Gold Price: ಚಿನ್ನ ಪ್ರಿಯರಿಗೆ ಮತ್ತೆ ಶಾಕ್‌, ಚಿನ್ನದ ಬೆಲೆಯಲ್ಲಿ 6,600 ಏರಿಕೆ!

ಚಿನ್ನದ ಬೆಲೆಯಲ್ಲಿ ಮತ್ತೆ ಏರಿಕೆಯಾಗಿದ್ದು, ಚಿನ್ನ ಪ್ರಿಯರಿಗೆ ಇದು ಶಾಕಿಂಗ್ ನ್ಯೂಸ್‌ ಅಂತಲೇ ಹೇಳಬಹುದು. ಚಿನ್ನದ ಬೆಲೆಯಲ್ಲಿ ಭರ್ಜರಿ ಹೆಚ್ಚಳವಾಗಿದೆ. ಕಳೆದ ಕೆಲವು ದಿನಗಳಿಂದ ಚಿನ್ನದ ಬೆಲೆಯಲ್ಲಿ ಏರಿಳಿತ ಆಗುತ್ತಿದೆ. ಆದರೆ, ಇದೀಗ ಏಕಾಏಕಿ ಚಿನ್ನದ ಬೆಲೆ ಬರೋಬ್ಬರಿ 6,600 ರೂಪಾಯಿ ಹೆಚ್ಚಳವಾಗಿದೆ. ಈಚೆಗೆ ಚಿನ್ನದ ಬೆಲೆಯಲ್ಲಿ ನಿರಂತರವಾಗಿ ಏರಿಳಿತ ಆಗುತ್ತಲ್ಲೇ ಇದೆ. ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ನಂತರ ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆಯಾಗಿತ್ತು.ಆದರೆ, ಇದೀಗ ಚಿನ್ನದ ಬೆಲೆ ಮತ್ತೆ ಗಗನಮುಖಿಯಾಗುತ್ತಿದೆ. ಹಾಗಾದರೆ ನವೆಂಬರ್‌ 18ರ ಚಿನ್ನದ ಬೆಲೆ ಎಷ್ಟಿದೆ ಎನ್ನುವ ಮಾಹಿತಿ ಇಲ್ಲಿದೆ..

ದೇಶದಲ್ಲಿ ಹಬ್ಬದ ಸೀಸನ್‌ನಲ್ಲಿ ಭರ್ಜರಿ ಚಿನ್ನದ ಮಾರಾಟವಾಗಿತ್ತು. ಸಾಮಾನ್ಯವಾಗಿ ಮದುವೆ ಹಾಗೂ ಹಬ್ಬದ ಸೀಸನ್‌ಗಳಲ್ಲಿ ಭರ್ಜರಿ ಚಿನ್ನದ ಮಾರಾಟ ಹಾಗೂ ಖರೀದಿ ಪ್ರಕ್ರಿಯೆ ನಡೆಯುತ್ತದೆ. ಇನ್ನು ಈಚೆಗೆ ದೀಪಾವಳಿ ಹಬ್ಬದ ಸಮಯದಲ್ಲಿ ದೊಡ್ಡ ಮಟ್ಟದ ಚಿನ್ನದ ವಹಿವಾಟು ನಡೆದಿತ್ತು. ಆಗಲೂ ಸಹ ಚಿನ್ನದ ಬೆಲೆ ಏರಿಳಿತವಾಗುತ್ತಾದರೂ ಅದರ ಬಗ್ಗೆ ಚಿನ್ನ ಪ್ರಿಯರು ತಲೆ ಕೆಡಿಸಿಕೊಂಡಿರಲಿಲ್ಲ. ಆದರೆ, ಈಗ ಚಿನ್ನದ ಬೆಲೆ ಇಳಿದಂತೆ ಇಳಿದು, ಒಮ್ಮೆಗೆ ಜಿಗಿದಿದೆ. ಇದು ಚಿನ್ನ ಖರೀದಿ ಮಾಡುವ ಪ್ಲಾನ್‌ನಲ್ಲಿ ಇದ್ದವರಿಗೆ ಟೆಂಕ್ಷನ್ ಹೆಚ್ಚಿಸಿದೆ.

