Gold Price: ಚಿನ್ನದ ಬೆಲೆ ಭರ್ಜರಿ ಕುಸಿತ ಗ್ಯಾರಂಟಿ? 50,000 ರೂಪಾಯಿಗೆ ಕುಸಿತ ಕಾಣುತ್ತಾ ಬಂಗಾರದ ಬೆಲೆ?

ಚಿನ್ನದ ಬೆಲೆಯಲ್ಲಿ ಕಳೆದ ಕೆಲವು ದಿನಗಳಿಂದ ಭರ್ಜರಿ ಕುಸಿತ ದಾಖಲಾಗಿದ್ದು, ಆಭರಣ ಇಷ್ಟಪಡುವ ಮಹಿಳೆಯರು ಫುಲ್ ಖುಷ್ ಆಗಿದ್ದರು. ಹೀಗಿದ್ದಾಗಲೇ ಮತ್ತೆ ಇಂದು ಚಿನ್ನ ಏರಿಕೆ ಕಂಡಿದ್ದರೂ, ಮುಂದಿನ ದಿನಗಳಲ್ಲಿ ಚಿನ್ನದ ಬೆಲೆ ಭರ್ಜರಿಯಾಗಿ ಕುಸಿತ ಕಾಣುವ ಸಾಧ್ಯತೆ ದಟ್ಟವಾಗಿದೆ. ಅದರಲ್ಲೂ ಬಂಗಾರದ ಬೆಲೆಯಲ್ಲಿ ಈ ತಿಂಗಳು ದೊಡ್ಡ ಮಟ್ಟದ ಬದಲಾವಣೆ ಆಗಲಿದೆ ಎನ್ನಲಾಗಿದೆ. ಹಾಗಾದ್ರೆ, ಚಿನ್ನದ ಬೆಲೆ ಭರ್ಜರಿ ಕುಸಿತ ಗ್ಯಾರಂಟಿ? 50,000 ರೂಪಾಯಿಗೆ ಕುಸಿತ ಕಾಣುತ್ತಾ ಬಂಗಾರದ ಬೆಲೆ? ಬನ್ನಿ ತಿಳಿಯೋಣ.

ಚಿನ್ನ ಅಂದ್ರೆ ಯಾರಿಗೆ ಇಷ್ಟ ಆಗಲ್ಲ ಹೇಳಿ? ಬಂಗಾರ ಅಂದ್ರೆ ಒಂದು ದೇಶದ ಅಧ್ಯಕ್ಷರಿಂದ ಹಿಡಿದು, ಆ ದೇಶದ ಅಭಿವೃದ್ಧಿಗಾಗಿ ದುಡಿಯುವ ಕೂಲಿ ಕಾರ್ಮಿಕನ ತನಕ ಎಲ್ಲರೂ ಈ ಬಂಗಾರವನ್ನ ಇಷ್ಟಪಡುತ್ತಾರೆ. ಹೀಗೆ ಚಿನ್ನ ಎಲ್ಲರನ್ನೂ ಆಕರ್ಶಣೆ ಮಾಡುತ್ತದೆ. ಒಂದು ಕಡೆ ಚಿನ್ನದ ಬಣ್ಣ ಆಕರ್ಶಣೆಯ ಕೇಂದ್ರ ಬಿಂದುವಾಗಿದ್ದರೆ, ಮತ್ತೊಂದು ಕಡೆ ಚಿನ್ನದ ಆ ಗುಣಗಳು ಕೂಡ ಮನುಷ್ಯರ ಬದುಕಿನಲ್ಲಿ ಚಿನ್ನಕ್ಕೆ ದೊಡ್ಡ ಸ್ಥಾನಮಾನ ಕೊಟ್ಟಿವೆ. ಜಗತ್ತಿನ ಯಾವುದೇ ದೇಶಕ್ಕೆ ಹೋದರೂ ಚಿನ್ನಕ್ಕೆ ಅತ್ಯುತ್ತಮ ಬೆಲೆ ಇದ್ದೇ ಇರುತ್ತದೆ. ಹೀಗಿದ್ದ ಚಿನ್ನ ಭಾರಿ ದೊಡ್ಡ ಪ್ರಮಾಣದಲ್ಲಿ ಏರಿಕೆ ಕಾಣುತ್ತಿದ್ದು, ಇದೀಗ ಮತ್ತೊಮ್ಮೆ 50,000 ರೂಪಾಯಿಗೆ ಕುಸಿತ ಕಾಣುತ್ತಾ? ಮುಂದೆ ಓದಿ.

