ವಾಸ್ತು ಅನುಸರಿಸುವುದು ಏಕೆ ಮುಖ್ಯ? ತಿಳಿಯಿರಿ ಕಾರಣಗಳು

ಭಾರತದಲ್ಲಿ ವಾಸ್ತು ಶಾಸ್ತ್ರವನ್ನು ಪ್ರಾಚೀನ ಕಾಲದಿಂದಲೂ ನಮ್ಮ ಜೀವನದ ಒಂದು ಭಾಗವಾಗಿದೆ. ಮನೆ ನಿರ್ಮಾಣದ ಕಾರ್ಯ ಪ್ರಾರಂಭಿಸಿದ ಕಾಲದಿಂದಲೇ ವಾಸ್ತು ತತ್ವಗಳು ಬಳಕೆಯಲ್ಲಿವೆ. ಇಂದಿಗೂ ಇದರ ಮಹತ್ವ ಕಡಿಮೆಯಾಗಿಲ್ಲ. ವಾಸ್ತು ಕೇವಲ ನಂಬಿಕೆಯ ವಿಷಯವೇ ಅಥವಾ ವೈಜ್ಞಾನಿಕ ಆಧಾರವಿದೆಯೇ ಎಂಬ ಬಗ್ಗೆ ಅನೇಕ ಭಿನ್ನಾಭಿಪ್ರಾಯಗಳಿದ್ದರೂ ತಜ್ಞರು ಇದನ್ನು ನಮ್ಮ ಜೀವನ ಶೈಲಿಯನ್ನು ಸುಧಾರಿಸುವ ಒಂದು ವ್ಯವಸ್ಥೆ ಎಂದು ಅಭಿಪ್ರಾಯ ಪಡುತ್ತಾರೆ.

ಭಾರತದಲ್ಲಿ ಮನೆ ಕಟ್ಟುವಾಗ ಅಥವಾ ಖರೀದಿಸುವಾಗ ವಾಸ್ತು ಗಮನಿಸುವುದು ಸಾಮಾನ್ಯ. ಇದು ಮನೆ ಸದಸ್ಯರಲ್ಲಿ ಆತ್ಮವಿಶ್ವಾಸ ಹೆಚ್ಚಿಸುತ್ತದೆ ಮತ್ತು ಸಕಾರಾತ್ಮಕ ಮನೋಭಾವ ಬೆಳೆಸುತ್ತದೆ. ಎಲ್ಲವೂ ಚೆನ್ನಾಗಿದೆ ಎಂಬ ಭಾವನೆ ವ್ಯಕ್ತಿಯ ಬೆಳವಣಿಗೆಗೆ ತುಂಬಾ ಸಹಾಯಕವಾಗುತ್ತದೆ.

Is Vastu real

ವಾಸ್ತು ತತ್ವಗಳು ಪ್ರಕೃತಿಯ ಐದು ಅಂಶಗಳಾದ ಭೂಮಿ, ನೀರು, ಅಗ್ನಿ, ಗಾಳಿ ಮತ್ತು ಆಕಾಶದ ಮಹತ್ವ ತಿಳಿಸುತ್ತವೆ. ಉದಾಹರಣೆಗೆ ನಮ್ಮ ಮನೆಯ ಬಾಗಿಲು-ಕಿಟಕಿಗಳನ್ನು ಪೂರ್ವ ದಿಕ್ಕಿನಲ್ಲಿ ಇಡುವುದು ಉತ್ತಮ ಎಂದು ಹೇಳಲಾಗುತ್ತದೆ. ಬೆಳಗಿನ ಸೂರ್ಯನ ಕಿರಣಗಳು ಮನೆಗೆ ನೈಸರ್ಗಿಕ ಬೆಳಕು ನೀಡುವುದರ ಜೊತೆಗೆ ಆರೋಗ್ಯಕ್ಕೂ ಹೆಚ್ಚು ಅನುಕೂಲಕರ ಎಂದು ವಾಸ್ತು ತಜ್ಞರ ಹೇಳುತ್ತಾರೆ.

ಗಾಳಿ, ಬೆಳಕು, ಆರೋಗ್ಯ ಮತ್ತು ಮನಶಾಂತಿ ಮೇಲೆ ವಾಸ್ತು ಪ್ರಭಾವ

ಇದೇ ರೀತಿ ಮನೆಯಲ್ಲಿ ಗಾಳಿ, ಬೆಳಕು ಸರಳವಾಗಿ ಬರುವಂತೆ ನಾವು ಮನೆಯನ್ನು ಕಟ್ಟುವುದು ಅಗತ್ಯ. ಇದರಿಂದ ತಾಜಾ ಗಾಳಿ ಒಳಬಂದು ನಮ್ಮ ಆರೋಗ್ಯವು ಚೆನ್ನಾಗಿರುತ್ತದೆ. ನಿದ್ರಿಸುವಾಗ ತಲೆಯನ್ನು ದಕ್ಷಿಣದ ಕಡೆ ಇಡುವುದರಿಂದ ದೇಹದ ಸಮತೋಲನ ಉತ್ತಮವಾಗುತ್ತದೆ ಎಂಬ ನಂಬಿಕೆಯು ಇದೆ. ಸ್ವಚ್ಛ ವಿಶಾಲ ಮತ್ತು ಬೆಳಕಿನ ಮನೆ ಮನಸ್ಸಿಗೆ ಶಾಂತಿ ನೀಡುತ್ತದೆ. ವಸ್ತುಗಳನ್ನು ಸರಿಯಾಗಿ ಜೋಡಿಸುವುದು ಒತ್ತಡವನ್ನು ಕಡಿಮೆ ಮಾಡುತ್ತದೆ. ಇಂದಿನ ಕಾಲದಲ್ಲಿ ಇದನ್ನು ಸ್ಪೇಸ್ ಡಿಸೈನ್ ಎಂದು ಕರೆಯಲಾಗುತ್ತದೆ.

ವಾಸ್ತು ಅನುಸರಿಸುವಲ್ಲಿ ಜಾಗ್ರತೆ

ಆದರೆ ವಾಸ್ತು ಅನುಸರಿಸುವುದು ವೈಯಕ್ತಿಕ ಆಯ್ಕೆ ಅದನ್ನು ಕುರುಡು ಮೂಢನಂಬಿಕೆಯಾಗಿಸಿಕೊಳ್ಳಬಾರದು. ವಾಸ್ತು ಹೆಸರಿನಲ್ಲಿ ಅತಿಯಾದ ಭಯ ಅಥವಾ ಅನಾವಶ್ಯಕ ಬದಲಾವಣೆ ಮಾಡುವುದು ಸರಿಯಲ್ಲ. ಮನೆಯ ಸೌಕರ್ಯವನ್ನು ಕಾಪಾಡಿಕೊಂಡೇ ವಾಸ್ತು ತತ್ವಗಳನ್ನು ಅನುಸರಿಸುವುದು ಮುಖ್ಯ. ಒಟ್ಟಿನಲ್ಲಿ ವಾಸ್ತು ಶಾಸ್ತ್ರದ ಮುಖ್ಯ ಉದ್ದೇಶ ಪ್ರಕೃತಿ ಸಂಪನ್ಮೂಲಗಳನ್ನು ಸರಿಯಾಗಿ ಬಳಸಿಕೊಂಡು ಆರೋಗ್ಯಕರ ಮತ್ತು ಸಮತೋಲನದ ಜೀವನ ನಡೆಸುವುದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+