Gold Rate: ಚಿನ್ನ-ಬೆಳ್ಳಿ ದರದಲ್ಲಿ ಭಾರಿ ಏರಿಳಿತ: ನಲುಗಿದ ಆಭರಣ ಮಾರುಕಟ್ಟೆ, ವ್ಯಾಪಾರಿಗಳಲ್ಲಿ ಆತಂಕ
ನವದೆಹಲಿ: ಚಿನ್ನ ಹಾಗೂ ಬೆಳ್ಳಿಗೆ ಜಾಗತಿಕವಾಗಿ ಬೇಡಿಕೆ ಹೆಚ್ಚಾಗಿದೆ. ಬಂಗಾರ-ಬೆಳ್ಳಿ ದರಗಳ ಬದಲಾವಣೆಯು ವಿವಿಧ ವರ್ಗದವರ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಎಐ ನಿಂದ ಉದ್ಯೋಗ ನಷ್ಟ ಅನುಭವಿಸಿದ್ದ ಸಾಕಷ್ಟು ಕ್ಷೇತ್ರಗಳಿವೆ. ಅದರಂತೆ ಈ ಲೋಹಗಳ ಬೆಲೆ ದಿಢೀರ್ ಬದಲಾವಣೆಯಿಂದಾಗಿ ವ್ಯಾಪಾರವನ್ನು ಹೈರಾಣಾಗಿಸಿದೆ. ಜ್ಯುವೆಲ್ಲರಿ ವ್ಯಾಪಾರಿಗಳು, ತಯಾರಕರ ಉದ್ಯೋಗ ನಷ್ಟಕ್ಕೆ ಕಾರಣವಾಗುತ್ತಿದೆ.
ಚಿನ್ನ-ಬೆಳ್ಳಿಯ ಏರಿಳಿತವು ಚಿನ್ನಾಭರಣದ ವ್ಯಾಪಾರವನ್ನು ಕೊಲ್ಲುತ್ತಿದೆ. ಉದ್ಯೋಗ ನಷ್ಟದ ಸಮಸ್ಯೆ ತಂದೊಡುತ್ತಿದೆ. ಚಿನ್ನ ಮತ್ತು ಬೆಳ್ಳಿಯ ಬೆಲೆಗಳಲ್ಲಿನ ಹಠಾತ್ ಮತ್ತು ತೀಕ್ಷ್ಣವಾದ ಬದಲಾವಣೆಗಳು ದೇಶದಲ್ಲಿ ಆಭರಣ ಮತ್ತು ಚಿನ್ನ, ಬೆಳ್ಳಿ ವ್ಯಾಪಾರದ ಮೇಲೆ ಕೆಟ್ಟ ಪರಿಣಾಮ ಬೀರಿದೆ. ದೊಡ್ಡ ವ್ಯಾಪಾರ ಕೇಂದ್ರಗಳಿಂದ ಸಣ್ಣ ಅಂಗಡಿಗಳಿಂದ ಮತ್ತು ಸಾಮಾನ್ಯ ಗ್ರಾಹಕರವರೆಗೂ ದರ ಹೆಚ್ಚಳ, ಬದಲಾವಣೆ ಪ್ರಭಾವ ಉಂಟಾಗಿದೆ.

