Gold Price: ಚಿನ್ನದ ಬೆಲೆಯಲ್ಲಿ ಮತ್ತೆ ಭಾರಿ ಕುಸಿತ.. ಈಗ ಎಷ್ಟಿದೆ ಬೆಲೆ?

ಚಿನ್ನದ ಬೆಲೆಯಲ್ಲಿ ಭಾರಿ ಕುಸಿತ ಮುಂದುವರಿದಿದೆ, ದೀಪಾವಳಿ ಹಬ್ಬದ ಸಮಯಕ್ಕೆ ಚಿನ್ನ ಏರಿಕೆ ಕಂಡಿದ್ದ ಕಾರಣ ಜನರು ಖರೀದಿ ಮಾಡಲು ಹಿಂದೆ & ಮುಂದೆ ಯೋಚನೆ ಮಾಡುವ ಪರಿಸ್ಥಿತಿ ನಿರ್ಮಾಣ ಆಗಿತ್ತು. ಇದೇ ಕಾರಣಕ್ಕೆ ಲಕ್ಷ್ಮೀ ಪೂಜೆ ಸಮಯದಲ್ಲಿ ಕೂಡ ಆಭರಣ ಪ್ರಿಯರು ಚಿನ್ನ & ಬೆಳ್ಳಿಯ ಖರೀದಿ ಮಾಡದೆ ಹೋಗಿದ್ದರು. ಆದರೆ ಇದೀಗ ಚಿನ್ನದ ಬೆಲೆಯು ಭಾರಿ ಪ್ರಮಾಣದಲ್ಲಿ ಕುಸಿತ ಕಾಣುತ್ತಿದೆ. ಹಾಗಾದ್ರೆ ಇಂದು ಎಷ್ಟು ಕುಸಿತ ಕಂಡಿದೆ ಬಂಗಾರ? ಬನ್ನಿ ತಿಳಿಯೋಣ.

ಚಿನ್ನ ಎಂಬ ಅಮೂಲ್ಯ ವಸ್ತು ಭೂಮಿ ಮೇಲೆ ಬದುಕಲು ಮನುಷ್ಯನಿಗೆ ಸಾಕಷ್ಟು ವಿಧದಲ್ಲಿ ಆಧಾರವಾಗಿ ನಿಂತಿದೆ. ಸಾವಿರಾರು ವರ್ಷಗಳಿಂದ ಮನುಷ್ಯರ ಜೀವನದಲ್ಲಿ ಚಿನ್ನ ಹೀಗೆ ಬೆರೆತು ಹೋಗಿದೆ. ಈ ಪೈಕಿ ಭಾರತೀಯ ಸಂಪ್ರದಾಯದ ಪ್ರಕಾರ, ಯಾವುದೇ ರೀತಿಯ ಶುಭಕಾರ್ಯ ನಡೆಯಲು ಚಿನ್ನ ಅತ್ಯಗತ್ಯ. ಚಿನ್ನ ಇಲ್ಲದೆ ಶುಭಕಾರ್ಯ ನಡೆಯುವುದಿಲ್ಲ ಎನ್ನಬಹುದು. ಈ ಹಿನ್ನೆಲೆ ದೀಪಾವಳಿ ಹಬ್ಬಕ್ಕೂ ಚಿನ್ನ ಖರೀದಿ ಮಾಡಲು ಜನ ಕಾಯುತ್ತಿದ್ದರು. ಆದರೆ ಹಬ್ಬ ಬಂದ ಸಮಯದಲ್ಲಿ ದಿಢೀರ್ ಅಂತಾ ಬಂಗಾರದ ಬೆಲೆ ಏರಿಕೆ ಕಂಡು ಬಿಟ್ಟಿತ್ತು. ಈಗ ಭಾರಿ ಕುಸಿತದ ಕಡೆಗೆ ಮುಖ ಮಾಡಿದೆ ಚಿನ್ನ.

Gold And Silver Price Decreased On 5Th November Of 2024

ಎಷ್ಟಿದೆ ಚಿನ್ನದ ಬೆಲೆ ಈಗ?

