Gold Price: ಆಭರಣ ಪ್ರಿಯರಿಗೆ ಭರ್ಜರಿ ಬಂಪರ್, ಚಿನ್ನ ಬೆಲೆ 12,000 ರೂಪಾಯಿ ಕುಸಿತ!
ಚಿನ್ನದ ಬೆಲೆ ಭಾರಿ ಪ್ರಮಾಣದಲ್ಲಿ ಕುಸಿತ ಕಾಣುತ್ತಿದ್ದು, ಲಕ್ಷ ಲಕ್ಷ ಏರಿಕೆ ಕಂಡು ಆಭರಣ ಖರೀದಿ ಮಾಡುವವರಿಗೆ ಆಘಾತ ನೀಡಿತ್ತು. ಆದರೆ ಈಗ ಬಂಗಾರದ ಬೆಲೆ ಭಾರಿ ಪ್ರಮಾಣದಲ್ಲಿ ಕುಸಿತ ಕಾಣುತ್ತಿದೆ. ಈ ಮೂಲಕ ಚಿನ್ನ ಖರೀದಿ ಮಾಡಬೇಕು ಅಂತಾ ಕಾಯುತ್ತಿದ್ದ ಜನರಿಗೆ ಸಿಕ್ಕಾಪಟ್ಟೆ ಖುಷಿಯಾಗಿದೆ. ಅದರಲ್ಲೂ ಒಂದೇ ದಿನ ಚಿನ್ನದ ಬೆಲೆಯಲ್ಲಿ ಬರೋಬ್ಬರಿ 12,000 ರೂಪಾಯಿ ಕುಸಿತ ಕಂಡಿದೆ. ಈ ಮೂಲಕ ಚಿನ್ನದ ಬೆಲೆ ಇದೀಗ ಎಷ್ಟಿದೆ ಗೊತ್ತಾ? ಪೂರ್ತಿ ಮಾಹಿತಿ ತಿಳಿಯೋಣ ಬನ್ನಿ.
ಚಿನ್ನದ ಬೆಲೆ ಮತ್ತೆ ಮತ್ತೆ ಕುಸಿದು ಬೀಳುತ್ತಿದೆ, ಅದರಲ್ಲೂ ಕಳೆದ ಕೆಲವು ದಿನಗಳಿಂದ ಕೂಡ ನಿರಂತರವಾಗಿ ಚಿನ್ನದ ಬೆಲೆ & ಬೆಳ್ಳಿ ಬೆಲೆ ಕಡಿಮೆ ಆಗುತ್ತಿದೆ. ಈ ರೀತಿ ಚಿನ್ನದ ಬೆಲೆಯಲ್ಲಿ ಕುಸಿತ ಕಾಣುತ್ತಿರುವುದು ಮದುವೆ ಸೀಸನ್‌ಗೆ ಮೊದಲು ಖುಷಿ ನೀಡುತ್ತಿದೆ. ಯಾಕಂದ್ರೆ ಈಗ ಮದುವೆಗಳಿಗೆ ಅಂತಾನೆ ಮೊದಲೇ ಚಿನ್ನಕ್ಕೆ ಆರ್ಡರ್ ನೀಡಲು ಜನರು ಕಾಯುತ್ತಿದ್ದರು. ಈ ಸಮಯದಲ್ಲೇ ಚಿನ್ನದ ಬೆಲೆ ಭರ್ಜರಿ ಇಳಿಕೆ ಕಂಡಿದೆ. ಅದರಲ್ಲೂ ಒಂದೇ ದಿನದಲ್ಲಿ ಚಿನ್ನದ ಬೆಲೆಯಲ್ಲಿ ಬರೋಬ್ಬರಿ 12,000 ರೂಪಾಯಿ ಕುಸಿತ ಕಂಡಿದೆ. ಹಾಗಾದ್ರೆ ಈಗ ಎಷ್ಟಿದೆ ಚಿನ್ನ ಬೆಲೆ? ಮುಂದೆ ಓದಿ.

ಚಿನ್ನದ ಬೆಲೆ 12,000 ರೂಪಾಯಿ...
