ಸರ್ಕಾರ ಮಾಡಿದ ಕಡಿತವೆಲ್ಲ ವ್ಯರ್ಥ: ಮತ್ತೆ ಏರಿತು ಡೀಸೆಲ್, ಪೆಟ್ರೋಲ್ ಬೆಲೆ

ನವದೆಹಲಿ, ಅಕ್ಟೋಬರ್ 15: ಜನರ ಮೇಲಿನ ಹೊರೆ ತಗ್ಗಿಸಲು ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಮೇಲೆ ಕೇಂದ್ರ ಸರ್ಕಾರ ಮಾಡಿದ್ದ 2.50 ರೂ. ಕಡಿತ ಸಂಪೂರ್ಣ ವ್ಯರ್ಥವಾಗಿದೆ. ಸತತ ಹತ್ತನೇ ದಿನವೂ ಏರಿಕೆ ಕಂಡಿರುವ ಡೀಸೆಲ್, ಸರ್ಕಾರ ತಗ್ಗಿಸಿದ್ದ ದರಕ್ಕಿಂತಲೂ ಹೆಚ್ಚಳ ಕಂಡಿದೆ.

ಅಬಕಾರಿ ಸುಂಕ ಮತ್ತು ತೈಲ ಕಂಪೆನಿಗಳ ಸಬ್ಸಿಡಿಯ ಮೂಲಕ ಕೇಂದ್ರ ಸರ್ಕಾರ ಅ. 5ರಂದು ಪೆಟ್ರೋಲ್ ಹಾಗೂ ಡೀಸೆಲ್ ದರಗಳ ಮೇಲೆ 2.50 ರೂ. ಇಳಿಕೆ ಮಾಡಿತ್ತು.

ಈಗ ಈ ಕಡಿತ ಚಾಲ್ತಿಯಲ್ಲಿ ಇದ್ದರೂ, ಜಾಗತಿಕ ತೈಲ ಮಾರುಕಟ್ಟೆಯಲ್ಲಿನ ದರ ಏರಿಕೆಯಿಂದಾಗಿ ಡೀಸೆಲ್ ಬೆಲೆ ಲೀಟರ್‌ಗೆ ಅದನ್ನೂ ಮೀರಿ ಮತ್ತೆ ಏರಿಕೆಯಾಗಿದೆ.

diesel price hiked again, wiped govt cuts 10 days ago

ಕಳೆದ ಹತ್ತು ದಿನಗಳ ಹಿಂದೆ ಕೇಂದ್ರ ಸರ್ಕಾರ 2.50 ರೂ ಇಳಿಕೆ ಮಾಡಿದ್ದರೆ, ಅಲ್ಲಿಂದ ಇಲ್ಲಿಯವರೆಗೆ ಡೀಸೆಲ್ ಬೆಲೆಯಲ್ಲಿ ಲೀಟರ್‌ಗೆ 2.51 ರೂ. ಹೆಚ್ಚಳ ಆಗಿದೆ.

ಮೈಸೂರು ದಸರಾ - ವಿಶೇಷ ಪುರವಣಿ

ದೆಹಲಿಯಲ್ಲಿ ಡೀಸೆಲ್‌ಗೆ ಪ್ರತಿ ಲೀಟರ್‌ಗೆ 75.46 ರೂ ಇದೆ. ಸರ್ಕಾರ ಸುಂಕ ಕಡಿತ ಘೋಷಣೆ ಮಾಡಿದ ಸಂದರ್ಭದಲ್ಲಿ 75.45 ದರವಿತ್ತು.

ಈ ಹತ್ತು ದಿನಗಳಲ್ಲಿ ಪೆಟ್ರೋಲ್ ಬೆಲೆಯಲ್ಲಿ 1.22 ರೂ. ಏರಿಕೆಯಾಗಿದೆ. ಪ್ರಸ್ತುತ ಪೆಟ್ರೋಲ್ ಬೆಲೆ 82.72 ರೂ. ಇದೆ. ಅಕ್ಟೋಬರ್ 4ರಂದು ಲೀಟರ್‌ಗೆ 84 ರೂ. ದರವಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+