ವ್ಯಾಪಾರ ಕುಂಠಿತ
ಬೆಳ್ಳಿಯ ವ್ಯಾಪಾರ ಕುಂಠಿತವಾಗಿದೆ. ಒಂದು ಕಾಲದಲ್ಲಿ ನಿರಂತರವಾಗಿ ತುಂಬಿ ತುಳುಕುತ್ತಿದ್ದ ಅಂಗಡಿಗಳು ಮತ್ತು ಕಾರ್ಯಾಗಾರಗಳು ಈಗ ಶಾಂತವಾಗಿವೆ. ಹಿಂದಿನ ತಿಂಗಳುಗಳಿಗೆ ಹೋಲಿಸಿದರೆ ಸದ್ಯಕ್ಕೆ ಚಿನ್ನ, ಬೆಳ್ಳಿ ವ್ಯಾಪಾರ ಗಣನೀಯವಾಗಿ ಕಡಿಮೆ ಆಗಿದೆ. ಗ್ರಾಹಕರು ದರ ಕೇಳಿಯೇ ಚಿನ್ನ ಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಅನೇಕರು ಚಿನ್ನದ ಮೇಲೆ ಆನ್ಲೈನ್ ಹೂಡಿಕೆ ಮುಂದುವರಿಸಿದ್ದಾರೆ. ಹೀಗಿದ್ದಾಗ ವ್ಯಾಪಾರ ಹೇಗಾಗಬೇಕು. ಈ ವಲಯವನ್ನೇ ನೆಚ್ಚಿಕೊಂಡವರ ಸ್ಥಿತಿ ಇದೀಗ ಸಂಕಷ್ಟ ಎದುರು ನೋಡುತ್ತಿದೆ. ಈ ವಲಯದ ಅನೇಕ ಕಾರ್ಮಿಕರಿಗೆ ಉದ್ಯೋಗ ಕಳೆದುಕೊಳ್ಳುವ ಭೀತಿ ಎದುರಾಗಿದೆ. ಕೆಲವು ಅಂಗಡಿಗಳಲ್ಲಿ ಲಾಭ ಹೋಗಲಿ, ವ್ಯಾಪಾರವೇ ಇಲ್ಲದೇ ಆತಂಕಕ್ಕೀಡಾಗಿದ್ದು, ಸಿಬ್ಬಂದಿಯನ್ನು ಕೆಲಸದಿಂದ ತೆಗೆಯುತ್ತಿವೆ ಎಂದು ವರದಿ ಆಗಿದೆ. ಕೆಲವು ವ್ಯಾಪಾರ ಸಂಸ್ಥೆಗಳು ದಿವಾಳಿಯಾಗಿವೆ ಎಂದು ವರದಿ ಆಗಿದೆ.
ಹಲವು ವಾರಗಳಿಗೂ ಮೊದಲು ಚಿನ್ನ ಬೆಳ್ಳಿ ದರವು ಹಂತ ಹಂತವಾಗಿ, ನಿಧಾನ ಪ್ರಕ್ರಿಯೆಯಲ್ಲಿ ಇಳಿಕೆ ಮತ್ತು ಏರಿಕೆ ಕಾಣುತ್ತಿದ್ದವು. ಇಂದು ಒಂದೇ ದಿನಕ್ಕೆ ದುಪ್ಪಟ್ಟು ಏರಿಕೆ ಮತ್ತು ಇಳಿಕೆ ಆಗುತ್ತಿದೆ. ವ್ಯಾಪಾರಿಗಳು ಸಾಲ ಮಾಡಿ ಖರೀದಿಸಿ ಮಾರಾಟ ಮಾಡಿದವರಿಗೂ ನಷ್ಟವಾಗಿದೆ. ಒಂದೇ ದಿನದೊಳಗೆ ಬೆಲೆಗಳು ತೀವ್ರವಾಗಿ ಬದಲಾಗುವುದರಿಂದ ಗ್ರಾಹಕರು ಗೊಂದಲ್ಲಿದ್ದಾರೆ. ಸರಿಯಾಗಿ ವ್ಯಾಪಾರ ಆಗುತ್ತಿಲ್ಲ. ಇಂತಹ ಬೆಳವಣಿಗೆ ಆಭರಣ ವಲಯಕ್ಕೆ ಮಾರಕವಾಗಿದೆ.
