ಫಾಸ್ಟ್ ಟ್ರ್ಯಾಕ್‍ನಿಂದ ಸೂಪರ್ ಶೀಲ್ಡ್ ಮಾಸ್ಕ್ ಬಿಡುಗಡೆ

ಬೆಂಗಳೂರು, ಜೂನ್ 22: ಗುಣಮಟ್ಟದ ಹಾಗೂ ಕೈಗೆಟುಕುವ ದರದಲ್ಲಿ ಇರುವ ಮಾಸ್ಕ್ ಗಳಿಗೆ ಬೇಡಿಕೆಹೆಚ್ಚುತ್ತಿದೆ, ಯುವಜನರಿಗೆ ಅಗತ್ಯವಿರುವ ಪರಿಕರಗಳನ್ನು ಪರಿಚಯಿಸುವುದರಲ್ಲಿ ಮುಂಚೂಣಿಯಲ್ಲಿರುವ ಫಾಸ್ಟ್ ಟ್ರ್ಯಾಕ್ ಬ್ರಾಂಡ್ ಈಗ ಇನ್ನೊಂದು ಹೆಜ್ಜೆ ಮುಂದಿಟ್ಟಿದೆ. ಸೂಪರ್ ಶೀಲ್ಡ್ ಗುಣಮಟ್ಟದ ಹಾಗೂ ಸರಾಗ ಉಸಿರಾಟಕ್ಕೆ ಅವಕಾಶವುಳ್ಳ, 4 ಪರದೆ ಮಾದರಿಯ ಮಾಸ್ಕ್ ಗಳನ್ನು ಬಿಡುಗಡೆ ಮಾಡಿದೆ.

Recommended Video

      ರಾಜಕೀಯ ಹೀರೋ ಆಗಿದ್ದ ಎಚ್.ವಿಶ್ವನಾಥ್ ಈಗ ದುರಂತ ನಾಯಕ | H Vishwanath | Oneindia Kannada

      ಪರಿಣಾಮಕಾರಿ ಸುರಕ್ಷತೆಯನ್ನು ಒದಗಿಸುವ ಪರಿಕರವನ್ನು ಎಲ್ಲ ಸ್ತರದ ಜನರಿಗೆ ಒದಗಿಸಬೇಕು ಎಂಬ ಚಿಂತನೆಗೆ ಪೂರಕವಾಗಿ ಅನುಕೂರವಾದ ಹಾಗೂ ಕೈಗೆಟುಕುವ ದರದ ಈ ಮಾಸ್ಕ್‍ಗಳನ್ನು ಬಿಡುಗಡೆ ಮಾಡಲಾಗಿದೆ. ದೀರ್ಘಾವಧಿ ಬಳಕೆ ಅನುವಾಗುವಂತೆ ವಿಶೇಷ ಆಸಕ್ತಿ ವಹಿಸಲಾಗಿದೆ.

      ಈ ಕುರಿತು ಮಾತನಾಡಿದ ಟೈಟನ್ ಕಂಪನಿ ಲಿಮಿಟೆಡ್‍ನ ಚೀಫ್ ಆಪರೇಟಿಂಗ್ ಆಫೀಸರ್ (ಫ್ರಾಗ್ರನ್ಸ್ ಮತ್ತು ಅಕ್ಸೆಸರೀಸ್ ವಿಭಾಗ) ಮನೀಶ್ ಗುಪ್ತಾ ಅವರು, ''ಈ ಪರಿಕ್ರಮದ ಮುಖ್ಯ ಉದ್ದೇಶವೆಂದರೆ ಜನರಲ್ಲಿ ಮಾಸ್ಕ್ ಬಳಕೆಯನ್ನು ಉತ್ತೇಜಿಸುವುದೇ ಆಗಿದೆ. ಈ ಫೇಸ್‍ಮಾಸ್ಕ್ ಗಳಿಗೆ ಇರುವ ಅಗತ್ಯವನ್ನು ಈಡೇರಿಸುವುದು, ಕೈಗೆಟುಕುವ ದರದಲ್ಲಿ ಸುರಕ್ಷತೆ ಕ್ರಮಗಳಿಗೆ ಒತ್ತು ನೀಡುವುದು ಇದರ ಉದ್ದೇಶವಾಗಿದೆ'' ಎಂದು ಹೇಳಿದರು.

