ಕಚ್ಚಾ ತೈಲ ಬೆಲೆ ಏರಿಕೆ, ಇಂಧನ ದರ ಸತತ 5ನೇ ದಿನವೂ ಹೆಚ್ಚಳ

ನವದೆಹಲಿ, ಜುಲೈ 01: ಜೂನ್ ತಿಂಗಳ ಕೊನೆ ವಾರದಲ್ಲಿ ಬಹುತೇಕ ಪ್ರತಿ ದಿನ ಅಲ್ಪ ಪ್ರಮಾಣದಲ್ಲಿ ಏರಿಕೆ ಕಂಡಿದ್ದ ಇಂಧನ ದರವು ಜುಲೈ ತಿಂಗಳ ಮೊದಲ ದಿನವೂ ಏರಿಕೆಯಾಗಿದೆ. ಜಾಗತಿಕವಾಗಿ ಕಚ್ಚಾ ತೈಲ ಬೆಲೆಯಲ್ಲಿ ಏರಿಕೆಯಾಗಿದ್ದು, ಪೆಟ್ರೋಲ್-ಡಿಸೇಲ್ ಬೆಲೆಯಲ್ಲಿ ಅಲ್ಪಪ್ರಮಾಣದಲ್ಲಿ ಏರಿಕೆ ಮುಂದುವರೆದಿದೆ. ಸತತ ಐದನೇ ದಿನ ತೈಲ ಬೆಲೆ, ಏರಿಕೆ ಮುಖ ಕಂಡಿದೆ.

ದೆಹಲಿಯಲ್ಲಿ ಪೆಟ್ರೋಲ್ ಬೆಲೆ 7 ಪೈಸೆ ಹಾಗೂ ಡೀಸೆಲ್ ಬೆಲೆಯಲ್ಲಿ 8 ಪೈಸೆ ಏರಿಕೆ ಕಂಡಿದೆ. ಒಟ್ಟಾರೆ, ಕಳೆದ ಐದು ದಿನಗಳಿಂದ ಪೆಟ್ರೋಲ್ ಬೆಲೆ ಒಟ್ಟು 39 ಪೈಸೆ ಹಾಗೂ ಡಿಸೇಲ್ ಬೆಲೆ 37 ಪೈಸೆ ಹೆಚ್ಚಾಗಿದೆ.

ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಸೋಮವಾರದಂದು 1 ಬ್ಯಾರೆಲ್ ಗೆ 65.86 ಯುಎಸ್ ಡಾಲರ್ ನಷ್ಟಿತ್ತು. ಸೌದಿ ಅರೇಬಿಯಾ, ರಷ್ಯಾ, ಇರಾಕ್ ನಿಂದ ತೈಲ ಪೂರೈಕೆ ಕಡಿತ ಮುಂದುವರೆದಿದೆ.

ಏಪ್ರಿಲ್ ಹಾಗೂ ಮೇ

ಏಪ್ರಿಲ್ ಹಾಗೂ ಮೇ

ಏಪ್ರಿಲ್ ಹಾಗೂ ಮೇ ತಿಂಗಳಿನಲ್ಲಿ ಸರ್ಕಾರಿ ಸ್ವಾಮ್ಯದ ಮೂರು ತೈಲ ಕಂಪನಿಗಳು ಪೆಟ್ರೋಲ್, ಡೀಸೆಲ್ ದರದಲ್ಲಿ ಯಾವುದೇ ಏರಿಕೆ ಮಾಡಿರಲಿಲ್ಲ, ಮೇ 20ರ ನಂತರ ಸತತ ಏರಿಕೆ ಮಾಡಲಾಯಿತು.

ಇರಾನ್ ಮೇಲೆ ಅಮೆರಿಕ

ಇರಾನ್ ಮೇಲೆ ಅಮೆರಿಕ

ಇರಾನ್ ಮೇಲೆ ಅಮೆರಿಕ ಹೇರುವ ನಿರ್ಬಂಧದ ಮೇಲೆ ಭಾರತ, ಚೀನಾ, ದಕ್ಷಿಣ ಕೊರಿಯಾ, ಜಪಾನ್, ಟರ್ಕಿ, ಇಟಲಿ, ಯುನೈಟೆಡ್ ಅರಬ್ ಎಮಿರೇಟ್ಸ್ ಹಾಗೂ ತೈವಾನ್ ದೇಶಗಳ ಭವಿಷ್ಯ ನಿಂತಿದೆ. ಹೀಗಾಗಿ, ಪೂರೈಕೆ ಕೊರತೆಯಿಂದ ಇಂಧನ ಬೆಲೆ ಏರಿಕೆ ಅನಿವಾರ್ಯ ಎಂದು ಇಂಡಿಯನ್ ಆಯಿಲ್ ಕಾರ್ಪೋರೇಷನ್ ಹೇಳಿದೆ

ದೆಹಲಿ

ದೆಹಲಿ

ದೆಹಲಿಯಲ್ಲಿ ಲೀಟರ್ ಪೆಟ್ರೋಲ್ ಬೆಲೆ ಇಂದು ಲೀಟರ್ ಗೆ 70 ರೂಪಾಯಿ 44 ಪೈಸೆಯಾಗಿದೆ. ಡಿಸೇಲ್ ಬೆಲೆ ಲೀಟರ್ ಗೆ 64 ರೂಪಾಯಿ 27 ಪೈಸೆಯಾಗಿದೆ.

ಕರ್ನಾಟಕ

ಕರ್ನಾಟಕ

ಕರ್ನಾಟಕದಲ್ಲಿ ಲೀಟರ್ ಪೆಟ್ರೋಲ್ ಬೆಲೆ 5 ಪೈಸೆ ಏರಿಕೆ ಕಂಡು 72 ರೂಪಾಯಿ 79 ಪೈಸೆಯಾಗಿದೆ. ಡಿಸೇಲ್ ಬೆಲೆ 6 ಪೈಸೆ ಏರಿಕೆ ಕಂಡು ಲೀಟರ್ ಗೆ 66 ರೂಪಾಯಿ 41 ಪೈಸೆಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+