ಚಿನ್ನದ ಬೆಲೆ ಕುಸಿತ: ಯಾವ ನಗರದಲ್ಲಿ ಎಷ್ಟು ಇಳಿಕೆ?
ನವದೆಹಲಿ, ಆಗಸ್ಟ್ 20: ಭಾರತೀಯ ಮಾರುಕಟ್ಟೆಯಲ್ಲಿ ಸತತ ಎರಡನೇ ದಿನ ಚಿನ್ನದ ಬೆಲೆ ಕುಸಿದಿದೆ. ಗುರುವಾರ 22 ಕ್ಯಾರೆಟ್ ಚಿನ್ನ 10 ಗ್ರಾಂ 51,200 ರೂಪಾಯಿಗೆ ಇಳಿಕೆಗೊಂಡಿದ್ದು, ಶುದ್ಧ ಚಿನ್ನವು 10 ಗ್ರಾಂ 55,850 ರೂಪಾಯಿಗೆ ಕುಸಿದಿದೆ. ಬೆಳ್ಳಿ ಬೆಲೆಯು ಕೆಜಿಗೆ 1,100 ರೂಪಾಯಿ ಇಳಿಕೆಗೊಂಡು 67,000 ರೂಪಾಯಿಗೆ ಮುಟ್ಟಿದೆ.
ದೇಶದ ಪ್ರಮುಖ ನಗರಗಳಲ್ಲಿ ಕಳೆದ ನಾಲ್ಕು ದಿನಗಳಲ್ಲಿ 22 ಕ್ಯಾರೆಟ್ ಚಿನ್ನ ಮತ್ತು 24 ಕ್ಯಾರೆಟ್ ಚಿನ್ನ 10 ಗ್ರಾಂ ಎಷ್ಟು ರುಪಾಯಿ ಏರಿಳಿತಗೊಂಡಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.

ಬೆಂಗಳೂರಿನಲ್ಲಿ ಚಿನ್ನದ ಬೆಲೆ
ಆಗಸ್ಟ್ 20: 49,500-54,000 (1250 ರೂಪಾಯಿ ಇಳಿಕೆ)
ಆಗಸ್ಟ್ 19: 50,750-55,360
ಆಗಸ್ಟ್ 18: 50,750-55,270
ಆಗಸ್ಟ್ 17: 49,700-54,220

ದೆಹಲಿಯಲ್ಲಿ ಚಿನ್ನದ ಬೆಲೆ
ಆಗಸ್ಟ್ 20: 51,200-55,850 (650 ರೂಪಾಯಿ ಇಳಿಕೆ)
ಆಗಸ್ಟ್ 19: 51,850-56,560
ಆಗಸ್ಟ್ 18: 51,150-55,090
ಆಗಸ್ಟ್ 17: 51,150-55,090

ಚೆನ್ನೈನಲ್ಲಿ ಚಿನ್ನದ ಬೆಲೆ
ಆಗಸ್ಟ್ 20: 50,840-55,460 (720 ರೂಪಾಯಿ ಇಳಿಕೆ)
ಆಗಸ್ಟ್ 19: 51,560-56,240
ಆಗಸ್ಟ್ 18: 51,670-56,360
ಆಗಸ್ಟ್ 17: 50,700-55,320

ಮುಂಬೈ ಚಿನ್ನದ ಬೆಲೆ
ಆಗಸ್ಟ್ 20: 50,990-51,990 (990 ರೂಪಾಯಿ ಇಳಿಕೆ)
ಆಗಸ್ಟ್ 19: 51,980-52,980
ಆಗಸ್ಟ್ 18: 52,210-53,210
ಆಗಸ್ಟ್ 17: 51,500-52,500

ಜೈಪುರ ಚಿನ್ನದ ಬೆಲೆ
ಆಗಸ್ಟ್ 20: 51,200-55,850 (650 ರೂಪಾಯಿ ಇಳಿಕೆ)
ಆಗಸ್ಟ್ 19: 51,850-56,560
ಆಗಸ್ಟ್ 18: 51,150-55,090
ಆಗಸ್ಟ್ 17: 51,150-55,090

ಚಂಡೀಗಡ ಚಿನ್ನದ ಬೆಲೆ
ಆಗಸ್ಟ್ 20: 51,100-53,840 (1150 ರೂಪಾಯಿ ಇಳಿಕೆ)
ಆಗಸ್ಟ್ 19: 52,250-55,000
ಆಗಸ್ಟ್ 18: 51,940-55,970
ಆಗಸ್ಟ್ 17: 50,600-54,660

ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?
ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತರ್ ರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.












Click it and Unblock the Notifications