      ಮೂರು ಮಾದರಿಗಳಲ್ಲಿ ಫೇಸ್ ಮಾಸ್ಕ್

      ಮೂರು ಮಾದರಿಗಳಲ್ಲಿ ಫೇಸ್ ಮಾಸ್ಕ್

      ಫೇಸ್‍ಮಾಸ್ಕ್ ಅನ್ನು ಮೂರು ಮಾದರಿಗಳಲ್ಲಿ, ಭಿನ್ನ ವರ್ಣಗಳಲ್ಲಿ ಬಿಡುಗಡೆ ಮಾಡಲಾಗಿದೆ. ರಕ್ಷಣೆಗೆ ಪೂರಕವಾಗಿ ನಾಲ್ಕು ಪರದೆಗಳು ಇರಲಿದ್ದು, ಕೆಳಕಂಡ ಲಕ್ಷಣಗಳನ್ನು ಒಳಗೊಂಡಿದೆ.

      • ಉಸಿರಾಟಕ್ಕೆ ಪೂರಕವಾದ ವಸ್ತ್ರದ ಬಳಕೆ
      • ಮೃದುವಾದ ಎಲೆಸ್ಟಿಕ್ ದಾರಗಳು, ಬಳಕೆಗೆ ಅನುಕೂಲಕರ
      • ಮರುಬಳಕೆ ಹಾಗೂ 30 ಬಾರಿಯವರೆಗೂ ತೊಳೆದು ಬಳಸಬಹುದಾಗಿದೆ
      • ಡ್ರಾಪ್ಲೆಟ್, ಬ್ಯಾಕ್ಟಿರಿಯಾದಿಂದ ರಕ್ಣೆ
      • ಆ್ಯಂಟಿ ಮೈಕ್ರೊಬೈಯಲ್ ಫಿನಿಶ್

      ಸಂಪೂರ್ಣ ರಕ್ಷಣೆಯನ್ನು ಒದಗಿಸಲಿದೆ

      ಸಂಪೂರ್ಣ ರಕ್ಷಣೆಯನ್ನು ಒದಗಿಸಲಿದೆ

      ಫಾಸ್ಟ್ ಟ್ರ್ಯಾಕ್ ನ ಸೂಪರ್ ಶೀಲ್ಡ್ ಮಾಸ್ಕ್ ಬಳಕೆಗೆ ಸಮರ್ಪಕವಾಗಿ ಇರುವಂತೆ, ಬಳಕೆದಾರರ ಅಗತ್ಯವನ್ನು ಗಮನದಲ್ಲಿ ಇಟ್ಟುಕೊಂಡು ಬ್ರಾಂಡ್ ಹೆಚ್ಚಿನ ಆಸಕ್ತಿಯನ್ನು ವಹಿಸಿದೆ. ಇದನ್ನು ಒಳಾಂಗಣದಲ್ಲಿಯೂ ಬಳಸಬಹುದಾಗಿದೆ. ಸಂಪೂರ್ಣ ರಕ್ಷಣೆಯನ್ನು ಒದಗಿಸಲಿದ್ದು, ಕೆಲಸದ ಸ್ಥಳದಲ್ಲಿ ಯಾವುದೇ ತೊಡಕು ಇಲ್ಲದಂತೆ ಬಳಸಿ, ಕಾರ್ಯನಿರ್ವಹಿಸಲು ಅನುಕೂಲಕರವಾಗಿದೆ.

