Ganga Expressway: ಭಾರತದ ಅತಿದೊಡ್ಡ ಗ್ರೀನ್‌ಫೀಲ್ಡ್ ಹೆದ್ದಾರಿ ಯೋಜನೆಯಿಂದ ಪ್ರಾದೇಶಿಕ ಅಭಿವೃದ್ಧಿಗೆ ಹೊಸ ವೇಗ
ಭಾರತದ ಮಹತ್ವಾಕಾಂಕ್ಷಿ ಮೂಲಸೌಕರ್ಯ ಯೋಜನೆ ಪೈಕಿ ಒಂದಾದ ಗಂಗಾ ಎಕ್ಸ್‌ಪ್ರೆಸ್‌ವೇ, ದೇಶದ ಅಭಿವೃದ್ಧಿಗೆ ಹೊಸ ದಿಕ್ಕನ್ನು ನೀಡಿದೆ. ವಿಶ್ವದ ಅತ್ಯಂತ ಸಸ್ಯಶ್ಯಾಮಲ ಹಾಗೂ ಜನಸಾಂದ್ರತೆ ಹೆಚ್ಚಿರುವ ಪ್ರದೇಶಕ್ಕೆ ಜೀವನಾಡಿ ಆಗಿರುವ ಗಂಗಾ ನದಿ ಹೆಸರನ್ನು ಹೆದ್ದಾರಿಗೆ ನಾಮಕರಣ ಮಾಡಲಾಗಿದೆ. ಉತ್ತರ ಪ್ರದೇಶದಲ್ಲಿ ಸಂಪರ್ಕ ವ್ಯವಸ್ಥೆ ಸುಧಾರಿಸಿ ಪ್ರಾದೇಶಿಕ ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ನೀಡುವುದು ಈ ಯೋಜನೆಯ ಪ್ರಮುಖ ಗುರಿಯಾಗಿದೆ. ಇದರ ಜೊತೆಗೆ ಉದ್ಯಮಗಳ ಅಭಿವೃದ್ಧಿ ಮತ್ತು ಸರಕು ಸಾಗಣೆ ಜೊತೆ ಪ್ರವಾಸೋದ್ಯಮ ಅಭಿವೃದ್ಧಿಗೆ ಈ ಹೆದ್ದಾರಿ ಪ್ರಮುಖ ಬೆಂಬಲ ನೀಡಲಿದೆ.
ಬರೋಬ್ಬರಿ 594 ಕಿಲೋ ಮೀಟರ್ ಉದ್ದದ ಮಹತ್ವಾಕಾಂಕ್ಷಿ ಯೋಜನೆಯು, ಮೀರತ್ ಮೂಲಕ ಸಾಗಿ ಪ್ರಯಾಗರಾಜ್ ತನಕ ಸಂಪರ್ಕ ಬೆಸೆಯಲಿದೆ. ಈ ಮೂಲಕ ಬರೋಬ್ಬರಿ 594 ಕಿ.ಮೀ. ಉದ್ದದ ಮಾರ್ಗ ಕೋಟಿ ಕೋಟಿ ಜನರಿಗೆ ನೆರವಾಗಲಿದೆ. ಉತ್ತರ ಪ್ರದೇಶದ 12 ಜಿಲ್ಲೆಗಳು & 519 ಗ್ರಾಮ ಸಂಪರ್ಕಕ್ಕೂ ಇದು ಕೊಂಡಿಯಾಗಲಿದೆ. ಈ ಯೋಜನೆಯಿಂದ ಸುಮಾರು 8 ಕೋಟಿ ಜನರಿಗೆ ನೇರ ಪ್ರಯೋಜನ ಸಿಗಬಹುದು ಎಂದು ಅಂದಾಜಿಸಲಾಗಿದೆ. ಇದಕ್ಕಾಗಿಯೇ ಸುಮಾರು 36,000 ಕೋಟಿ ರೂಪಾಯಿಗೂ ಹೆಚ್ಚು ಹಣ ವೆಚ್ಚ ಮಾಡಲಾಗುತ್ತಿದ್ದು, ಭಾರತದ ಅತಿದೊಡ್ಡ ಗ್ರೀನ್‌ಫೀಲ್ಡ್ ಎಕ್ಸ್‌ಪ್ರೆಸ್‌ವೇ ಆಗಿ ಹೊರಹೊಮ್ಮಲಿದೆ. ಇದೇ ವೇಳೆ ಇದು ದೇಶದ ಅತಿದೊಡ್ಡ ಬಿಲ್ಡ್-ಆಪರೇಟ್-ಟ್ರಾನ್ಸ್‌ಫರ್ (BOT) ಮಾದರಿ ರಸ್ತೆ ಯೋಜನೆ ಆಗಿದ್ದು, ಒಟ್ಟು 30 ವರ್ಷದ ಕಾನ್ಸೆಷನ್ ಅವಧಿಯಲ್ಲಿ ಸಂಚಾರದ ಅಪಾಯವನ್ನು ಅಭಿವೃದ್ಧಿಪಡಿಸುವ ಹೊಣೆ ಕಂಪನಿಯೇ ಹೊರುತ್ತದೆ.

