ಉದ್ಯೋಗ ಸಂದರ್ಶನ ಮಾಡಲು ಹೋದ CEOಗೆ ಬೆವರಿಳಿಸಿದ ಅಭ್ಯರ್ಥಿ, Viral ಆಯ್ತು ವಿಚಿತ್ರ ಕಥೆ
ನವದೆಹಲಿ: ಉದ್ಯೋಗಕ್ಕಾಗಿ ಸಂದರ್ಶನ ಎಂದರೆ ಸಾಮಾನ್ಯವಾಗಿ ಹೇಗಿರುತ್ತದೆ? ಕಂಪನಿಯ ಮುಖ್ಯಸ್ಥರು, ಮ್ಯಾನೇಜರ್ ಅಥವಾ ಹೆಚ್‌ಆರ್ ಅಧಿಕಾರಿಗಳು ಅಭ್ಯರ್ಥಿಗಳಿಗೆ ಪ್ರಶ್ನೆಗಳನ್ನು ಕೇಳುತ್ತಾರೆ, ಅಭ್ಯರ್ಥಿಗಳು ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಲು ಅದಕ್ಕೆ ಉತ್ತರಿಸುತ್ತಾರೆ. ಆದರೆ, ಇಲ್ಲೊಂದು ಸ್ಟಾರ್ಟ್ಅಪ್ ಕಂಪನಿಯ ಸಿಇಒ ತಮ್ಮ ಕಂಪನಿಗೆ ನೇಮಕಾತಿ ಮಾಡಿಕೊಳ್ಳಲು ಹೋಗಿ, ಉದ್ಯೋಗದ ನಿರೀಕ್ಷೆಯಲ್ಲಿದ್ದ ಅಭ್ಯರ್ಥಿಯಿಂದಲೇ ತಾವೇ ಸಂದರ್ಶನಕ್ಕೊಳಗಾದ ವಿಚಿತ್ರ ಘಟನೆಯೊಂದು ನಡೆದಿದೆ. ಈ ಕುರಿತು ಸಿಇಒ ಅವರೇ ರೆಡ್ಡಿಟ್ (Reddit) ಖಾತೆಯಲ್ಲಿ ಬರೆದುಕೊಂಡಿದ್ದು, ಈ ಪೋಸ್ಟ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ.
ಏನಿದು ಘಟನೆ?
ಝೆನಾರ್ಕ್ (Zenark) ಎಂಬ ಸ್ಟಾರ್ಟ್ಅಪ್ ಕಂಪನಿಯ ಸಿಇಒ ಆಗಿರುವ ವಜಾಹತ್ ಸಯೀದ್ (Wajahat Sayeed) ಎಂಬುವವರು ಈ ವಿಚಿತ್ರ ಅನುಭವವನ್ನು ಹಂಚಿಕೊಂಡಿದ್ದಾರೆ. ಲಿಂಕ್ಡ್‌ಇನ್ ಮೂಲಕ ಹಿರಿಯ ಶಿಕ್ಷಣ ತಜ್ಞ, ಪ್ರೊಫೆಸರ್ ಮತ್ತು ಡೀನ್ ಆಗಿದ್ದ ವ್ಯಕ್ತಿಯೊಬ್ಬರು ತಮ್ಮ ಸ್ಟಾರ್ಟ್ಅಪ್‌ನ ಉನ್ನತ ಹುದ್ದೆಯೊಂದಕ್ಕೆ ಅರ್ಜಿ ಸಲ್ಲಿಸಿದ್ದರು. ಆರಂಭದಲ್ಲಿ ಆನ್‌ಲೈನ್ ಸಂದೇಶಗಳ ಮೂಲಕ ನಡೆದ ಮಾತುಕತೆಗಳು ಅತ್ಯಂತ ಸಕಾರಾತ್ಮಕವಾಗಿದ್ದವು. ಆ ಅಭ್ಯರ್ಥಿಯು ಕೆಲಸದ ಬಗ್ಗೆ ಅತೀವ ಆಸಕ್ತಿ ತೋರಿದ್ದರು ಮತ್ತು ತಾವು ಈ ಹುದ್ದೆಗೆ ಹೇಗೆ ಸೂಕ್ತ ಎಂಬುದನ್ನು ಮನವರಿಕೆ ಮಾಡಿಕೊಟ್ಟಿದ್ದರು. ಹೀಗಾಗಿ, ಮುಂದಿನ ಹಂತದ ಚರ್ಚೆಗಾಗಿ ವಜಾಹತ್ ಸಯೀದ್ ಅವರು ವಿಡಿಯೋ ಕರೆ ಶೆಡ್ಯೂಲ್ ಮಾಡಿದ್ದರು.

