ಈ ಬಾರಿ ಸಂಬಳ ಏರಿಕೆ ಶೇ. 10ಕ್ಕೆ ಸೀಮಿತ

Average salary hikes restricted to be 10% - Aon Hewitt,
ಮುಂಬೈ, ಫೆ.21: ಭಾರತೀಯ ಕಂಪನಿಗಳು ಪ್ರಸಕ್ತ ಹಣಕಾಸು ಸಾಲಿನಲ್ಲಿ ತನ್ನ ಉದ್ಯೋಗಿಗಳಿಗೆ ಸರಾಸರಿ ಶೇ. 10.3ರಷ್ಟು ಏರಿಕೆ ಮಾಡುವ ಖಾತರಿಯಿದೆ ಎಂದು ಸಮೀಕ್ಷೆಯಿಂದ ತಿಳಿದುಬಂದಿದೆ. 2008-09 ಸಾಲಿನಲ್ಲಿನ ಹಣಕಾಸು ಹಿಂಜರಿತದ ಬಳಿಕ ಭಾರತೀಯ ಉದ್ಯೋಗಿಗಳಿಗೆ ಪ್ರಾಪ್ತಿಯಾಗುತ್ತಿರುವ ಅತ್ಯಂತ ಕಡಿಮೆ ಸಂಬಳ ಏರಿಕೆ ಇದಾಗಿದೆ.

ಹಾಗೆ ನೋಡಿದರೆ ಕಳೆದ 10 ವರ್ಷಗಳಲ್ಲೇ ಇದು ಅತ್ಯಂತ ಕಡಿಮೆ ಸಂಬಳ ಏರಿಕೆಗಳಾಗಿವೆ. ಕಳೆದ ವರ್ಷ ಇಡೀ ಆರ್ಥಿಕ ಪರಿಸ್ಥಿತಿ ದುಸ್ಥಿತಿ ತಲುಪಿತ್ತು. ಆದಾಗ್ಯೂ ಕಂಪನಿಗಳು ಭರವಸೆಯ ಶೇ. 11ರಷ್ಟು ಪ್ರಮಾಣದಲ್ಲಿ ಸಂಬಳಗಳನ್ನು ಏರಿಸಿತ್ತು ಎಂಬುದು ಗಮನಾರ್ಹ.

ಜಾಗತಿಕ ಮಟ್ಟದ ಮಾನವ ಸಂಪನ್ಮೂಲ ಕಂಪನಿಯಾದ Aon Hewitt ನಡೆಸಿರುವ ಸಮೀಕ್ಷೆಯ ಪ್ರಕಾರ ಹಣಕಾಸು ಸೇವಾ ಕಂಪನಿಗಳು, ತಂತ್ರಜ್ಞಾನ ಮತ್ತು ಹೊರಗುತ್ತಿಗೆ ಕಂಪನಿಗಳು ಅತಿಹೆಚ್ಚು ಅಸ್ಥಿರತೆ ಕಂಡುಬಂದಿದೆ. ಈ ಕ್ಷೇತ್ರದಲ್ಲಿನ ಕಂಪನಿಗಳು ಹೆಚ್ಚು ಪ್ರಗತಿ ಕಾಣದಿರುವುದರಿಂದ ಸಂಬಳ ಏರಿಕೆಗೆ ಕಡಿವಾಣ ಹಾಕಲಿವೆ ಎಂದು ತಿಳಿದುಬಂದಿದೆ. ಕೈಗಾರಿಕಾ ಕಂಪನಿಗಳು ಮತ್ತು ಗ್ರಾಹಕ ಸರಕು ಉತ್ಪಾದನಾ ಕಂಪನಿಗಳೂ ಇದೇ ಹಾದಿ ಹಿಡಿದಿವೆ.

ಭಾರತೀಯ ಕಂಪನಿಗಳ salary budgetಗಳು ಇತ್ತೀಚೆಗೆ ತೆಳ್ಳಗಾಗುತ್ತಿವೆ. ನೌಕರ ವರ್ಗವನ್ನು ತುಂಡು ತುಂಡು ಮಾಡುತ್ತಿರುವ ಕಂಪನಿಗಳು ಹೆಚ್ಚು ಶ್ರಮಹಾಕಿ ಒಳ್ಳೆಯ ಸಾಧನೆ ತೋರಿದವರಿಗಷ್ಟೇ ಹೆಚ್ಚು ಸಂಬಳಗಳನ್ನು ನೀಡುತ್ತಿವೆ. ಈ ಮೇಲ್ವರ್ಗದ ನೌಕರರು ಈ ಬಾರಿ ಶೇ. 14ರಷ್ಟು ಸಂಬಳ ಏರಿಕೆಗಳನ್ನು ಕಾಣುವುದು ದಿಟವಾಗಿದೆ. ಏರುತ್ತಿರುವ ವೆಚ್ಚಗಳು ಮತ್ತು ಕಾರ್ಯಕ್ಷಮತೆ ಈ ಕಂಪನಿಗಳ ಬೀಜಮಂತ್ರವಾಗಿವೆ.

ಟೆಕ್ಕಿಗಳಿಗೆ ಈ ವರ್ಷವೂ ಆಶಾದಾಯಕವಾಗಿಲ್ಲ:
ಐಟಿ ಉದ್ಯೋಗಿಗಳಿಗೆ ಈ ವರ್ಷವೂ ಆಶಾದಾಯಕವಾಗಿಲ್ಲ. ವಾರ್ಷಿಕ ಸಂಬಳ ಹೆಚ್ಚಳಗಳು ಅಬ್ಬಬ್ಬಾ ಅಂದರೆ ಶೇ. 9.6ರಷ್ಟಿರಬಹುದು. ಆದರೆ ITeS ಕಂಪನಿಗಳ ಪ್ರಗತಿ ಚೆನ್ನಾಗಿದ್ದು, ಆ ಕ್ಷೇತ್ರದಲ್ಲಿನ ನೌಕರರು ಈ ಬಾರಿ ತುಸು ಹೆಚ್ಚು ಅಂದರೆ ಶೇ. 11ರಷ್ಟು ಸಂಬಳಗಳನ್ನು ಹೆಚ್ಚು ತೆಗೆದುಕೊಳ್ಳಬಹುದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+