ಅದಾನಿ ಗ್ರೂಪ್ ಮಹತ್ವದ ಪಾತ್ರ
ಗಂಗಾ ಎಕ್ಸ್‌ಪ್ರೆಸ್‌ವೇ ಯೋಜನೆ ಬಹುಪಾಲು ಕೆಲಸವನ್ನು ಅದಾನಿ ಗ್ರೂಪ್ ಕೈಗೆತ್ತಿಕೊಂಡಿದ್ದು, ಒಟ್ಟಾರೆ ಮಾರ್ಗದ ಸುಮಾರು 464 ಕಿಲೋ ಮೀಟರ್ ಎಂದರೆ ಸುಮಾರು ಶೇಕಡಾ 80 ಭಾಗ ಅದಾನಿ ರೋಡ್ ಟ್ರಾನ್ಸ್‌ಪೋರ್ಟ್ ಲಿಮಿಟೆಡ್ ಸಂಸ್ಥೆ ನಿರ್ವಹಣೆ ಮಾಡುತ್ತಿದೆ. ಇದು **Adani Enterprises Ltd. (AEL)**ನ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆ ಆಗಿದೆ. ಇನ್ನುಳಿದ 130 ಕಿ.ಮೀ ಮಾರ್ಗವನ್ನು IRB Infrastructure Developers ಅಭಿವೃದ್ಧಿಪಡಿಸುತ್ತಿದೆ.
ಅದಾನಿ ಎಂಟರ್‌ಪ್ರೈಸಸ್‌ಗಾಗಿ ಗಂಗಾ ಎಕ್ಸ್‌ಪ್ರೆಸ್‌ವೇ ಯೋಜನೆ ಭಾರತದಲ್ಲಿ ಸಮಗ್ರ ಸಾರಿಗೆ & ಲಾಜಿಸ್ಟಿಕ್ಸ್ ವ್ಯವಸ್ಥೆಯನ್ನು ನಿರ್ಮಿಸುವ ಪ್ರಮುಖ ಹೆಜ್ಜೆಯಾಗಿದೆ. ಕಂಪನಿಯ ಸಾರಿಗೆ ಮತ್ತು ಲಾಜಿಸ್ಟಿಕ್ಸ್ ವಿಭಾಗದ ಮೂಲಕ ರಸ್ತೆ ಮೂಲಸೌಕರ್ಯ ಅಭಿವೃದ್ಧಿಪಡಿಸಿ ದೇಶದ ಉತ್ಪಾದಕತೆಯನ್ನ ಹೆಚ್ಚಿಸುವ ಉದ್ದೇಶವನ್ನ ಈ ಯೋಜನೆ ಮೂಲಕ ಹೊಂದಲಾಗಿದೆ.
ಲಾಜಿಸ್ಟಿಕ್ಸ್ ವೆಚ್ಚ ಕಡಿಮೆ ಮಾಡುವ ಗುರಿ
ಭಾರತದಲ್ಲಿ ಲಾಜಿಸ್ಟಿಕ್ಸ್ ವೆಚ್ಚವು ಒಟ್ಟು ಜಿಡಿಪಿಯ ಸುಮಾರು ಶೇಕಡಾ 14 ರಷ್ಟಿದ್ದು, ಇದು ಅಭಿವೃದ್ಧಿ ಹೊಂದಿದ ರಾಷ್ಟ್ರಗಳಾದ ಅಮೆರಿಕಾ, ಚೀನಾ ಹಾಗೂ ಜರ್ಮನಿಯ ಶೇ. 8 ರಿಂದ 9 ರಷ್ಟು ಮಟ್ಟಕ್ಕಿಂತ ಬಹಳ ಹೆಚ್ಚು ಎನ್ನಬಹುದು.
