Haldiram: ಭಾರತದ ಹಲ್ದಿರಾಮ್ ಖರೀದಿಗೆ ವಿದೇಶಿ ಕಂಪನಿ ಪ್ರಯತ್ನ: ₹7,09,66,92,50,000 ಮೊತ್ತದ ಆಫರ್
ಯಾವುದೇ ಕಂಪನಿ ಯಶಸ್ವಿಯಾಗಿದೆ, ಲಾಭ ಮಾಡುತ್ತಿದೆ ಎಂದರೆ ಅದಕ್ಕಿಂತ ದೊಡ್ಡ ಕಂಪನಿಗಳು ಲಾಭ ಮಾಡುತ್ತಿರುವ ಕಂಪನಿಯನ್ನು ಕೊಳ್ಳಲು ಮುಂದೆ ಬರುತ್ತದೆ. ಭಾರತದ ಅಂತಹದ್ದೇ ಲಾಭದಾಯಕ ಕಂಪನಿಯನ್ನು ಖರೀದಿ ಮಾಡಲು ವಿದೇಶಿ ಕಂಪನಿ ಆಸಕ್ತಿ ತೋರಿಸಿದ್ದು, ಬರೋಬ್ಬರು 71 ಸಾವಿರ ಕೋಟಿ ರೂಪಾಯಿ ಆಫರ್ ಕೊಟ್ಟಿದೆ.
1937ರಲ್ಲಿ ರಾಜಸ್ಥಾನದ ಬಿಕಾನೇರ್‌ನಲ್ಲಿ ಸ್ಥಾಪನೆಯಾದ ಹಲ್ದಿರಾಮ್ ಕಂಪನಿಯಲ್ಲಿ 8.5 ಶತಕೋಟಿ ಡಾಲರ್ ಮೌಲ್ಯದ ನಿಯಂತ್ರಕ ಪಾಲನ್ನು ಸ್ವಾಧೀನಪಡಿಸಿಕೊಳ್ಳಲು ಜಾಗತಿಕ ಹೂಡಿಕೆದಾರರ ಗುಂಪೊಂದು ಆಸಕ್ತಿ ತೋರಿಸಿದೆ. ಹಲ್ದಿರಾಮ್ ಭಾರತದ ಹೆಸರಾಂತ ಆಹಾರ, ಸಿಹಿತಿಂಡಿ ಮತ್ತು ತಿಂಡಿಗಳ ಕಂಪನಿಯಾಗಿದೆ.

ಅಬುಧಾಬಿ ಹೂಡಿಕೆ ಪ್ರಾಧಿಕಾರ (ADIA) ಮತ್ತು ಸಿಂಗಾಪುರದ ಜಿಐಸಿ ಜೊತೆಗೆ ಉನ್ನತ ಖಾಸಗಿ ಇಕ್ವಿಟಿ (PE) ಸಂಸ್ಥೆಯಾದ ಬ್ಲಾಕ್‌ಸ್ಟೋನ್ ನೇತೃತ್ವದ ಜಾಗತಿಕ ಒಕ್ಕೂಟವು ಕಳೆದ ವಾರ ಹಲ್ದಿರಾಮ್‌ನ ಸ್ನಾಕ್ಸ್ ಫುಡ್‌ನಲ್ಲಿ ಶೇಕಡಾ 76 ರಷ್ಟು ಪಾಲನ್ನು ಪಡೆಯಲು ಬಿಡ್ ಸಲ್ಲಿಸಿದೆ ಎಂದು ವರದಿಗಳು ತಿಳಿಸಿವೆ.
ಹಲ್ದಿರಾಮ್ ಮತ್ತು ಜಾಗತಿಕ ಒಕ್ಕೂಟ ಎರಡೂ ಈ ವಹಿವಾಟಿನ ಬಗ್ಗೆ ಇನ್ನೂ ಖಚಿತಪಡಿಸಿಲ್ಲವಾದರು, ಉದ್ಯಮ ವಲಯದಲ್ಲಿ ಈ ಸುದ್ದಿ ಸಖತ್ ಸದ್ದು ಮಾಡುತ್ತಿದೆ.
