ತಂತ್ರಜ್ಞಾನ ಆವಿಷ್ಕಾರಕ್ಕಾಗಿ 'ಫ್ಲಿಪ್ ಕಾರ್ಟ್' ನಿಂದ ಸ್ಟಾರ್ಟಪ್ ನಿಧಿ

ಬೆಂಗಳೂರು, ಮಾ 27, 2018: ಭಾರತದ ಮುಂಚೂಣಿಯ ಇ- ಕಾಮರ್ಸ್ ಮಾರುಕಟ್ಟೆ ವಲಯ, 'ಫ್ಲಿಪ್ ಕಾರ್ಟ್', ಇಂದು ದೇಶದ ಸ್ಟಾರ್ಟ್ ಅಪ್ ಗಳಿಗೆ ಬೆಂಬಲ‌ ನೀಡಲು ವಿಶೇಷ ನಿಧಿ ಆರಂಭಿಸುವುದಾಗಿ ಘೋಷಿಸಿದೆ. ಇದು ಅಂತರ್ಜಾಲ ಬಳಕೆಯ ಹೊಸ ಪೀಳಿಗೆಯ ಆವಿಷ್ಕಾರಗಳಿಗೆ ಉತ್ತಮ ವಾತಾವರಣ ಕಲ್ಪಿಸುತ್ತದೆ.

ಈ ಹೂಡಿಕೆಯ ನಿಧಿ ಇ- ಕಾಮರ್ಸ್,‌ ಫಿನ್ ಟೆಕ್, ಹಣ ಪಾವತಿ ಹಾಗೂ ಪ್ರೋತ್ಸಾಹಕ ವಲಯಗಳಲ್ಲಿ ಕೆಲಸ ಮಾಡುತ್ತಿರುವ ಹೊಸ ಕಂಪನಿಗಳನ್ನು ನೆರವಾಗುವ ಗುರಿ ಹೊಂದಿದೆ. ಈ ಕಂಪನಿಗಳಿಗೆ ವಿಶ್ವದರ್ಜೆಯ ಸಂಸ್ಥಾಪಕರು ಹಾಗೂ ಉಪಾಯಗಳನ್ನು ನೀಡಿ ಉತ್ತಮ ವಾತಾವರಣ ಒದಗಿಸುವುದು ಇದರ ಪ್ರಮುಖ ಉದ್ದೇಶ.

ದೇಶದಲ್ಲಿ 400 ಮಿಲಿಯನ್ ಇಂಟರ್ ನೆಟ್ ಬಳಕೆದಾರರಿದ್ದು, ಮುಂದಿನ ದಿನಗಳಲ್ಲಿ‌ ಇದು ಇನ್ನೂ ವಿಸ್ತಾರಗೊಳ್ಳಲಿದೆ. ಜೀವನಶೈಲಿಯ ಬದಲಾವಣೆ ಹಾಗೂ ಬದಲಾಗುತ್ತಿರುವ ಬೇಡಿಕೆಗಳಿಂದ ದೇಶದ ಎರಡು ಹಾಗೂ ಮೂರನೇ ಹಂತದ ನಗರಗಳು ಹಾಗೂ ಗ್ರಾಮಗಳು ಕೂಡ ಡಿಜಿಟಲ್ ವೇದಿಕೆಗೆ ಸೇರ್ಪಡೆಗೊಳ್ಳುವ ದಿನಗಳು ದೂರವಿಲ್ಲ.

ಹೊಸ್ ಆವಿಷ್ಕಾರಕ್ಕಾಗಿ ನವೋದ್ಯಮದಿಂದ ಪ್ರಯತ್ನ

ಹೊಸ್ ಆವಿಷ್ಕಾರಕ್ಕಾಗಿ ನವೋದ್ಯಮದಿಂದ ಪ್ರಯತ್ನ

ಸ್ಟಾರ್ಟ್ ಅಪ್ ಗಳು ತಮ್ಮ ಹಾದಿಯಲ್ಲಿ ನಂಬಿಕೆ, ಅವಲಂಬನೆ ಹಾಗೂ ಸಂಪರ್ಕದ ಅಡೆತಡೆಗಳನ್ನು ಎದುರಿಸುತ್ತಿದ್ದು, ಹೊಸ ಆವಿಷ್ಕಾರಗಳ ಮೂಲಕ ಇದಕ್ಕೆ ಪರಿಹಾರ ಕಂಡು ಹಿಡಿಯಲು ಪ್ರಯತ್ನಿಸಲಾಗುತ್ತಿದೆ ಎಂದು ಫ್ಲಿಪ್ ಕಾರ್ಟ್ ಸಿಎಫ್ ಓ ಎಂ ಸಿ ನೀಲ್ ಹೇಳಿದರು.