ಸಂದರ್ಶನವೋ ಅಥವಾ ವಿಚಾರಣೆಯೋ?
ಕರೆ ಆರಂಭವಾದ ತಕ್ಷಣವೇ ಪರಿಸ್ಥಿತಿ ಸಂಪೂರ್ಣವಾಗಿ ಬದಲಾಯಿತು. ಅಭ್ಯರ್ಥಿಯು ತಮ್ಮ ಅನುಭವದ ಬಗ್ಗೆ ವಿವರಿಸುವ ಬದಲು, ನೇರವಾಗಿ ಸಿಇಒ ಅವರನ್ನೇ ಪ್ರಶ್ನಿಸಲು ಶುರು ಮಾಡಿದರು. ಸಿಇಒ ವಜಾಹತ್ ಅವರ ಶಿಕ್ಷಣದ ಹಿನ್ನೆಲೆ, ಅವರ ಎಂಬಿಬಿಎಸ್ ಪದವಿಯ ಸ್ವರೂಪ, ಕಂಪನಿಯಲ್ಲಿರುವ ಒಟ್ಟು ಸಿಬ್ಬಂದಿ ಸಂಖ್ಯೆ, ಕಂಪನಿಯ ಅಧಿಕೃತ ನೋಂದಣಿ ಪ್ರಕ್ರಿಯೆ ಮತ್ತು ಸ್ಟಾರ್ಟ್ಅಪ್‌ಗೆ ಸ್ವಂತ ವೆಬ್‌ಸೈಟ್ ಇದೆಯೇ ಎಂಬಂತಹ ಪ್ರಶ್ನೆಗಳ ಸುರಿಮಳೆಯನ್ನೇ ಹರಿಸಿದರು. "ಇದು ಉದ್ಯೋಗದ ಸಂದರ್ಶನ ಎಂಬಂತೆ ನನಗೆ ಅನಿಸಲೇ ಇಲ್ಲ. ಬದಲಾಗಿ ಯಾರೋ ನನ್ನನ್ನು ಪೊಲೀಸ್ ವಿಚಾರಣೆಗೆ ಒಳಪಡಿಸಿದಂತೆ, ಅಥವಾ ಕಾಲೇಜಿನಲ್ಲಿ ನಾನು ವೈವಾ (Viva) ಪರೀಕ್ಷೆ ಎದುರಿಸುತ್ತಿರುವಂತೆ ಭಾಸವಾಯಿತು," ಎಂದು ಸಿಇಒ ಬೇಸರದಿಂದ ಬರೆದುಕೊಂಡಿದ್ದಾರೆ.
ಅಭ್ಯರ್ಥಿಯ ಈ ಪ್ರಶ್ನೆಗಳಿಗೆ ಉತ್ತರಿಸುತ್ತಾ ಹೋದ ಸಿಇಒ ಅವರಿಗೆ, ಅಭ್ಯರ್ಥಿಯ ಹಿನ್ನೆಲೆ, ಕೆಲಸದ ಮೇಲಿನ ಆಸಕ್ತಿ ಅಥವಾ ಅವರು ಈ ಹುದ್ದೆಗೆ ಏಕೆ ಅರ್ಜಿ ಸಲ್ಲಿಸಿದ್ದಾರೆ ಎಂಬುದರ ಬಗ್ಗೆ ಒಂದೇ ಒಂದು ಪ್ರಶ್ನೆ ಕೇಳಲೂ ಅವಕಾಶ ಸಿಗಲಿಲ್ಲ. ವಜಾಹತ್ ಅವರು ತಮ್ಮ ಕಂಪನಿಯ ಗುರಿ (Vision) ಮತ್ತು ಕೆಲಸದ ಸ್ವರೂಪದ ಬಗ್ಗೆ ವಿವರಿಸುವ ಮುನ್ನವೇ, ತನಗೆ ಈ ಕೆಲಸದಲ್ಲಿ ಆಸಕ್ತಿ ಇಲ್ಲ ಎಂದು ಹೇಳಿ ಅಭ್ಯರ್ಥಿ ಧಿಡೀರ್ ಆಗಿ ಕರೆಯನ್ನು ಕಟ್ ಮಾಡಿದರು.
