Credit Card: ಜುಲೈ 1ರಿಂದ ಕ್ರೆಡಿಟ್ ಕಾರ್ಡ್ ಬಿಲ್ ಪಾವತಿಯಲ್ಲಿ ಬದಲಾವಣೆ-ಮಾಹಿತಿ, ವಿವರ ಇಲ್ಲಿದೆ
Credit Card: ಪ್ರತಿ ತಿಂಗಳು ಹಲವು ನಿಯಮಗಳಲ್ಲಿ ಬದಲಾವಣೆಗಳು ಆಗುತ್ತಲೇ ಇರುತ್ತವೆ. ಹಾಗೆಯೇ ಇದೀಗ ಜೂನ್ ತಿಂಗಳು ಮುಗಿಯಲು ಇನ್ನೂ ಒಂದು ವಾರವಷ್ಟೇ ಬಾಕಿಯಿದ್ದು, ಜುಲೈ 1ರಿಂದ ಕ್ರೆಡಿಟ್ ಕಾರ್ಡ್ ಬಿಲ್ ಪಾವತಿ ನಿಯಮಗಳಲ್ಲಿ ಬದವಾಲಣೆ ಆಗಲಿವೆ ಎನ್ನುವ ಮಾಹಿತಿ ಲಭ್ಯವಾಗಿದೆ. ಹಾಗಾದರೆ ಏನೆಲ್ಲ ಬದಲಾವಣೆಗಳಾಗಲಿವೆ ಎನ್ನುವ ಸಂಪೂರ್ಣ ವಿವರವನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಜೂನ್ 30 ರ ನಂತರ, ಕೆಲವು ಪ್ಲಾಟ್‌ಫಾರ್ಮ್‌ಗಳ ಮೂಲಕ ಕ್ರೆಡಿಟ್ ಕಾರ್ಡ್ ಬಿಲ್‌ಗಳನ್ನು ಪಾವತಿಸುವುದು ಕಷ್ಟ ಆಗಬಹುದು. ಪೋನ್ ಪೇ, ಕ್ರೆಡ್, ಬಿಲ್ಡೆಸ್ಕ್ ಮತ್ತು ಇನ್ಫಿಬೀಮ್ ಅವೆನ್ಯೂ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಹೊಸ ನಿಯಮಗಳಿಂದ ಪ್ರಭಾವಿತವಾಗಬಹುದಾದ ಕೆಲವು ಪ್ರಮುಖ ಫಿನ್ಟೆಕ್‌ಗಳಾಗಿವೆ.

ಫೋನ್ ಪೇ, ಕ್ರೆಡ್, ಬಿಲ್ ಡೆಸ್ಕ್ ಪ್ಲಾಟ್ ಫಾರ್ಮ್‌ಗಳ ಮೂಲಕ ಕ್ರೆಡಿಟ್ ಕಾರ್ಡ್ ಬಿಲ್ ಪಾವತಿಗಳ ಮೇಲೆ ಪರಿಣಾಮ ಬೀರುತ್ತದೆ. ಜೂನ್ 30ರ ನಂತರದ ಎಲ್ಲಾ ಕ್ರೆಡಿಟ್ ಕಾರ್ಡ್ ಪಾವತಿಗಳನ್ನು ಭಾರತ್ ಬಿಲ್ ಪಾವತಿ ವ್ಯವಸ್ಥೆ ಮೂಲಕ ಪ್ರಕ್ರಿಯೆಗೊಳಿಸಬೇಕು ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಈ ಹಿಂದೆ ನಿರ್ದೇಶನ ನೀಡಿತ್ತು.