ಶುದ್ಧ ಚಿನ್ನ, 24 ಕ್ಯಾರೆಟ್ ಬಂಗಾರದ ಬೆಲೆ ಕುಸಿದಿದೆ. 24 ಕ್ಯಾರೆಟ್ ಚಿನ್ನದ ಬೆಲೆ 100 ಗ್ರಾಂಗೆ 1,600 ರೂಪಾಯಿ ಕುಸಿತ ಕಂಡಿದೆ ಈ ಮೂಲಕ ಶುದ್ಧ ಚಿನ್ನ ಬೆಲೆ ಪ್ರತಿ 100 ಗ್ರಾಂಗೆ 8,02,400 ರೂಪಾಯಿ ಆಗಿದೆ. ಶುದ್ಧ ಚಿನ್ನ ಬೆಲೆ ಪ್ರತಿ 10 ಗ್ರಾಂಗೆ 80,240ಕ್ಕೆ ಕುಸಿತವನ್ನ ಕಂಡಿದೆ. ಹಾಗೇ 22 ಕ್ಯಾರೆಟ್ ಆಭರಣ ಚಿನ್ನ ಬೆಲೆ ಮಾರುಕಟ್ಟೆಯಲ್ಲಿ ಮತ್ತೆ ಕುಸಿತ ಕಂಡಿದೆ. ಪ್ರತಿ 100 ಗ್ರಾಂ ಆಭರಣ ಚಿನ್ನ ಬೆಲೆ ಈಗ 1,500 ರೂಪಾಯಿ ಕುಸಿತ ಕಂಡು ಪ್ರತಿ 10 ಗ್ರಾಂ ಆಭರಣ ಚಿನ್ನ ಬೆಲೆ 73,550 ರೂಪಾಯಿ ಆಗಿದೆ.

ಬಂಗಾರದ ಬೆಲೆ ಇನ್ನಷ್ಟು ಕುಸಿತ?

ಚಿನ್ನ ಬೆಲೆಗೆ ಬ್ರೇಕ್ ಬಿದ್ದಂತೆ ಕಾಣುತ್ತಿದ್ದು, ಯಾಕಂದ್ರೆ ಇನ್ನೇನು ಬಂಗಾರದ ಬೆಲೆ 1 ಲಕ್ಷ ರೂಪಾಯಿಗೆ ತಲುಪುತ್ತದೆ ಎಂಬ ಮಾತು ಕೇಳಿ ಬಂದಿತ್ತು. ಅಲ್ಲದೆ ಈ ಸುದ್ದಿ ತಿಳಿದ ಜನರು ಕೂಡ ಆಶ್ಚರ್ಯದಿಂದ ನೋಡುತ್ತಿದ್ದರು. ದೀಪಾವಳಿ ಹಬ್ಬದ ಸಮಯದಲ್ಲಿ 80,000 ರೂ. ದಾಟಿ, ಇನ್ನೇನು ಚಿನ್ನದ ಬೆಲೆಯು 1 ಲಕ್ಷ ರೂಪಾಯಿಗೆ ತಲುಪುತ್ತದೆ ಎಂಬ ನಿರೀಕ್ಷೆ ಇತ್ತು. ಆದ್ರೆ ಈಗ ಬೇರೆಯದ್ದೇ ದೊಡ್ಡ ಸುದ್ದಿ ಸಿಗುತ್ತಿದ್ದು, ಚಿನ್ನದ ಬೆಲೆ ಮತ್ತೆ 50,000 ರೂಪಾಯಿಗೆ ಕುಸಿಯುವ ನಿರೀಕ್ಷೆ ಮೂಡಿದೆ.

ಚಿನ್ನ ಬಳಕೆಗೆ 5000 ವರ್ಷಗಳ ಇತಿಹಾಸ!

ಮನುಷ್ಯ ನಾಗರಿಕತೆ ಕಡೆಗೆ ಹೆಜ್ಜೆ ಹಾಕಿದ ನಂತರ ಚಿನ್ನ ಹೆಚ್ಚಾಗಿ ಬಳಸತೊಡಗಿದ. ಅದ್ರಲ್ಲೂ ಚಿನ್ನ ಬಳಕೆಗೆ ಸುಮಾರು 5000 ವರ್ಷಗಳ ದೊಡ್ಡ ಇತಿಹಾಸವಿದೆ. ಹೀಗೆ ಚಿನ್ನವನ್ನ ಮನುಷ್ಯ ಸಾವಿರಾರು ವರ್ಷಗಳಿಂದ ಬಳಕೆ ಮಾಡಿಕೊಂಡು ಬರುತ್ತಿದ್ದಾನೆ. ಹೀಗಾಗಿ ಈ ಹೊತ್ತಿಗು ಚಿನ್ನಕ್ಕೆ ಭಾರಿ ದೊಡ್ಡ ಗೌರವ & ಬೆಲೆ ಇದೆ. ಈ ರೀತಿ ಯಾವುದೇ ಲೋಹಕ್ಕೆ ಕೂಡ ಚಿನ್ನದಷ್ಟು ಮಾನ್ಯತೆ ನೀಡುವುದಿಲ್ಲ. ಆದರೆ ಚಿನ್ನಕ್ಕೆ ಮಾತ್ರ ಅತೀ ಹೆಚ್ಚು ಬೆಲೆ ಇದ್ದು, ಚಿನ್ನ ಮುಂದಿನ ದಿನಗಳಲ್ಲಿ ಮತ್ತಷ್ಟು ದುಬಾರಿ ಆಗುವುದು ಗ್ಯಾರಂಟಿ ಎನ್ನುತ್ತಾರೆ ತಜ್ಞರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+