ಚಿನ್ನದ ಬೆಲೆ ಏರಿಕೆ: ಡಿಸೆಂಬರ್ 16ರಂದು ಯಾವ ನಗರದಲ್ಲಿ ಎಷ್ಟಿದೆ?
ನವದೆಹಲಿ, ಡಿಸೆಂಬರ್ 16: ಭಾರತೀಯ ಮಾರುಕಟ್ಟೆಯಲ್ಲಿ ಬುಧವಾರ ಹಳದಿ ಲೋಹದ ಬೆಲೆ ಏರಿಕೆಯಾಗಿದೆ. ಮಂಗಳವಾರ ದೆಹಲಿಯಲ್ಲಿ ಯಾವುದೇ ವ್ಯತ್ಯಾಸ ಕಾಣದ ಚಿನ್ನದ ಬೆಲೆ ಇಂದು ಏರಿಕೆಯಾಗಿದೆ. 22 ಕ್ಯಾರೆಟ್ ಚಿನ್ನ 10 ಗ್ರಾಂ 48,350 ರೂಪಾಯಿ ದಾಖಲಾಗಿದ್ದು, ಶುದ್ಧ ಚಿನ್ನ 10 ಗ್ರಾಂ 52,750 ರೂಪಾಯಿಗೆ ತಲುಪಿದೆ. ಬೆಳ್ಳಿ ಬೆಲೆಯು ಕೆಜಿಗೆ 1,450 ರೂಪಾಯಿ ಏರಿಕೆಗೊಂಡು 65,600 ರೂಪಾಯಿಗೆ ಮುಟ್ಟಿದೆ.
ದೇಶದ ಪ್ರಮುಖ ನಗರಗಳಲ್ಲಿ ಕಳೆದ ನಾಲ್ಕು ದಿನಗಳಲ್ಲಿ 22 ಕ್ಯಾರೆಟ್ ಚಿನ್ನ ಮತ್ತು 24 ಕ್ಯಾರೆಟ್ ಚಿನ್ನ 10 ಗ್ರಾಂ ಎಷ್ಟು ರೂಪಾಯಿ ಏರಿಳಿತಗೊಂಡಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.

ಬೆಂಗಳೂರಿನಲ್ಲಿ ಚಿನ್ನದ ಬೆಲೆ
ಡಿಸೆಂಬರ್ 16: 46,200-50,400 (440 ರೂ. ಏರಿಕೆ)
ಡಿಸೆಂಬರ್ 15: 45,800-49,960
ಡಿಸೆಂಬರ್ 14: 45,800-49,960
ಡಿಸೆಂಬರ್ 13: 46,010-50,190

ದೆಹಲಿಯಲ್ಲಿ ಚಿನ್ನದ ಬೆಲೆ
ಡಿಸೆಂಬರ್ 16: 48,350-52,750 (440 ರೂ. ಏರಿಕೆ)
ಡಿಸೆಂಬರ್ 15: 47,950-52,310
ಡಿಸೆಂಬರ್ 14: 47,950-52,310
ಡಿಸೆಂಬರ್ 13: 48,160-52,540

ಚೆನ್ನೈನಲ್ಲಿ ಚಿನ್ನದ ಬೆಲೆ
ಡಿಸೆಂಬರ್ 16: 46,880-51,150 (420 ರೂ. ಏರಿಕೆ)
ಡಿಸೆಂಬರ್ 15: 46,530-50,730
ಡಿಸೆಂಬರ್ 14: 46,110-50,310
ಡಿಸೆಂಬರ್ 13: 46,580-50,810

ಮುಂಬೈ ಚಿನ್ನದ ಬೆಲೆ
ಡಿಸೆಂಬರ್ 16: 48,310-49,310 (110 ರೂ. ಏರಿಕೆ)
ಡಿಸೆಂಬರ್ 15: 48,200-49,200
ಡಿಸೆಂಬರ್ 14: 48,150-49,150
ಡಿಸೆಂಬರ್ 13: 48,250-49,250

ಜೈಪುರ ಚಿನ್ನದ ಬೆಲೆ
ಡಿಸೆಂಬರ್ 16: 48,350-52,750 (440 ರೂ. ಏರಿಕೆ)
ಡಿಸೆಂಬರ್ 15: 47,950-52,310
ಡಿಸೆಂಬರ್ 14: 47,950-52,310
ಡಿಸೆಂಬರ್ 13: 48,160-52,540

ಚಂಡೀಗಡ ಚಿನ್ನದ ಬೆಲೆ
ಡಿಸೆಂಬರ್ 16: 48,210-52,080 (110 ರೂ. ಏರಿಕೆ)
ಡಿಸೆಂಬರ್ 15: 48,100-51,970
ಡಿಸೆಂಬರ್ 14: 48,500-52,400
ಡಿಸೆಂಬರ್ 13: 48,490-52,390

ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?
ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತರ್ ರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.












Click it and Unblock the Notifications