ಎಚ್‌ಡಿಎಫ್‌ಸಿ ಬ್ಯಾಂಕ್, ಐಸಿಐಸಿಐ ಮತ್ತು ಆಕ್ಸಿಸ್ ಬ್ಯಾಂಕ್ ಬಿಬಿಪಿಎಸ್ ಅನ್ನು ಸಕ್ರಿಯಗೊಳಿಸಿಲ್ಲ. ಈ ಬ್ಯಾಂಕುಗಳು ಒಟ್ಟು 5 ಕೋಟಿಗೂ ಹೆಚ್ಚು ಕ್ರೆಡಿಟ್ ಕಾರ್ಡ್‌ಗಳನ್ನು ಗ್ರಾಹಕರಿಗೆ ನೀಡಿವೆ. ಇನ್ನು ಈ ಬ್ಯಾಂಕ್‌ಗಳು ಇನ್ನೂ ಸೂಚನೆಗಳನ್ನು ಅನುಸರಿಸಿಲ್ಲ. ಈಗಾಗಲೇ ಬಿಬಿಪಿಎಸ್ ಅನ್ನು ಸದಸ್ಯರಾಗಿರುವ ಪೋನ್ ಪೇ ಮತ್ತು ಸಿಆರ್‌ಇಡಿಯಂತಹ ಫಿನ್ಟೆಕ್‌ಗಳು ಜೂನ್ 30ರ ಬಳಿಕ ಕ್ರೆಡಿಟ್ ಕಾರ್ಡ್ ಬಾಕಿಯ ಪಾವತಿಗಳನ್ನು ಪ್ರಕ್ರಿಯೆಗೊಳಿಸಲು ಸಾಧ್ಯವಾಗುವುದಿಲ್ಲ.
ಆದ್ದರಿಂದ, ಈ ಫಿನ್ಟೆಕ್‌ಗಳನ್ನು ಯಾವುದೇ ತೊಂದರೆಯಿಲ್ಲದೆ ನಿರ್ವಹಿಸಲು ಬ್ಯಾಂಕ್‌ಗಳು ನಿಯಮಗಳನ್ನು ಅನುಸರಿಸಬೇಕಾಗಿದೆ. ಆರ್‌ಬಿಐನ ಈ ನಿಯಮಗಳು ಜೂನ್ 30ರ ವರೆಗೆ ಮಾನ್ಯವಾಗಿರುತ್ತವೆ. ಮೂಲಗಳ ಪ್ರಕಾರ, ಪಾವತಿ ಉದ್ಯಮವು ಗಡುವನ್ನು 90 ದಿನಗಳವರೆಗೆ ವಿಸ್ತರಣೆ ಮಾಡಲು ಒತ್ತಾಯಿಸಿದೆ. ಇಲ್ಲಿಯವರೆಗೆ, ಕೇವಲ 8 ಬ್ಯಾಂಕುಗಳು ಮಾತ್ರ ಬಿಬಿಪಿಎಸ್‌ನಲ್ಲಿ ಬಿಲ್ ಪಾವತಿಯನ್ನು ಸಕ್ರಿಯಗೊಳಿಸಿದ್ದರೆ, ಒಟ್ಟು 34 ಬ್ಯಾಂಕ್‌ಗಳಿಗೆ ಕ್ರೆಡಿಟ್ ಕಾರ್ಡ್‌ಳನ್ನು ನೀಡಲು ಅವಕಾಶವಿದೆ.
ಬಿಬಿಪಿಎಸ್ ಅನ್ನು ಸಕ್ರಿಯಗೊಳಿಸಿದ ಬ್ಯಾಂಕ್‌ಗಳ ಪಟ್ಟಿಯಲ್ಲಿ ಎಸ್‌ಬಿಐ ಕಾರ್ಡ್, ಬಿಒಬಿ ಕಾರ್ಡ್, ಇಂಡಸ್‌ಇಂಡ್ ಬ್ಯಾಂಕ್, ಫೆಡರಲ್ ಬ್ಯಾಂಕ್ ಮತ್ತು ಕೊಟಕ್ ಮಹೀಂದ್ರಾ ಬ್ಯಾಂಕ್ ಸೇರಿವೆ. ಮೋಸದ ವಹಿವಾಟುಗಳನ್ನು ಪತ್ತೆಹಚ್ಚಲು ಮತ್ತು ಪರಿಹರಿಸಲು ಕೇಂದ್ರ ಬ್ಯಾಂಕ್‌ಗೆ ಅವಕಾಶ ನೀಡುವುದರ ಹೊರತಾಗಿ, ಆರ್‌ಬಿಐ ಪಾವತಿ ಪ್ರವೃತ್ತಿಗಳ ಮೇಲೆ ಕಣ್ಣಿಡಬೇಕಾಗಿದೆ ಎಂದು ಉದ್ಯಮದ ಮೂಲಗಳು ಸೂಚಿಸಿವೆ.












Click it and Unblock the Notifications