Gold Price on April 20: ಕರ್ನಾಟಕ ಸೇರಿದಂತೆ ಭಾರತದ ಪ್ರಮುಖ ರಾಜ್ಯಗಳಲ್ಲಿ ಇಂದಿನ ಚಿನ್ನ ಬೆಳ್ಳಿ ಬೆಲೆ
ದೇಶದಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆ ನಿರಂತರವಾಗಿ ಬದಲಾಗುತ್ತಿದೆ. ಕರ್ನಾಟಕದಲ್ಲೂ ಈ ಬದಲಾವಣೆ ಮುಂದುವರೆದಿದೆ. ಕಳೆದ ಕೆಲವು ದಿನಗಳಿಂದ ರಾಜ್ಯದಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ನಿರಂತರ ಬದಲಾವಣೆ ಕಂಡುಬಂದಿದೆ. ಇದು ಚಿನ್ನಾಭರಣ ಖರೀದಿದಾರರಿಗೆ ನಿರಾಸೆ ತಂದಿದೆ.
ಬೆಂಗಳೂರಿನಲ್ಲಿ ಇಂದಿನ (ಏಪ್ರಿಲ್ 20) 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 89,450 ರೂಪಾಯಿ ಇದೆ. 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 97,580 ರೂಪಾಯಿ ಇದ್ದರೆ, 18 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 73,190 ರೂಪಾಯಿ ದಾಖಲಾಗಿದೆ. ಸಂತೋಷದ ವಿಷಯ ಅಂದರೆ ಇಂದು ಬೆಳ್ಳಿಯ ಬೆಲೆಯಲ್ಲಿ ಸ್ವಲ್ಪ ಇಳಿಕೆ ಕಂಡುಬಂದಿದೆ. ಹೀಗಾಗಿ ಇಂದು ಚಿನ್ನ ಅಥವಾ ಬೆಳ್ಳಿಯನ್ನು ಖರೀದಿಸಲು ಯೋಜಿಸುತ್ತಿದ್ದರೆ ಇತ್ತೀಚಿನ ಬೆಲೆಗಳನ್ನು ಪರಿಶೀಲಿಸಿ.

ಇಂದಿನ 18 ಕ್ಯಾರೆಟ್ ಚಿನ್ನದ ದರ :-
* ದೆಹಲಿಯಲ್ಲಿ ಇಂದು 18 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 73,310/- ರೂಪಾಯಿ ಇದೆ.
* ಕೋಲ್ಕತ್ತಾ ಮತ್ತು ಮುಂಬೈನಲ್ಲಿ 18 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 73,190/- ರೂಪಾಯಿ ಇದ್ದರೆ
* ಇಂದೋರ್ ಮತ್ತು ಭೋಪಾಲ್‌ನಲ್ಲಿ 18 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 73,230/- ರೂಪಾಯಿ ಇದೆ.
* ಇನ್ನೂ ಚೆನ್ನೈನಲ್ಲಿ ಇಂದು 18 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 74, 050/- ರೂ.ಗಳಲ್ಲಿ ವಹಿವಾಟು ನಡೆಸುತ್ತಿದೆ.
ಇಂದಿನ 22 ಕ್ಯಾರೆಟ್ ಚಿನ್ನದ ದರ :-
* ಭೋಪಾಲ್ ಮತ್ತು ಇಂದೋರ್‌ನಲ್ಲಿ ಇಂದು 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 89,500/- ರೂಪಾಯಿ ಇದ್ದರೆ
* ಜೈಪುರ, ಲಕ್ನೋ, ದೆಹಲಿಯಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 89,600/- ರೂಪಾಯಿ ಇದೆ.
* ಇನ್ನೂ ಹೈದರಾಬಾದ್, ಕೇರಳ, ಕೋಲ್ಕತ್ತಾ, ಮುಂಬೈ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 89,450/- ರೂ.ಗಳಲ್ಲಿ ಟ್ರೆಂಡಿಂಗ್ ಇದೆ.

