ಯೆಸ್ ಬ್ಯಾಂಕ್ ಕೇಸ್; ರಾಣಾಗೆ ಸೇರಿದ ಸಾವಿರಾರು ಕೋಟಿ ಜಪ್ತಿ

ನವದೆಹಲಿ, ಜುಲೈ 09: ಯೆಸ್ ಬ್ಯಾಂಕ್ ಹಣಕಾಸು ಅವ್ಯವಹಾರ ಪ್ರಕರಣದಲ್ಲಿ, ಸಂಸ್ಥಾಪಕ ರಾಣಾ ಕಪೂರ್ ಮತ್ತು ಅವರ ಕುಟುಂಬ ಸದಸ್ಯರಿಗೆ ಸೇರಿದ ಬ್ಯಾಂಕ್ ಖಾತೆಗಳನ್ನು ಜಾರಿ ನಿರ್ದೇಶನಾಲಯ ಜಪ್ತಿ ಮಾಡಿದೆ.

Recommended Video

      Facebook , Instagram , tinder ಸೇರಿದಂತೆ ಬಾರತೀಯ ಸೇನೆಯು 89 ಆ್ಯಪ್‌ಗಳನ್ನು ನಿಷೇಧಿಸಿದೆ.| Oneindia Kannada

      ನ್ಯೂಯಾರ್ಕ್, ಲಂಡನ್ ಹಾಗೂ ಮುಂಬೈನಲ್ಲಿರುವ ರಾಣಾ ಕಪೂರ್ ಹಾಗೂ ಕುಟುಂಬಸ್ಥರಿಗೆ ಸೇರಿದ ಸರಿ ಸುಮಾರು 2,200 ಕೋಟಿ ರು ಆಸ್ತಿ ಜಪ್ತಿ ಮಾಡಲಾಗಿದೆ ಎಂದು ಜಾರಿ ನಿರ್ದೇಶನಾಲಯದ ಮೂಲಗಳಿಂದ ತಿಳಿದು ಬಂದಿದೆ.

      ಇನ್ನೊಂದೆಡೆ, ಯೆಸ್ ಬ್ಯಾಂಕ್ ರಾಣಾ ಕಪೂರ್, ದಿವಾನ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ ಮತ್ತು ಪ್ರವರ್ತಕರಾದ ಕಪಿಲ್ ವಾಧವನ್ ಮತ್ತು ಧೀರಜ್ ವಾಧವನ್ ವಿರುದ್ಧ ಕೇಂದ್ರೀಯ ತನಿಖಾ ದಳ (ಸಿಬಿಐ) ಚಾರ್ಜ್‌ಶೀಟ್ ದಾಖಲಿಸಿ, ತನಿಖೆ ಮುಂದುವರೆಸಿದೆ.

      Enforcement Directorate (ED) attaches assets of Rana Kapoor

      ವೈಯಕ್ತಿಕ ಸಂತೃಪ್ತಿಯ ಬದಲಾಗಿ ಸಾಲಗಾರರನ್ನು ಆಯ್ಕೆ ಮಾಡಲು ಬ್ಯಾಂಕ್ ಹೆಚ್ಚಿನ ಮೌಲ್ಯದ ಸಾಲಗಳನ್ನು ವಿಸ್ತರಿಸಿದೆ ಎಂದು ಆರೋಪಿಸಲಾಗಿದೆ. ಚಾರ್ಜ್‌ಶೀಟ್‌ನಲ್ಲಿ ಈ ಘಟಕಗಳ ವಿರುದ್ಧದ ಆರೋಪಗಳು, ಮೋಸ, ವಂಚನೆ, ಪಿತೂರಿ, ಭ್ರಷ್ಟಾಚಾರ ಮತ್ತು ಸಾಲ ನೀಡುವ ಮಾನದಂಡಗಳ ಉಲ್ಲಂಘನೆಯನ್ನು ಒಳಗೊಂಡಿರುತ್ತದೆ.

      ಹಗರಣ ಕುರಿತು ಸಿಬಿಐ ಮಾರ್ಚ್ 7 ರಂದು ಪ್ರಕರಣವನ್ನು ದಾಖಲಿಸಿತ್ತು, ಅದು 2018 ರ ಏಪ್ರಿಲ್ ಮತ್ತು ಜೂನ್ ನಡುವೆ ಯೆಸ್ ಬ್ಯಾಂಕ್ ಹಗರಣ ಪೀಡಿತ ಡಿಎಚ್‌ಎಫ್‌ಎಲ್‌ನ ಅಲ್ಪಾವಧಿಯ ಡಿಬೆಂಚರ್‌ಗಳಲ್ಲಿ 3,700 ಕೋಟಿ ಹೂಡಿಕೆ ಮಾಡಿದೆ ಎಂದು ಹೇಳಿದೆ.

      ಇದಕ್ಕೆ ಪ್ರತಿಯಾಗಿ, ವಾಧವಾನ್ಸ್ ಮಾಜಿ ಯೆಸ್ ಬ್ಯಾಂಕ್ ಸಿಇಒ ರಾಣಾ ಕಪೂರ್ ಮತ್ತು ಅವರ ಕುಟುಂಬ ಸದಸ್ಯರಿಗೆ ಡೊಯಿಟ್ ಅರ್ಬನ್ ವೆಂಚರ್ಸ್ ಲಿಮಿಟೆಡ್‌ಗೆ ಸಾಲ ರೂಪದಲ್ಲಿ '600 ಕೋಟಿ ಕಿಕ್‌ಬ್ಯಾಕ್ ಪಾವತಿಸಿದ್ದಾರೆ' ಎಂದು ಆರೋಪಿಸಲಾಗಿದೆ.

      ಮಾರ್ಚ್ 9 ರಂದು ಕಪೂರ್ ಕುಟುಂಬ ಸದಸ್ಯರ ಮನೆಯಲ್ಲಿ ಹುಡುಕಾಟ ನಡೆಸಲಾಯಿತು. ಮೇ 6 ರಂದು ಇಡಿ ಮನಿ ಲಾಂಡರಿಂಗ್ ಆರೋಪದ ಮೇಲೆ ಯೆಸ್ ಬ್ಯಾಂಕ್‌ನಲ್ಲಿ ಚಾರ್ಜ್‌ಶೀಟ್ ಸಲ್ಲಿಸಿತ್ತು. ಮೋಸದ ವ್ಯವಹಾರಗಳ ಗಾತ್ರವನ್ನು, 5,050 ಕೋಟಿ ರುಪಾಯಿ ಎಂದು ಸಂಸ್ಥೆ ಅಂದಾಜಿಸಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+