Gold & Silver: ಚಿನ್ನದಂತೆ ಬೆಳ್ಳಿ ಬೆಲೆಯಲ್ಲೂ ಭಾರಿ ಕುಸಿತ, 80,000 ರೂಪಾಯಿಗೆ ಇಳಿಕೆ ಕಂಡ ಬೆಳ್ಳಿ!
ಬಂಗಾರದ ಬೆಲೆ ಕುಸಿತ ಕಾಣುತ್ತಿದ್ದು, ಆಭರಣ ಖರೀದಿ ಮಾಡುವವರು ಇದೀಗ ಮುಗಿಬಿದ್ದು ಕೊಂಡು ಕೊಳ್ಳುತ್ತಿದ್ದಾರೆ. ಅದೇ ರೀತಿ ಬೆಳ್ಳಿ ಬೆಲೆಯಲ್ಲಿ ಕೂಡ ಭಾರಿ ಇಳಿಕೆ ಕಂಡುಬರುತ್ತಿದೆ. ಕೆಲವೇ ಕೆಲವು ದಿನಗಳ ಹಿಂದೆ ಪ್ರತಿ ಕೆಜಿಗೆ 1 ಲಕ್ಷ ರೂಪಾಯಿ ತಲುಪಿದ್ದ ಬೆಳ್ಳಿಯ ಬೆಲೆ, ಇದೀಗ ಭಾರಿ ಕುಸಿತ ಕಂಡಿದೆ. ಹಾಗಾದ್ರೆ ಇದೀಗ ಎಷ್ಟಿದೆ ಬೆಳ್ಳಿ ಬೆಲೆ? ಚಿನ್ನದ ಬೆಲೆ ಕಥೆ ಏನು? ಮತ್ತೆ ಕುಸಿತ ಕಾಣುತ್ತಾ ಚಿನ್ನ & ಬೆಳ್ಳಿ? ಬನ್ನಿ ತಿಳಿಯೋಣ.
2024ರ ಬಜೆಟ್ ಘೋಷಣೆ ನಂತರ ಚಿನ್ನ & ಬೆಳ್ಳಿ ಬೆಲೆಯಲ್ಲಿ ಭಾರಿ ಕುಸಿತ ಕಂಡುಬಂದಿದೆ. ಚಿನ್ನ & ಬೆಳ್ಳಿ ಮೇಲಿನ ಆಮದು ಸುಂಕ ರಿಯಾಯಿತಿ ಪಡೆದ ನಂತರ ಈ ರೀತಿಯಾಗಿ ಭರ್ಜರಿ ಇಳಿಕೆ ಕಾಣುತ್ತಿದೆ ಚಿನ್ನ & ಬೆಳ್ಳಿ ಬೆಲೆ. ಅದಕ್ಕೂ ಮೊದಲು ಚಿನ್ನ & ಬೆಳ್ಳಿ ಸಾಕಷ್ಟು ಏರಿಕೆ ಕಂಡಿತ್ತು. ಆದರೆ ಇದೀಗ ಮತ್ತೆ ಚಿನ್ನ & ಬೆಳ್ಳಿ ಬೆಲೆಯಲ್ಲಿ ಭಾರಿ ಕುಸಿತ ಕಂಡುಬರುತ್ತಿದೆ. ಅದರಲ್ಲೂ ಬೆಳ್ಳಿಯ ಬೆಲೆಯಲ್ಲಿ ಭಾರಿ ಇಳಿಕೆ ಆಗುತ್ತಿದ್ದು, ಕೆಲವು ನಗರಗಳಲ್ಲಿ ಈಗಾಗಲೇ ಬೆಳ್ಳಿ ಬೆಲೆ ಪ್ರತಿ ಕೆಜಿಗೆ 80,000 ರೂಪಾಯಿಗೂ ಕೆಳಗೆ ಕುಸಿತ ಕಂಡಿದೆ. ಹಾಗಾದ್ರೆ, ಇದೀಗ ಬೆಂಗಳೂರಿನಲ್ಲಿ ಎಷ್ಟಿದೆ ಬೆಳ್ಳಿ ಬೆಲೆ? ಮುಂದೆ ಓದಿ.

ಬೆಳ್ಳಿಯ ಬೆಲೆ ಬೆಂಗಳೂರಿನಲ್ಲಿ ಎಷ್ಟಿದೆ?
