Gold Price: ಬಂಗಾರ ಖರೀದಿ ಮಾಡುವವರಿಗೆ ಆಘಾತ, ಮತ್ತೆ ಏರಿಕೆ ಕಂಡಿದೆ ಚಿನ್ನ & ಬೆಳ್ಳಿ!
ಬಂಗಾರದ ಬೆಲೆಯಲ್ಲಿ ಭಾರಿ ಏರಿಕೆ ಮುಂದುವರಿದಿದೆ, ಅದರಲ್ಲೂ ಹಬ್ಬದ ಸಮಯದಲ್ಲಿ ಚಿನ್ನದ ಬೆಲೆ ಇಳಿಕೆ ಆಗಬಹುದು ಈ ಮೂಲಕ ಚಿನ್ನ ಖರೀದಿ ಮಾಡೋಣ ಅಂತಾ ಜನರು ಕಾಯ್ತಾ ಇದ್ದರು. ಆದರೆ ಚಿನ್ನದ ಬೆಲೆ ಮತ್ತೆ ಏರಿಕೆ ಕಂಡು ಆಘಾತ ನೀಡಿದೆ. ದೀಪಾವಳಿ ಹಬ್ಬಕ್ಕೆ ಕೆಲವೇ ಗಂಟೆಗಳು ಬಾಕಿ ಇರುವ ಸಮಯದಲ್ಲೇ ಚಿನ್ನದ ಬೆಲೆಯಲ್ಲಿ ಭಾರಿ ಭರ್ಜರಿ ಏರಿಕೆ ಕಂಡು ಬಂದಿದೆ. ಹಾಗಾದ್ರೆ ಚಿನ್ನದ ಬೆಲೆ ಏರಿಕೆಯ ನಂತರ ಎಷ್ಟಾಗಿದೆ? ಬೆಳ್ಳಿ ಬೆಲೆ ಈಗ ಎಷ್ಟಿದೆ?
ಭಾರತೀಯರಿಗೆ ಸಾಮಾನ್ಯವಾಗಿ ಚಿನ್ನ ಅಂದ್ರೆ ಪ್ರಾಣ, ಅದರಲ್ಲೂ ಆಭರಣ ತಮ್ಮ ಮೈಮೇಲೆ ಹಾಕಲು ಭಾರತೀಯರು ತುಂಬಾ ಇಷ್ಟಪಡ್ತಾರೆ. ಹೀಗೆ ಭಾರತೀಯರಲ್ಲಿ ಚಿನ್ನದ ಬಗ್ಗೆ ತುಂಬಾ ಕುತೂಹಲ ಇದೆ. ಇದೆಲ್ಲವನ್ನ ಮೀರಿ ಚಿನ್ನ ಅನ್ನೋದು ಕಷ್ಟದ ಸಮಯ ಬಂದಾಗ ಸಹಾಯಕ್ಕೆ ಬರುವ ಬಂಧು ಅಥವಾ ಸ್ನೇಹಿತ ಇದ್ದಂತೆ.

ಎಲ್ಲೂ ಹಣ ಹೊಂದಿಸಲು ಆಗದ ಸ್ಥಿತಿ ಬಂದಾಗ, ತುರ್ತು ಸಂದರ್ಭದಲ್ಲಿ ಚಿನ್ನ ಅಡ ಇಟ್ಟು ಅಥವಾ ಚಿನ್ನ ಮಾರಿ ಹಣ ಪಡೆಯಬಹುದು. ಇಂಥ ಚಿನ್ನದ ಬೆಲೆ ಕಳೆದ ಕೆಲವು ವಾರಗಳಿಂದ ಭಾರಿ ಏರಿಳಿತ ಕಾಣುತ್ತಿತ್ತು. ಆದರೆ ಇದೀಗ ದಿಢೀರ್ ಒಂದೇ ದಿನ ಸುಮಾರು 7,100 ರೂಪಾಯಿ ಏರಿಕೆ ಕಂಡಿದೆ. ಹಾಗಾದ್ರೆ ಈಗ ಎಷ್ಟಿದೆ ಚಿನ್ನದ ಬೆಲೆ? ಮುಂದೆ ಓದಿ.
ಬಂಗಾರದ ಬೆಲೆಯಲ್ಲಿ 7,100 ರೂಪಾಯಿ...
