Gold Price: ಆಭರಣ ಪ್ರಿಯರಿಗೆ ಆಘಾತ, ಚಿನ್ನ ಬೆಲೆ 4,000 ರೂಪಾಯಿ ಏರಿಕೆ!

ಚಿನ್ನ.. ಚಿನ್ನ.. ಅಂತಾ ಚಿನ್ನ ಖರೀದಿಗೆ ಕಾಯುತ್ತಿದ್ದ ಆಭರಣ ಪ್ರಿಯರಿಗೆ ಆಘಾತವಾಗಿದೆ. ಚಿನ್ನ ಇಲ್ಲದೆ ಏನೂ ಮಾಡಲು ಆಗಲ್ಲ ಎಂಬ ಸ್ಥಿತಿ ಜಗತ್ತಿನಾದ್ಯಂತ ಇದೆ ಯಾಕಂದ್ರೆ ಉತ್ಪಾದನೆ ವಲಯದಿಂದ ಹಿಡಿದು, ಹೂಡಿಕೆ ಮಾಡುವವರ ತನಕ ಎಲ್ಲರಿಗೂ ಇಷ್ಟವಾದ ವಸ್ತು ಈ ಚಿನ್ನ. ಆದ್ರೆ ಭಾರತದಲ್ಲಿ ಆಭರಣದ ರೂಪದಲ್ಲಿ ಚಿನ್ನವನ್ನು ಜನ ಇಷ್ಟಪಡುತ್ತಾರೆ. ಹೀಗಿದ್ದಾಗ ಚಿನ್ನ ಬೆಲೆ ದಿಢೀರ್ 4,000 ರೂಪಾಯಿ ಏರಿಕೆ ಕಂಡಿದೆ!

ಬಂಗಾರ ಖರೀದಿ ಮಾಡಬೇಕು, ಹಬ್ಬದ ದಿನ ಚಿನ್ನ ಕೊಳ್ಳಬೇಕು ಅಂತಾ ಕಾಯುತ್ತಿದ್ದ ಜನರಿಗೆ ಸಂಕ್ರಾಂತಿ ಹಬ್ಬಕ್ಕೆ ಮೊದಲು ಚಿನ್ನದ ಬೆಲೆ ಏರಿಕೆಯ ಮೂಲಕ ಶಾಕ್ ಸಿಕ್ಕಿದೆ. ಹೀಗಾಗಿ ಚಿನ್ನದ ಬೆಲೆ ಮತ್ತಷ್ಟು ಹೆಚ್ಚಾಗಿದೆ. ಚಿನ್ನ ಮಾತ್ರವಲ್ಲ ಬೆಳ್ಳಿ ಬೆಲೆ ಹೆಚ್ಚಾಗಿರುವ ರೀತಿ ನೋಡಿದರೆ ಈಗ ಆಭರಣ ಪ್ರಿಯರು ಮತ್ತಷ್ಟು ಶಾಕ್ ಆಗಿದ್ದಾರೆ. ಚಿನ್ನ ಬೆಲೆ 4,000 ರೂಪಾಯಿ ಏರಿಕೆ ಆಗಿ, ಇದೀಗ ಬೆಳ್ಳಿ ಬೆಲೆ ಕೂಡ ಹೆಚ್ಚಾಗಿದೆ. ಹಾಗಾದ್ರೆ ಇದೀಗ ಎಷ್ಟಿದೆ ಚಿನ್ನ & ಬೆಳ್ಳಿ ಬೆಲೆ? ಮುಂದೆ ಓದಿ.

Gold And Silver Price Has Been Raised In The Market On 13th Of January 2025

ಚಿನ್ನ & ಬೆಳ್ಳಿ ಬೆಲೆ ಎಷ್ಟು?

ಚಿನ್ನ ಬೆಲೆ ಭಾರಿ ಏರಿಕೆ ಕಾಣುತ್ತಿದ್ದು ಚಿನ್ನದ ಮಾರುಕಟ್ಟೆಯಲ್ಲಿ ಚಿನ್ನಕ್ಕೆ ಭರ್ಜರಿ ಡಿಮ್ಯಾಂಡ್ ಬಂದಿರುವ ಕಾರಣ ಇದೀಗ ಸಂಚಲನ ಸೃಷ್ಟಿಯಾಗಿದೆ. ಚಿನ್ನದ ಬೆಲೆ ಇಂದು ಒಂದೇ ದಿನ, ಪ್ರತಿ 100 ಗ್ರಾಂಗೆ ಭರ್ಜರಿ 4,000 ರೂಪಾಯಿ ಏರಿಕೆ ಆಗಿದ್ದು, ಆಭರಣ ಪ್ರಿಯರಿಗೆ ಈ ಸುದ್ದಿ ದೊಡ್ಡ ಆಘಾತ ನೀಡಿದೆ. ಯಾಕಂದ್ರೆ ಇನ್ನೇನು ಹಬ್ಬಗಳು ಬರಲಿದ್ದು, ಮದುವೆ ಸೀಸನ್ ಕೂಡ ಶುರು ಆಗಲಿದೆ. ಆದರೆ ಅದಕ್ಕಿಂತ ಮೊದಲೇ ಚಿನ್ನದ ಬೆಲೆ ಭರ್ಜರಿ ಏರಿಕೆ ಕಡೆಗೆ ಮುಖ ಮಾಡಿದೆ.

