Gold Price: ಚಿನ್ನದ ಬೆಲೆ 7,100 ರೂಪಾಯಿ ಏರಿಕೆ! ಹಾಗಾದ್ರೆ ಬೆಳ್ಳಿ ಬೆಲೆ ಎಷ್ಟು?

ಚಿನ್ನದ ಬೆಲೆ ಭರ್ಜರಿ ಇಳಿಕೆ ಕಾಣುತ್ತಿರುವ ಸಮಯದಲ್ಲೇ ದಿಢೀರ್ ಇದೀಗ ಏರಿಕೆ ಕಂಡಿದೆ. ಬಂಗಾರಕ್ಕೆ ವಿಪರೀತ ಡಿಮ್ಯಾಂಡ್ ಬಂದ ಕಾರಣಕ್ಕೆ ಏಪ್ರಿಲ್ & ಮೇ ತಿಂಗಳಲ್ಲಿ ಭಾರಿ ಏರಿಕೆ ಕಂಡ ಚಿನ್ನದ ಬೆಲೆ ಕಳೆದ ತಿಂಗಳು ಪೂರ್ತಿ ಕುಸಿತದ ಹಾದಿ ಹಿಡಿದಿತ್ತು. ಆದರೆ ಈಗ ಮತ್ತೊಮ್ಮೆ ಭರ್ಜರಿ ಏರಿಕೆ ಕಂಡಿದೆ ಚಿನ್ನ & ಬೆಳ್ಳಿ. ಹಾಗಾದರೆ, ಇದೀಗ ಬೆಲೆ ಏರಿಕೆ ನಂತರ ಚಿನ್ನ & ಬೆಳ್ಳಿ ಬೆಲೆ ಎಷ್ಟಿದೆ ಗೊತ್ತಾ? ಸಂಪೂರ್ಣ ಮಾಹಿತಿ ತಿಳಿಯಲು ಮುಂದೆ ಓದಿ.

ಚಿನ್ನ.. ಚಿನ್ನ.. ಚಿನ್ನ.. ಹೀಗೆ ಭಾರತದಲ್ಲಿ ಚಿನ್ನಕ್ಕೆ ಒಂದು ಅತ್ಯುತ್ತಮವಾದ ಸ್ಥಾನ ಇದೆ. ಭಾರತೀಯರಿಗೆ ಸಾಮಾನ್ಯವಾಗಿ ಚಿನ್ನ ಅಂದ್ರೆ ತುಂಬಾ ಇಷ್ಟ ಅದರಲ್ಲೂ ಆಭರಣವನ್ನ ತಮ್ಮ ಮೈಮೇಲೆ ಹಾಕಲು ಭಾರತೀಯರು ತುಂಬಾ ಇಷ್ಟಪಡುತ್ತಾರೆ. ಹೀಗೆ ಭಾರತೀಯರಲ್ಲಿ ಚಿನ್ನದ ಬಗ್ಗೆ ತುಂಬಾ ಕುತೂಹಲ ಇರುತ್ತದೆ. ಇದೆಲ್ಲವನ್ನೂ ಮೀರಿ ಚಿನ್ನ ಅನ್ನೋದು ಕಷ್ಟದ ಸಮಯ ಬಂದಾಗ ಸಹಾಯಕ್ಕೆ ಬರುವ ಬಂಧು ಅಥವಾ ಸ್ನೇಹಿತ ಇದ್ದಂತೆ. ಎಲ್ಲೂ ಹಣ ಹೊಂದಿಸಲು ಆಗದ ಸ್ಥಿತಿ ಬಂದಾಗ, ತುರ್ತು ಸಂದರ್ಭದಲ್ಲಿ ಚಿನ್ನ ಅಡ ಇಟ್ಟು ಅಥವಾ ಚಿನ್ನ ಮಾರಿ ದುಡ್ಡು ಪಡೆಯಬಹುದು. ಇಷ್ಟೆಲ್ಲಾ ಉಪಯೋಗ ಇರುವ ಚಿನ್ನದ ಬೆಲೆ ಇದೀಗ ಎಷ್ಟಿದೆ? ಚಿನ್ನದ ಬೆಲೆ ಎಷ್ಟು ಏರಿಕೆ ಆಗಿದೆ? ಬನ್ನಿ ತಿಳಿಯೋಣ, ಮುಂದೆ ಓದೋಣ.

Gold And Silver Price Has Been Raised In The Market On 7th Of July 2024

ಚಿನ್ನದ ಬೆಲೆ ಈಗ ಇಷ್ಟಿದೆ!