ಅಭ್ಯರ್ಥಿ ಕೆಲಸ ಬೇಡ ಎಂದಿದ್ದಕ್ಕೆ ತಮಗೆ ಯಾವುದೇ ಬೇಸರವಿಲ್ಲ. ಆದರೆ, ಅವರು ನಡೆದುಕೊಂಡ ರೀತಿ, ಅವರ ವರ್ತನೆ ತಮಗೆ ಅಚ್ಚರಿ ಮೂಡಿಸಿದೆ ಎಂದು ಸಿಇಒ ಹೇಳಿದ್ದಾರೆ. ವೃತ್ತಿಪರ ಜಗತ್ತಿನಲ್ಲಿ ಇಂದಿಗೂ ಕೆಲವರು ತಮ್ಮ ವಯಸ್ಸು, ಹುದ್ದೆ ಮತ್ತು ಶ್ರೇಣಿಯನ್ನು ಮುಂದಿಟ್ಟುಕೊಂಡು ಇತರರ ಮೇಲೆ ದಬ್ಬಾಳಿಕೆ ಮಾಡಲು, ಮೇಲುಗೈ ಸಾಧಿಸಲು ಪ್ರಯತ್ನಿಸುತ್ತಾರೆಯೇ ಎಂಬ ದೊಡ್ಡ ಪ್ರಶ್ನೆ ತಮ್ಮನ್ನು ಕಾಡುತ್ತಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ. "ನನಗೆ ಬೇಸರವಾಗಿದ್ದು ಅವರು ಕೆಲಸ ತಿರಸ್ಕರಿಸಿದ್ದಕ್ಕಲ್ಲ, ಬದಲಾಗಿ ಅವರ ಆಟಿಟ್ಯೂಡ್‌ನಿಂದ (Attitude)" ಎಂದು ವಜಾಹತ್ ತಮ್ಮ ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದಾರೆ.
ನೆಟ್ಟಿಗರ ಆಕ್ರೋಶ
ಸಿಇಒ ಅವರ ಈ ಪೋಸ್ಟ್‌ಗೆ ರೆಡ್ಡಿಟ್ ಬಳಕೆದಾರರು ವ್ಯಾಪಕವಾಗಿ ಪ್ರತಿಕ್ರಿಯಿಸಿದ್ದಾರೆ. ಹೆಚ್ಚಿನವರು ಅಭ್ಯರ್ಥಿಯ ಅಹಂಕಾರದ ವರ್ತನೆಯನ್ನು ತೀವ್ರವಾಗಿ ಟೀಕಿಸಿದ್ದಾರೆ. "ಇಂತಹವರ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಬೇಡಿ. ಕೆಲವೊಮ್ಮೆ ಜನರು ತಮ್ಮ ಅನುಭವ ಮತ್ತು ವಯಸ್ಸು ಎದುರಿನ ವ್ಯಕ್ತಿಗಿಂತ ತಮಗೆ ಹೆಚ್ಚಿನ ಅಧಿಕಾರ ನೀಡುತ್ತದೆ ಎಂದು ಭ್ರಮಿಸಿರುತ್ತಾರೆ" ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.
ಮತ್ತೊಬ್ಬ ಬಳಕೆದಾರ, "ಆ ವ್ಯಕ್ತಿ ಜೀವನದಲ್ಲಿ ಕಹಿಯನ್ನು ಅನುಭವಿಸಿರಬಹುದು ಮತ್ತು ನಿಮ್ಮನ್ನು ನೋಡಿ ಅಸೂಯೆ ಪಡುತ್ತಿರಬಹುದು" ಎಂದಿದ್ದಾರೆ. ಇನ್ನೊಬ್ಬರು ಸಿಇಒಗೆ ಸಲಹೆ ನೀಡುತ್ತಾ, "ನೀವೇ ಪರಿಸ್ಥಿತಿಯ ನಿಯಂತ್ರಣ ತೆಗೆದುಕೊಳ್ಳಬೇಕಿತ್ತು. ಮಧ್ಯಪ್ರವೇಶಿಸಿ, ಇದು ಯಾರ ಸಂದರ್ಶನ ಎಂಬುದನ್ನು ಅವರಿಗೆ ನೆನಪಿಸಬೇಕಿತ್ತು. ನೀವು ಅಲ್ಲಿರುವುದು ಅವರ ಸಾಮರ್ಥ್ಯವನ್ನು ವಿಶ್ಲೇಷಿಸಲು ಹೊರತು, ಸಾಬೀತುಪಡಿಸಲು ಅಲ್ಲ" ಎಂದು ಅಭಿಪ್ರಾಯಪಟ್ಟಿದ್ದಾರೆ.