Gold And Silver Price May Be Decrease For This Reason In October 2024

ಚಿನ್ನದ ಬೆಲೆ 50,000 ರೂಪಾಯಿಗೆ...

ಬಂಗಾರದ ಬೆಲೆ ಅದೆಷ್ಟು ವೇಗವಾಗಿ ಏರಿಕೆ ಕಾಣುತ್ತಿದೆ ಅಂದ್ರೆ ಇದೀಗ 24 ಕ್ಯಾರೆಟ್ ಚಿನ್ನ ಬೆಲೆ ಪ್ರತಿ 10 ಗ್ರಾಂಗೆ ಬರೋಬ್ಬರಿ 77,450 ರೂಪಾಯಿಗೂ ಹೆಚ್ಚಾಗಿದೆ. ಹಾಗೇ 22 ಕ್ಯಾರೆಟ್ ಚಿನ್ನದ ಬೆಲೆ ಕೂಡ ಭರ್ಜರಿ ಏರಿಕೆ ಕಾಣುತ್ತಿದ್ದು, 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ 10 ಗ್ರಾಂ ಈಗ ಬರೋಬ್ಬರಿ 71,000 ರೂಪಾಯಿ ಆಗಿದೆ. ಹೀಗಿದ್ದಾಗಲೇ ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ ಕಾಣುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಯಾಕಂದ್ರೆ ಚಿನ್ನದ ಬೆಲೆಯಲ್ಲಿ ಈಗಾಗಲೇ ದೊಡ್ಡ ಮಟ್ಟದ ಏರಿಕೆ ಕಂಡುಬಂದಿದ್ದು, ಚಿನ್ನದ ಮಾರುಕಟ್ಟೆಯಲ್ಲಿ ಈ ರೀತಿಯ ಏರಿಕೆ ಕಂಡಾಗ ದೊಡ್ಡ ಮಟ್ಟದಲ್ಲಿ ಇಳಿಕೆ ಕಾಣುವುದು ಕೂಡ ಗ್ಯಾರಂಟಿ ಎನ್ನಲಾಗುತ್ತಿದೆ.

ಇದೇ ಕಾರಣಕ್ಕೆ ಇದೀಗ ಚಿನ್ನದ ಬೆಲೆಯು 50,000 ರೂಪಾಯಿಗೆ ತಲುಪುವ ನಿರೀಕ್ಷೆ ಇದೆ ಎನ್ನಲಾಗುತ್ತಿದೆ. 22 ಕ್ಯಾರೆಟ್ ಚಿನ್ನದ ಬೆಲೆ ಕೆಲವು ತಿಂಗಳ ಹಿಂದಷ್ಟೇ 50,000 ರೂಪಾಯಿ ಆಸುಪಾಸಿನಲ್ಲಿ ಮಾರಾಟ ಆಗುತ್ತಿತ್ತು. ಆದರೆ ದಿಢೀರ್ ಭಾರಿ ಏರಿಕೆ ಕಂಡಿದ್ದ ಚಿನ್ನ ಈಗ ಮತ್ತೊಮ್ಮೆ 50,000 ರೂಪಾಯಿ ಆಸುಪಾಸಿಗೆ ಬಂದು ತಲುಪುವ ನಿರೀಕ್ಷೆ ದಟ್ಟವಾಗಿದೆ.

ಚಿನ್ನದ ಇತಿಹಾಸವೇ ಚೆನ್ನ!