ಚಿನ್ನ ಬಹು ಬೇಡಿಕೆಯ ವಸ್ತು, ಹೀಗಾಗಿಯೇ ಚಿನ್ನಕ್ಕೆ ಭಾರಿ ಡಿಮ್ಯಾಂಡ್ ಬಂದಿದೆ. ಹೀಗೆ ಚಿನ್ನ ಕೊಳ್ಳಲು ಜನ ಕೂಡ ಮುಗಿಬಿದ್ದು ಮುಂದೆ ಬರುತ್ತಿದ್ದಾರೆ. ಹೀಗಿದ್ದಾಗಲೇ ಚಿನ್ನದ ಜೊತೆ ಬೆಳ್ಳಿ ಬೆಲೆ ಕೂಡ ಭಾರಿ ಏರಿಕೆ ಕಾಣುತ್ತಿತ್ತು. ನೋಡ ನೋಡುತ್ತಲೇ ಬೆಳ್ಳಿ ಬೆಲೆ, ಹತ್ತಿರ ಹತ್ತಿರ 1 ಲಕ್ಷ ರೂಪಾಯಿ ತಲುಪಿತ್ತು. ಇಂತಹ ಸ್ಥಿತಿಯಲ್ಲಿ ದಿಢೀರ್ ಬೆಳ್ಳಿ ಬೆಲೆಯಲ್ಲಿ ದೊಡ್ಡ ಕುಸಿತವಾಗಿದೆ. ಮುಂದಿನ ದಿನಗಳಲ್ಲಿ ಬೆಳ್ಳಿ ಬೆಲೆ ಮತ್ತಷ್ಟು ಕುಸಿತ ಕಾಣುವ ನಿರೀಕ್ಷೆ ಇದೆ. ಈ ನಡುವೆ, ಚಿನ್ನದ ಜೊತೆ ಬೆಳ್ಳಿ ಬೆಲೆ ಕೂಡ ಭಾರಿ ಇಳಿಕೆ ಕಂಡಿರುವುದು ಬೆಳ್ಳಿ ಇಷ್ಟಪಡುವವರಿಗೆ ಖುಷಿ ಕೊಟ್ಟಿದೆ. ಸದ್ಯ ಬೆಂಗಳೂರಿನಲ್ಲಿ ಬೆಳ್ಳಿಯ ಬೆಲೆ ಪ್ರತಿ ಕೆಜಿಗೆ 80,900 ರೂಪಾಯಿ ಆಗಿದೆ.
ಯಾರಿಗೆ ಖುಷಿ & ಯಾರಿಗೆ ಬೇಸರ?
ಒಟ್ನಲ್ಲಿ ಚಿನ್ನ & ಬೆಳ್ಳಿ ಬೆಲೆಯಲ್ಲಿ ಭಾರಿ ಕುಸಿತ ಕಂಡುಬರುತ್ತಿದೆ. ಮುಂದಿನ ದಿನಗಳಲ್ಲಿ, ಮತ್ತಷ್ಟು ಕುಸಿತ ಕಾಣುವ ಸಾಧ್ಯತೆ ಕೂಡ ಇದೆ ಎಂಬ ಮಾತುಗಳು ಇದೀಗ ಕೇಳಿಬರುತ್ತಿವೆ. ಹೀಗೆ ಚಿನ್ನ & ಬೆಳ್ಳಿ ಬೆಲೆ ಕುಸಿತ ಕಾಣುತ್ತಿರುವುದು ಒಂದು ಕಡೆ ಆಭರಣ ಅಂದ್ರೆ ಚಿನ್ನವನ್ನ ಖರೀದಿ ಮಾಡಲು ಇಷ್ಟಪಡುವ ಮಹಿಳೆಯರಿಗೆ ಖುಷಿ ಕೊಟ್ಟಿದೆ. ಆದರೆ ಈ ಸುದ್ದಿ ಚಿನ್ನ & ಬೆಳ್ಳಿ ಮೇಲೆ ಹೂಡಿಕೆ ಮಾಡಿದ್ದವರಿಗೆ ಸಿಕ್ಕಾಪಟ್ಟೆ ಬೇಸರ ತರಿಸಿದೆ.
ವರ್ಷದಿಂದ ವರ್ಷಕ್ಕೆ ಚಿನ್ನದ ಬೆಲೆ ಏರಿಕೆ!
15 ವರ್ಷಕ್ಕೆ ಹೋಲಿಕೆ ಮಾಡಿದರೆ ಚಿನ್ನದ ಬೆಲೆಯಲ್ಲಿ ಸಾಕಷ್ಟು ಬದಲಾವಣೆ ಆಗಿದೆ. ದೊಡ್ಡ ಮಟ್ಟದಲ್ಲಿ ಚಿನ್ನ ಏರಿಕೆ ಕಂಡಿದೆ. ಹಾಗೇ ಮುಂದಿನ ದಿನಗಳಲ್ಲಿ ಚಿನ್ನಕ್ಕೆ ಮತ್ತೆ ಹೆಚ್ಚಿನ ಬೇಡಿಕೆ ಬರುವ ಸಾಧ್ಯತೆ ದಟ್ಟವಾಗಿದೆ. ಇದಕ್ಕೆಲ್ಲ ಕಾರಣ ಏನೆಂದರೆ ಭೂಮಿಯ ಒಳಗೆ ಸಿಗುತ್ತಿದ್ದ ಚಿನ್ನ ಭಾಗಶಃ ಕಡಿಮೆ ಆಗುತ್ತಾ ಬರುತ್ತಿದೆ. ಹೀಗೆ, ಗಣಿಗಾರಿಕೆ ನಡೆಸುವ ಸಾಧ್ಯತೆ ಕೂಡ ಕ್ಷೀಣಿಸುತ್ತಿದೆ. ಇದು ಕೂಡ ಚಿನ್ನದ ಮೇಲೆ ಸಾಕಷ್ಟು ದೊಡ್ಡ ಪ್ರಮಾಣದ ಪರಿಣಾಮ ಬೀರುವ ಸಾಧ್ಯತೆ ಇದ್ದು ಚಿನ್ನ ಬೆಲೆ ಈ ವರ್ಷದ ಅಂತ್ಯಕ್ಕೆ 1 ಲಕ್ಷ ರೂಪಾಯಿ ಆಸುಪಾಸಿಗೆ ಬರಬಹುದು ಎನ್ನಲಾಗಿತ್ತು. ಆದರೆ ಈಗ ನೋಡಿದರೆ ಚಿನ್ನದ ಬೆಲೆಯಲ್ಲಿ ಕುಸಿತ ಆರಂಭ ಆಗಿದೆ.












Click it and Unblock the Notifications