ಇಂದಿನ 24 ಕ್ಯಾರೆಟ್ ಚಿನ್ನದ ದರ:-
* ಅಲ್ಲದೆ ಭೋಪಾಲ್ ಮತ್ತು ಇಂದೋರ್‌ನಲ್ಲಿ ಇಂದು 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 97,360 ರೂಪಾಯಿ ಇದ್ದು
*ದೆಹಲಿ, ಜೈಪುರ, ಲಕ್ನೋ ಮತ್ತು ಚಂಡೀಗಢ 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 97,460/- ರೂಪಾಯಿ ಆಗಿದೆ.
* ಜೊತೆಗೆ ಹೈದರಾಬಾದ್, ಕೇರಳ, ಬೆಂಗಳೂರು ಮತ್ತು ಮುಂಬೈ 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 97,310/- ರೂಪಾಯಿ ಇದ್ದರೆ
*ಚೆನ್ನೈ 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 97, 310/- ರಷ್ಟು ಟ್ರೆಂಡಿಂಗ್‌ನಲ್ಲಿದೆ.
ಇಂದಿನ ಬೆಳ್ಳಿ ದರ:-
* ಜೊತೆಗೆ ಇಂದಿನ ಬೆಳ್ಳಿ ಬೆಲೆಯನ್ನು ನೋಡುವುದಾದರೆ ಜೈಪುರ, ಕೋಲ್ಕತ್ತಾ, ಅಹಮದಾಬಾದ್, ಲಕ್ನೋ, ಮುಂಬೈ, ದೆಹಲಿ, ಬೆಳ್ಳಿ ಮಾರುಕಟ್ಟೆಯಲ್ಲಿ 1 ಕೆಜಿ ಬೆಳ್ಳಿಯ ಬೆಲೆ 1,00,000 ರೂಪಾಯಿ ಇದೆ.
* ಚೆನ್ನೈ, ಮಧುರೈ, ಹೈದರಾಬಾದ್ ಮತ್ತು ಕೇರಳ ಬೆಳ್ಳಿಯ ಗಟ್ಟಿ ಮಾರುಕಟ್ಟೆಯಲ್ಲಿ ಬೆಲೆ 1,10,000/- ರೂಪಾಯಿ ಇದೆ.
* ಭೋಪಾಲ್ ಮತ್ತು ಇಂದೋರ್‌ನಲ್ಲಿ 1 ಕೆಜಿ ಬೆಳ್ಳಿಯ ಬೆಲೆ 1,00,000/- ರೂ.ಗಳಲ್ಲಿ ಟ್ರೆಂಡಿಂಗ್ ಆಗಿದೆ.
ಶುದ್ಧ ಚಿನ್ನವನ್ನು ಹೇಗೆ ಗುರುತಿಸುವುದು?
ನೀವು ಚಿನ್ನವನ್ನು ಖರೀದಿಸುತ್ತಿದ್ದರೆ, ಅದರ ಶುದ್ಧತೆಯನ್ನು ಗುರುತಿಸುವುದು ಬಹಳ ಮುಖ್ಯ. ಚಿನ್ನದ ಶುದ್ಧತೆಯನ್ನು ಪರೀಕ್ಷಿಸಲು ಅಂತರರಾಷ್ಟ್ರೀಯ ಪ್ರಮಾಣೀಕರಣ ಸಂಸ್ಥೆಯು ಹಾಲ್‌ಮಾರ್ಕ್ ಗುರುತು ನೀಡುತ್ತದೆ. ಹಾಲ್‌ಮಾರ್ಕ್ ಪ್ರಕಾರ: 24 ಕ್ಯಾರೆಟ್ ಚಿನ್ನವನ್ನು 999 ಎಂದು ಗುರುತಿಸಲಾಗಿದೆ. ಇದನ್ನು ಅತ್ಯಂತ ಶುದ್ಧವೆಂದು ಪರಿಗಣಿಸಲಾಗುತ್ತದೆ.