ಚಿನ್ನದ ಬಗ್ಗೆ ಹೇಳುತ್ತಾ ಹೋದರೆ ಒಂದು ಪುಸ್ತಕವನ್ನೇ ಬರೆಯಬಹುದು. ಯಾಕಂದ್ರೆ ಈ ಅಮೂಲ್ಯ ವಸ್ತು ಭೂಮಿ ಮೇಲೆ ಬದುಕಲು ಮನುಷ್ಯನಿಗೆ ಸಾಕಷ್ಟು ವಿಧದಲ್ಲಿ ಆಧಾರವಾಗಿ ನಿಂತಿದೆ. ಸಾವಿರಾರು ವರ್ಷಗಳಿಂದ ಮನುಷ್ಯರ ಜೀವನದಲ್ಲಿ ಚಿನ್ನ ಬೆರೆತು ಹೋಗಿದೆ. ಈ ಪೈಕಿ ಭಾರತೀಯ ಸಂಪ್ರದಾಯದ ಪ್ರಕಾರ, ಯಾವುದೇ ರೀತಿಯ ಶುಭಕಾರ್ಯ ನಡೆಯಲು ಚಿನ್ನ ಅತ್ಯಗತ್ಯ. ಚಿನ್ನ ಇಲ್ಲದೆ ಶುಭಕಾರ್ಯ ನಡೆಯುವುದಿಲ್ಲ ಎನ್ನಬಹುದು. ಈ ಹಿನ್ನೆಲೆ ಭಾರತದಲ್ಲಿ ಚಿನ್ನಕ್ಕೆ ಭಾರಿ ಬೇಡಿಕೆ ಇದೆ. ಹೀಗಿದ್ದಾಗ ಭಾರಿ ಏರಿಕೆ ಕಂಡಿರುವ ಚಿನ್ನದ ಬೆಲೆ ಮತ್ತೆ ಭರ್ಜರಿ ಕುಸಿತ ಕಾಣುವ ನಿರೀಕ್ಷೆ ದಟ್ಟವಾಗಿದೆ.

ವರ್ಷದಿಂದ ವರ್ಷಕ್ಕೆ ಚಿನ್ನದ ಬೆಲೆ ಏರಿಕೆ!

15 ವರ್ಷಕ್ಕೆ ಹೋಲಿಕೆ ಮಾಡಿದರೆ ಚಿನ್ನದ ಬೆಲೆಯಲ್ಲಿ ಸಾಕಷ್ಟು ಬದಲಾವಣೆ ಆಗಿದೆ. ದೊಡ್ಡ ಮಟ್ಟದಲ್ಲಿ ಚಿನ್ನ ಏರಿಕೆ ಕಂಡಿದೆ. ಹಾಗೇ ಮುಂದಿನ ದಿನಗಳಲ್ಲಿ ಚಿನ್ನಕ್ಕೆ ಮತ್ತೆ ಹೆಚ್ಚಿನ ಬೇಡಿಕೆ ಬರುವ ಸಾಧ್ಯತೆ ದಟ್ಟವಾಗಿದೆ. ಇದಕ್ಕೆಲ್ಲ ಕಾರಣ ಏನೆಂದರೆ ಭೂಮಿಯ ಒಳಗೆ ಸಿಗುತ್ತಿದ್ದ ಚಿನ್ನ ಭಾಗಶಃ ಕಡಿಮೆ ಆಗುತ್ತಾ ಬರುತ್ತಿದೆ. ಹೀಗೆ, ಗಣಿಗಾರಿಕೆ ನಡೆಸುವ ಸಾಧ್ಯತೆ ಕೂಡ ಕ್ಷೀಣಿಸುತ್ತಿದೆ. ಇದು ಕೂಡ ಚಿನ್ನದ ಮೇಲೆ ಸಾಕಷ್ಟು ದೊಡ್ಡ ಪ್ರಮಾಣದ ಪರಿಣಾಮ ಬೀರುವ ಸಾಧ್ಯತೆ ಇದ್ದು ಚಿನ್ನ ಬೆಲೆ ಈ ವರ್ಷದ ಅಂತ್ಯಕ್ಕೆ 1 ಲಕ್ಷ ರೂಪಾಯಿ ಆಸುಪಾಸಿಗೆ ಬರಬಹುದು ಎನ್ನಲಾಗಿತ್ತು. ಆದರೆ ಈಗ ನೋಡಿದರೆ ಚಿನ್ನದ ಬೆಲೆಯಲ್ಲಿ ಕುಸಿತ ಆರಂಭ ಆಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+