      ಎಲ್ಲೆಲ್ಲಿ ಸೂಪರ್ ಶೀಲ್ಡ್ ಮಾಸ್ಕ್ ಲಭ್ಯ

      ಎಲ್ಲೆಲ್ಲಿ ಸೂಪರ್ ಶೀಲ್ಡ್ ಮಾಸ್ಕ್ ಲಭ್ಯ

      ಫಾಸ್ಟ್ ಟ್ರ್ಯಾಕ್ ವೆಬ್ ತಾಣ ಹಾಗೂ ಪ್ರಮುಖ ಇ-ಕಾಮರ್ಸ್ ತಾಣಗಳಲ್ಲಿ ಲಭ್ಯವಿದೆ. ಇವು ಎಲ್ಲ ವರ್ಲ್ಡ್ ಆಫ್ ಟೈಟನ್ ಮ್ತು ಫಾಸ್ಟ್ ಟ್ರಾಕ್ ಮಳಿಗೆಗಳಲ್ಲಿಯೂ ಲಭ್ಯವಿದೆ. ಸೂಪರ್ ಶೀಲ್ಡ್ ಫೇಸ್ ಮಾಸ್ಕ್ ಗಳಿಗೆ ಕೈಗೆಟುಕುವ ದರವಾಗಿ ರೂ. 200 ನಿಗದಿಪಡಿಸಲಾಗಿದೆ. 3/5ರ ವ್ಯಾಲ್ಯೂ ಪ್ಯಾಕ್‍ಗಳಲ್ಲಿ, ಆಕರ್ಷಕ ದರಗಳಲ್ಲಿಯೂ ಇವು ಲಭ್ಯವಿದೆ.

      ಫಾಸ್ಟ್ ಟ್ರ್ಯಾಕ್ ಕುರಿತು

      ಫಾಸ್ಟ್ ಟ್ರ್ಯಾಕ್ ಕುರಿತು

      ಫಾಸ್ಟ್ ಟ್ರ್ಯಾಕ್ ಕುರಿತು: ಫಾಸ್ಟ್ ಟ್ರ್ಯಾಕ್ ಅನ್ನು 1998ರಲ್ಲಿ ಸ್ಥಾಪನೆಯಾಗಿದ್ದು, 2005ರಲ್ಲಿ ಸ್ವತಂತ್ರವಾಗಿ ನಗರ ಮತ್ತು ಯುವಜನರ ಬ್ರ್ಯಾಂಡ್ ಆಗಿ ಹೊರಹೊಮ್ಮಿತು. ಅಂದಿನಿಂದ, ಇದು, ವಾಚ್‍ಗಳು ಮತ್ತು ಸನ್‍ಗ್ಲಾಸ್‍ಗಳ ವಲಯದಲ್ಲಿ ತನ್ನದೇ ಪ್ರಾಬಲ್ಯ ಹೊಂದಿದ್ದು, ಭಿನ್ನವಾದ ಮತ್ತು ಕೈಗೆಟುಕುವ ದರಗಳ ಉತ್ಪನ್ನಗಳಿಂದ ಗಮನಸೆಳೆದಿದೆ. ಫಾಸ್ಟ್‍ಟ್ರ್ಯಾಕ್ ತನ್ನ ಹೆಜ್ಜೆ ಗುರುತನ್ನು 2009ರಲ್ಲಿ ಅಕ್ಸೆಸ್ಸರಿಗಳ ಕ್ಷೇತ್ರಕ್ಕೂ ವಿಸ್ತರಿಸಿದು, ವಿವಿಧ ಶ್ರೇಣಿಯ ಬ್ಯಾಗ್‍ಗಳು, ಬೆಲ್ಟ್‍ಗಳು, ಪರ್ಸ್‍ಗಳನ್ನು ಪರಿಚಯಿಸಿತು. ಇಂದು ಈ ಬ್ರ್ಯಾಂಡ್ ದೇಶದಲ್ಲೇ ಯುವಜನರ ಮೆಚ್ಚಿನ ಬ್ರ್ಯಾಂಡ್ ಆಗಿ ಹೊರಹೊಮ್ಮಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+