ಇನ್ನೂ 22 ಕ್ಯಾರೆಟ್ 916 ಅಂಕಗಳನ್ನು 21 ಕ್ಯಾರೆಟ್ 875 ಅಂಕಗಳನ್ನು ಮತ್ತು 18 ಕ್ಯಾರೆಟ್ 750 ಅಂಕಗಳನ್ನು ಹೊಂದಿದೆ. ಪ್ರಮುಖ ವಿಚಾರ ಅಂದರೆ ಆಭರಣಗಳನ್ನು ಸಾಮಾನ್ಯವಾಗಿ 22 ಕ್ಯಾರೆಟ್ ಚಿನ್ನದಿಂದ ತಯಾರಿಸಲಾಗುತ್ತದೆ, ಏಕೆಂದರೆ 24 ಕ್ಯಾರೆಟ್ ಚಿನ್ನವು ತುಂಬಾ ಮೃದುವಾಗಿರುವುದರಿಂದ ಆಭರಣಗಳನ್ನು ತಯಾರಿಸಲು ಸೂಕ್ತವಲ್ಲ.
ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?
ಅಂತರರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಬೆಲೆಗಳನ್ನು ಲಂಡನ್ ಬುಲಿಯನ್ ಮಾರ್ಕೆಟ್ ಅಸೋಸಿಯೇಷನ್ (LBMA) ನಿಗದಿಪಡಿಸುತ್ತದೆ. ಭಾರತದಲ್ಲಿ, ಭಾರತೀಯ ಬೆಳ್ಳಿ ಮತ್ತು ಆಭರಣ ವ್ಯಾಪಾರಿಗಳ ಸಂಘ (IBJA) ಆಮದು ಸುಂಕ ಮತ್ತು ಇತರ ತೆರಿಗೆಗಳನ್ನು ಸೇರಿಸಿದ ನಂತರ ಬೆಲೆಗಳನ್ನು ನಿಗದಿಪಡಿಸುತ್ತದೆ.
ಚಿನ್ನದ ಬೆಲೆಯನ್ನು ಯಾವ ಅಂಶಗಳು ಬದಲಾಯಿಸುತ್ತವೆ?
ಚಿನ್ನದ ಬೆಲೆಗಳು ಬೇಡಿಕೆ ಮತ್ತು ಪೂರೈಕೆಯನ್ನು ಅವಲಂಬಿಸಿರುವುದು ಮಾತ್ರವಲ್ಲದೆ, ಅಂತರರಾಷ್ಟ್ರೀಯ ಮಾರುಕಟ್ಟೆ ಚಟುವಟಿಕೆಗಳು ಮತ್ತು ಜಾಗತಿಕ ಆರ್ಥಿಕ ಪರಿಸ್ಥಿತಿಗಳ ಮೇಲೂ ಪರಿಣಾಮ ಬೀರುತ್ತವೆ.
ಪ್ರಮುಖ ಕಾರಣಗಳು:
ಲಂಡನ್ OTC ಸ್ಪಾಟ್ ಮಾರುಕಟ್ಟೆ ಮತ್ತು COMEX ಚಿನ್ನದ ಭವಿಷ್ಯಗಳಲ್ಲಿನ ಏರಿಳಿತ.
ಆರ್ಥಿಕ ಅನಿಶ್ಚಿತತೆ, ಹಣದುಬ್ಬರ ಮತ್ತು ಡಾಲರ್ ಬೆಲೆಗಳಲ್ಲಿನ ಬದಲಾವಣೆಗಳು.
ಕೇಂದ್ರ ಬ್ಯಾಂಕ್‌ಗಳ ನೀತಿಗಳು ಮತ್ತು ಜಾಗತಿಕ ಹೂಡಿಕೆ ಪ್ರವೃತ್ತಿಗಳು.
ಚಿನ್ನ ಮತ್ತು ಬೆಳ್ಳಿಯ ಬೆಲೆಗಳಲ್ಲಿನ ಈ ಬದಲಾವಣೆಗಳು ಹೂಡಿಕೆದಾರರಿಗೆ ಮುಖ್ಯವಾಗಿವೆ. ಏಕೆಂದರೆ ಅವು ಅವರ ಹೂಡಿಕೆಗಳ ಮೇಲೆ ನೇರವಾಗಿ ಪರಿಣಾಮ ಬೀರುತ್ತವೆ.












Click it and Unblock the Notifications