Gold Price: ಬಂಗಾರದ ಬೆಲೆ 1,600 ರೂಪಾಯಿ ಏರಿಕೆ, ಬೆಳ್ಳಿ ಬೆಲೆ ಕಥೆ ಏನು?
ಚಿನ್ನ & ಬೆಳ್ಳಿ ಬೆಲೆ 2024ರ ಬಜೆಟ್ ಘೋಷಣೆ ನಂತರ ಭಾರಿ ಇಳಿಕೆ ಕಾಣುತ್ತಿತ್ತು. ಹೀಗಾಗಿ ಇನ್ನೇನು ಚಿನ್ನದ ಬೆಲೆಯು ಪ್ರತಿ 10 ಗ್ರಾಂಗೆ 50000 ಸಾವಿರ ರೂಪಾಯಿಗೆ ಕುಸಿತ ಕಾಣಬಹುದು ಎಂಬ ನಿರೀಕ್ಷೆ ಇತ್ತು. ಹಾಗೇ ಸಾಲು ಸಾಲಾಗಿ ಕುಸಿಯುತ್ತಾ ಸಾಗಿದ್ದ ಚಿನ್ನದ ಬೆಲೆ ಇದೀಗ ದಿಢೀರ್ ಏರಿಕೆ ಕಂಡಿದೆ. ಹಾಗಾದ್ರೆ ಇದೀಗ ಎಷ್ಟಿದೆ ಚಿನ್ನದ ಬೆಲೆ?
ಚಿನ್ನ ಇಲ್ಲದೆ ಏನೂ ಮಾಡಲು ಆಗಲ್ಲ ಎಂಬ ಪರಿಸ್ಥಿತಿ ಜಗತ್ತಿನಾದ್ಯಂತ ನಿರ್ಮಾಣ ಆಗಿದೆ. ಉತ್ಪಾದನೆ ವಲಯದಿಂದ ಹಿಡಿದು, ಹೂಡಿಕೆ ಮಾಡುವವರ ತನಕ ಎಲ್ಲರಿಗೂ ಇಷ್ಟವಾದ ವಸ್ತು ಚಿನ್ನ. ಆದ್ರೆ ಭಾರತದಲ್ಲಿ ಆಭರಣದ ರೂಪದಲ್ಲಿ ಚಿನ್ನವನ್ನು ಜನ ಇಷ್ಟಪಡುತ್ತಾರೆ. ಅದ್ರಲ್ಲೂ ಮದುವೆ, ನಿಶ್ಚಿತಾರ್ಥ ಹೀಗೆ ಶುಭ ಕಾರ್ಯಗಳಲ್ಲಿ ಚಿನ್ನ ಇಲ್ಲದೆ ಏನೂ ನಡೆಯಲ್ಲ. ಇಂತಹ ಚಿನ್ನ ಇದೀಗ ಮುಗಿಲು ಮುಟ್ಟುತ್ತಿದೆ ಎಂದು ಕೊರಗುವ ಸಮಯದಲ್ಲೇ ಚಿನ್ನವು ಕುಸಿತ ಕಾಣುತ್ತಿತ್ತು. ಆದರೆ ಇದೀಗ ದಿಢೀರ್ ಭರ್ಜರಿ ಏರಿಕೆ ಕಂಡಿದೆ ಚಿನ್ನ! ಹಾಗಾದರೆ ಈಗ ಎಷ್ಟಿದೆ ಚಿನ್ನ & ಬೆಳ್ಳಿ ಬೆಲೆ? ಮುಂದೆ ಓದಿ.

ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆ!
ಕರ್ನಾಟಕ ಹಾಗೂ ಬೆಂಗಳೂರಲ್ಲಿ ದಿಢೀರ್ ಚಿನ್ನದ ಬೆಲೆ ಏರಿಕೆಯನ್ನು ಕಂಡಿದೆ. 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ ಏರಿಕೆ ಬಳಿಕ ಮತ್ತಷ್ಟು ಮೇಲಕ್ಕೆ ಹೋಗಿದೆ. ಈಗ, ಪ್ರತಿ 100 ಗ್ರಾಂಗೆ 1,600 ರೂಪಾಯಿ ಏರಿಕೆ ಕಂಡಿದೆ 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ. ಹೀಗಾಗಿ ಶುದ್ಧ ಚಿನ್ನದ ಬೆಲೆ ಪ್ರತಿ 100 ಗ್ರಾಂಗೆ 6,91,600 ರೂಪಾಯಿ ಆಗಿದೆ. ಇದರ ಜೊತೆಗೇ ಶುದ್ಧ ಚಿನ್ನ ಬೆಲೆ ಪ್ರತಿ 10 ಗ್ರಾಂಗೆ 69,160 ರೂಪಾಯಿಗೆ ಏರಿಕೆ ಆಗಿದೆ. ಹಾಗಾದ್ರೆ ಆಭರಣ ಚಿನ್ನದ ಬೆಲೆ & ಬೆಳ್ಳಿ ಬೆಲೆ ಎಷ್ಟಿದೆ?
ಚಿನ್ನ ಏರಿಕೆ & ಬೆಳ್ಳಿ ಕುಸಿತ!
22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ 100 ಗ್ರಾಂಗೆ ಈಗ 1500 ರೂಪಾಯಿ ಏರಿಕೆ ಆಗಿದ್ದು ಈ ಮೂಲಕ ಪ್ರತಿ 10 ಗ್ರಾಂ ಆಭರಣ ಚಿನ್ನ ಬೆಲೆ ಈಗ 150 ರೂಪಾಯಿ ಏರಿಕೆ ಆಗಿದೆ. ಆಭರಣ ಚಿನ್ನದ ಬೆಲೆ ಏರಿಕೆ ಬಳಿಕ ಈಗ ಪ್ರತಿ 10 ಗ್ರಾಂಗೆ 63,400 ರೂಪಾಯಿಗೆ ಮಾರಾಟ ಆಗ್ತಿದೆ. ಮತ್ತೊಂದು ಕಡೆ, ಬೆಳ್ಳಿ ಬೆಲೆಯಲ್ಲಿ 250 ರೂಪಾಯಿ ಕುಸಿತ ಕಂಡು 84,000 ಪ್ರತಿ ಕೆಜಿಗೆ ರೂಪಾಯಿಗೆ ಮಾರಾಟ ಆಗುತ್ತಿದೆ. ಆಷಾಢ ಮುಗಿದು ಈಗ ಶ್ರಾವಣ ಆರಂಭ ಆಗಿದ್ದು, ಹೀಗಾಗಿ ಚಿನ್ನದ ಬೆಲೆ ಮತ್ತಷ್ಟು ಏರಿಕೆ ಕಾಣುವ ನಿರೀಕ್ಷೆ ಇದೆ.












Click it and Unblock the Notifications