ಹೆದ್ದಾರಿ, ಬಂದರು, ವಿಮಾನ ನಿಲ್ದಾಣ ಮತ್ತು ಲಾಜಿಸ್ಟಿಕ್ಸ್ ಪಾರ್ಕ್‌ಗಳಲ್ಲಿ ಹೂಡಿಕೆ ಮಾಡುವ ಮೂಲಕ ಈ ವೆಚ್ಚ ಕಡಿಮೆ ಮಾಡುವುದು, ಸರಕು ಮತ್ತು ಜನರ ವೇಗವಾದ ಸಂಚಾರವನ್ನು ಸಾಧ್ಯವಾಗಿಸುವುದು ಈ ಯೋಜನೆಯ ಪ್ರಮುಖ ಗುರಿಯಾಗಿದೆ.
ಲಾಜಿಸ್ಟಿಕ್ಸ್ ಮತ್ತು ವಿಮಾನಯಾನ ಕ್ಷೇತ್ರದಲ್ಲೂ ವಿಸ್ತರಣೆ
ಗಂಗಾ ಎಕ್ಸ್‌ಪ್ರೆಸ್‌ವೇ ಯೋಜನೆ ಮಾದರಿಯನ್ನ ಅದಾನಿ ಗ್ರೂಪ್ ಈಗಾಗಲೇ Adani Ports and Special Economic Zone ಮೂಲಕ ಯಶಸ್ವಿಯಾಗಿ ಅನುಷ್ಠಾನಗೊಳಿಸಿದೆ. ಇನ್ನು 2007ರಲ್ಲಿ ಪ್ರತ್ಯೇಕ ಸಂಸ್ಥೆ ಆಗಿ ಹೊರಬಂದ ಈ ಕಂಪನಿ ಇಂದು ಭಾರತದ ಬಂದರು ಸರಕು ಸಾಗಣೆಯ ಸುಮಾರು ಶೇಕಡ 27 ಭಾಗವನ್ನ ನಿರ್ವಹಿಸುತ್ತಿದೆ. ಇದಕ್ಕೆ 12 ಬಹುಮಾಧ್ಯಮ ಲಾಜಿಸ್ಟಿಕ್ಸ್ ಪಾರ್ಕ್‌ಗಳು, ಸಮರ್ಪಿತ ರೈಲು ಸಂಪರ್ಕ ಸೇರಿ ವಿಸ್ತರಿಸುತ್ತಿರುವ ಲಾಜಿಸ್ಟಿಕ್ಸ್ ಜಾಲ ಸಹಕಾರಿ ಆಗಿದೆ.
ಇದೇ ವೇಳೆ Adani Airports Holdings Ltd. ಮೂಲಕ ಅದಾನಿ ಗ್ರೂಪ್ ವಿಮಾನಯಾನ ಕ್ಷೇತ್ರದಲ್ಲೂ ವೇಗವಾಗಿ ವಿಸ್ತರಿಸುತ್ತಿದೆ. ಪ್ರಸ್ತುತ ಭಾರತದಲ್ಲಿ ಎಂಟು ಪ್ರಮುಖ ವಿಮಾನ ನಿಲ್ದಾಣಗಳನ್ನು ಈ ಕಂಪನಿ ನಿರ್ವಹಿಸುತ್ತಿದ್ದು, ದೇಶೀಯ ಪ್ರಯಾಣಿಕರ ಸಂಚಾರದ ಸುಮಾರು ಶೇಕಡಾ 25 ಹಾಗೂ ದೇಶೀಯ ಏರ್ ಕಾರ್ಗೋದ ಶೇಕಡಾ 31ರಷ್ಟು ಭಾಗವನ್ನು ನಿರ್ವಹಿಸುತ್ತಿದೆ.
