'ಮಲ್ಯ ಪಡೆದ ಸಾಲಕ್ಕೆ ಸರಿಯಾದ ದಾಖಲೆಗಳಿಲ್ಲ'
ನವದೆಹಲಿ, ಫೆಬ್ರವರಿ 07: ಭಾರತದಿಂದ ಪಲಾಯನಗೈದಿರುವ ಉದ್ಯಮಿ ವಿಜಯ್ ಮಲ್ಯ ಅವರಿಗೆ ಭಾರತದ ವಿವಿಧ ಬ್ಯಾಂಕ್ ಗಳಿಂದ ನೀಡಿರುವ ಸಾಲಕ್ಕೆ ಸರಿಯಾದ ದಾಖಲೆಗಳಿಲ್ಲ ಎಂದು ಹಣಕಾಸು ಖಾತೆಯ ರಾಜ್ಯ ಸಚಿವ ಸಂತೋಷ್ ಗಂಗಾವರ್ ಅವರು ಸಂಸತ್ತಿನಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದಾರೆ.
ಹಣಕಾಸು ಸಚಿವಾಲಯದ ಅಧಿಕಾರಿಗಳು ನೀಡಿರುವ ಮಾಹಿತಿಯ ಅನ್ವಯ 2017ರ ಮಾರ್ಚ್ 17ರಂದು ಹಣಕಾಸು ಖಾತೆಯ ರಾಜ್ಯ ಸಚಿವ ಸಂತೋಷ್ ಗಂಗಾವರ್ ಈ ರೀತಿ ಉತ್ತರಿಸಿರುವುದು ಈಗ ಚರ್ಚೆಗೀಡಾಗಿದೆ.

2004ರಲ್ಲಿ ಮಲ್ಯಗೆ ನೀಡಿದ್ದ ಸಾಲದ ಬಗ್ಗೆ 2008ರಲ್ಲಿ ಪರಿಶೀಲಿಸಲಾಗಿದೆ. 2009ರಲ್ಲಿ 8,040 ಕೋಟಿ ಸಾಲವನ್ನು ಎನ್ ಪಿ ಎ ಎಂದು ಘೋಷಿಸಲಾಗಿತ್ತು. ಪಿಎಸ್ಬಿ ವರದಿಯ ಪ್ರಕಾರ ಮಲ್ಯ ಆಸ್ತಿಯನ್ನು ಹರಾಜು ಹಾಕಿ 155 ಕೋಟಿ ರೂಪಾಯಿ ಸಂಗ್ರಹಿಸಲಾಗಿದೆ ಎಂದು ದಾಖಲಾಗಿದೆ.
ಆದರೆ, ಎನ್ ಡಿ ಎ ಸರ್ಕಾರದಿಂದ ಮಲ್ಯ ಪಡೆದ ಸಾಲದ ಬಗ್ಗೆ ಸಂಪೂರ್ಣ ವಿವರ ಲಭ್ಯವಾಗಿಲ್ಲ. ಹಾಗಾಗಿ, CIC ಗೆ ಅರ್ಜಿ ಸಲ್ಲಿಸಲಾಗಿತ್ತು. ಆರ್ ಟಿ ಐ ಅರ್ಜಿಗೆ ಪ್ರತಿಕ್ರಿಯಿಸಿದ CIC, ಮಲ್ಯ ಸಾಲದ ವಿವರ ಕೊಡಲು ಸಾಧ್ಯವಿಲ್ಲ ಎಂದಿದೆ.












Click it and Unblock the Notifications