Gold Price: ಚಿನ್ನದ ಬೆಲೆ ಭರ್ಜರಿ ಏರಿಕೆ, ಬೆಳ್ಳಿ ಇಂದು ಎಷ್ಟಿದೆ?
ಚಿನ್ನ & ಬೆಳ್ಳಿ ಬೆಲೆಯಲ್ಲಿ ಮತ್ತೆ ಭಾರಿ ಏರಿಳಿತ ಕಂಡು ಬರುತ್ತಿದೆ. ಅದರಲ್ಲೂ ಗೌರಿ ಹಬ್ಬದ ದಿನವೇ ಚಿನ್ನದ ಬೆಲೆಯಲ್ಲಿ ಭರ್ಜರಿ ಏರಿಕೆ ಕಂಡು ಬಂದಿದೆ. ಈ ಮೂಲಕ ಆಭರಣ ಖರೀದಿ ಮಾಡಲು ಕಾಯುತ್ತಿದ್ದ ಮಹಿಳೆಯರಿಗೆ ಇಂದು ಚಿನ್ನದ ಬೆಲೆ ಏರಿಕೆ ಆಗಿರುವುದು ಬೇಸರಕ್ಕೆ ಕಾರಣವಾಗಿದ್ದರೆ, ಮತ್ತೊಂದು ಕಡೆ ಚಿನ್ನದ ಮೇಲೆ ಹೂಡಿಕೆ ಮಾಡಿರುವ ಜನರಿಗೆ ಇಂದು ಭರ್ಜರಿ ಸುದ್ದಿ ಸಿಕ್ಕಂತಾಗಿದೆ. ಹಾಗಿದ್ರೆ ಬಂಗಾರದ ಬೆಲೆ ಏರಿಕೆ ನಂತರ ಎಷ್ಟಾಗಿದೆ ರೇಟ್? ಬನ್ನಿ ತಿಳಿಯೋಣ.
ಚಿನ್ನ.. ಚಿನ್ನ.. ಚಿನ್ನ.. ಚಿನ್ನಕ್ಕೆ ಇದೀಗ ಭರ್ಜರಿ ಡಿಮ್ಯಾಂಡ್ ಸೃಷ್ಟಿ ಆಗಿದ್ದು, ಜನರು ಕೂಡ ಭಾರತದಲ್ಲಿ ಇದೀಗ ಚಿನ್ನದ ಮೇಲೆ ಹೂಡಿಕೆಗೆ ಸಾಕಷ್ಟು ಆಸಕ್ತಿ ತೋರಿಸುತ್ತಿದ್ದಾರೆ. ಚಿನ್ನದ ಬೆಲೆಯಲ್ಲಿ ಕಳೆದ ಕೆಲ ತಿಂಗಳಿಂದ ಭಾರಿ ಏರಿಳಿತ ಆಗುತ್ತಿದೆ. ಚಿನ್ನ ಖರೀದಿಗಾಗಿ ಜನರು ಕೂಡ ಕಾದು ಕುಳಿತಿದ್ದ ಸಮಯದಲ್ಲೇ ಚಿನ್ನದ ಬೆಲೆ ಏರಿಕೆ ಕಾಣುತ್ತಿದೆ. ಮದುವೆ ಸೀಸನ್ ಈಗ ಶುರುವಾದ ಬೆನ್ನಲ್ಲೇ ಚಿನ್ನದ ಬೆಲೆಯಲ್ಲಿ ಮತ್ತೆ ಚೇತರಿಕೆ ಕಂಡುಬರುತ್ತಿದೆ. ಹೀಗೆ ಚಿನ್ನದ ಬೆಲೆ ಏರಿಕೆ ಆಗುತ್ತಿರುವುದು ಮಧ್ಯಮ & ಬಡ ವರ್ಗದ ಜನರಿಗೆ ಟೆನ್ಷನ್ ಕೊಡುತ್ತಿದೆ. ಹಾಗಾದರೆ ಈಗ ಎಷ್ಟು ಏರಿಕೆ ಕಂಡಿದೆ ಚಿನ್ನ? ಬೆಳ್ಳಿ ಬೆಲೆ ಎಷ್ಟಿದೆ? ಆ ಬಗ್ಗೆ ಸಂಪೂರ್ಣ ಮಾಹಿತಿಗೆ ಮುಂದೆ ಓದಿ

ಚಿನ್ನದ ಬೆಲೆ ಈಗ ಎಷ್ಟಿದೆ?
