ಕೋವಿಡ್-19 ಸಂತ್ರಸ್ತರಿಗೆ ವಾಧ್ವಾನಿಯಿಂದ 1 ಮಿಲಿಯನ್ ಡಾಲರ್ ನೆರವು

ಬೆಂಗಳೂರು, ಮೇ 17: ಭಾರತದಲ್ಲಿ ಕೋವಿಡ್-19 ನಿಂದ ಸಂತ್ರಸ್ತರಾಗಿರುವ ಕುಟುಂಬಗಳಿಗೆ ವಾಧ್ವಾನಿ ಫೌಂಡೇಷನ್ 1 ಮಿಲಿಯನ್ ಡಾಲರ್‍ಗಳ ನೆರವು ಘೋಷಿಸಿದೆ. ಈ ಹಣವನ್ನು ಭಾರತದಲ್ಲಿ ಕೋವಿಡ್-19 ಸಂತ್ರಸ್ತರ ನೆರವಿಗಾಗಿ ದುಡಿಯುತ್ತಿರುವ 10 ಎನ್‍ಜಿಒಗಳು ಮತ್ತು ಧರ್ಮದತ್ತಿ ಸಂಸ್ಥೆಗಳಿಗೆ ಬಿಡುಗಡೆ ಮಾಡಲಿದೆ. ಈ ಅನುದಾನದಲ್ಲಿ ವೈದ್ಯಕೀಯ ಮೂಲಗಳು ಮತ್ತು ಇನ್ನಿತರೆ ಸೌಲಭ್ಯಗಳನ್ನು ಕೋವಿಡ್-19 ರೋಗಿಗಳು ಮತ್ತು ಅವರ ಕುಟುಂಬಗಳಿಗೆ ಒದಗಿಸಲಾಗುತ್ತದೆ.

ಈ ಬಗ್ಗೆ ಮಾತನಾಡಿದ ವಾಧ್ವಾನಿ ಫೌಂಡೇಷನ್‍ನ ಸಂಸ್ಥಾಪಕ ಮತ್ತು ಅಧ್ಯಕ್ಷ ಪದ್ಮಶ್ರೀ ಡಾ.ರೊಮೇಶ್ ವಾಧ್ವಾನಿ, ''ಕೋವಿಡ್-19 ಪ್ರಕರಣಗಳು ಗಂಭೀರ ಸ್ವರೂಪದಲ್ಲಿ ಹೆಚ್ಚಾಗುತ್ತಿವೆ ಮತ್ತು ಭಾರತೀಯ ಕುಟುಂಬಗಳ ಮೇಲೆ ಗಂಭೀರವಾದ ಪರಿಣಾಮ ಮತ್ತು ಹೊರೆ ಉಂಟಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅನೇಕಾನೇಕ ಸಂಘಸಂಸ್ಥೆಗಳು ಒಗ್ಗಟ್ಟಾಗಿ ಇಂಥ ಕುಟುಂಬಗಳ ನೆರವಿಗೆ ಧಾವಿಸುವ ಅಗತ್ಯವಿದೆ. ಈ ದಿಸೆಯಲ್ಲಿ ವಾಧ್ವಾನಿ ಫೌಂಡೇಷನ್ ಧರ್ಮದತ್ತಿ ಸಂಸ್ಥೆಗಳು ಮತ್ತು ಸಂಘಸಂಸ್ಥೆಗಳಿಗೆ ನೆರವಾಗುತ್ತಿದೆ. ಈ ನೆರವಿನ ಹಣವನ್ನು ಸಂಘ ಸಂಸ್ಥೆಗಳು ಕಟ್ಟಕಡೆಯ ವ್ಯಕ್ತಿ ಅಥವಾ ಕುಟುಂಬವನ್ನು ತಲುಪುವ ಮೂಲಕ ಸಂಕಷ್ಟಕ್ಕೆ ಸಿಲುಕಿರುವ ಕುಟುಂಬಗಳ ನೆರವಿಗೆ ಬಳಸಿಕೊಳ್ಳಲಿವೆ'' ಎಂದು ತಿಳಿಸಿದರು.

ಧರ್ಮದತ್ತಿ ಸಂಸ್ಥೆಗಳು ಮತ್ತು ಸ್ವಯಂ ಸೇವಾ ಸಂಸ್ಥೆಗಳನ್ನು ಆಯ್ಕೆ ಮಾಡಲು ವಾಧ್ವಾನಿ ಫೌಂಡೇಷನ್ ಕೆಲವೊಂದು ಮಾರ್ಗಸೂಚಿಗಳನ್ನು ಸಿದ್ಧಪಡಿಸಿದೆ. ಸಂಕಷ್ಟಕ್ಕೆ ಸಿಲುಕಿರುವ ರೋಗಿಗಳು ಮತ್ತು ಅವರ ಕುಟುಂಬಗಳಿಗೆ ತ್ವರಿತವಾಗಿ ಪರಿಹಾರಗಳನ್ನು ಒದಗಿಸಲು ಸಾಮರ್ಥ್ಯ ಇರುವಂಥ ಸಂಸ್ಥೆಗಳನ್ನು ಆಯ್ಕೆ ಮಾಡಲಾಗುತ್ತದೆ. ಮಾರ್ಗಸೂಚಿಗಳಲ್ಲಿ ಪ್ರಮುಖ ಅಂಶಗಳು:

COVID-19 relief: Wadhwani Foundation donating 1 million Dollars

• ಕೋವಿಡ್-19 ನ ಪರಿಣಾಮವನ್ನು ತ್ವರಿತವಾಗಿ ಕಡಿಮೆ ಮಾಡುವ ಮತ್ತು ಮುಂದಿನ ತಿಂಗಳಲ್ಲಿ ಕ್ಲಿನಿಕ್‍ಗಳು ಅಥವಾ ಮನೆಗಳಿಗೆ ಸೂಕ್ತ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಲು ಸಾಮರ್ಥ್ಯ ಇರುವ ಸಂಸ್ಥೆಗಳು.
• ವೈದ್ಯಕೀಯ ನೆರವು, ಆಹಾರ, ಸಾಲ/ಅನುದಾನಗಳಂಥ ಪರಿಹಾರಗಳು ಮತ್ತು ಪ್ರಯೋಜನಗಳನ್ನು ಸೋಂಕಿತ ರೋಗಿಗಳು ಮತ್ತು ಅವರು ಕುಟುಂಬಗಳಿಗೆ ನೇರವಾಗಿ ತಲುಪಿಸುವ ಸಂಸ್ಥೆಗಳು.
• ಆರೋಗ್ಯ ರಕ್ಷಣೆ ಕ್ಷೇತ್ರದಲ್ಲಿ ಕನಿಷ್ಠ 5 ವರ್ಷ ಅನುಭವವಿರುವ, ಮೂಲ ಅಗತ್ಯಗಳ ಬೆಂಬಲಕ್ಕೆ ಸಾಕಷ್ಟು ಸ್ಥಳಾವಕಾಶ, ಜನರಿಗೆ ಸೂಕ್ತವಾದ ಪ್ರಯೋಜನಗಳನ್ನು ನೀಡಲು ಅಗತ್ಯವಿರುವ ಮೂಲಸೌಕರ್ಯಗಳನ್ನು ಹೊಂದಿರುವ ಸಂಸ್ಥೆಗಳು.
• ಪಾರದರ್ಶಕತೆ, ವರದಿಗಾರಿಕೆ ಮತ್ತು ಗುಣಮಟ್ಟವನ್ನು ಖಾತರಿಪಡಿಸುವಂಥ ಸಂಸ್ಥೆಗಳು.
• ದೇಶದಲ್ಲಿ ಕಾರ್ಯಾಚರಣೆ ನಡೆಸಲು ನೋಂದಣಿ ಆಗಿರುವ ಸಂಸ್ಥೆಯಾಗಿರಬೇಕು.

ನೌಕರ ಮೂಲ ಮತ್ತು ಬೆಂಬಲಿತ

ಈ ಮಾನದಂಡಗಳ ಆಧಾರದ ಮೇಲೆ ದತ್ತಿ ಮತ್ತು ಎನ್‍ಜಿಒಗಳ ಆಯ್ಕೆ ವಾಧ್ವಾನಿ ಫೌಂಡೇಷನ್ ಮತ್ತು ಸಿಂಫೋನಿ ಎಐಯ ನೌಕರರ ನೆರವಿನಿಂದ ನಡೆಯುತ್ತದೆ. ಸಿಂಫೋನಿ ಎಐ ಅಮೇರಿಕಾ ಮೂಲದ ಸಂಸ್ಥೆಯಾಗಿದ್ದು, ಇದನ್ನು ಡಾ.ವಾಧ್ವಾನಿ ಸ್ಥಾಪಿಸಿದ್ದಾರೆ. ವಾಧ್ವಾನಿ ಫೌಂಡೇಷನ್‍ನ ನಾಯಕರು ಆಮೂಲಾಗ್ರವಾಗಿ ಪರಿಶೀಲನೆ ನಡೆಸಿದ ಬಳಿಕ ಆರಂಭಿಕ ಹಂತದಲ್ಲಿ 5 ಸಂಘಸಂಸ್ಥೆಗಳನ್ನು ಆಯ್ಕೆ ಮಾಡಲಾಗಿದೆ. ಕೆಲವು ದಿನಗಳಲ್ಲಿ ಹೆಚ್ಚುವರಿಯಾಗಿ ಇನ್ನೂ ಹಲವು ದತ್ತಿ/ಎನ್‍ಜಿಒಗಳನ್ನು ಆಯ್ಕೆ ಮಾಡಲಾಗುತ್ತದೆ. ಈ ಅನುದಾನಗಳ ಜತೆಗೆ ವಾಧ್ವಾನಿ ಫೌಂಡೇಷನ್ ಸೆಪ್ಟೆಂಬರ್ 21, 2021 ರೊಳಗೆ ಯಾವುದೇ ಸಿಂಫೋನಿ ಎಐ ಅಥವಾ ವಾಧ್ವಾನಿ ಫೌಂಡೇಷನ್ ಉದ್ಯೋಗಿಗಳು ಯಾವುದೇ ಬೆಂಬಲಿತ ದತ್ತಿ/ಎನ್‍ಜಿಒಗಳಿಗೆ ದೇಣಿಗೆಯನ್ನು ಹೊಂದಿಸುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+