ಉದ್ಯಮ ಹಾಗೂ ನಗರಾಭಿವೃದ್ಧಿಗೆ ಸೇತುವೆ
ವಿಸ್ತೃತ ಮೂಲಸೌಕರ್ಯ ಜಾಲದಲ್ಲಿ ಗಂಗಾ ಎಕ್ಸ್‌ಪ್ರೆಸ್‌ವೇ ಮಹತ್ವದ ಕೊಂಡಿಯಾಗಿ ಕಾರ್ಯನಿರ್ವಹಿಸಲಿದೆ. ಇದು ಉದ್ಯಮ ಕೇಂದ್ರಗಳು, ಲಾಜಿಸ್ಟಿಕ್ಸ್ ಹಬ್‌ಗಳು ಹಾಗೂ ವೇಗವಾಗಿ ಬೆಳೆಯುತ್ತಿರುವ ನಗರ ಪ್ರದೇಶಗಳನ್ನು ಪರಸ್ಪರ ಸಂಪರ್ಕಿಸಿ ಪ್ರಾದೇಶಿಕ ಅಭಿವೃದ್ಧಿಗೆ ಹೊಸ ವೇಗ ನೀಡಲಿದೆ
ವಿಹಂಗಮ ನೋಟ
ಭಾರತದ ಅತಿದೊಡ್ಡ ಗ್ರೀನ್‌ಫೀಲ್ಡ್ ಹೆದ್ದಾರಿಯನ್ನು ಸಂಕ್ಷಿಪ್ತವಾಗಿ ವಿವರಿಸಲಾಗಿದೆ. ಈ ಪದವು ಹೊಸ ಭೂಮಿಯಲ್ಲಿ ನಿರ್ಮಿಸಲಾದ ಹೊಸ ಹೆದ್ದಾರಿ ಯೋಜನೆಯನ್ನು ಸೂಚಿಸುತ್ತದೆ. ಇದು ದೇಶದೊಳಗೆ ಯೋಜಿಸಲಾದ ಅಥವಾ ನಡೆಯುತ್ತಿರುವ ಪ್ರಮುಖ ರಸ್ತೆ ಸಂಪರ್ಕವನ್ನು ಸೂಚಿಸುತ್ತದೆ.
ಯೋಜನೆಯ ವಿವರಣೆ
ಭಾರತದ ಅತಿದೊಡ್ಡ ಗ್ರೀನ್‌ಫೀಲ್ಡ್ ಹೆದ್ದಾರಿಗೆ ಸಂಬಂಧಿಸಿದ ಉಲ್ಲೇಖವು ಒಂದು ದೊಡ್ಡ ಪ್ರಮಾಣದ ಮಾರ್ಗವನ್ನು ಸೂಚಿಸುತ್ತದೆ. ಹಳೆಯ ರಸ್ತೆಯ ಮೇಲೆ ಆಧಾರಿತವಾಗಿರದ ಹೊಸ ಜೋಡಣೆಯನ್ನು ಇದು ಸೂಚಿಸುತ್ತದೆ. ರಾಷ್ಟ್ರವ್ಯಾಪಿ ಇತರ ಅಂತಹ ಯೋಜನೆಗಳಿಗೆ ಹೋಲಿಸಿದರೆ ಇದರ ಪ್ರಮಾಣವು ಗಮನಾರ್ಹವಾಗಿದೆ.
ಗ್ರೀನ್‌ಫೀಲ್ಡ್ ಹೆದ್ದಾರಿ ಎಂಬ ಪದವು ಸಾಮಾನ್ಯವಾಗಿ ಅಭಿವೃದ್ಧಿಯಾಗದ ಭೂಮಿಯಲ್ಲಿ ಹಾದುಹೋಗುವ ಹೊಸ ಮಾರ್ಗಗಳನ್ನು ಒಳಗೊಂಡಿರುತ್ತದೆ. ಇಲ್ಲಿ ಇದು ಪ್ರಮುಖ ರಾಷ್ಟ್ರೀಯ ರಸ್ತೆ ಪ್ರಯತ್ನವನ್ನು ಎತ್ತಿ ತೋರಿಸುತ್ತದೆ.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications