ಜಿಯೋ ಫೈಬರ್ ಹೊಚ್ಚ ಹೊಸ ಆಫರ್, WFHಗೆ ಅನುಕೂಲ

ಬೆಂಗಳೂರು, ಮಾರ್ಚ್ 30: ಕೊರೋನಾ ವೈರಸ್ ತೀವ್ರವಾಗಿ ಹರುಡುತ್ತಿರುವ ಕಾರಣದಿಂದಾಗಿ ದೇಶದಾದ್ಯಂತ 21 ದಿನಗಳ ಲಾಕ್‌ಡೌನ್ ಘೋಷಿಸಲಾಗಿದೆ. ಈ ಹಿನ್ನಲೆಯಲ್ಲಿ ಮನೆಯಲ್ಲಿದ್ದು ಕಾರ್ಯ ನಿರ್ವಹಿಸುತ್ತಿರುವ Work From Home ಮಾಡುವ ಭಾರತೀಯರಿಗೆ ಸಹಾಯ ಮಾಡಲು ಜಿಯೋ ಮುಂದಾಗಿದೆ. ಮನೆಯಲ್ಲಿದ್ದಾಗ ಎಲ್ಲರೂ ಸಂಪರ್ಕದಲ್ಲಿ ಇರಲಿ ಎನ್ನುವ ಕಾರಣಕ್ಕೆ ಜಿಯೋ ಫೈಬರ್ ಉಚಿತವಾಗಿ ನೀಡಲು ಮುಂದಾಗಿದೆ.

Recommended Video

      ಇಂತಹವನನ್ನು ಮನೆಯೊಳಗೆ ಹೇಗೆ ಕೂರಿಸೋದು ನೀವೇ ಹೇಳಿ | Oneindia Kannada

      ಜಿಯೋ ತನ್ನ ಬಳಕೆದಾರರಿಗೆ ಬೇಸಿಕ್ ಜಿಯೋಫೈಬರ್ ಬ್ರಾಡ್‌ಬ್ಯಾಂಡ್ ಸಂಪರ್ಕವನ್ನು ಯಾವುದೇ ಸೇವಾ ಶುಲ್ಕವಿಲ್ಲದೆ ಉಚಿತವಾಗಿ 30 ದಿನಗಳವರೆಗೆ ನೀಡಲಿದೆ.

      ಇದರಲ್ಲಿ ಮೊದಲ 100 ಜಿಬಿ 10 ಎಮ್‌ಬಿಪಿಎಸ್ ವೇಗದ ಇಂಟರ್‌ನೆಟ್‌ನೊಂದಿಗೆ ದೊರೆಯಲಿದ್ದು, ನಂತರ 1 ಎಮ್‌ಬಿಪಿಎಸ್‌ನಲ್ಲಿ ಅನಿಯಮಿತ ಇಂಟರ್ನೆಟ್ ಬಳಕೆ ಮಾಡಿಕೊಳ್ಳಬಹುದಾಗಿದೆ. ಇದರಿಂದಾಗಿ ಮನೆಯಲ್ಲಿ ಕೆಲಸ ಮಾಡುತ್ತಿರುವವರಿಗೆ ಸಹಾಯವಾಗಲಿದ್ದು, ಅಲ್ಲದೇ ವಿಡಿಯೋ ನೋಡಲು, ಗೇಮ್ ಆಡಲು ಸಹಾಯವಾಗಲಿದೆ.

      Coronavirus: Reliance to offer new high-speed JioFiber plan

      ಈ ಆಫರ್ ಕೇವಲ ಹೊಸ ಬಳಕೆದಾರರಿಗೆ ಮಾತ್ರವೇ ಲಭ್ಯವಿದ್ದು, ಈ ಸೇವೆಯನ್ನು ಪಡೆಯಲು ಗ್ರಾಹಕರು ರೂ 1500 / - ಅತ್ಯಲ್ಪ ಭದ್ರತಾ ಠೇವಣಿಯನ್ನು ಇಡಬೇಕಾಗಿದೆ ಮತ್ತು ರೂ 1000 / - ಅನುಸ್ಥಾಪನಾ ಶುಲ್ಕ ನೀಡುವ ಮೂಲಕ ಜಿಯೋ ಮನೆ ಗೇಟ್‌ವೇ ಅನ್ನು ನೀಡಲಿದೆ.

      ಈ ಯೋಜನೆಗಾಗಿ ಯಾವುದೇ ಸೇವಾ ಶುಲ್ಕವನ್ನು ಜಿಯೋ ವಿಧಿಸುತ್ತಿಲ್ಲ. ಇದಕ್ಕಿಂತ ಹೆಚ್ಚಿನ ವೇಗದ ಇಂಟರ್ನೆಟ್ ಬೇಕಿದ್ದಲ್ಲಿ ಬಳಕೆದಾರರು ಮೈ ಜಿಯೋ ಆಪ್ ಇಲ್ಲವೇ, ಮೈಜಿಯೋ. ಕಾಮ್‌ನಲ್ಲಿ ರಿಚಾರ್ಜ್ ಮಾಡಿಕೊಳ್ಳಬಹುದಾಗಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+