Gold Price on April 15: ಚಿನ್ನ ಬೆಳ್ಳಿ ಬೆಲೆಯಲ್ಲಿ ಭಾರೀ ಕುಸಿತ: ಇದೀಗ ಚಿನ್ನಾಭರಣ ಖರೀದಿ ಕನಸಿನ ಮಾತಲ್ಲ
ಚಿನ್ನದ ಬೆಲೆ ಪ್ರತಿದಿನ ದಾಖಲೆಯ ಮಟ್ಟವನ್ನು ತಲುಪುತ್ತಿರುವುದರಿಂದ ಚಿನ್ನ ಖರೀದಿಸುವುದು ಕನಸಿನಲ್ಲಿ ಮಾತ್ರ ಸಾಧ್ಯ ಎಂಬ ಭಯ ಕಾಡುತ್ತಿತ್ತು. ಆದರೀಗ ಚಿನ್ನದ ಬೆಲೆ ಸ್ವಲ್ಪ ಸಮಾಧಾನ ತಂದಿತು. ಹಾಗಾದರೆ ಬೆಂಗಳೂರು ಸೇರಿದಂತೆ ಭಾರತದ ಪ್ರಮುಖ ರಾಜ್ಯಗಳಲ್ಲಿ ಚಿನ್ನ ಹಾಗೂ ಬೆಳ್ಳಿ ಬೆಲೆ ಎಷ್ಟಿದೆ ಎಂದು ಈಗ ತಿಳಿಯೋಣ.
ಬೆಂಗಳೂರಿನಲ್ಲಿ ಸತತ ಎರಡನೇ ದಿನವೂ ಚಿನ್ನದ ಬೆಲೆ ಇಳಿಕೆಯಾಗಿದೆ. ಬೆಂಗಳೂರಿನಲ್ಲಿ ಇಂದು (ಏಪ್ರಿಲ್ 15) 18 ರಿಂದ 24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡುಬಂದಿದೆ. ಬೆಂಗಳೂರಿನಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 95180 ರೂ.ನಂತೆ ವಹಿವಾಟು ಮಾಡಲಾಗುತ್ತಿದೆ. ಹಿಂದಿನ ದಿನ (ಏಪ್ರಿಲ್ 14) ಚಿನ್ನದ ಬೆಲೆ 10 ಗ್ರಾಂಗೆ 95510 ರೂ.ಗಳಲ್ಲಿ ವಹಿವಾಟು ನಡಿದಿದತ್ತು.

ಜೊತೆಗೆ ಇಂದು 22 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡುಬಂದಿದೆ. ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 87200 ರೂ. ಇದೆ. ಹಿಂದಿನ ದಿನ (ಏಪ್ರಿಲ್ 14) ಇದು 10 ಗ್ರಾಂಗೆ 87550 ರೂ.ಗಳಷ್ಟಿತ್ತು. ಅಲ್ಲದೆ 18 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 71350 ರೂ. ಇದ್ದರೆ, ಹಿಂದಿನ ದಿನ (ಏಪ್ರಿಲ್ 14) ಇದು 10 ಗ್ರಾಂಗೆ 71640 ರೂ. ಇತ್ತು. ಹಾಗಾದರೆ ಭಾರತದ ಪ್ರಮುಖ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ ಹೇಗಿದೆ ಎಂದು ಈಗ ತಿಳಿಯೋಣ.
ಭಾರತದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ (ಏಪ್ರಿಲ್ 15) :-
*ಮುಂಬೈನಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 95180 ರೂ. ಮತ್ತು 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 87200 ರೂ. ಆಗಿದೆ.
*ಜೈಪುರದಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 95330 ರೂ. ಮತ್ತು 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 87350 ರೂ. ಆಗಿದೆ.

*ಲಕ್ನೋದಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 95330 ರೂ. ಮತ್ತು 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 87350 ರೂ. ಆಗಿದೆ.
*ದೆಹಲಿಯಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 95330 ರೂ. ಮತ್ತು 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 87350 ರೂ. ಆಗಿದೆ.
*ಕೋಲ್ಕತ್ತಾದಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 95180 ರೂ. ಮತ್ತು 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 87200 ರೂ. ಆಗಿದೆ.
ಇಂದು ಬೆಳ್ಳಿ ಎಷ್ಟು?
ಬೆಂಗಳೂರಿನಲ್ಲಿ ಬೆಳ್ಳಿ ದರ ಕೆಜಿಗೆ 95,290 ರೂಪಾಯಿ ಇದ್ದು, ಮುಂಬೈ, ಚೆನ್ನೈ, ಕೋಲ್ಕತ್ತಾ, ಹೈದರಾಬಾದ್, ನವದೆಹಲಿಯಲ್ಲೂ ಬೆಳ್ಳಿ ದರ ಕೆಜಿಗೆ 95,290 ರೂಪಾಯಿ ಇದೆ.












Click it and Unblock the Notifications