ಬ್ರಿಟನ್‌ನಲ್ಲಿ ಹೊಸ ಕೊರೊನಾ ಭೀತಿ: ಕಚ್ಚಾ ತೈಲ ದರ ಶೇ. 3ರಷ್ಟು ಕುಸಿತ
ನವದೆಹಲಿ, ಡಿಸೆಂಬರ್ 21: ಇಂಗ್ಲೆಂಡ್‌ನಲ್ಲಿ ಕಂಡುಬಂದ ಕೊರೊನಾವೈರಸ್ ಹೊಸ ಸೋಂಕು ಇಡೀ ವಿಶ್ವವನ್ನೇ ಮತ್ತೊಮ್ಮೆ ಆತಂಕಕ್ಕೊಳಪಡಿಸಿದ್ದು, ಭಾರತ ಈಗಾಗಲೇ ಬ್ರಿಟನ್‌ಗೆ ವಿಮಾನ ಹಾರಟವನ್ನ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಇದರ ಜೊತೆಗೆ ಯೂರೋಪಿಯನ್ ಹಲವು ರಾಷ್ಟ್ರಗಳು ಈ ನಿರ್ಧಾರಕ್ಕೆ ಮುಂದಾಗಿವೆ. ಕಚ್ಚಾ ತೈಲ ಬೆಲೆಯು ಭವಿಷ್ಯದ ಬೇಡಿಕೆ ಮೇಲೆ ಪರಿಣಾಮ ಬೀರುವುದರಿಂದ ಶೇಕಡಾ 3ರಷ್ಟು ಕುಸಿತ ಕಂಡಿದೆ.
ಹೊಸ ಬಗೆ ಕೊರೊನಾವೈರಸ್ ಪತ್ತೆಯಾದ ಬಳಿಕ ಬ್ರಿಟನ್ನಿನ ಬಹುತೇಕ ಕಡೆಯಲ್ಲಿ ವಹಿವಾಟುಗಳು ಸ್ಥಗಿತಗೊಂಡಿವೆ. ತೈಲ ಬೆಲೆಯಲ್ಲಿ ಚೇತರಿಕೆ ಕಾಣುವುದಿಲ್ಲ ಎಂಬ ಆತಂಕವು ಕಚ್ಚಾ ತೈಲ ಬೆಲೆ ಕುಸಿತಕ್ಕೆ ಕಾರಣವಾಗಿದೆ.
ಬ್ರೆಂಟ್ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್‌ಗೆ 1.74 ಅಮೆರಿಕನ್ ಡಾಲರ್ ಅಥವಾ ಶೇಕಡಾ 3ರಷ್ಟು ಇಳಿಕೆ ಆಗಿದೆ. ಶುಕ್ರವಾರದ ವಹಿವಾಟಿನಲ್ಲಿ ಶೇಕಡಾ 1.5ರಷ್ಟು ಬೆಲೆ ಏರಿಕೆ ಕಂಡಿದ್ದ ಬ್ರೆಂಟ್ ಕಚ್ಚಾ ತೈಲವು ಸೋಮವಾರ ಶೇಕಡಾ 3.3ರಷ್ಟು ಕುಸಿತ ಕಂಡಿತು. ವೆಸ್ಟ್ ಟೆಕ್ಸಾಸ್ ಇಂಟರ್‌ಮೀಡಿಯೆಟ್ ಕಚ್ಚಾ ತೈಲದ ಬೆಲೆಯಲ್ಲಿ 1.66 ಡಾಲರ್ ಇಳಿಕೆಗೊಂಡಿದೆ.

ಕೊರೊನಾವೈರಸ್ ಲಸಿಕೆ ಸಿಗುವ ಆಶಾಭಾವದಿಂದಾಗಿ ತೈಲ ಬೆಲೆಯು ಸತತ ಏಳು ವಾರಗಳಿಂದ ಏರಿಕೆ ಕಂಡು ಬಂದಿತ್ತು. ಆದರೆ ಈಗ ಹೊಸ ಕೊರೊನಾವೈರಸ್ ಎಲ್ಲಾ ನಿರೀಕ್ಷೆಗಳನ್ನು ಹುಸಿಗೊಳಿಸಿದಂತೆ ಕಾಣುತ್ತಿದೆ.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ!












Click it and Unblock the Notifications