ಪ್ರಮುಖ ನಗರಗಳಲ್ಲಿ ತಗ್ಗಿದ ಚಿನ್ನ, ಬೆಳ್ಳಿ ಬೆಲೆ, ಖರೀದಿದಾರರಿಗೆ ಸಂತಸ
ಭಾರತೀಯ ಮಾರುಕಟ್ಟೆಯಲ್ಲಿಎರಡು ತಿಂಗಳಲ್ಲೇ ಕಾಣದಂಥ ಏರಿಕೆ ಕಂಡ ಬಳಿಕ ಬುಧವಾರ (ಮೇ.12) ದಂದು ಕೆಲವೆಡೆ ಖರೀದಿ ಚಿನ್ನದ ಬೆಲೆ 10 ಗ್ರಾಂಗೆ 190ರು ನಷ್ಟು ಕುಸಿತ ಕಂಡಿದೆ. ಬೆಳ್ಳಿ ಬೆಲೆ ಪ್ರತಿ 1 ಕೆ.ಜಿಗೆ 100ರು ಇಳಿಕೆಯಾಗಿದೆ. ಆದರೆ, ಅಕ್ಷಯ ತೃತೀಯ ವೇಳೆ ಏರಿಳಿತ ಹೆಚ್ಚಾಗುವ ಸೂಚನೆ ಸಿಕ್ಕಿದೆ. ಖರೀದಿದಾರರಿಗೆ ಇದು ಸೂಕ್ತ ಸಮಯ ಎಂದು ವಿಶ್ಲೇಷಣೆ ಮಾಡಲಾಗಿದೆ.
ಏಪ್ರಿಲ್ ತಿಂಗಳಲ್ಲಿ ನಿರಂತರ ಏರಿಳಿತ ಕಂಡಿದ್ದ ಚಿನ್ನದ ಬೆಲೆ ಮೇ ತಿಂಗಳ ಮೊದಲ ವಾರ ಹೆಚ್ಚಿನ ಬದಲಾವಣೆ ಕಂಡಿಲ್ಲ. ಮಧ್ಯಾಹದ ವಹಿವಾಟಿನಲ್ಲಿ ಎಂಸಿಎಕ್ಸ್ ಗೋಲ್ಡ್ ಫ್ಯೂಚರ್ 10 ಗ್ರಾಂ ಬೆಲೆ 0.05%ರು ನಷ್ಟು ಕುಸಿತ ಕಂಡು 47, 610ರು ಹಾಗೂ ಬೆಳ್ಳಿ ಪ್ರತಿ 1 ಕೆಜಿಗೆ 0.67% ತಗ್ಗಿದ್ದು 71,450ರು ಆಗಿದೆ.
ಜಾಗತಿಕ ಮಾರುಕಟ್ಟೆಯಲ್ಲಿ ಸತತವಾಗಿ ಚಿನ್ನ ಹಾಗೂ ಬೆಳ್ಳಿ ದರ ಏರಿಳಿತ ಕಂಡಿವೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್ (1 ounce=28.3495 ಗ್ರಾಂ) ಗೆ ಶೇ 0.12ರಷ್ಟು ಇಳಿಕೆಯಾಗಿ 1,833.44ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.73ರಷ್ಟು ಇಳಿಕೆಯಾಗಿ 27.38ಯುಎಸ್ ಡಾಲರ್ ಆಗಿದೆ.
ನಿಮ್ಮ ನಗರದಲ್ಲಿ ಚಿನ್ನ- ಬೆಳ್ಳಿ ದರ ಎಷ್ಟಿದೆ ಎಂಬ ಮಾಹಿತಿ ಬೇಕಾ? ಎಲ್ಲವೂ ಇಲ್ಲಿ ಒಂದೇ ಕಡೆ ಸಿಗುತ್ತದೆ. ಭಾರತದ ಪ್ರಮುಖ ನಗರಗಳಲ್ಲಿನ ಚಿನ್ನ 10 ಗ್ರಾಂ ಹಾಗೂ ಬೆಳ್ಳಿ ಕೆಜಿಗೆ ಬೆಲೆ ಎಷ್ಟಿದೆ, ಕಳೆದ 5 ದಿನಗಳಲ್ಲಿ ಏರಿಳಿತ ಕಂಡಿರುವ ಬಗ್ಗೆ ಮಾಹಿತಿ ಈ ಕೆಳಗಿದೆ.

ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?
ಪ್ರತಿ ದಿನ ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ? ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತರ್ ರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.

ಬೆಂಗಳೂರಿನಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರು ಗಳಲ್ಲಿ)
ಮೇ 12: 44,500 (200 ರು ಇಳಿಕೆ) 48,560 (-210 ರು ಇಳಿಕೆ)
ಮೇ 11: 44,700 (+90 ರು) 48,670(+100 ರು)
ಮೇ 10: 44,610 (---) 48,670(---)
ಮೇ 9: 44,610 (10 ರು ಏರಿಕೆ) 48,670(10ರು ಏರಿಕೆ)
ಮೇ 8: 44,600 (+100 ರು) 48,660 (+110ರು)
ಬೆಳ್ಳಿ: 1 ಕೆ.ಜಿಗೆ 71,500ರುಪಾಯಿ

ದೆಹಲಿಯಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರು ಗಳಲ್ಲಿ)
ಮೇ 12: 45,900 (200 ರು ಇಳಿಕೆ) 49, 900 (200 ರು ಇಳಿಕೆ)
ಮೇ 11: 46,100 (+100 ರು) 50,100 (+100 ರು)
ಮೇ 10: 46,000 (--) 50,000 (---)
ಮೇ 9: 46,000 (10 ರು ಏರಿಕೆ) 50,000 (+10)
ಮೇ 8: 45,990 (+80 ರು) 49,990 (+40ರು)
ಬೆಳ್ಳಿ: 1 ಕೆ.ಜಿಗೆ 71,500ರುಪಾಯಿ

ಚೆನ್ನೈನಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್24 ಕ್ಯಾರೆಟ್ (ಬೆಲೆ ರು ಗಳಲ್ಲಿ)
ಮೇ 12: 45,000 ( 200 ರು ಇಳಿಕೆ) 49,090 (220 ರು ಇಳಿಕೆ)
ಮೇ 11: 45,200 (150 ರು ಏರಿಕೆ) 49,310 (160 ರು ಏರಿಕೆ)
ಮೇ 10: 45,050 (-60 ರು) 49,150 (-60 ರು)
ಮೇ 9: 45,110 (+10 ರು) 49,210 (+10 ರು)
ಮೇ 8: 45,100 (+130 ರು) 49,200 (+140ರು)
ಬೆಳ್ಳಿ: 1 ಕೆ.ಜಿಗೆ 75,900ರುಪಾಯಿ

ಮುಂಬೈ ಚಿನ್ನದ ಬೆಲೆ
22 ಕ್ಯಾರೆಟ್-24 ಕ್ಯಾರೆಟ್ (ಬೆಲೆ ರು ಗಳಲ್ಲಿ)
ಮೇ 12: 44,910 (190 ರು ಇಳಿಕೆ) 45,720 (190 ರು ಇಳಿಕೆ)
ಮೇ 11: 44,910 (---) 45,910 (---)
ಮೇ 10: 44,910 (---) 45,910 (---)
ಮೇ 9: 44,910 (10 ರು ಏರಿಕೆ) 45,910 (10 ರು ಏರಿಕೆ)
ಮೇ 8: 44,900 (+100 ರು) 49,900 (+100ರು)
ಬೆಳ್ಳಿ: 1 ಕೆ.ಜಿಗೆ 71,500ರುಪಾಯಿ

ಹೈದರಾಬಾದ್‌ನಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರು ಗಳಲ್ಲಿ)
ಮೇ 12: 44,500 ( 200 ರು ಇಳಿಕೆ) 48,560( 210 ರು ಇಳಿಕೆ)
ಮೇ 11: 44,700 (90 ರು ಏರಿಕೆ) 48,770 (100 ರು ಏರಿಕೆ)
ಮೇ 10: 44,610 (---) 48,670 (-510)
ಮೇ 9: 44,610 (10 ರು ಏರಿಕೆ) 49,180 (10 ರು ಏರಿಕೆ)
ಮೇ 8: 44,600 (+100 ರು) 48,660 (+110ರು)
ಬೆಳ್ಳಿ: 1 ಕೆ.ಜಿಗೆ 75,900ರುಪಾಯಿ
Recommended Video

ಕೋಲ್ಕತಾದಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರು ಗಳಲ್ಲಿ)
ಮೇ 11: 45,800 (200 ರು ಏರಿಕೆ) 49,560 (190 ರು ಇಳಿಕೆ)
ಮೇ 11: 46,000 (10 ರು ಏರಿಕೆ) 49,750 (100 ರು ಏರಿಕೆ)
ಮೇ 10: 45,990 (-10 ರು) 49,650 (-10)
ಮೇ 9: 46,000 (+10 ರು) 49,660 (+10 ರು)
ಮೇ 8: 45,990 (+10 ರು) 49,650 (+10 ರು)
ಬೆಳ್ಳಿ: 1 ಕೆ.ಜಿಗೆ 71,500ರುಪಾಯಿ












Click it and Unblock the Notifications