ಕರ್ನಾಟಕ & ಬೆಂಗಳೂರಲ್ಲಿ ಇಂದು ಚಿನ್ನದ ಬೆಲೆ ಏರಿಕೆ ಕಂಡು, 24 ಕ್ಯಾರೆಟ್‌ನ ಶುದ್ಧ ಚಿನ್ನದ ಬೆಲೆ ಏರಿಕೆ ಬಳಿಕ ಮತ್ತಷ್ಟು ಮೇಲೆ ಹೋಗಿದೆ. 100 ಗ್ರಾಂಗೆ 5,500 ರೂಪಾಯಿ ಏರಿಕೆ ಕಂಡಿದೆ, 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ ಹೀಗೆ ಶುದ್ಧ ಚಿನ್ನ ಬೆಲೆ ಪ್ರತಿ 100 ಗ್ರಾಂ 7,33,100 ರೂಪಾಯಿ ಆಗಿದೆ. ಇದರ ಜೊತೆಯಲ್ಲಿ ಶುದ್ಧ ಚಿನ್ನ ಪ್ರತಿ 10 ಗ್ರಾಂಗೆ 73,310 ರೂಪಾಯಿಗೆ ಏರಿಕೆ ಆಗಿದೆ. ಆಭರಣ ಚಿನ್ನ ಅಂದರೆ, 22 ಕ್ಯಾರೆಟ್ ಚಿನ್ನದ ಬೆಲೆ ಈಗ ಎಷ್ಟಿದೆ? ಬೆಳ್ಳಿಯ ಬೆಲೆ ಎಷ್ಟಿದೆ? ಈ ಬಗ್ಗೆ ಮಾಹಿತಿಗೆ ಮುಂದೆ ಓದಿ.
ಬೆಳ್ಳಿ ಬೆಲೆ ಪ್ರತಿ ಕೆಜಿಗೆ ಎಷ್ಟಿದೆ?
ಆಭರಣ ಚಿನ್ನ ಅಂದರೆ, 22 ಕ್ಯಾರೆಟ್ ಚಿನ್ನದ ಬೆಲೆಯು ಇದೀಗ ಪ್ರತಿ 100 ಗ್ರಾಂಗೆ 5,100 ರೂಪಾಯಿ ಏರಿಕೆ ಕಂಡು, 6,72,000 ರೂಪಾಯಿಗೆ ಮಾರಾಟ ಆಗುತ್ತಿದೆ. ಇದರ ಜೊತೆಗೆ 22 ಕ್ಯಾರೆಟ್ ಚಿನ್ನ ಪ್ರತಿ 10 ಗ್ರಾಂಗೆ 67,200 ರೂಪಾಯಿ ತಲುಪಿದೆ. ಇಂದು ಒಂದೇ ದಿನ 10 ಗ್ರಾಂಗೆ 510 ರೂಪಾಯಿ ಏರಿಕೆ ಕಂಡಿದೆ 22 ಕ್ಯಾರೆಟ್ ಚಿನ್ನ. ಆದರೆ, ಬೆಳ್ಳಿ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ, ಹೀಗಾಗಿ ಬೆಳ್ಳಿ ಬೆಲೆ ಇದೀಗ 83,000 ರೂಪಾಯಿ ಪ್ರತಿ ಕೆಜಿ ಲೆಕ್ಕದಲ್ಲೇ ಮಾರಾಟ ಆಗುತ್ತಿದೆ.












Click it and Unblock the Notifications