆ 73,310 ರೂಪಾಯಿಗೆ ಏರಿಕೆ ಆಗಿದೆ. ಆಭರಣ ಚಿನ್ನ ಅಂದ್ರೆ 22 ಕ್ಯಾರೆಟ್ ಚಿನ್ನದ ಬೆಲೆ ಈಗ ಎಷ್ಟಿದೆ? ಬೆಳ್ಳಿಯ ಬೆಲೆ ಎಷ್ಟಿದೆ? ಈ ಬಗ್ಗೆ ಮಾಹಿತಿಯ ತಿಳಿಯಲು ಮುಂದೆ ಓದಿ.

ಬೆಳ್ಳಿ ಬೆಲೆ 83,000 ರೂಪಾಯಿ!

ಆಭರಣ ಚಿನ್ನ ಅಂದರೆ, 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ 100 ಗ್ರಾಂಗೆ 5,100 ರೂಪಾಯಿ ಏರಿಕೆ ಕಂಡು 6,72,000 ರೂಪಾಯಿಗೆ ಮಾರಾಟ ಆಗುತ್ತಿದೆ. ಇದರ ಜೊತೆಗೆ, 22 ಕ್ಯಾರೆಟ್ ಚಿನ್ನ ಪ್ರತಿ 10 ಗ್ರಾಂಗೆ 67,200 ರೂಪಾಯಿ ತಲುಪಿದೆ. ಒಂದೇ ದಿನ 10 ಗ್ರಾಂಗೆ 510 ರೂಪಾಯಿ ಏರಿಕೆ ಕಂಡಿದೆ 22 ಕ್ಯಾರೆಟ್ ಚಿನ್ನ. ಆದರೆ ಬೆಳ್ಳಿ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ, ಹೀಗಾಗಿ ಬೆಳ್ಳಿ ಬೆಲೆ ಇದೀಗ 83,000 ರೂಪಾಯಿ ಪ್ರತಿ ಕೆಜಿ ಲೆಕ್ಕದಲ್ಲಿ ಮಾರಾಟ ಆಗುತ್ತಿದೆ. ಮುಂದಿನ ದಿನಗಳಲ್ಲಿ ಬೆಳ್ಳಿ ಬೆಲೆಯಲ್ಲಿ ಕೂಡ ಮತ್ತಷ್ಟು ಭರ್ಜರಿ ಏರಿಕೆ ಕಾಣುವ ನಿರೀಕ್ಷೆ ದಟ್ಟವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+