ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಮೀರಿಸಿದ ಡೀಸೆಲ್ ದರ
ನವದೆಹಲಿ, ಜೂನ್ 24: ಸತತವಾಗಿ 18ನೇ ದಿನವೂ ಡೀಸೆಲ್ ಬೆಲೆಯಲ್ಲಿ ಏರಿಕೆ ಕಂಡು ಬಂದಿದೆ. ಪೆಟ್ರೋಲ್ ದರದಲ್ಲಿ ಇಂದು ಯಾವುದೇ ವ್ಯತ್ಯಾಸ ಕಂಡು ಬಂದಿಲ್ಲ. ಡೀಸೆಲ್ ದರಲ್ಲಿ 48 ಪೈಸೆ ಪ್ರತಿ ಲೀಟರ್ ನಂತೆ ಹೆಚ್ಚಳವಾಗಿದೆ. ಇದೇ ಮೊದಲ ಬಾರಿಗೆ ಪೆಟ್ರೋಲ್ ದರವನ್ನು ಡೀಸೆಲ್ ಮೀರಿಸಿದೆ.
Recommended Video
ಬುಧವಾರ(ಜೂನ್ 24) ದಂದು ದೆಹಲಿಯಲ್ಲಿ ಡೀಸೆಲ್ ದರ ಪ್ರತಿ ಲೀಟರ್ ಗೆ 79.88 ರು ಇದ್ದರೆ, ಪೆಟ್ರೋಲ್ ದರ ಪ್ರತಿ ಲೀಟರ್ ಗೆ 79.76 ರು ನಷ್ಟಿದೆ. ಒಟ್ಟಾರೆ 18ದಿನಗಳಲ್ಲಿ ಪೆಟ್ರೋಲ್ ದರದಲ್ಲಿ 10.48 ರು ಹಾಗೂ ಡೀಸೆಲ್ ದರದಲ್ಲಿ 9 ರು ನಷ್ಟು ಏರಿಕೆ ಕಾಣಲಾಗಿದೆ.
ಜೂನ್ 7ರಂದು ಸತತ 83 ದಿನಗಳ ವಿರಾಮದ ಬಳಿಕ ದೇಶಾದ್ಯಂತ ಇಂಧನ ದರ ಪರಿಷ್ಕರಣೆ ಪುನಾರಂಭಗೊಂಡಿತು. ಸರ್ಕಾರಿ ಸ್ವಾಮ್ಯದ ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಪ್ರತಿದಿನ ಬೆಳಿಗ್ಗೆ 6 ಗಂಟೆಯಿಂದ ಪೆಟ್ರೋಲ್ ದರ ಮತ್ತು ಡೀಸೆಲ್ ದರವನ್ನು ಪರಿಷ್ಕರಿಸುತ್ತಾ ಬಂದಿವೆ.

ತೈಲ ಬೆಲೆ ಏರಿಕೆಗೆ ವಿವಿಧ ಕಾರಣ
ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಏರಿಳಿತ ಮತ್ತು ಡಾಲರ್-ರುಪಾಯಿ ವಿನಿಮಯ ದರದ ಆಧಾರ, ಅಮೆರಿಕ-ಚೀನಾ ನಡುವಿನ ವಹಿವಾಟು ಆರಂಭದ ಮಾತುಕತೆ, ಕೊರೊನಾವೈರಸ್ ಆರ್ಥಿಕ ಹೊಡೆತ, ಭಾರತದಲ್ಲಿ ತೈಲದ ಮೇಲೆ ಹೆಚ್ಚಿದ ಅಬಕಾರಿ ಸುಂಕ ಎಲ್ಲವೂ ಪೆಟ್ರೋಲ್-ಡೀಸೆಲ್ ಬೆಲೆಯು ಏರಿಳಿತ ಕಾಣುತ್ತದೆ. ಸರ್ಕಾರಿ ತೈಲ ಕಂಪನಿಗಳು, ಬೆಲೆಗಳನ್ನು ಪರಿಶೀಲಿಸಿದ ನಂತರ, ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ನಿಗದಿಪಡಿಸುತ್ತವೆ.

