ಮುಂದಿನ ವರ್ಷ ಸಂಬಳ ಏರಿಕೆ ನಿರೀಕ್ಷೆ ಬೇಡ !

2014-15ರ ಆರ್ಥಿಕ ವರ್ಷದಲ್ಲಿ ಸರಾಸರಿ ಸಂಬಳ ಏರಿಕೆ ಬಗ್ಗೆ ಅನೇಕ ಸಮೀಕ್ಷೆಗಳು ಹೊರಬಿದ್ದಿದ್ದು ಕಳೆದ ಎರಡು ಆರ್ಥಿಕ ವರ್ಷದಲ್ಲಿ ಕಾಣದ ಹೆಚ್ಚಿನ ಬದಲಾವಣೆ ಈ ಬಾರಿ ಸಾಧ್ಯವಿಲ್ಲ ಎಂಬುದು ಗೊತ್ತಾಗಿದೆ. 2014 ರಲ್ಲಿ ಶೇ 11 ರಷ್ಟು ಮಾತ್ರ ಸಂಬಳ ಏರಿಕೆ ಕಾಣಬಹುದಾಗಿದೆ. ಜಾಗತಿಕವಾಗಿ ಹಣದುಬ್ಬರವನ್ನು ಮುಂದಿಟ್ಟುಕೊಂಡು ನೋಡಿದರೆ ಜಪಾನ್ ಶೆ 0.5 ರಷ್ಟು, ಭಾರತ ಶೇ 2 ರಷ್ಟು ಅತಿ ಕಡಿಮೆ ಏರಿಕೆ ನೀಡುತ್ತಿದ್ದರೆ, ಚೀನಾ, ವಿಯಟ್ನಾಂ ಶೇ 4.9ಕ್ಕೂ ಅಧಿಕ ಏರಿಕೆ ನೀಡಲಿವೆ.
ಸುಮಾರು 734 ಸಂಸ್ಥೆಗಳ ಆಂತರಿಕ ಬಜೆಟ್ ಆಧಾರದ ಮೇಲೆ ಈ ಸಮೀಕ್ಷೆ ನಡೆಸಲಾಗಿದೆ. ಸಂಬಳ ಏರಿಕೆ ಬಗ್ಗೆ ತಿಳಿದರೂ ನೇಮಕಾತಿ ಬಗ್ಗೆ ಹಲವು ಕಂಪನಿಗಳಿಂದ ಸ್ಪಷ್ಟ ಉತ್ತರ ಸಿಕ್ಕಿಲ್ಲ. ಶೇ 72 ರಷ್ಟು ಕಂಪನಿಗಳು ಮಾತ್ರ ಕಳೆದ ಆರ್ಥಿಕ ವರ್ಷದಲ್ಲಿ ನೇಮಕಾತಿ ಹೆಚ್ಚಳಕ್ಕೆ ಮುಂದಾಗಿದ್ದವು. 2014ರಲ್ಲಿ ಈ ಸಂಖ್ಯೆ ಇಳಿಮುಖವಾಗಲಿದೆ.
ಈ ಬಾರಿಯ ಅಪ್ರೈಸಲ್ ವೃತ್ತದಲ್ಲಿ ಕಾರ್ಯಕ್ಷಮತೆ ಆಧಾರಿತ ಸಂಬಳ ಹಾಗೂ ಬಡ್ತಿ ದೊರೆಯಲಿದೆ. ನೇಮಕಾತಿ ಇನ್ನೂ ಹಲವು ಪ್ರಮುಖ ಸಂಸ್ಥೆಗಳಿಗೆ ತಲೆನೋವಾಗಿ ಮುಂದುವರೆಯಲಿದೆ. ರೀಟೈಲ್ ಕ್ಷೇತ್ರದಲ್ಲಿ ಮಾತ್ರ ಪ್ರತಿಭೆಗೆ ತಕ್ಕ ಪುರಸ್ಕಾರ ಸಿಗಲಿದೆ. ಶೇ 11 ರಷ್ಟು ಕಂಪನಿಗಳು ಸಂಬಳ ಬಜೆಟ್ ಯೋಜನೆ ಸಮಪರ್ಕವಾಗಿ ಕಾರ್ಯಗತಗೊಳಿಸುತ್ತಿದ್ದಾರೆ.
ಏಷ್ಯಾ ಪೆಸಿಫಿಕ್ ಪ್ರದೇಶದ 20ಕ್ಕೂ ಅಧಿಕ ದೇಶಗಳ 2700ಕ್ಕೂ ಅಧಿಕ ಕಂಪನಿಗಳ ಉದ್ಯೋಗಿಗಳ ಪ್ರತಿಕ್ರಿಯೆ ಆಧಾರಿಸಿ ಈ ಸಮೀಕ್ಷಾ ವರದಿ ನೀಡಲಾಗಿದೆ.
ಭಾರತೀಯ ಕಂಪನಿಗಳು ಪ್ರಸಕ್ತ ಹಣಕಾಸು ಸಾಲಿನಲ್ಲಿ ತನ್ನ ಉದ್ಯೋಗಿಗಳಿಗೆ ಸರಾಸರಿ ಶೇ. 10.3ರಷ್ಟು ಏರಿಕೆ ಮಾಡುವ ಖಾತರಿಯಿದೆ ಎಂದು ಮತ್ತೊಂದು ಸಮೀಕ್ಷೆಯಿಂದ ತಿಳಿದುಬಂದಿದೆ. 2008-09 ಸಾಲಿನಲ್ಲಿನ ಹಣಕಾಸು ಹಿಂಜರಿತದ ಬಳಿಕ ಭಾರತೀಯ ಉದ್ಯೋಗಿಗಳಿಗೆ ಪ್ರಾಪ್ತಿಯಾಗುತ್ತಿರುವ ಅತ್ಯಂತ ಕಡಿಮೆ ಸಂಬಳ ಏರಿಕೆ ಇದಾಗಿದೆ.












Click it and Unblock the Notifications