ತಂತ್ರಜ್ಞಾನವನ್ನೊಳಗೊಂಡ ಇ -ಕಾಮರ್ಸ್ ಉದ್ಯಮ

ತಂತ್ರಜ್ಞಾನವನ್ನೊಳಗೊಂಡ ಇ -ಕಾಮರ್ಸ್ ಉದ್ಯಮ

ಈ ಬೃಹತ್ ಯೋಜನೆಯ ಕುರಿತು ಸಂತಸ ವ್ಯಕ್ತಪಡಿಸಿದ ಫ್ಲಿಪ್ ಕಾರ್ಟ್ ಸಿಎಫ್ ಓ ಎಂ ಸಿ ನೀಲ್, ನಮ್ಮ ನೆಲದ ಕಂಪನಿ ಫ್ಲಿಪ್ ಕಾರ್ಟ್, ಹೊಸ ಆವಿಷ್ಕಾರ, ಕಳೆದ ಹತ್ತು ವರ್ಷದಿಂದ ಸರಣಿ ಪೂರೈಕೆ, ಮಾರಾಟ ಹಾಗೂ ಬೆಂಬಲ ಅಥವಾ ತಂತ್ರಜ್ಞಾನವನ್ನೊಳಗೊಂಡ ಇ -ಕಾಮರ್ಸ್ ಉದ್ಯಮಕ್ಕೆ ಅಗತ್ಯವಿದ್ದ ವಾತಾವರಣ ನಿರ್ಮಿಸಲು ನೆರವಾಗಿರುವುದು ಹೆಮ್ಮೆಯ ವಿಷಯ ಎಂದರು

ಡಿಜಿಟಲ್ ಇಂಡಿಯಾ ಯೋಜನೆಗೆ ಕೊಡುಗೆ

ಡಿಜಿಟಲ್ ಇಂಡಿಯಾ ಯೋಜನೆಗೆ ಕೊಡುಗೆ

ಈ ಪ್ರಯತ್ನ ದೇಶದ ಇ- ಕಾಮರ್ಸ್ ಬೆಳೆಯಲು ಅಗತ್ಯವಿರುವ ವೇದಿಕೆ ಸೃಷ್ಟಿಸಿದೆ. ಹಲವು ಸವಾಲುಗಳನ್ನು ಪರಿಹರಿಸಿ, ಲಕ್ಷಾಂತರ ಬಳಕೆದಾರರನ್ನು ಡಿಜಿಟಲ್ ವೇದಿಕೆಗೆ ಕರೆತರುವ ಮೂಲಕ 'ಡಿಜಿಟಲ್ ಇಂಡಿಯಾ' ಯೋಜನೆಗೆ ಮಹತ್ವದ ಕೊಡುಗೆ ನೀಡುತ್ತಿದೆ.

ಸ್ಟಾರ್ಟ್ ಅಪ್ ಗಳ ಆವಿಷ್ಕಾರಗಳಿಗೆ ಬೆಂಬಲ

ಸ್ಟಾರ್ಟ್ ಅಪ್ ಗಳ ಆವಿಷ್ಕಾರಗಳಿಗೆ ಬೆಂಬಲ

ಈ ಯೋಜನೆಯೊಂದಿಗೆ, ನಾವು ಮುಂದಿನ ಪೀಳಿಗೆಯ ತಂತ್ರಜ್ಞಾನದ ಕುರಿತು ಕೆಲಸ ಮಾಡುತ್ತಿರುವ ಪ್ರಾಥಮಿಕ ಹಂತದಲ್ಲಿರುವ ಸ್ಟಾರ್ಟ್ ಅಪ್ ಗಳ ಆವಿಷ್ಕಾರಗಳಿಗೆ ಬೆಂಬಲ ನೀಡಲು ಉತ್ಸುಕರಾಗಿದ್ದೇವೆ. ಇದು ಭಾರತಕ್ಕೆ ಉಪಯುಕ್ತವಾಗಿರುವ ಆವಿಷ್ಕಾರಗಳನ್ನು ಆರಂಭಿಸಲು ಹಾಗೂ ಆ ಮೂಲಕ ಸ್ಟಾರ್ಟ್ ಅಪ್ ಗಳಿಗೆ ಹೊಸ ಉಪಾಯಗಳನ್ನು ಜಾರಲು ಅವಕಾಶ ಕಲ್ಪಿಸುವ ಮೂಲಕ ಅವರ ಜೀವನ ಸುಧಾರಣೆಗೆ ನೆರವಾಗುತ್ತದೆ ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+