ಕೇವಲ ವಯಸ್ಸಿನಲ್ಲಿ ಹಿರಿಯರು ಅಥವಾ ಅನುಭವ ಹೆಚ್ಚಿದೆ ಎಂಬ ಒಂದೇ ಕಾರಣಕ್ಕೆ ಯುವ ಉದ್ಯಮಿಗಳನ್ನು ಕೀಳಾಗಿ ಕಾಣುವುದು ಸರಿಯಲ್ಲ ಎನ್ನುವುದು ಹಲವರ ವಾದವಾಗಿದೆ. ಒಟ್ಟಿನಲ್ಲಿ ಈ ಘಟನೆಯು ಕಾರ್ಪೊರೇಟ್ ವಲಯದಲ್ಲಿ ವೃತ್ತಿಪರ ನಡವಳಿಕೆ ಹೇಗಿರಬೇಕು ಎಂಬ ಬಗ್ಗೆ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ.
-
ರಾಜ್ಯದ ಕಳೆದ 3 ವರ್ಷಗಳ ದ್ವಿತೀಯ PUC ಫಲಿತಾಂಶದ ಹೈಲೈಟ್ಸ್; ಮೇಲುಗೈ ಸಾಧಿಸಿದ ಜಿಲ್ಲೆಗಳು ಯಾವುವು? ಇಲ್ಲಿದೆ ಮಾಹಿತಿ -
April 9 Horoscope: 12 ರಾಶಿಗಳಿಗೆ ಇಂದು ಸಂತೋಷ, ಸವಾಲು ಮತ್ತು ಅವಕಾಶಗಳ ಮಿಶ್ರ ಫಲ -
Viral: ಬೆಂಗಳೂರಿಗೆ ಕಾಲಿಟ್ಟಿತೇ ಡೇಂಜರಸ್ 'ಜಾಂಬಿ ಡ್ರಗ್'?: ಯುವಕನ ವಿಡಿಯೋ ನೋಡಿ ಬೆಚ್ಚಿಬಿದ್ದ ಸಿಲಿಕಾನ್ ಸಿಟಿ ಜನ -
PUC Results: 2026ರ ದ್ವಿತೀಯ PUC ಪರೀಕ್ಷೆ ಫಲಿತಾಂಶ ಪ್ರಕಟ, ಇವರೇ ನೋಡಿ ಟಾಪರ್ -
Dhurandhar-2 OTT: ನೆಟ್ಫ್ಲಿಕ್ಸ್ ಅಲ್ಲ, ಈ ಒಟಿಟಿಯಲ್ಲಿ 'ಧರಂಧರ-2' ಅಬ್ಬರ, ಯಾವಾಗ? -
Ragi Price Today: ಕರ್ನಾಟಕದ ಮಾರುಕಟ್ಟೆಗಳಲ್ಲಿ ಇಂದಿನ "ರಾಗಿ' ಬೆಲೆ ಎಷ್ಟಿದೆ? ಲೇಟೆಸ್ಟ್ ಅಪ್ಡೇಟ್ -
Rain in Karnataka: ಕರ್ನಾಟಕದ ಕರಾವಳಿಯಲ್ಲಿ ಭಾರೀ ಬಿಸಿಲು; ಬೆಂಗಳೂರು ಸೇರಿ ಈ ಭಾಗಗಳಲ್ಲಿ ಮಳೆ: ಐಎಂಡಿ -
Election Commission: ಚುನಾವಣೆ ಸಮಯದಲ್ಲೇ ಭಾರತೀಯ ಚುನಾವಣಾ ಆಯೋಗದ ಟ್ವೀಟ್ ಎಡವಟ್ಟು, ಬಿಜೆಪಿ ಪರ ಎಂದ ವಿರೋಧ ಪಕ್ಷಗಳು -
Dhurandhar 2: ದುರಂಧರ್ 2 ಸಿನಿಮಾ: ಬಾಕ್ಸ್ ಆಫೀಸ್ನಲ್ಲಿ 1,000 ಕೋಟಿ ದಾಖಲೆಯ ನಡುವೆ ಹೊಸ ಸಂಕಷ್ಟ -
Zombis Drug: ಬೆಂಗಳೂರಲ್ಲಿ ಜಾಂಬಿ ಡ್ರಗ್ಸ್ ಸೇವಿಸಿ ಯುವಕನ ವಿಚಿತ್ರ ವರ್ತನೆ: ನಟ ದುನಿಯಾ ವಿಜಯ್ ವಿಡಿಯೋ ವೈರಲ್ -
Assembly Elections 2026: ಕೇರಳಂ, ಅಸ್ಸಾಂ, ಪುದುಚೇರಿ ವಿಧಾನಸಭೆ ಚುನಾವಣೆ ಮತದಾನ ಪ್ರಾರಂಭ -
Karnataka 2nd Puc Results 2026: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ; ರಾಜ್ಯದಲ್ಲಿ ಯಾವ ಜಿಲ್ಲೆ ಎಷ್ಟನೇ ಸ್ಥಾನ?












Click it and Unblock the Notifications