ಆರ್ಡರ್ ಬರುತ್ತಿಲ್ಲ, ಚಿನ್ನ ವಾಪಾಸ್ ಖರೀದಿ ಮೊದಲಿನಷ್ಟಿಲ್ಲ
ತಯಾರಕರು ದುಬಾರಿ ಕಚ್ಚಾ ಬೆಳ್ಳಿಯನ್ನು ಖರೀದಿಸಲು ಶಕ್ತರಾಗಿಲ್ಲ. ಸಗಟು ವ್ಯಾಪಾರಿಗಳು ಹೊಸ ಆರ್ಡರ್ಗಳನ್ನು ನೀಡುತ್ತಿಲ್ಲ. ಈ ಮಧ್ಯೆ ಚಿಲ್ಲರೆ ವ್ಯಾಪಾರಿಗಳಿಂದ ಖರೀದಿ ಕಡಿಮೆ ಆಗಿದೆ. ಜನರು ಚಿನ್ನ ದುಬಾರಿ ಆಗುತ್ತಿದ್ದಂತೆ ಪರ್ಯಾಯವಾಗಿ ಬೆಳ್ಳಿ ಖರೀದಿಸುತ್ತಿದ್ದರು. ಇದೀಗ ಬೆಳ್ಳಿ ಸಹ ಕೈಗೆಟುಕದ ರೀತಿಯಲ್ಲಿ ಹೆಚ್ಚಾಗಿದ್ದರಿಂದ ಅದನ್ನು ಖರೀದಿಸಲು ಮುಂದಾ ಬಾರದು ವ್ಯಾಪಾರ ನೆಲಕಚ್ಚಿದೆ. ಆಭರಣಗಳನ್ನು ಖರೀದಿಸಲು ಕಡಿಮೆ ಜನರು ಬರುತ್ತಿದ್ದಾರೆ. ಸಣ್ಣ ಪುಟ್ಟ ಆಭರಣ ಬದಲಾವಣೆ, ರಿಪೇರಿ, ತಕ್ಕ ಮಟ್ಟಿನ ಖರೀದಿಗೆ ಬರುತ್ತಿದ್ದ ಜನರ ಪ್ರಮಾಣ ಇದೀಗ ಸಾಕಷ್ಟು ಇಳಿಕೆ ಆಗಿದೆ.
ಮಾರುಕಟ್ಟೆಯಲ್ಲಿ ನಗದು ಕೊರತೆ ಇರುವ ಕಾರಣ ಸಾಕಷ್ಟು ಅಂಗಡಿಯವರು ಗ್ರಾಹಕರಿಂದ ಚಿನ್ನ ಅಥವಾ ಬೆಳ್ಳಿಯನ್ನು ಮರಳಿ ಖರೀದಿಸಲು ಸಿದ್ಧರಿಲ್ಲ. ಏಕೆಂದರೆ ಖರೀದಿಸಿದ ಬಳಿಕ ಅವರಿಗೆ ನೀಡಲು ಹಣ ವ್ಯಾಪಾರಿಗಳಲ್ಲಿ ಇಲ್ಲದಾಗಿದೆ. ಅಲ್ಲದೇ ದರ ಹೆಚ್ಚಾದಾಗ ದೊಡ್ಡ ಮೊತ್ತ ನೀಡಬೇಕಾಗುತ್ತದೆ. ಮರಳ ಇಳಿಕೆ ಆದಾಗ ನಷ್ಟ ನೋಡಬೇಕಾಗುತ್ತದೆ ಎಂದು ವ್ಯಾಪಾರಿಗಳು ಖರೀದಿ ಕಡಿಮೆ ಮಾಡಿದ್ದಾರೆ.
ಜಾಗತಿಕ ಬೇಡಿಕೆ ಮತ್ತು ಮಾರುಕಟ್ಟೆ ಅನಿಶ್ಚಿತತೆಯಿಂದಾಗಿ 2025 ರವರೆಗೆ ಚಿನ್ನ ಮತ್ತು ಬೆಳ್ಳಿ ತೀವ್ರವಾಗಿ ಏರಿಕೆ ಆಯಿತು. ನಂತರ ದಿಢೀರ್ ದರ ಕುಸಿಯಿತು. ಈ ಕಾರಣದಿಂದ ವ್ಯಾಪಾರಿಗಳು, ಗ್ರಾಹಕರು ಬೆಲೆಯಲ್ಲಿ ಸ್ಥಿರತೆ ಕಾಯುವಿಕೆಯತ್ತ ನೋಡುತ್ತಿದ್ದಾರೆ. ಸಹಜ ಸ್ಥಿತಿ ಬಂದ ಮೇಲೆ ಮೊದಲಿನಂದ ವ್ಯಾಪಾರ ವಹೀವಾಟು, ಖರೀದಿ ನಡೆಯುವ ನಿರೀಕ್ಷೆ ಇದೆ.
-
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ












Click it and Unblock the Notifications