ಸಾವಿರಾರು ಕೋಟಿ ಲಾಭ
ಆಹಾರ ಸರಪಳಿ ಸಂಸ್ಥೆ ಹಲ್ದಿರಾಮ್, ಅಗರ್ವಾಲ್ ಕುಟುಂಬದ ದೆಹಲಿ ಮತ್ತು ನಾಗ್ಪುರ ಬಣಗಳ ಸಂಯೋಜಿತ ಪ್ಯಾಕೇಜ್ ಮಾಡಿದ ತಿಂಡಿಗಳು ಮತ್ತು ಆಹಾರಗಳನ್ನು ಮಾರಾಟ ಮಾಡುತ್ತದೆ.
ಹಲ್ದಿರಾಮ್ ಫುಡ್ಸ್ ಇಂಟರ್ನ್ಯಾಷನಲ್ ಅನ್ನು ನಾಗ್ಪುರ ಬಣ ಮುನ್ನಡೆಸಿದರೆ, ಹಲ್ದಿರಾಮ್ ಸ್ನಾಕ್ಸ್ ಅನ್ನು ದೆಹಲಿ ಬಣ ಮುನ್ನಡೆಸುತ್ತಿದೆ. ಹಲ್ದಿರಾಮ್ ಸ್ನ್ಯಾಕ್ಸ್ ಫುಡ್ ಎಂಬ ಹೊಸ ಘಟಕವನ್ನು ರಚಿಸಲು ಎರಡು ಘಟಕಗಳನ್ನು ವಿಲೀನಗೊಳಿಸಲು ನಿರ್ಧರಿಸಲಾಗಿದೆ.
ನಾಗ್ಪುರ ಮೂಲದ ಬಣವು 2022ರ ಆರ್ಥಿಕ ವರ್ಷದಲ್ಲಿ ₹ 3,622 ಕೋಟಿ ಆದಾಯವನ್ನು ಗಳಿಸಿದರೆ, ದೆಹಲಿ ಮೂಲದ ಹಲ್ದಿರಾಮ್ ಸ್ನಾಕ್ಸ್ ಪ್ರೈವೇಟ್ ಲಿಮಿಟೆಡ್ ಇದೇ ಆರ್ಥಿಕ ವರ್ಷದಲ್ಲಿ ₹ 5,248 ಕೋಟಿ ವಹಿವಾಡು ನಡೆಸಿದೆ.
ಈ ಕಂಪನಿಯನ್ನು ಸ್ವಾಧೀನಪಡಿಸಿಕೊಳ್ಳಲು ಹಿಂದೆ ಇತರ ಪ್ರಯತ್ನಗಳು ನಡೆದಿವೆ ಎಂದು ವೆಂಚರ್ ಕ್ಯಾಪಿಟಲಿಸ್ಟ್ ಸಂಸ್ಥೆಗಳಾದ ಬೈನ್ ಕ್ಯಾಪಿಟಲ್, ವಾರ್ಬರ್ಗ್ ಪಿಂಕಸ್ ಮತ್ತು ಜನರಲ್ ಅಟ್ಲಾಂಟಿಕ್ ವರದಿಗಳು ತಿಳಿಸಿವೆ.
1937 ರಲ್ಲಿ ಬಿಕಾನೆರ್‌ನಲ್ಲಿ ಚಿಲ್ಲರೆ ಸಿಹಿತಿಂಡಿಗಳು ಮತ್ತು ಖಾರದ ಅಂಗಡಿಯಾಗಿ ಸ್ಥಾಪಿಸಲಾಯಿತು, ಹಲ್ದಿರಾಮ್ ಉತ್ಪನ್ನಗಳು ಈಗ 80 ಕ್ಕೂ ಹೆಚ್ಚು ದೇಶಗಳಲ್ಲಿ ಲಭ್ಯವಿದೆ.












Click it and Unblock the Notifications