ದೀಪಾವಳಿ & ದಸರಾ ಹಬ್ಬದ ಸಮಯದಲ್ಲಿ ಬಂಗಾರ ಹಾಗೂ ಬೆಳ್ಳಿ ಬೆಲೆ ಭಾರಿ ಏರಿಕೆಯ ಕಂಡಿತ್ತು. ಆ ನಂತರ ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ ಶುರುವಾಗಿ ಆಭರಣ ಪ್ರಿಯರಿಗೆ ಈ ಮೂಲಕ ಖುಷಿ ಸುದ್ದಿ ಸಿಕ್ಕಂತೆ ಆಗಿತ್ತು. ಅದರಲ್ಲೂ ಕಳೆದ 1 ವಾರದಲ್ಲಿ ಚಿನ್ನ ಅಂದರೆ ಬಂಗಾರದ ಬೆಲೆ ಭಾರಿ ಪ್ರಮಾಣದಲ್ಲಿ ಕುಸಿತ ಕಂಡಿದೆ. ಒಂದೇ ದಿನದಲ್ಲಿ ಚಿನ್ನದ ಬೆಲೆಯು 12,000 ರೂಪಾಯಿ ಕುಸಿದು ಬಿದ್ದು ಹೊಸ ಸಂಚಲನ ಸೃಷ್ಟಿಯಾಗಿದೆ.
ಚಿನ್ನದ ಬೆಲೆ ಈಗ ಇಷ್ಟಿದೆ!
ಅಂದಹಾಗೆ, ಚಿನ್ನ ಮತ್ತು ಬೆಳ್ಳಿ ಬೆಲೆ ಇದೀಗ ಭಾರಿ ಇಳಿಕೆ ಕಂಡಿದ್ದು, 24 ಕ್ಯಾರಟ್‌ನ ಶುದ್ಧ ಚಿನ್ನದ ಬೆಲೆ ಪ್ರತಿ 100 ಗ್ರಾಂಗೆ ಬರೋಬ್ಬರಿ 12,000 ರೂಪಾಯಿ ಕುಸಿತ ಕಂಡಿದೆ. ಹೀಗಾಗಿ ಆಭರಣ ಪ್ರಿಯರಿಗೆ ಈ ಸುದ್ದಿಯು ಭಾರಿ ಖುಷಿ ನೀಡಿದೆ. ಹೀಗೆ 24 ಕ್ಯಾರಟ್‌ನ ಶುದ್ಧ ಚಿನ್ನದ ಬೆಲೆ ಕುಸಿತ ಕಂಡ ನಂತರ ಪ್ರತಿ 100 ಗ್ರಾಂಗೆ 7,56,500 ರೂಪಾಯಿ ಇದ್ದರೆ, 24 ಕ್ಯಾರಟ್‌ನ ಶುದ್ಧ ಚಿನ್ನದ ಬೆಲೆ ಕುಸಿತದ ನಂತರ ಪ್ರತಿ 10 ಗ್ರಾಂಗೆ 75,650 ರೂಪಾಯಿ ಆಗಿದೆ. ಹಾಗಿದ್ರೆ 22 ಕ್ಯಾರೆಟ್ ಆಭರಣ ಚಿನ್ನದ ಬೆಲೆ ಎಷ್ಟಿದೆ? ಮುಂದೆ ಓದಿ.
ಆಭರಣ ಚಿನ್ನದ ಬೆಲೆಯಲ್ಲೂ ಭಾರಿ ಇಳಿಕೆ!
22 ಕ್ಯಾರೆಟ್ ಆಭರಣ ಚಿನ್ನದ ಬೆಲೆ ಭರ್ಜರಿ ಇಳಿಕೆ ಕಂಡಿರುವ ಕಾರಣಕ್ಕೆ ಇದೀಗ ಪ್ರತಿ 100 ಗ್ರಾಂಗೆ 6,93,500 ರೂಪಾಯಿ ಆಗಿದೆ. ಅದರಲ್ಲೂ 22 ಕ್ಯಾರೆಟ್ ಆಭರಣ ಚಿನ್ನದ ಬೆಲೆಯು 10 ಗ್ರಾಂಗೆ ಈಗ 69,350 ರೂಪಾಯಿ ಆಗಿದೆ. ಮತ್ತೊಂದು ಕಡೆ 100 ಗ್ರಾಂ ಬೆಳ್ಳಿ ಬೆಲೆ 8,950 ರೂಪಾಯಿ ಇದ್ದು, ರಾಜಧಾನಿ ಬೆಂಗಳೂರಲ್ಲಿ ಕೂಡ ಚಿನ್ನ ಹಾಗೂ ಬೆಳ್ಳಿ ಬೆಲೆ ಕುಸಿತವನ್ನ ಕಂಡಿದೆ. ಒಂದೇ ದಿನ ಬೆಳ್ಳಿ ಬೆಲೆ ಪ್ರತಿ 1 ಕೆಜಿಗೆ ಬರೋಬ್ಬರಿ 1500 ರೂಪಾಯಿ ಕುಸಿತವನ್ನು ಕಂಡಿರುವ ಹಿನ್ನೆಲೆ ಇದೀಗ 89,500 ರೂಪಾಯಿ ಪ್ರತಿ ಕೆಜಿಗೆ ಮಾರಾಟ ಆಗುತ್ತಿದೆ.
