ಮೋದಿ ನಾಡು ಸಿದ್ದರಾಮಯ್ಯ ರಾಜ್ಯಕ್ಕಿಂತ ಉತ್ತಮ

ನಿರುದ್ಯೋಗ ಪ್ರಮಾಣವನ್ನು ಗಣನೆಗೆ ತೆಗೆದುಕೊಂಡರೆ ಕರ್ನಾಟಕವು ಗುಜರಾತ್ ಮತ್ತು ದೆಹಲಿಗಿಂತ ಬಹಳ ಹಿಂದುಳಿದಿದೆ. ಕರ್ನಾಟಕದಲ್ಲಿ ಶೇ. 3.6 ರಷ್ಟು ಪುರುಷರಿಗೆ ಕೆಲಸವಿಲ್ಲ. ಅದೇ ರೀತಿ ಶೇ. 4.4ರಷ್ಟು ಮಹಿಳೆಯರಿಗೂ ಉದ್ಯೋಗ ಭಾಗ್ಯವಿಲ್ಲ. ಅದೇ ಗುಜರಾತಿನಲ್ಲಿ ಶೇ. 2.2 ರಷ್ಟು ಪುರುಷರಿಗೆ ಕೆಲಸವಿಲ್ಲ. ಮತ್ತು ಶೇ. 0.9 ರಷ್ಟು ಮಹಿಳೆಯರಿಗೆ ಉದ್ಯೋಗವಿಲ್ಲ.
ಇದು UN-Habitat ಸಂಸ್ಥೆಯ State of the Urban Youth-India 2013 ವರದಿಯನ್ನಾಧರಿಸಿದೆ. ನಗರ- ಪಟ್ಟಣಗಳಲ್ಲಿ 15 ರಿಂದ 32 ವರ್ಷದವರನ್ನು ಸಮೀಕ್ಷೆಗೊಳಪಡಿಸಿ, ಈ ವರದಿ ಸಿದ್ಧಪಡಿಸಲಾಗಿದೆ. ದೆಹಲಿಯಲ್ಲಿ 3.6% ರಷ್ಟು ಪುರುಷರಿಗೆ ಕೆಲಸವಿಲ್ಲ. ಮತ್ತು ಶೇ. 0.9 ರಷ್ಟು ಮಹಿಳೆಯರಿಗೆ ಉದ್ಯೋಗವಿಲ್ಲ.
ಆತಂಕದ ವಿಷಯವೆಂದರೆ ಪ್ರಸ್ತುತ ಉದ್ಯಮ ವಲಯವನ್ನು ಆರ್ಥಿಕ ಹಿಂಜರಿತ ಕಾಡುತ್ತಿದ್ದು, ಪರಿಸ್ಥಿತಿ ಸದ್ಯಕ್ಕೆ ಸುಧಾರಿಸುವ ಲಕ್ಷಣಗಳೂ ಇಲ್ಲ. ಹಾಗೆ ನೋಡಿದರೆ 2006-07ರಲ್ಲಿ ಅತಿ ಹೆಚ್ಚು ಪ್ರಮಾಣದಲ್ಲಿ ಉದ್ಯೋಗಾವಕಾಶಗಳು ಪ್ರಾಪ್ತಿಯಾಗಿದ್ದವು.
ಇಡೀ ದೇಶದಲ್ಲಿ ಲಕ್ಷದ್ವೀಪದಲ್ಲಿ ನಿರುದ್ಯೋಗವೆಂಬುದು ಗರಿಷ್ಠಮಟ್ಟದಲ್ಲಿ ತಾಂಡವವಾಡುತ್ತಿದೆ- 16.3% ಪುರುಷರಿಗೆ ಇಲ್ಲಿ ಕೆಲಸವಿಲ್ಲ. ಹಾಗೆಯೇ ಮೇಘಾಲಯದಲ್ಲಿ ಗರಿಷ್ಠಮಟ್ಟದಲ್ಲಿ 35.9% ಮಹಿಳೆಯರಿಗೆ ಉದ್ಯೋಗವಿಲ್ಲ.
ಇದು ಸರಕಾರದ Employment Exchangeಗಳು ನೀಡುವ ಅಂಕಿ ಅಂಶಗಳನ್ನಾಧರಿಸಿದ್ದು, ನಿಖರ ಮಾಹಿತಿಯನ್ನೊಳಗೊಂಡಿರುವುದಿಲ್ಲ. ವಾಸ್ತವವಾಗಿ ಎಲ್ಲ ರಾಜ್ಯಗಳಲ್ಲಿ ನಿರುದ್ಯೋಗವೆಂಬುದು ಇನ್ನೂ ಹೆಚ್ಚಿನ ಪ್ರಮಾಣದಲ್ಲಿರುತ್ತದೆ ಎಂದು ಆರ್ಥಿಕತಜ್ಞ ಅಜಿತ್ ರಾನ ಡೆ ಅಭಿಪ್ರಾಯಪಟ್ಟಿದ್ದಾರೆ.












Click it and Unblock the Notifications