Gold And Silver Price increase On 18Th November Of 2024

ಚಿನ್ನವನ್ನು ಸದಾ ಕಾಲದ ಇನ್ವೆಸ್ಟ್‌ಮೆಂಟ್‌ ಅಂತನೇ ಪರಿಗಣಿಸಲಾಗುತ್ತದೆ. ಯಾವ ವಸ್ತುವಿನ ಮೇಲಾದರೂ ಇನ್ವೆಸ್ಟ್‌ವೆಂಟ್‌ ಮಾಡಬೇಕೆಂದರೆ ಜನ ಮೊದಲ ನೋಡುವುದೇ ಚಿನ್ನವನ್ನು. ಯಾಕೆಂದರೆ ಚಿನ್ನವನ್ನು ಗ್ರಾಂನಿಂದ ಖರೀದಿ ಮಾಡಬಹುದು. ಸಣ್ಣ ಮೊತ್ತದಿಂದ ಚಿನ್ನ ಖರೀದಿ ಮಾಡಲು ಪ್ರಾರಂಭಿಸಿದರೆ, ದೊಡ್ಡ ಮಟ್ಟದವರೆಗೆ ಹಣ ಉಳಿತಾಯ ಮಾಡಬಹುದು.

ಅಲ್ಲದೇ ಸಂಕಷ್ಟದ ಸಮಯದಲ್ಲಿ ಚಿನ್ನ ಸದಾ ಸಹಾಯಕ್ಕೆ ಬರಲಿದೆ. ಯಾರ ಬಳಿಯೂ ಕೈಚಾಚುವ ಅನಿವಾರ್ಯತೆ ಇರುವುದಿಲ್ಲ. ಇದೇ ಕಾರಣಕ್ಕೆ ಮಧ್ಯಮ ವರ್ಗದವರು ಚಿನ್ನವನ್ನು ಇಷ್ಟಪಡ್ತಾರೆ. ಚಿನ್ನವನ್ನು ಇಷ್ಟ ಪಡದವರೇ ಇಲ್ಲ ಎನ್ನಬಹುದು. ಆದರೆ, ಇಂದು ಚಿನ್ನದ ಬೆಲೆ ಚಿನ್ನವನ್ನು ಇಷ್ಟ ಪಡುವವರಿಗೆ ಶಾಕ್‌ ಕೊಟ್ಟಿದೆ. 24 ಕ್ಯಾರೆಟ್‌ ಚಿನ್ನದ ಬೆಲೆಯು 100 ಗ್ರಾಂಗೆ ಬರೋಬ್ಬರಿ 6,600 ರೂಪಾಯಿ ಹೆಚ್ಚಳವಾಗಿದೆ.

Gold And Silver Price increase On 18Th November Of 2024

ಇಂದಿನ ಚಿನ್ನದ ಬೆಲೆ ಎಷ್ಟಿದೆ ?

ಚಿನ್ನದ ಬೆಲೆಯು ಭಾನುವಾರ (ನವೆಂಬರ್‌ 17ಕ್ಕಿಂತ) ಸೋಮವಾರ (ನವೆಂಬರ್‌ 18ಕ್ಕೆ)ಕ್ಕಿಂತಲೂ ಹೆಚ್ಚಾಗಿದೆ. ಇದು ಚಿನ್ನ ಪ್ರಿಯರಲ್ಲಿ ನಿರಾಸೆ ಮೂಡಿಸಿದೆ. ಈ ತಿಂಗಳ ಪ್ರಾರಂಭದಲ್ಲಿ ಚಿನ್ನದ ಬೆಲೆ ಇಳಿಕೆಯಾಗುತ್ತಲ್ಲೇ ಸಾಗಿತ್ತು. ಇದು ಇನ್ನಷ್ಟು ಇಳಿಯಬಹುದು ಎಂದು ನಿರೀಕ್ಷೆ ಮಾಡುವಾಗಲೇ ಬೆಲೆ ಏರಿಕೆಯಾಗಿದೆ. ತಿಂಗಳ ಪ್ರಾರಂಭದಲ್ಲಿ ಚಿನ್ನದ ಬೆಲೆ ಇಳಿದಂತೆ ಇದೀಗ ತಿಂಗಳ ಮಧ್ಯದಲ್ಲಿ ಚಿನ್ನದ ಬೆಲೆ ಹೆಚ್ಚಳವಾಗುತ್ತಿದೆ.