ಚಿನ್ನ 50,000 ರೂಪಾಯಿಗೆ ಕುಸಿತ?
ಬಂಗಾರ ಅಂದ್ರೆ ಯಾರಿಗೆ ಇಷ್ಟವಾಗಲ್ಲ ಹೇಳಿ? ಎಲ್ಲರ ಗಮನ ಸೆಳೆಯುವ ಚಿನ್ನ ಸಾಕಷ್ಟು ಡಿಮ್ಯಾಂಡ್ ಇರುವ ವಸ್ತು. ಇದೇ ಕಾರಣಕ್ಕೆ ಚಿನ್ನ ಅಂದ್ರೆ ಸಾಕಷ್ಟು ಇಷ್ಟಪಡುತ್ತಾರೆ ಈ ನಮ್ಮ ಭಾರತೀಯರು. ಬೇರೆ ಯಾವುದೇ ದೇಶಕ್ಕಿಂತ ಹೆಚ್ಚಾಗಿ ಭಾರತದಲ್ಲೇ ಚಿನ್ನ ಖರೀದಿ ಭರಾಟೆ ನಡೆಯುತ್ತದೆ. ವಿದೇಶಗಳಲ್ಲಿ ಚಿನ್ನವನ್ನ ಗೋಲ್ಡ್ ಬಾರ್ ರೂಪದಲ್ಲಿ ಸಂಗ್ರಹಿಸಿಟ್ಟು ಕಷ್ಟದ ಕಾಲದಲ್ಲಿ ಬಳಸಿಕೊಳ್ಳುತ್ತಾರೆ. ಆದರೆ ಭಾರತದಲ್ಲಿ ಆಭರಣಗಳ ರೂಪದಲ್ಲಿ ಚಿನ್ನ ಸಂಗ್ರಹ ಮಾಡುತ್ತಾರೆ. ಅದರಲ್ಲೂ ಮದುವೆ & ಶುಭ ಕಾರ್ಯಕ್ರಮಗಳಿಗೆ ಚಿನ್ನ ಬೇಕೆ ಬೇಕು.
ಕುಸಿದು ಬೀಳುತ್ತಿದೆ ಚಿನ್ನದ ಬೆಲೆ!
ಚಿನ್ನ ಅಮೂಲ್ಯ ವಸ್ತು, ಈ ಕಾರಣಕ್ಕೆ ಚಿನ್ನಕ್ಕೆ ಅತ್ಯುನ್ನತ ಸ್ಥಾನ ನೀಡಿದ್ದ ನಮ್ಮ ಪೂರ್ವಿಕರು ಅದನ್ನ ಜೋಪಾನ ಮಾಡಿಕೊಂಡು ಬಂದರು. ಹೀಗಿದ್ದಾಗ ಈ ಆಧುನಿಕ ಕಾಲಘಟ್ಟದಲ್ಲಿ ಚಿನ್ನ & ಬೆಳ್ಳಿಗೆ ಮತ್ತಷ್ಟು ಮಹತ್ವ ಬಂದಿದೆ. ಅದರಲ್ಲೂ, ಆಧುನಿಕ ಕಾಲದಲ್ಲಿ ಅತ್ಯಗತ್ಯ ಆಗಿರುವ ಎಲೆಕ್ಟ್ರಾನಿಕ್ ವಸ್ತುಗಳ ತಯಾರಿಕೆಗೂ ಚಿನ್ನ ಅತ್ಯಗತ್ಯ. ಆಭರಣ ಪ್ರಿಯರಿಗೂ ಚಿನ್ನದ ಮೇಲೆ ಪ್ರೀತಿ, ಹೂಡಿಕೆ ಮಾಡುವವರಿಗೆ ಕೂಡ ಚಿನ್ನವೇ ಬೆಸ್ಟ್ & ಮೊದಲ ಆಯ್ಕೆ. ಹೀಗೆ ಚಿನ್ನಕ್ಕೆ ಭಾರಿ ಡಿಮ್ಯಾಂಡ್ ಇರುವಾಗಲೇ ಇದೀಗ ಹಳದಿ ಲೋಹ ಕುಸಿದು ಬೀಳುತ್ತಿದೆ.












Click it and Unblock the Notifications