ಕೊನೆಗೂ ಮೊದಲ ಬ್ಯಾಚ್ ಡೆಲಿವರಿ ದಿನಾಂಕ ಪ್ರಕಟಿಸಿದ ಹಾರ್ಲಿ- ಡೇವಿಡ್‌ಸನ್ X440

ಮುಂಬರುವ ಹಬ್ಬದ ಋತುವಿನಲ್ಲಿ ಗ್ರಾಹಕರಿಗಾಗಿ ಅನೇಕ ಕೌತುಕಗಳನ್ನು ಕೊಡಲು, ಮೋಟಾರು ಸೈಕಲ್ ಮತ್ತು ಸ್ಕೂಟರ್‌ಗಳ ವಿಶ್ವದ ಅತಿದೊಡ್ಡ ತಯಾರಿಕಾ ಸಂಸ್ಥೆಯಾದ ಹೀರೋ ಮೋಟೋಕಾರ್ಪ್ (Hero MotoCorp) ಸಜ್ಜಾಗಿದೆ.

ನವರಾತ್ರಿ ಹಬ್ಬದ ಮೊದಲ ದಿನದಂದು, ಅಂದರೆ ಅಕ್ಟೋಬರ್ 15, 2023 ರಂದು ಹೀರೋ ಮೋಟೋಕಾರ್ಪ್ ತನ್ನ ಪ್ರಪ್ರಥಮ ಸಹ ಅಭಿವೃದ್ದೀಯ ಪ್ರೀಮಿಯಂ ಮೋಟಾರು ಸೈಕಲ್ ಹಾರ್ಲಿ-ಡೇವಿಡ್‌ಸನ್ X440 ಡೆಲಿವರಿಗಳನ್ನು ಆರಂಭಿಸುವುದಾಗಿ ಪ್ರಕಟಿಸಿದೆ.

Deliveries To Begin From October 2023 Of Harley - Davidson X440, Test Rides Open

ಪ್ರಸ್ತುತ ಹಾರ್ಲಿ- ಡೇವಿಡ್‌ಸನ್ X440, ರಾಜಸ್ಥಾನದ ನೀಮ್ರಾಣಾ ಎಂಬಲ್ಲಿ ಗಾರ್ಡನ್ ಫ್ಯಾಕ್ಟರಿ ಹೊಂದಿದ್ದು, ಹೀರೋ ಮೋಟೋಕಾರ್ಪ್‍ನ ಉತ್ಪಾದನಾ ಘಟಕದಲ್ಲಿ ತಯಾರಾಗುತ್ತಿದೆ. ಸೆಪ್ಟೆಂಬರ್ 1, 2023 ರಿಂದ ಮತ್ತು ಅದಕ್ಕಿಂತ ಹಿಂದೆ ಬುಕ್ ಮಾಡಿದ ಗ್ರಾಹಕರಿಗಾಗಿ ಸಂಸ್ಥೆಯು ಟೆಸ್ಟ್ ರೈಡ್‌ಗಳನ್ನು ಆಯೋಜಿಸುತ್ತಿದೆ.

ಹೊಸ ಬುಕ್ಕಿಂಗ್ ಗಾಗಿ ವಿಂಡೋ, ಅಕ್ಟೋಬರ್ 16ರಿಂದ ತೆರೆಯಲಿದ್ದು ಗ್ರಾಹಕರು ಎಲ್ಲಾ ಹಾರ್ಲಿ- ಡೇವಿಡ್‌ಸನ್ ಡೀಲರ್‌ ಶಿಪ್‌ ಮತ್ತು ದೇಶಾದ್ಯಂತ ಇರುವ ಹೀರೋ ಮೊಟೋಕಾರ್ಪ್ ಔಟ್‍ಲೆಟ್‍ಗಳಲ್ಲಿ ಹೊಸ ಹಾರ್ಲಿ-ಡೇವಿಡ್‌ಸನ್ X440 ಬುಕ್ ಮಾಡಬಹುದಾಗಿದೆ. ಗ್ರಾಹಕರು, www.Harley-Davidsonx440.com ವೆಬ್ಸೈಟಿಗೆ ಭೇಟಿ ನೀಡಿ ಆನ್ಲೈನ್ ಮೂಲಕವೂ ಬುಕ್ ಮಾಡಬಹುದಾಗಿದೆ.

Deliveries To Begin From October 2023 Of Harley - Davidson X440, Test Rides Open

ಹಾರ್ಲಿ- ಡೇವಿಡ್‌ಸನ್ X440

"ಹಾರ್ಲಿ- ಡೇವಿಡ್‌ಸನ್ X440 ದೇಶಾದ್ಯಂತ ಕೌತುಕತೆಯನ್ನು ಸೃಷ್ಟಿಸುತ್ತಲೇ ಇದೆ. ನಮ್ಮ ನೀಮ್ರಾಣಾ ಘಟಕದಲ್ಲಿ ಉತ್ಪಾದನೆಯು ಪೂರ್ಣ ಪ್ರಮಾಣದಲ್ಲಿದ್ದು ಅಪಾರ ಸಂಖ್ಯೆಯ ನಮ್ಮ ಪೂರ್ವ-ಬುಕ್ ಮಾಡಿದ ಗ್ರಾಹಕರು ಮೋಟಾರು ಸೈಕಲನ್ನು ಟೆಸ್ಟ್ ರೈಡ್(ಪರೀಕ್ಷಾ ಸವಾರಿ) ಮಾಡುವ ಅವಕಾಶ ಪಡೆದುಕೊಂಡಿದ್ದಾರೆ".

"ನವರಾತ್ರಿಯ ಮೊದಲ ದಿನದಿಂದಲೇ ನಮ್ಮ ಗ್ರಾಹಕರಿಗೆ ಹಾರ್ಲಿ-ಡೇವಿಡ್‌ಸನ್ X440 ಡೆಲಿವರಿಗಳನ್ನು ಆರಂಭಿಸುವ ಮೂಲಕ ಹಬ್ಬದ ಉತ್ಸಾಹವನ್ನು ಇನ್ನಷ್ಟು ಹೆಚ್ಚಿಸಲು ನಾವು ಸಜ್ಜಾಗಿದ್ದೇವೆ" ಎಂದು ಹೀರೋ ಮೋಟೋಕಾರ್ಪ್‌ನ ಸಿಇಒ ನಿರಂಜನ್ ಗುಪ್ತ ಹೇಳಿದ್ದಾರೆ.

ಜುಲೈ 2023ರಲ್ಲಿ ಅನಾವರಣಗೊಂಡಿದ್ದ ಮೋಟಾರ್ ಸೈಕಲ್

ಜುಲೈ 2023ರಲ್ಲಿ ಅನಾವರಣಗೊಂಡಾಗಿನಿಂದಲೂ ಹಾರ್ಲಿ- ಡೇವಿಡ್‌ಸನ್ X440 ಭಾರತದಾದ್ಯಂತ ಪ್ರೀಮಿಯಮ್ ವರ್ಗದ ಗ್ರಾಹಕರನ್ನು ತನ್ನತ್ತ ಸೆಳೆಯುವ ಮೂಲಕ ಕೇವಲ ಒಂದು ತಿಂಗಳೊಳಗೆ 25,000ಕ್ಕಿಂತಲೂ ಹೆಚ್ಚು ಬುಕಿಂಗ್ ಪಡೆದುಕೊಂಡಿತ್ತು. ಮೊದಲ ಭಾಗದ ಗ್ರಾಹಕರ ಅಗತ್ಯಗಳನ್ನು ಪೂರೈಸುವ ಸಲುವಾಗಿ ಹೀರೋ ಮೋಟೋಕಾರ್ಪ್ ತಾತ್ಕಾಲಿಕವಾಗಿ ಆನ್‌ಲೈನ್ ಬುಕಿಂಗ್ ವಿಂಡೋವನ್ನು ಮುಚ್ಚಿತ್ತು.

ಮೋಟಾರು ಸೈಕಲ್ ಮೂರು ವೈವಿಧ್ಯಗಳಲ್ಲಿ ಲಭ್ಯವಿದೆ:

ಡೆನಿಮ್ (Denim) : ರೂ. 2,39,500/-
ವಿವಿಡ್ (Vivid) : ರೂ. 2,59,500/-
ಎಸ್(S) : ರೂ. 2,79,500/-

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+