Viral Videlo: 2 ಗಂಟೆ ಸ್ಟ್ಯಾಚ್ಯೂ ರೀತಿ ನಿಂತ ಯುವಕ ವಿಡಿಯೋ ವೈರಲ್, ಭಾರತಕ್ಕೂ ಬಂತಾ ಅಮೆರಿಕದ ಜಾಂಬಿ ಡ್ರಗ್ಸ್
Viral Videlo: ದೇಶದಲ್ಲಿ ಶುಕ್ರವಾರ ವಿಚಿತ್ರವಾದ ಘಟನೆಯೊಂದು ನಡೆದಿದ್ದು, ಭಾರೀ ವೈರಲ್ ಆಗುತ್ತಿದೆ. ಪ್ರಜ್ಞೆ ಕಳೆದುಕೊಂಡು ಬರೋಬ್ಬರಿ 2 ಗಂಟೆಗಳ ಕಾಲ ಡೆಲಿವರಿ ಬಾಯ್ ನಿಂತಲ್ಲೇ ನಿಂತಿರುವ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ದೃಶ್ಯವು ಹಾಲಿವುಡ್‌ನಲ್ಲಿನ ಜಾಂಬಿ ನಟನೆಯನ್ನು ನೆನಪಿಸುವಂತೆ ಇದೆ. ಅಲ್ಲದೆ ಇದು ಜಾಂಬಿ ಡ್ರಗ್ ಪ್ರಭಾವವೇ ಎಂದು ಚರ್ಚೆಶುರುವಾಗಿದೆ.
ಹೌದು ಭಾರತದ ಚಂಡೀಗಢದಲ್ಲಿ ಡೆಲಿವರಿ ಬಾಯ್‌ವೊಬ್ಬರ ವಿಚಿತ್ರ ವರ್ತನೆಯು ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ರಸ್ತೆ ಬದಿಯಲ್ಲಿ ನಿಂತಿದ್ದ ಯುವಕ ಜಾಗ ಬಿಟ್ಟು ಕದಲದೆ ನಿಂತಲೇ ಬರೋಬ್ಬರಿ 2 ಗಂಟೆಗೂ ಹೆಚ್ಚು ಅವಧಿ ಸ್ಟ್ಯಾಚ್ಯೂ ರೀತಿಯಲ್ಲಿ ನಿಂತಿರುವುದು ಇದೀಗ ವೈರಲ್ ಆಗಿದೆ. ಯುವಕ, ಹೀಗೆ ಚಲನೆ ಕಳೆದುಕೊಂಡವರಂತೆ ಎರಡು ಗಂಟೆಗಳ ಕಾಲ ನಿಂತಿದ್ದು, ಸಂಚಲನ ಸೃಷ್ಟಿ ಮಾಡಿದೆ. ಚಂಡೀಗಢದ ಸೆಕ್ಟರ್ 33Bನಲ್ಲಿ ಮಾರ್ಚ್ 24ರಂದು ಈ ಘಟನೆ ನಡೆದಿದ್ದು, ಇದೀಗ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ದಿನಬಳಕೆ ವಸ್ತುಗಳನ್ನು ಗ್ರಾಹಕರಿಗೆ ತಲುಪಿಸುವ ಇ-ಕಾಮರ್ಸ್ ವೇದಿಕೆ ಬ್ಲಿಂಕಿಟ್ ಸಂಸ್ಥೆಯಲ್ಲಿ ಕೆಲಸ ಮಾಡುವ ಯುವಕನ ವಿಡಿಯೋ ಇದಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸಿದೆ.

ಪೊಲೀಸರಿಂದ ವೈದ್ಯಕೀಯ ಪರೀಕ್ಷೆ
ಇನ್ನು ಈ ಯುವಕ ಈ ರೀತಿ ತಾಸುಗಟ್ಟಲೆ ನಿಂತಿರುವುದನ್ನು ನೋಡಿರುವ ಸ್ಥಳೀಯರು ಈ ಯುವಕನ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಬಂದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸುವ ವರೆಗೂ ಆ ಯುವಕ ನಿಂತಲ್ಲೇ ನಿಂತಿದ್ದ ಎನ್ನಲಾಗಿದೆ. ಆದರೆ ಡೆಲಿವರಿ ಬಾಯ್ ಈ ರೀತಿ ನಿಂತಲ್ಲೇ ನಿಂತಿದ್ದಕ್ಕೆ ಕಾರಣವೇನು ಎನ್ನುವುದು ಬಹಿರಂಗವಾಗಿಲ್ಲ.
