2020ರಲ್ಲಿ ಎಲೆಕ್ಟ್ರಿಕ್ ವಾಹನಗಳ ಮಾರಾಟ ಶೇಕಡಾ 39ರಷ್ಟು ಏರಿಕೆ

ನವದೆಹಲಿ, ಫೆಬ್ರವರಿ 09: ಕೋವಿಡ್-19 ಸಾಂಕ್ರಾಮಿಕದ ಕಾರಣದಿಂದ 2020ರಲ್ಲಿ ವಾಹನಗಳ ಮಾರಾಟ ಕೂಡ ಕುಸಿದಿತ್ತು. ಈ ರೀತಿಯ ಬೆಳವಣಿಗೆ ನಡುವೆ ಎಲೆಕ್ಟ್ರಿಕ್ ವಾಹನಗಳು (ಇವಿಗಳು) ಬೆಳವಣಿಗೆ ಸಾಧಿಸಿವೆ.

2020 ರಲ್ಲಿ ಎಲೆಕ್ಟ್ರಿಕ್ ವಾಹನಗಳ ಜಾಗತಿಕ ಮಾರಾಟವು ವರ್ಷದಿಂದ ವರ್ಷಕ್ಕೆ ಶೇ 39ರಷ್ಟು ಏರಿಕೆಯಾಗಿ, 3.1 ಮಿಲಿಯನ್ ಯುನಿಟ್‌ಗಳಿಗೆ ತಲುಪಿದೆ. ಜೊತೆಗೆ ಒಟ್ಟು ಪ್ರಯಾಣಿಕ ಕಾರು ಮಾರುಕಟ್ಟೆ ಶೇಕಡಾ 14ರಷ್ಟು ಕುಸಿದಿದೆ.

ಸಂಶೋಧನಾ ಸಂಸ್ಥೆ ಕೆನಾಲಿಸ್ ಅಂದಾಜಿನ ಪ್ರಕಾರ ಮುಂಬರುವ ವರ್ಷಗಳಲ್ಲಿ 30 ಮಿಲಿಯನ್ ಎಲೆಕ್ಟ್ರಿಕ್ ವಾಹನಗಳು 2028 ರೊಳಗೆ ಮಾರಾಟ ಆಗಲಿದೆ ಎಂದು ಮುನ್ಸೂಚನೆ ನೀಡಿದೆ. 2030 ರ ಹೊತ್ತಿಗೆ ಜಾಗತಿಕವಾಗಿ ಮಾರಾಟವಾಗುವ ಎಲ್ಲಾ ಪ್ರಯಾಣಿಕ ಕಾರುಗಳಲ್ಲಿ ಅರ್ಧದಷ್ಟು ಎಲೆಕ್ಟ್ರಿಕ್ ವಾಹನಗಳು ಪ್ರತಿನಿಧಿಸುವ ನಿರೀಕ್ಷೆಯಿದೆ.

Electric Vehicle Global Sales Jump 39% In 2020

ಕೋವಿಡ್-19- ಸಂಬಂಧಿತ ಲಾಕ್‌ಡೌನ್‌ಗಳು ಮತ್ತು ಪ್ರಯಾಣದ ನಿರ್ಬಂಧಗಳು 2020 ರ ಮೊದಲಾರ್ಧದಲ್ಲಿ ವಿಶ್ವದ ಹಲವು ವಾಹನ ಉದ್ಯಮದ ಮೇಲೆ ಭೀಕರವಾಗಿ ಪರಿಣಾಮ ಬೀರಿತು. 2020 ರಲ್ಲಿ ಕಾರುಗಳ ಮಾರಾಟವು ಶೇಕಡಾ 14 ರಷ್ಟು ಕುಸಿದಿದ್ದು, ಸುಮಾರು ಒಂದು ದಶಕದ ವಾರ್ಷಿಕ ಮಾರಾಟದ ಕಡಿಮೆ ಸಂಖ್ಯೆಯಾಗಿದೆ. ಆದರೆ ಮಾರಾಟವಾದ 3.1 ಮಿಲಿಯನ್ ಯುನಿಟ್‌ಗಳಲ್ಲಿ, ಒಟ್ಟು ಮಾರಾಟವಾದ ಕಾರುಗಳ ಪಾಲು ಶೇಕಡಾ 4.5 ಕ್ಕೆ ಏರಿದೆ.

ಎಲೆಕ್ಟ್ರಿಕ್ ವಾಹನಗಳು 2020 ರಲ್ಲಿ ಎಲ್ಲಾ ಹೊಸ ಕಾರುಗಳ ಮಾರಾಟದಲ್ಲಿ ಶೇಕಡಾ 5 ರಷ್ಟನ್ನು ಪ್ರತಿನಿಧಿಸುತ್ತವೆ. ಎಲೆಕ್ಟ್ರಿಕ್ ವಾಹನಗಳು 2021 ರಲ್ಲಿ ವಿಶ್ವಾದ್ಯಂತ ಹೊಸ ಕಾರು ಮಾರಾಟದ ಶೇಕಡಾ 7 ಕ್ಕಿಂತಲೂ ಹೆಚ್ಚಿನದನ್ನು ತಲುಪುವ ಮುನ್ಸೂಚನೆ ಇದೆ. ಇನ್ನೂ ಶೇಕಡಾ 66ರಷ್ಟು ಬೆಳವಣಿಗೆ ಅಥವಾ 5 ಮಿಲಿಯನ್ ಯೂನಿಟ್‌ಗಳನ್ನು ಮೀರುತ್ತದೆ.

2020 ರಲ್ಲಿ ಚೀನಾ ಮತ್ತು ಯೂರೋಪ್‌ನಲ್ಲಿ ಸುಮಾರು 1.3 ಮಿಲಿಯನ್ ಎಲೆಕ್ಟ್ರಿಕ್ ವಾಹನಗಳನ್ನು ಮಾರಾಟ ಮಾಡಲಾಯಿತು. ಇದು ಅಮೆರಿಕಾದಲ್ಲಿ ಎಲೆಕ್ಟ್ರಿಕ್ ವಾಹನಗಳ ಮಾರಾಟಕ್ಕಿಂತ ನಾಲ್ಕು ಪಟ್ಟು ಹೆಚ್ಚಾಗಿದೆ. ಅಮೆರಿಕಾದಲ್ಲಿ ಎಲೆಕ್ಟ್ರಿಕ್ ವಾಹನಗಳ ಮಾರಾಟವು ಅಲ್ಲಿ ಮಾರಾಟವಾದ ಹೊಸ ಕಾರುಗಳಲ್ಲಿ ಕೇವಲ ಶೇಕಡಾ 2.4ರಷ್ಟಿದೆ.

ಇನ್ನು 2030 ರಲ್ಲಿ ಮಾರಾಟವಾದ ಎಲ್ಲಾ ಹೊಸ ಕಾರುಗಳಲ್ಲಿ ಶೇಕಡಾ 48 ರಷ್ಟು ಎಲೆಕ್ಟ್ರಿಕ್‌ ಕಾರುಗಳು ಇರುತ್ತವೆ ಎಂದು ಕ್ಯಾನಾಲಿಸ್ ಮುನ್ಸೂಚನೆ ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+