24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ ಏರಿಕೆಯಾಗಿದೆ. ಶುದ್ಧ ಚಿನ್ನ 24 ಕ್ಯಾರೆಟ್ ಬಂಗಾರದ ಬೆಲೆ ದೊಡ್ಡ ಪ್ರಮಾಣದಲ್ಲಿ ಅಲ್ಲವಾದರೂ ಸಣ್ಣ ಪ್ರಮಾಣದ ಹೆಚ್ಚಳವಾಗಿದೆ. ಇದು ಇನ್ನಷ್ಟು ಬೆಲೆ ಏರಿಕೆಯ ಮುನ್ಸೂಚನೆಯ ಎನ್ನುವುದು ನಾಳೆ ತಿಳಿಯಲಿದೆ. 24 ಕ್ಯಾರೆಟ್ ಚಿನ್ನದ ಬೆಲೆಯು ಇದೀಗ 100 ಗ್ರಾಂಗೆ 6,600 ರೂಪಾಯಿ ಹೆಚ್ಚಳವಾದಂತಾಗಿದೆ. ಭಾನುವಾರ 7,56,500 ರೂಪಾಯಿ ಇದ್ದ ಬೆಲೆ, ಸೋಮವಾರ 7,63,100 ರೂಪಾಯಿ ಆಗಿದೆ. ಇನ್ನು ಶುದ್ಧ ಚಿನ್ನ ಬೆಲೆ ಇದೀಗ ಪ್ರತಿ 100 ಗ್ರಾಂಗೆ 7,63,100 ರೂಪಾಯಿ ಆದಂತೆ ಆಗಿದೆ.

ಶುದ್ಧ ಚಿನ್ನ ಬೆಲೆ ಪ್ರತಿ 10 ಗ್ರಾಂಗೆ 76,310ಕ್ಕೆ ಏರಿಕೆಯಾಗಿದೆ. ಇನ್ನು 1 ಗ್ರಾಂ ಚಿನ್ನದ ಬೆಲೆಯು 7,631 ರೂಪಾಯಿ ಆಗಿದೆ. ಇದೇ ಬೆಲೆ ಈ ತಿಂಗಳ ಮೊದಲ ವಾರದಲ್ಲಿ 8,023 ರೂಪಾಯಿ ಆಗಿತ್ತು. ಅಲ್ಲದೇ 22 ಕ್ಯಾರೆಟ್ ಆಭರಣ ಚಿನ್ನ ಬೆಲೆಯಲ್ಲೂ ಮಾರುಕಟ್ಟೆಯಲ್ಲಿ ಹೆಚ್ಚಳವಾಗುವುದು ಮುಂದುವರಿದಿದೆ. ಪ್ರತಿ 100 ಗ್ರಾಂ ಆಭರಣ ಚಿನ್ನ ಬೆಲೆಯು ಇದೀಗ 6,000 ಸಾವಿರ ರೂಪಾಯಿ ಹೆಚ್ಚಳವಾಗಿದೆ. ಭಾನುವಾರ ಚಿನ್ನದ ಬೆಲೆ ಪ್ರತಿ 100 ಗ್ರಾಂ (22 ಕ್ಯಾರೆಟ್ ಆಭರಣ)ಗೆ 6,93,500 ರೂಪಾಯಿ ಇತ್ತು. ಇದೀಗ ಸೋಮವಾರ 6,99,500 ರೂಪಾಯಿ ಆಗಿದೆ. ಪ್ರತಿ 10 ಗ್ರಾಂ ಆಭರಣ ಚಿನ್ನ ಬೆಲೆಯು 69,950 ರೂಪಾಯಿ ಆಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+