ಕರ್ನಾಟಕ ಮತ್ತು ಬೆಂಗಳೂರಲ್ಲಿ ಮತ್ತೊಮ್ಮೆ ಚಿನ್ನದ ಬೆಲೆ ಏರಿಕೆಯನ್ನ ಕಂಡಿದೆ. 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ ಏರಿಕೆ ಬಳಿಕ ಮತ್ತಷ್ಟು ಕೈ ಸುಡುತ್ತಿದೆ. ಪ್ರತಿ 100 ಗ್ರಾಂಗೆ 7100 ರೂಪಾಯಿ ಏರಿಕೆ ಕಂಡಿದೆ 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ. ಹೀಗಾಗಿ ಶುದ್ಧ ಚಿನ್ನದ ಬೆಲೆ ಪ್ರತಿ 100 ಗ್ರಾಂಗೆ 8,11,600 ರೂಪಾಯಿ ಆಗಿದೆ ಇದರ ಜೊತೆಯಲ್ಲಿ ಶುದ್ಧ ಬಂಗಾರದ ಬೆಲೆಯು ಪ್ರತಿ 10 ಗ್ರಾಂಗೆ 81,160 ರೂಪಾಯಿಗೆ ಏರಿಕೆ ಆಗಿದೆ. ಹಾಗಾದ್ರೆ ಆಭರಣ ಚಿನ್ನದ ಬೆಲೆ & ಬೆಳ್ಳಿ ಬೆಲೆ ಎಷ್ಟಿದೆ?
22 ಕ್ಯಾರೆಟ್ ಆಭರಣ ಚಿನ್ನದ ಬೆಲೆಯಲ್ಲಿ ಕೂಡ ಭರ್ಜರಿ ಏರಿಕೆ ಕಂಡುಬಂದು, ದೀಪಾವಳಿ ಹಬ್ಬದ ಸಮಯದಲ್ಲಿ ಚಿನ್ನ ಖರೀದಿ ಮಾಡಲು ಪ್ಲಾನ್ ಮಾಡಿದ್ದವರಿಗೆ ಶಾಕ್ ಸಿಕ್ಕಂತಾಗಿದೆ. ಅದು ಹೇಗೆ ಅಂದ್ರೆ, 22 ಕ್ಯಾರೆಟ್ ಆಭರಣ ಚಿನ್ನದ ಬೆಲೆ ಪ್ರತಿ 100 ಗ್ರಾಂಗೆ ಬರೋಬ್ಬರಿ 6,500 ರೂಪಾಯಿ ಏರಿಕೆ ಕಂಡಿದೆ. ಈ ಮೂಲಕ 22 ಕ್ಯಾರೆಟ್ ಆಭರಣ ಚಿನ್ನದ ಬೆಲೆ ಪ್ರತಿ 100 ಗ್ರಾಂಗೆ 7,44,000 ರೂಪಾಯಿ ಆಗಿದ್ದು, 22 ಕ್ಯಾರೆಟ್ ಆಭರಣ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ 74,400 ರೂಪಾಯಿ ಆಗಿದೆ.
ಬೆಳ್ಳಿ ಬೆಲೆಯಲ್ಲೂ ಏರಿಕೆ ನಿರಂತರ!
ಚಿನ್ನಕ್ಕೆ ಕಾಂಪಿಟೇಷನ್ ಕೊಡುವ ರೀತಿ ಬೆಳ್ಳಿ ಬೆಲೆ ಕೂಡ ದಿನದಿಂದ ದಿನಕ್ಕೆ ಏರಿಕೆ ಕಂಡು ಶಾಕ್ ಕೊಡುತ್ತಿದೆ. ಯಾಕಂದ್ರೆ ಬೆಳ್ಳಿ ಬೆಲೆ ಕೂಡ ನಿಯಂತ್ರಣಕ್ಕೆ ಸಿಗುತ್ತಿಲ್ಲ, ಹೀಗೆ ಬೆಳ್ಳಿಯ ಬೆಲೆಯಲ್ಲಿ ಭಾರಿ ಭರ್ಜರಿ ಏರಿಕೆ ಕಂಡು ಬರುತ್ತಿದೆ. ಈ ಮೂಲಕ ನೋಡ ನೋಡುತ್ತಲೇ, ಬೆಳ್ಳಿ ಬೆಲೆ ಮತ್ತೊಮ್ಮೆ 1 ಲಕ್ಷ ರೂಪಾಯಿಗೆ ತಲುಪಿದೆ. ಭರ್ಜರಿ 1,000 ರೂಪಾಯಿ ಪ್ರತಿ ಕೆಜಿಗೆ ಏರಿಕೆ ಕಾಣುವ ಮೂಲಕ 1,00,000 ರೂಪಾಯಿಗೆ ತಲುಪಿದೆ ಬೆಳ್ಳಿ ಬೆಲೆ.












Click it and Unblock the Notifications