ಮಲ್ಯಗೆ ಸೇರಿರುವ 12,500 ಕೋಟಿ ರು ಆಸ್ತಿ ಜಪ್ತಿಗೆ ಸಿದ್ಧತೆ
ಬೆಂಗಳೂರು, ಜೂನ್ 24: ಉದ್ದೇಶಪೂರ್ವಕ ಸುಸ್ತಿದಾರ, ಉದ್ಯಮಿ ವಿಜಯ್ ಮಲ್ಯ ಅವರಿಗೆ ಸೇರಿರುವ 12,500 ಕೋಟಿ ರುಗೂ ಅಧಿಕ ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಲು ಜಾರಿ ನಿರ್ದೇಶನಾಲಯ ಸಿದ್ಧತೆ ನಡೆಸಿದೆ.
ಉದ್ಯಮಿ ವಿಜಯ್ ಮಲ್ಯ ಅವರನ್ನು 9 ಸಾವಿರ ಕೋಟಿ ಮೊತ್ತದ ಹಣದಲ್ಲಿನ ಅವ್ಯವಹಾರ ಮತ್ತು ಹಣ ವಂಚನೆ ಪ್ರಕರಣಗಳಲ್ಲಿ ಭಾರತಕ್ಕೆ ಗಡಿಪಾರು ಮಾಡುವ ಸಂಬಂಧ ಬ್ರಿಟನ್ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿದೆ.
ಇದರ ಜೊತೆಗೆ ಮುಂಬೈನ ವಿಶೇಷ ನ್ಯಾಯಾಲಯದ ಎದುರು ಆಸ್ತಿ ಜಪ್ತಿಗಾಗಿ ಅನುಮತಿ ಕೋರಿ ಅರ್ಜಿ ದಾಖಲಿಸಲಾಗಿದೆ. ಇತ್ತೀಚೆಗೆ ಜಾರಿಗೆ ತರಲಾಗಿರುವ ತಲೆಮರೆಸಿಕೊಂಡ ಅಪರಾಧಿಗಳ ವಿರುದ್ಧದ ಸುಗ್ರೀವಾಜ್ಞೆ ಬಳಸಿಕೊಳ್ಳಲು ಇ.ಡಿ. ಮುಂದಾಗಿದೆ.

ಈ ಸುಗ್ರೀವಾಜ್ಞೆ ಅನ್ವಯ ತಲೆಮರೆಸಿಕೊಂಡ ಉದ್ದೇಶ ಪೂರ್ವಕ ಸುಸ್ತಿದಾರನಿಗೆ ಸಂಬಂಧಿಸಿದ ಎಲ್ಲಾ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಬಹುದಾಗಿದೆ.
ಮಲ್ಯ ಅವರು ಸಹ ಒಡೆತನ ಹೊಂದಿರುವ ಆಸ್ತಿಗಳನ್ನೂ ಕೂಡಾ ಮುಟ್ಟುಗೋಲು ಹಾಕಿಕೊಳ್ಳಲು ಜಾರಿ ನಿರ್ದೇಶನಾಲಯ ಅನುಮತಿ ಕೋರಿದೆ. ಷೇರುಗಳು ಸೇರಿದಂತೆ ಚರಾಸ್ತಿ ಹಾಗೂ ಸ್ಥಿರಾಸ್ತಿಗಳ ಒಟ್ಟು ಮೌಲ್ಯ 12,500 ಕೋಟಿ ರು ಮೌಲ್ಯ ಲೆಕ್ಕ ಹಾಕಲಾಗಿದೆ.
ಈ ನಡುವೆ ಗಡಿಪಾರು ವಾರಂಟ್‌ನೊಂದಿಗೆ ಮಲ್ಯ ಅವರನ್ನು ಸ್ಕಾಟ್ಲೆಂಡ್‌ಯಾರ್ಡ್ ಪೊಲೀಸರು ಕಳೆದ ವರ್ಷದ ಏಪ್ರಿಲ್‌ನಲ್ಲಿ ಬಂಧಿಸಿದ್ದರು. ಆದರೆ ಕೂಡಲೇ ಜಾಮೀನಿನ ಮೇಲೆ ಬಿಡುಗಡೆ ಹೊಂದಿದ್ದರು.
ಗಡಿಪಾರು ವಾರಂಟ್‌ನೊಂದಿಗೆ ಮಲ್ಯ ಅವರನ್ನು ಸ್ಕಾಟ್ಲೆಂಡ್‌ಯಾರ್ಡ್ ಪೊಲೀಸರು ಕಳೆದ ವರ್ಷದ ಏಪ್ರಿಲ್‌ನಲ್ಲಿ ಬಂಧಿಸಿದ್ದರು. ಆದರೆ ಕೂಡಲೇ ಜಾಮೀನಿನ ಮೇಲೆ ಬಿಡುಗಡೆ ಹೊಂದಿದ್ದರು. ಮನಿಲಾಂಡ್ರಿಂಗ್ ಪ್ರಕರಣದಲ್ಲಿ ಜಾಮೀನು ರಹಿತ ವಾರೆಂಟ್ ಜಾರಿಯಾಗಿದೆ.












Click it and Unblock the Notifications