ಜಾಂಬಿ ಡ್ರಗ್ಸ್ ಸೇವನೆ ಶಂಕೆ
ಇನ್ನು ಈ ಯುವಕ ಈ ರೀತಿ ನಿಂತಲ್ಲೇ ನಿಂತಿರುವುದಕ್ಕೆ ಜಾಂಬಿ ಡ್ರಗ್ಸ್ ಸೇವನೆಯೇ ಕಾರಣ ಎಂದು ಶಂಕಿಸಲಾಗಿದೆ. ಫಿಲಡೆಲ್ಫಿಯಾದ ಕೆನ್ಸಿಂಗ್ಟನ್ ಅವೆನ್ಯೂ ಪ್ರದೇಶದಲ್ಲಿ "ಫೆಂಟನಿಲ್" ಎನ್ನುವ ಅತ್ಯಂತ ಶಕ್ತಿಯ ನೋವು ನಿವಾರಕ ಔಷಧಿಯನ್ನು ದುರುಪಯೋಗ ಮಾಡಲಾಗುತ್ತಿದೆ. ಈ ಔಷಧಿ ಕೆಲವೊಮ್ಮೆ ಪ್ರಾಣಿಗಳಿಗೆ ಕೂಡ ನೀಡಲಾಗುತ್ತದೆ. ಇದನ್ನು ಇತರ ಮದ್ದುಗಳ ಜೊತೆ ಮಿಶ್ರಣ ಮಾಡಿ ಜನರಿಗೆ ಮಾರಲಾಗುತ್ತದೆ. ಇದನ್ನು "ಜಾಂಬಿ ಡ್ರಗ್" ಎಂದೂ ಕರೆಯುತ್ತಾರೆ. ಅದನ್ನು ಸೇವಿಸಿದವರೂ ಸಹ ಇದೇ ರೀತಿ ವರ್ತಿಸುತ್ತಾರೆ ಎನ್ನಲಾಗಿದೆ.
ಜಾಂಬಿ ಡ್ರಗ್ಸ್ ಬಳಕೆಯ ಪರಿಣಾಮಗಳೇನು
ಜಾಂಬಿ ಡ್ರಗ್ಸ್ ಸೇವನೆ ಮಾಡುವ ಸಂದರ್ಭದಲ್ಲಿ ಅಥವಾ ಇಂಜೆಕ್ಷನ್ ತೆಗೆದುಕೊಂಡರೆ ಗಾಢ ನಿದ್ರೆ, ಮಂಪರು, ನಿಶ್ಚಲತೆ ಹಾಗೂ ಖಾಲಿತನದ ಅನುಭವವಾಗುತ್ತದೆ. ಉಸಿರಾಟ ಮತ್ತು ಹೃದಯ ಬಡಿತ ಸಹ ಭಾರೀ ಏರಿಳಿತಕ್ಕೆ ಕಾರಣವಾಗುತ್ತದೆ. ಈ ವಸ್ತು ದೇಹದ ಒಳಗೆ ಹೋದ ಕೆಲವೇ ಕ್ಷಣಗಳಲ್ಲಿ ಪರಿಣಾಮ ಅಥವಾ ಅದರ ಲಕ್ಷಣಗಳು ಗಂಟೆಗಟ್ಟಲೆ ಹಾಗೆಯೇ ಉಳಿಯುತ್ತದೆ.
Chandigarh felt unsettling today.
— Rishu Raj Singh (@rishuraj_chd) March 24, 2026
In Sector 33B, a young man stood motionless for nearly 2-2.5 hours. A bidi in his mouth, eyes fixed, completely disconnected from everything around him.
People watched, then worried. Someone called the police. They came and took him away.… pic.twitter.com/R6IbecGySz
ಇದು ಈಗಾಗಲೇ ವಿವಿಧ ದೇಶಗಳಲ್ಲಿ ಸಂಭವಿಸುತ್ತಿರುವುದರಿಂದ ಜಾಂಬಿ ಡ್ರಗ್ಸ್ ಪ್ರಭಾವ ಭಾರತದ ಮೇಲೆಯೂ ಆಗುತ್ತಿದೆಯೇ ಎನ್ನುವ ಅನುಮಾನ ಶುರುವಾಗಿದೆ. ಜಾಂಬಿ ಡ್ರಗ್ಸ್ ಅನ್ನು ಪಶು ವೈದ್ಯಕೀಯ ಔಷಧಿಗೆ ಬಳಕೆ ಮಾಡಲಾಗುತ್ತದೆ. ಕ್ಸೈಲಾಜಿನ್ ಮೂಲತಃ ಕುದುರೆಗಳು ಮತ್ತು ಇತರ ದೊಡ್ಡ ಪ್ರಾಣಿಗಳಿಗೆ ನೋವು ನಿವಾರಕ ಮತ್ತು ನಿದ್ರಾಜನಕವಾಗಿ (Sedative) ಬಳಸುವ ಪಶುವೈದ್ಯಕೀಯ ಔಷಧವಾಗಿದೆ. ಇದನ್ನು ಅಮೆರಿಕ, ಯುರೋಪ್‌ನ ಹಲವೆಡೆ ಡ್ರಗ್ಸ್ ಮಾದರಿಯಲ್ಲಿ ಯುವಕರು ಸೇವಿಸಿ, ಪ್ರಜ್ಞಾಹೀನರಾಗಿ ನಶೆಯಲ್ಲಿ ತೇಲುತ್ತಿರುವ ವಿಚಿತ್ರ ವಿಡಿಯೋಗಳು ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ.












Click it and Unblock the Notifications