ಇರಾನ್ನಿನ ಮೇಲೆ ಯುಎಸ್ ನಿರ್ಬಂಧ, ಭಾರತದಲ್ಲಿ ತೈಲ ಬೆಲೆ ಏರಿಕೆ
ಬೆಂಗಳೂರು, ಜುಲೈ 09: ಸತತವಾಗಿ ಇಂಧನ ದರ ಇಳಿಕೆ ಕಂಡಿದ್ದ ಗ್ರಾಹಕರಿಗೆ ಈಗ ತೈಲ ಬೆಲೆ ಏರಿಕೆ ಬಿಸಿ ತಟ್ಟಿದೆ. ಪೆಟ್ರೋಲ್-ಡಿಸೇಲ್ ಬೆಲೆಯಲ್ಲಿ ಸತತ ಐದನೇ ದಿನವೂ ಏರಿಕೆಯಾಗಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 76.36 ರೂಪಾಯಿ ನಷ್ಟಿತ್ತು. ಡಿಸೇಲ್ ಬೆಲೆ 68 ರೂಪಾಯಿಯಾಗಿದೆ.ಭಾನುವಾರದಂದು ಪ್ರತಿ ಲೀಟರ್ ಪೆಟ್ರೋಲ್ ಬೆಲೆ 76.13 ರೂಪಾಯಿನಷ್ಟಿತ್ತು.
ಕಳೆದ ಐದು ದಿನಗಳಿಂದ ಪೆಟ್ರೋಲ್ ಬೆಲೆಯಲ್ಲಿ ಸುಮಾರು 81 ಪೈಸೆಯಷ್ಟು ಏರಿಕೆಯಾಗಿದೆ. ನಾಲ್ಕು ದಿನಗಳ ಹಿಂದೆ ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 75.55 ರೂಪಾಯಿಯಿತ್ತು. ಡಿಸೇಲ್ ಬೆಲೆ 67.86 ರೂಪಾಯಿಯಿತ್ತು. ಕೊಲ್ಕತ್ತಾದಲ್ಲಿ ಇಂದಿನ ಪೆಟ್ರೋಲ್ ಬೆಲೆ 79 ರೂಪಾಯಿಯಾದ್ರೆ ಡಿಸೇಲ್ ಬೆಲೆ 70 ರೂಪಾಯಿ 62 ಪೈಸೆಯಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಏರಿಕೆಯಾಗಿದೆ. ಇರಾನ್ ಮೇಲೆ ಯುಎಸ್ ಹೇರಿರುವ ನಿರ್ಬಂಧದಿಂದ ಪೆಟ್ರೋಲ್-ಡಿಸೇಲ್ ಬೆಲೆ ಏರಿಕೆಯಾಗುತ್ತಿದೆ. Organisation of Petroleum Exporting Countries (ಒಪೆಕ್) ಪ್ರತಿ ದಿನ 1 ಮಿಲಿಯನ್ ಬ್ಯಾರಲ್ ತೈಲ ಉತ್ಪಾದನೆ ನಿರ್ಧಾರ ಕೈಗೊಂಡಿದೆ. ಇದರಿಂದ ಇಂಧನ ಬೆಲೆಯಲ್ಲಿ ಇಳಿಕೆಯಾಗಲಿದೆ ಎಂಬ ನಿರೀಕ್ಷೆಯಿತ್ತು. ಆದರೆ, ಭಾರತ ಹಾಗೂ ಚೀನಾವು ಇರಾನ್ನಿನಿಂದ ತೈಲ ಆಮದು ಮಾಡಿಕೊಳ್ಳದಂತೆ ಯುಎಸ್ ನಿರ್ಬಂಧ ಹೇರಿದೆ.












Click it and Unblock the Notifications