ಎಟಿಎಂ ಉಚಿತ ವಹಿವಾಟಿಗೆ ಅರ್ ಬಿಐನಿಂದ ಕೊಕ್ಕೆ?

ಆಟೋ ಮ್ಯಾಟಿಕ್ ಟೆಲ್ಲರ್ ಮಿಷನ್ ಎನ್ನುವುದಕ್ಕಿಂತ ಏನಿ ಟೈಮ್ ಮನಿ ಎಂದೇ ಚಿರಪರಿಚಿತ ಹಾಗೂ ಬಹು ಜನಪ್ರಿಯ ಬ್ಯಾಂಕ್ ಸೌಲಭ್ಯವಾಗಿದೆ. ಈಗ ಎಷ್ಟು ಬಾರಿ ಎಟಿಎಂ ಬಳಸಿ ಹಣ ವಿಥ್ ಡ್ರಾ ಬೇಕು ಎಂಬುದರ ಬಗ್ಗೆ ಚರ್ಚೆ ಆರಂಭವಾಗಿದ್ದು, ಹಣ ವಿಥ್ ಡ್ರಾ ಪ್ರಮಾಣ ತಗ್ಗಿಸುವಂತೆ ಬ್ಯಾಂಕ್ ಸಂಘಟನೆಗಳು ಮನವಿ ಮಾಡಿರುವ ಹಿನ್ನೆಲೆಯಲ್ಲಿ ಆರ್ ಬಿಐ ಶೀಘ್ರದಲ್ಲೇ ತನ್ನ ನಿರ್ಧಾರ ಪ್ರಕಟಿಸಲಿದೆ.
ಭಾರತೀಯ ಬ್ಯಾಂಕ್ ಒಕ್ಕೂಟ(IBA) ಶಿಫಾರಸ್ಸನ್ನು ಪರಿಗಣಿಸಿ ಮುಂದಿನ ನಿರ್ಧಾರ ಪ್ರಕಟಿಸಲಾಗುವುದು ಎಂದು ಆರ್ ಬಿಐ ಉಪಾಧ್ಯಕ್ಷ ಎಚ್ ಆರ್ ಖಾನ್ ಹೇಳಿದ್ದಾರೆ. ನಿಮ್ಮದೇ ಬ್ಯಾಂಕಿನ ಎಟಿಎಂ ಬಳಕೆಯಾಗಲಿ, ಅಥವಾ ತಿಂಗಳಿಗೆ ಐದು ಬಾರಿ ಬಳಸುವ ಮಾಡುವ ಬ್ಯಾಂಕ್ ಎಟಿಎಂ ಬಳಸುವುದಕ್ಕೆ ಕಡಿವಾಣ ಬೀಳುವ ಸಾಧ್ಯತೆಯಿದೆ.
ಬೆಂಗಳೂರಿನಲ್ಲಿ ಬ್ಯಾಂಕ್ ಉದ್ಯೋಗಿ ಜ್ಯೋತಿ ಉದಯ್ ಅವರ ಮೇಲೆ ಎಟಿಎಂನಲ್ಲಿ ನಡೆದ ಹಲ್ಲೆ ಪ್ರಕರಣದ ನಂತರ ಸುರಕ್ಷಿತ ನಿಯಮಗಳನ್ನು ಬಿಗಿಗೊಳಿಸಲಾಗುತ್ತಿದ್ದು, ಗ್ರಾಹಕರು ಕೂಡಾ ಸಹಕರಿಸಬೇಕಾಗುತ್ತದೆ ಎಂದು ಬ್ಯಾಂಕ್ ಒಕ್ಕೂಟ ಹೇಳಿದೆ.
ನಮ್ಮಲ್ಲಿರುವ ಬ್ಯಾಲೆನ್ಸ್ ಕಡಿಮೆಯಿದ್ದು, ಬೃಹತ್ ಸಂಖ್ಯೆಯಲ್ಲಿರುವ ಗ್ರಾಹಕರನ್ನು ನಿಭಾಯಿಸುವುದು ಕಷ್ಟಕರವಾಗಿದೆ.ಪ್ರತಿ ಬಾರಿ ಗ್ರಾಹಕರೊಬ್ಬರು ಎಟಿಎಂಗೆ ಹೋಗಿ ಎಷ್ಟೇ ವಹಿವಾಟು ನಡೆಸಲಿ ಬ್ಯಾಂಕಿಗೆ ತೆರಿಗೆ ಸೇರಿಸಿ ಸುಮಾರು 17 ರು ಖರ್ಚು ಬೀಳಲಿದೆ. ಎಂದು ಎಸ್ ಬಿಐ ಚೇರ್ಮನ್ ಅರುಂಧತಿ ಭಟ್ಟಾಚಾರ್ಯ ಹೇಳಿದ್ದಾರೆ.
ಒಂದು ಬ್ಯಾಂಕಿನ ಗ್ರಾಹಕರು ಬೇರೊಂದು ಎಟಿಎಂನಲ್ಲಿ ದುಡ್ಡು ಡ್ರಾ ಮಾಡಿದರೆ ಬ್ಯಾಂಕಿನವರು ಇಷ್ಟು ಹಣವನ್ನ ಶುಲ್ಕವಾಗಿ ಪಾವತಿಸಬೇಕಾಗುತ್ತದೆ. ಹೀಗೆ ಪ್ರತಿ ಬಾರಿ ದುಡ್ಡು ಡ್ರಾ ಮಾಡಿದಾಗಲೂ ಬ್ಯಾಂಕಿಗೆ ಹೊರೆ ಬೀಳುತ್ತಲೇ ಹೋಗುತ್ತದೆ. ಹೀಗಾಗಿ, ಬ್ಯಾಂಕುಗಳಿಗೆ ದೊಡ್ಡ ಪ್ರಮಾಣದಲ್ಲಿ ನಷ್ಟವಾಗುತ್ತಿದೆ ಎಂಬ ಮಾತು ಕೇಳಿಬರುತ್ತಿದೆ. ಹೀಗಾಗಿ, ತನ್ನ ವಹಿವಾಟಿನ ವೆಚ್ಚವನ್ನು ಗ್ರಾಹಕನೇ ಭರಿಸಲಿ ಎಂಬ ಚಿಂತನೆಗೆ ಆರ್.ಬಿ.ಐ. ಬಂದಿದೆ ಎಂದು ಆರ್ ಬಿಐ ಉಪ ಗವರ್ನರ್ ಕೆಸಿ ಚಕ್ರವರ್ತಿ ಹೇಳಿದ್ದಾರೆ.
ಸದ್ಯಕ್ಕೆ ಗ್ರಾಹಕರು ತಿಂಗಳಿಗೆ ಐದು ಬಾರಿ ಬೇರೆ ಎಟಿಎಂಗಳಲ್ಲಿ ಉಚಿತವಾಗಿ ವಹಿವಾಟು ಮಾಡುವ ಸೌಲಭ್ಯ ಹೊಂದಿದ್ದಾರೆ. ಆದರೆ, ಇನ್ಮುಂದೆ ಈ ಅವಕಾಶ ಸಿಗುವುದಿಲ್ಲ.(ಪಿಟಿಐ) [ಬೇರೆ ಬ್ಯಾಂಕ್ ಎಟಿಎಂಗೆ ಹೋಗೋ ಮುನ್ನ ಓದಿ]












Click it and Unblock the Notifications