ಫ್ಲಿಪ್ ಕಾರ್ಟ್ ನಲ್ಲಿ ಬಿಗ್ ಬಿಲಿಯನ್ ಡೇ ಆಫರ್ ಗಳ ಸುರಿಮಳೆ
ಬೆಂಗಳೂರು, ಸೆಪ್ಟೆಂಬರ್ 20 : ಹಬ್ಬಗಳು ಬಂತಂದ್ರೆ ಸಾಕು ಆನ್ ಲೈನ್ ಗಳಲ್ಲಿ ಶಾಪಿಂಗ್ ಮಾಡಲು ಡಿಸ್ಕೌಂಟ್ ಗಳಿಗೆ ಬರವೇ ಇಲ್ಲ. ಇದೀಗ ದಸರಾ ಹಬ್ಬದ ಹಿನ್ನಲೆಯಲ್ಲಿ ಫ್ಲಿಪ್ ಕಾರ್ಟ್ ಬಿಗ್ ಬಿಲಿಯನ್ ಡೇ ಹಾಗೂ ಅಮೆಜಾನ್ ಗ್ರೇಟ್ ಇಂಡಿಯನ್ ಸೇಲ್ ಹೀಗೆ ಒಂದಕ್ಕಿಂತ ಒಂದು ಇ-ಕಾಮರ್ಸ್ ಗಳು ಗ್ರಾಹಕರಿಗೆ ಬಂಪರ್ ಕೊಡುಗೆಗಳನ್ನು ನೀಡುತ್ತಿವೆ.
ಅಂತದ್ದೆ ಒಂದು ಬಿಗ್ ಬಿಲಿಯನ್ ಡೇ ಸೇಲ್ ಈಗ ನಿಮ್ಮ ಕಣ್ಣೇದುರಿಗೆ ಫ್ಲಿಪ್ ಕಾರ್ಟ್ ಮತ್ತೊಮ್ಮೆ ಸಾದರಪಡಿಸುತ್ತಿದೆ. ಸೆಪ್ಟಂಬರ್ 20 ರಿಂದ 24 ವರೆಗೆ ಫ್ಲಿಪ್ ಕಾರ್ಟ್ 'ಬಿಗ್ ಬಿಲಿಯನ್ ಡೇ ಸೇಲ್' ಆರಂಭವಾಗುತ್ತಿದೆ. ಫ್ಯಾಷನ್ ವಸ್ತುಗಳ ಖರೀದಿ, ಗೃಹೋಪಯೋಗಿ ವಸ್ತುಗಳ ಖರೀದಿ ಸೇರಿದಂತೆ ಇನ್ನಿತರ ಉಪಯುಕ್ತ ವಸ್ತುಗಳನ್ನು ಖರೀದಿಸಿ ಅಪರಿಮಿತ ಕ್ಯಾಶ್ ಬ್ಯಾಕ್ ಮತ್ತು ರಿಯಾಯಿತಿ ಲಾಭವನ್ನು ನಿಮ್ಮದಾಗಿಸಿಕೊಳ್ಳಬಹುದು.

ಎಸ್ಬಿಐ ಕಾರ್ಡ್ ಮೇಲೆ ಡಿಸ್ಕೌಂಟ್
ಎಸ್ಬಿಐ ಬ್ಯಾಂಕಿನ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಗಳ ಮೇಲೆ ಫ್ಲಿಪ್ಕಾರ್ಟ್ ಹೆಚ್ಚುವರಿ ರಿಯಾಯಿತಿ ನೀಡುತ್ತಿದೆ. ಕನಿಷ್ಠ 5999 ರು. ಬೆಲೆಯ ವಸ್ತುಗಳ ಖರೀದಿಗೆ ಮಾತ್ರ ಇದು ಅನ್ವಯವಾಗುತ್ತದೆ. ಒಬ್ಬರು ಗರಿಷ್ಠ ರಿಯಾಯಿತಿ 1500 ರು.ವರೆಗೆ ಪಡೆಯಬಹುದು. ಗಿಪ್ಟ್ ವೋಚರ್ ಗಳಿಗೆ ಇದು ಅನ್ವಯಿಸುವುದಿಲ್ಲ.
ಅಮೆಜಾನ್ ಗ್ರೇಟ್ ಇಂಡಿಯನ್ ಸೇಲ್ ನಲ್ಲಿ ಶೇ 70ರಷ್ಟು ರಿಯಾಯಿತಿ
ಇ-ಕಾಮರ್ಸ್ ದೈತ್ಯ 'ಅಮೆಜಾನ್''ಗ್ರೇಟ್ ಇಂಡಿಯನ್ ಫೆಸ್ಟಿವಲ್'ಗೆ 21 ರಿಂದ 24 ನೇ ಸೆಪ್ಟೆಂಬರ್ 2017 ರ ನಡುವೆ ನಂಬಲಾಗದ ಕೊಡುಗೆಗಳನ್ನು ನೀಡಿದೆ.
ಆದರೆ, ಅಮೆಜಾನ್ ಪ್ರಧಾನ ಸದಸ್ಯರು ಮಾತ್ರ ಒಂದು ದಿನ ಮೊದಲೇ ಅಂದರೆ ಸೆ.20ರ 12ಗಂಟೆಯಿಂದ ಗ್ರೇಟ್ ಇಂಡಿಯನ್ ಫೆಸ್ಟಿವಲ್' ಆಫರ್ ಗಳನ್ನು ನೀಡಿದೆ. ಅಮೆಜಾನ್ ಸದಸ್ಯರು ಇದರ ಸದುಪಯೋಗ ಪಡೆದುಕೊಳ್ಳಬಹುದು.
HDFC Bank Offer: Get additional 10% discount on HDFC bank debit & credit cards.
AmazonPay Offer: Load balance and get 10% back up to Rs. 500. Other Offers: No Cost EMIs and instant discounts on exchange offer with doorstep pickup are available.












Click it and Unblock the Notifications