ಶುದ್ಧ ಚಿನ್ನ ಅಥವಾ 24 ಕ್ಯಾರೆಟ್ ಚಿನ್ನದ ಬೆಲೆ ಏರಿಕೆ ಆಗಿದ್ದು ಈಗ 24 ಕ್ಯಾರೆಟ್ ಚಿನ್ನದ ಬೆಲೆ 100 ಗ್ರಾಂಗೆ 7,100 ರೂಪಾಯಿ ಏರಿಕೆ ಕಂಡಿದೆ. ಹೀಗಾಗಿ, ಶುದ್ಧ ಚಿನ್ನ ಬೆಲೆ ಪ್ರತಿ 100 ಗ್ರಾಂಗೆ 7,38,000 ರೂಪಾಯಿ ಆಗಿದೆ. ಇದರ ಜೊತೆ ಶುದ್ಧ ಚಿನ್ನ ಬೆಲೆ 10 ಗ್ರಾಂಗೆ 73,800 ರೂಪಾಯಿ ಆಗಿದೆ. ಆಭರಣ ಚಿನ್ನ ಅಂದ್ರೆ 22 ಕ್ಯಾರೆಟ್ ಚಿನ್ನದ ಬೆಲೆ ಈಗ ಮಾರುಕಟ್ಟೆಯಲ್ಲಿ ಭಾರಿ ಏರಿಕೆ ಕಂಡಿದೆ, ಪ್ರತಿ 100 ಗ್ರಾಂ ಆಭರಣ ಚಿನ್ನದ ಬೆಲೆ ಈಗ 6500 ರೂಪಾಯಿ ಏರಿಕೆಯ ಕಂಡಿದೆ. ಈ ಮೂಲಕ ಪ್ರತಿ 10 ಗ್ರಾಂ ಆಭರಣ ಚಿನ್ನದ ಬೆಲೆ ಈಗ 650 ರೂಪಾಯಿ ಏರಿಕೆ ಆಗಿದ್ದು, ಆಭರಣ ಚಿನ್ನದ ಬೆಲೆ ಏರಿಕೆ ನಂತರ ಈಗ ಪ್ರತಿ 10 ಗ್ರಾಂಗೆ 67,650 ರೂಪಾಯಿಗೆ ಮಾರಾಟ ಆಗುತ್ತಿದೆ.

ಬೆಳ್ಳಿ ಬೆಲೆ ಎಷ್ಟಿದೆ ಈಗ?

ಚಿನ್ನದ ರೀತಿ ಬೆಳ್ಳಿಗೆ ಕೂಡ ಭರ್ಜರಿ ಡಿಮ್ಯಾಂಡ್ ಇದೆ. ಹೀಗಾಗಿಯೇ ಭಾರತದ ಮಾರುಕಟ್ಟೆ ಬೆಳ್ಳಿಗೆ ಕೂಡ ದೊಡ್ಡ ಮಾನ್ಯತೆ ನೀಡಿದೆ. ಇದೀಗ ಬೆಳ್ಳಿ ಬೆಲೆ ಕೂಡ ಏರಿಕೆ ಕಂಡಿದ್ದು, ಈ ಮೂಲಕ ಬೆಳ್ಳಿ ಕೂಡ ಆಕಾಶದ ಕಡೆಗೆ ಮುಖ ಮಾಡುತ್ತಿದೆ. ಬೆಳ್ಳಿ ಬೆಲೆ 1,600 ರೂಪಾಯಿ ಪ್ರತಿ ಕೆ.ಜಿ.ಗೆ ಏರಿಕೆ ಕಂಡಿದ್ದು, ಈ ಮೂಲಕ ಪ್ರತಿ ಕೆ.ಜಿ. ಬೆಳ್ಳಿ ಬೆಲೆ ಈಗ 94,800 ರೂಪಾಯಿ ಆಗಿದೆ. ಹಾಗೇ 100 ಗ್ರಾಂ ಬೆಳ್ಳಿ ಬೆಲೆ ಇದೀಗ 9,480 ರೂಪಾಯಿ ಆಗಿದೆ. ಮುಂದಿನ ದಿನಗಳಲ್ಲಿ ಚಿನ್ನ & ಬೆಳ್ಳಿ ಬೆಲೆ ಮತ್ತಷ್ಟು ಏರಿಕೆ ಕಾಣುವ ಮುನ್ಸೂಚನೆ ಈ ಮೂಲಕ ಸಿಗುತ್ತಿದೆ.

5000 ವರ್ಷಗಳಿಂದ ಚಿನ್ನದ ಬಳಕೆ!

ಮನುಷ್ಯ ನಾಗರಿಕತೆ ಕಡೆಗೆ ಹೆಜ್ಜೆ ಹಾಕಿದ ನಂತರ ಚಿನ್ನವನ್ನು ಹೆಚ್ಚಾಗಿ ಬಳಸತೊಡಗಿದೆ. ಅದರಲ್ಲೂ ಚಿನ್ನದ ಬಳಕೆಗೆ ಸುಮಾರು 5000 ವರ್ಷಗಳ ಇತಿಹಾಸ ಇದೆ. ಹೀಗೆ ಚಿನ್ನವನ್ನ ಮನುಷ್ಯರು ಸಾವಿರಾರು ವರ್ಷಗಳಿಂದ ಬಳಕೆ ಮಾಡಿಕೊಂಡು ಬರುತ್ತಿದ್ದಾರೆ. ಹೀಗಾಗಿ ಈ ಹೊತ್ತಿಗೂ ಚಿನ್ನಕ್ಕೆ ಭಾರಿ ದೊಡ್ಡ ಗೌರವ ಮತ್ತು ಬೆಲೆ ಇದೆ. ಇತರ ಯಾವುದೇ ಲೋಹಕ್ಕೆ ಕೂಡ ಚಿನ್ನದಷ್ಟು ಮಾನ್ಯತೆ ನೀಡುವುದಿಲ್ಲ. ಆದರೆ ಚಿನ್ನಕ್ಕೆ ಮಾತ್ರ ಅತಿಹೆಚ್ಚು ಬೆಲೆಯು ಇದ್ದು, ಚಿನ್ನ ಮುಂದಿನ ದಿನಗಳಲ್ಲಿ ಮತ್ತಷ್ಟು ದುಬಾರಿ ಆಗುವುದು ಗ್ಯಾರಂಟಿ ಎನ್ನುತ್ತಾರೆ ತಜ್ಞರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+