22 ಕ್ಯಾರೆಟ್ ಆಭರಣ ಚಿನ್ನ ಬೆಲೆ ಇಷ್ಟಿದೆ!

ದಿಢೀರ್ ಚಿನ್ನ ಬೆಲೆ ಏರಿಕೆ ಕಂಡಿದ್ದು, 22 ಕ್ಯಾರೆಟ್ ಆಭರಣ ಚಿನ್ನ ಬೆಲೆ ಏರಿಕೆ ಬಳಿಕ ಮತ್ತಷ್ಟು ಕೈ ಸುಡುತ್ತಿದೆ. ಈಗ ಪ್ರತಿ 100 ಗ್ರಾಂಗೆ 4,000 ರೂಪಾಯಿ ಏರಿಕೆ ಕಂಡಿದೆ 22 ಕ್ಯಾರೆಟ್ ಆಭರಣ ಚಿನ್ನ ಬೆಲೆ. ಹೀಗೆ 22 ಕ್ಯಾರೆಟ್ ಆಭರಣ ಚಿನ್ನದ ಬೆಲೆ ಪ್ರತಿ 100 ಗ್ರಾಂಗೆ 7,34,000 ರೂಪಾಯಿ ಆಗಿದೆ. ಈ ಮೂಲಕ 22 ಕ್ಯಾರೆಟ್ ಆಭರಣ ಚಿನ್ನ ಬೆಲೆ ಪ್ರತಿ 10 ಗ್ರಾಂಗೆ 400 ರೂಪಾಯಿ ಏರಿಕೆ ಕಂಡಿದ್ದು, 22 ಕ್ಯಾರೆಟ್ ಆಭರಣ ಚಿನ್ನ ಬೆಲೆ ಪ್ರತಿ 10 ಗ್ರಾಂಗೆ 73,400 ರೂಪಾಯಿ ತಲುಪಿದೆ. ಹಾಗಾದ್ರೆ ಶುದ್ಧ ಚಿನ್ನ & ಬೆಳ್ಳಿ ಬೆಲೆ ಇದೀಗ ಎಷ್ಟಿದೆ? ಮುಂದೆ ಓದಿ.

ಬೆಳ್ಳಿ ಬೆಲೆಯಲ್ಲೂ ಭರ್ಜರಿ ಏರಿಕೆ!

24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ ಏರಿಕೆ ಬಳಿಕ ಮತ್ತಷ್ಟು ಮೇಲಕ್ಕೆ ಹೋಗಿದೆ. ಇದೀಗ ಪ್ರತಿ 100 ಗ್ರಾಂಗೆ 4,300 ರೂಪಾಯಿ ಏರಿಕೆ ಕಂಡಿದೆ 24 ಕ್ಯಾರೆಟ್ ಶುದ್ಧ ಚಿನ್ನ ಬೆಲೆ. ಹೀಗೆ ಶುದ್ಧ ಚಿನ್ನದ ಬೆಲೆ ಪ್ರತಿ 100 ಗ್ರಾಂಗೆ 8,00,700 ರುಪಾಯಿ ಆಗಿದೆ. ಶುದ್ಧ ಚಿನ್ನ ಬೆಲೆ ಪ್ರತಿ 10 ಗ್ರಾಂಗೆ 80,070 ರೂಪಾಯಿಗೆ ಏರಿಕೆ ಆಗಿದೆ. ಮತ್ತೊಂದು ಕಡೆ ಬೆಳ್ಳಿ ಬೆಲೆಯು ಪ್ರತಿ 1 ಕೆ.ಜಿ.ಗೆ 1000 ರೂಪಾಯಿ ಏರಿಕೆ ಕಂಡಿದ್ದು, 94,500 ರೂಪಾಯಿಗೆ ತಲುಪಿದೆ. ಹಾಗೇ, ಬೆಳ್ಳಿ ಬೆಲೆ ಇದೀಗ ಪ್ರತಿ 100 ಗ್ರಾಂಗೆ 9,450 ರೂಪಾಯಿ ಆಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+