ಬೆಂಗಳೂರಿನಲ್ಲಿ ಕಳೆದ 5 ದಿನಗಳಲ್ಲಿ ಇಂಧನ ದರ
ಪೆಟ್ರೋಲ್ (ಪ್ರತಿ ಲೀಟರ್)
ಜೂನ್ 24: 82.35 (--)
ಜೂನ್ 23: 82.35 (20 ಪೈಸೆ ಏರಿಕೆ)
ಜೂನ್ 22: 82.15 (34 ಪೈಸೆ)
ಜೂನ್ 21: 81.81 (37 ಪೈಸೆ)
ಜೂನ್ 20: 81.44 (53 ಪೈಸೆ)
ಡೀಸೆಲ್ (ಪ್ರತಿ ಲೀಟರ್)
ಜೂನ್ 24: 75.51 (--)
ಜೂನ್ 23: 75.51 (53 ಪೈಸೆ ಏರಿಕೆ)
ಜೂನ್ 22: 74.98 (55 ಪೈಸೆ)
ಜೂನ್ 21: 74.43 (57 ಪೈಸೆ)
ಜೂನ್ 20: 73.86 (58 ಪೈಸೆ)

ನವದೆಹಲಿಯಲ್ಲಿ ಕಳೆದ 5 ದಿನಗಳಲ್ಲಿ ಇಂಧನ ದರ
ಪೆಟ್ರೋಲ್ (ಪ್ರತಿ ಲೀಟರ್)
ಜೂನ್ 24: 79.76 (---)
ಜೂನ್ 23: 79.76 (20 ಪೈಸೆ ಏರಿಕೆ)
ಜೂನ್ 22: 79.56 (33 ಪೈಸೆ)
ಜೂನ್ 21: 79.23 (35 ಪೈಸೆ)
ಜೂನ್ 20: 78.88 (51 ಪೈಸೆ)
ಡೀಸೆಲ್ (ಪ್ರತಿ ಲೀಟರ್)
ಜೂನ್ 24: 79.88 (48 ಪೈಸೆ ಏರಿಕೆ)
ಜೂನ್ 23: 79.40 (55 ಪೈಸೆ)
ಜೂನ್ 22: 78.85 (58 ಪೈಸೆ)
ಜೂನ್ 21: 78.27 (60 ಪೈಸೆ)
ಜೂನ್ 20: 77.67 (61 ಪೈಸೆ)

ಮುಂಬೈನಲ್ಲಿ ಕಳೆದ 5 ದಿನಗಳಲ್ಲಿ ಇಂಧನ ದರ
ಪೆಟ್ರೋಲ್ (ಪ್ರತಿ ಲೀಟರ್)
ಜೂನ್ 24: 86.54 (--)
ಜೂನ್ 23: 86.54 (18 ಪೈಸೆ ಏರಿಕೆ)
ಜೂನ್ 22: 86.36 (32 ಪೈಸೆ)
ಜೂನ್ 21: 86.04 (34 ಪೈಸೆ)
ಜೂನ್ 20: 85.70 (49 ಪೈಸೆ)
ಡೀಸೆಲ್ (ಪ್ರತಿ ಲೀಟರ್)
ಜೂನ್ 24: 77.76 (46 ಪೈಸೆ ಏರಿಕೆ)
ಜೂನ್ 23: 77.76 (52 ಪೈಸೆ)
ಜೂನ್ 22: 77.24 (55 ಪೈಸೆ)
ಜೂನ್ 21: 76.69 (58 ಪೈಸೆ)
ಜೂನ್ 20: 76.11 (58 ಪೈಸೆ)

ಚೆನ್ನೈನಲ್ಲಿ ಕಳೆದ 5 ದಿನಗಳಲ್ಲಿ ಇಂಧನ ದರ
ಪೆಟ್ರೋಲ್ (ಪ್ರತಿ ಲೀಟರ್)
ಜೂನ್ 24: 83.04 (--)
ಜೂನ್ 23: 83.04 (17 ಪೈಸೆ ಏರಿಕೆ)
ಜೂನ್ 22: 82.87 (29 ಪೈಸೆ)
ಜೂನ್ 21: 82.58 (25 ಪೈಸೆ)
ಜೂನ್ 20: 82.33 (51 ಪೈಸೆ)
ಡೀಸೆಲ್ (ಪ್ರತಿ ಲೀಟರ್)
ಜೂನ್ 24: 77.17 (40 ಪೈಸೆ ಏರಿಕೆ)
ಜೂನ್ 23: 76.77 (47 ಪೈಸೆ)
ಜೂನ್ 22: 76.30 (50 ಪೈಸೆ)
ಜೂನ್ 21: 75.80 (45 ಪೈಸೆ)
ಜೂನ್ 20: 75.35 (58 ಪೈಸೆ)












Click it and Unblock the Notifications